ಹಾನಗಲ್ಲಿನ ಶ್ರೀ ತಾರಕೇಶ್ವರ ದೇವಸ್ಥಾನ ಪವಿತ್ರ ಯಾತ್ರಾ ಕ್ಷೇತ್ರಗಳಲ್ಲಿ ಒಂದು! ಇದರ ಒಂದು ಸಂಕ್ಷಿಪ್ತ ನೋಟ..!

0
1404

ಭಾರತದಲ್ಲಿ ಇತರೆ ದೇವರುಗಳ ದೇವಾಲಯಗಳಿಗೆ ಹೋಲಿಸಿದಾಗ ಶಿವನಿಗೆ ಸಮರ್ಪಿತವಾದ ದೇವಾಲಯಗಳು ಒಂದು ರೀತಿಯಾಗಿ ವಿಶೀಷ್ಟವಾಗಿರುತ್ತವೆ. ಕೆಲವು ದೇವಾಲಯಗಳಲ್ಲಿ ಶಿವನ ಮೂಲ ವಿಗ್ರಹಗಳಿದ್ದರೆ ಹಲವು ದೇವಾಲಯಗಳಲ್ಲಿ ಶಿವನ ರೂಪವಾದ ಶಿವಲಿಂಗಗಳು ಪೂಜಿಸಲ್ಪಡುತ್ತವೆ. ಇವುಗಳಲ್ಲಿ ಹಾವೇರಿ ತಾಲ್ಲೂಕಿನ ಹಾನಗಲ್ ನ ಶ್ರೀ ತಾರಕೇಶ್ವರ ದೇವಸ್ಥಾನ ಪವಿತ್ರ ಯಾತ್ರಾ ಕ್ಷೇತ್ರಗಳಾಗಿ ಸುಪ್ರಸಿದ್ಧಿಯನ್ನು ಪಡೆದಿದೆ. ಅದರ ಒಂದು ಸಂಕ್ಷಿಪ್ತ ನೋಟ ಮುಂದೆ ಓದಿ…

ಹಾನಗಲ್ ಒಂದು ಪ್ರವಾಸಿತಾಣವಾಗಿದ್ದು ಇಲ್ಲಿ ಶ್ರೀ ತಾರಕೇಶ್ವರ ದೇವಸ್ಥಾನ ಬಹು ಪ್ರಸಿದ್ಧವಾಗಿದೆ. ಈ ದೇವಾಲಯ ಐತಿಹಾಸಿಕ ಜಕಣಾಚಾರಿ ಕಟ್ಟಿಸಿದ ದೇವಸ್ತಾನ ಎಂದು ಹೇಳಲಾಗುತ್ತದೆ. 11ರಿಂದ 13ನೇ ಶತಮಾನಗಳವರೆಗೆ ರಾಜಮನೆತನಗಳು ಕಟ್ಟಿಸಿದ ದೇವಾಲಯಗಳೂ ಹಲವಿವೆ. ಶ್ರೀ ತಾರಕೇಶ್ವರ ದೇವಸ್ಥಾನ ಪಶ್ಚಿಮ ಚಾಲುಕ್ಯ ಶಿಲ್ಪಕಲಾ ಶೈಲಿಯ ಶ್ರೇಷ್ಠ ಉದಾಹರಣೆಗಳಲ್ಲೊಂದಾಗಿದೆ. ಇಲ್ಲಿ ಶಿವನ ರೂಪವಾದ ಶಿವಲಿಂಗಕ್ಕೆ ಪೂಜೆ ಸಲ್ಲಿಸಲಾಗುತ್ತದೆ.

ಶ್ರೀ ತಾರಕೇಶ್ವರ ದೇವಸ್ಥಾನದ ಅಗಲ ಸಣ್ಣದಾಗಿದ್ದರೂ ಬಹಳ ಉದ್ದವಿರುವ ಭವ್ಯ ದೇಗುಲವಿದು. ಇಲ್ಲಿ ಮುಖಮಂಟಪ ೨ ಹಂತಗಳಲ್ಲಿದೆ. ಮೊದಲ ಹಂತದಲ್ಲಿ ೧೬ ಕಂಬಗಳಿವೆ. ಮತ್ತು ದೇವಾಲಯದ ಪ್ರಮುಖ ದ್ವಾರವಾಗಿದ್ದು ಅಲ್ಲಿ ದೊರೆತಿರುವ ಶಾಸನಗಳನ್ನು ಅಲ್ಲೇ ಇರಿಸಲಾಗಿದೆ. ಎರಡನೇ ಹಂತದಲ್ಲಿ ೩ ದ್ವಾರಗಳಿವೆ ಮತ್ತು ೬೪ ಕಂಬಗಳಿವೆ. ನಟ್ಟನಡುವೆ ಛಾವಣಿಯಲ್ಲಿ ತಾವರೆಯ ಅದ್ಭುತ ಮತ್ತು ರಮಣೀಯ ಕೆತ್ತನೆಯಿದೆ.

ಅಷ್ಟೇ ಅಲ್ಲದೆ, ಹಾನಗಲ್ ಇನ್ನೂ ಹಲವು ಚಾರಿತ್ರಿಕ ಸ್ಮಾರಕಗಳ ನೆಲೆಬಿಡು. ಆದರೆ ಅವುಗಳಲ್ಲಿ ಹೆಚ್ಚಿನವು ಅಳಿಯುವ ಸ್ಥಿತಿಯಲ್ಲಿದ್ದು ಕಾಯಕಲ್ಪಕ್ಕೆ ಕಾದು ನಿಂತಿವೆ. ಇತಿಹಾಸದ ಹಲವು ಗುಟ್ಟುಗಳನ್ನು ತಮ್ಮೊಳಗೇ ಹುದುಗಿಸಿಟ್ಟುಕೊಂಡು ವಿನಾಶದಂಚು ತಲುಪುತ್ತಿವೆ. ಪುರಾತತ್ವ ಇಲಾಖೆಯ ಸಿಬ್ಬಂದಿ ಇಲ್ಲಿ ಇದ್ದೂ ಇಲ್ಲದಂತೆ ಇರುವುದು ಬಹಳ ಶೋಚನೀಯ ವಿಷಯ.