ಟ್ಯಾಟೂ ಕ್ರೇಜ್ ಫ್ಯಾಷನ್ ಪ್ರಿಯರಿಗೊಂದು ಸಲಹೆ

0
939

ಹಳೆಯ ಕಾಲದಿಂದ ಬಂದ ಪದ್ಧತಿ ಹಚ್ಚೆ ಈಗ ಇದು ಟ್ಯಾಟೂ ಹಾಗಿ ಹೊಸಪ್ಯಾಷನ್ ಆಗಿ ಪರಿವರ್ತನೆಯಾಗಿದೆ, ಹೆಸರನ್ನು ಚುಚ್ಚಿಕೊಳ್ಳುವ ಈ ಪದ್ಧತಿ ಟ್ಯಾಟೂನ ರೂಪದಲ್ಲಿ ಮತ್ತೆ ಜೀವಂತವಾಗುತ್ತಿದೆ. ತಮ್ಮಶರೀರದ ವಿಭಿನ್ನವಾಗಿ ಅಂಗಗಳ ಮೇಲೆ ಹೆರನ್ನು ಹಚ್ಚೆ ಹಾಕಿಸಿಕೊಳ್ಳುವ ಪದ್ಧತಿ ಹಳೆಯದು. ಹಿಂದಿನಕಾಲದಲ್ಲಿ ಪುರುಷರು ಜಾತ್ರೆಯಲ್ಲಿ ಮತ್ತು ಹಬ್ಬಗಳ ಸಂಧರ್ಬದಲ್ಲಿ ಹೋದಾಗ ತಮ್ಮ ಹೆಸರನ್ನು ಮಣಿಕಟ್ಟಿನ ಮೇಲೆ ಚುಚ್ಚಿಸಿಕೊಳ್ಳುತಿದ್ದರು.

ವಿದೇಶಗಳಲ್ಲಿ ನವಯುವತಿಯರು ತಮ್ಮ ವಕ್ಷಸ್ಥಳದ ಮೇಲೆ, ಹೊಕ್ಕಳಿನಿಂದ ಕೆಳಗೆ, ಸೊಂಟ ಮತ್ತು ತೊಡೆಗಳ ಮೇಲೂ ಟ್ಯಾಟೂ ಹಾಕಿಸಿಕೊಳ್ಳುವಾಗ ಎಷ್ಟು ತೀವ್ರವಾದ ನೋವುಂಟಾಗುತ್ತದೆಂದರೆ ಹಾಕಿಸಿಕೊಳ್ಳುವವರು ವಿಚಲಿತವಾಗುತ್ತಾರೆ. ಆದರೆ ಟ್ಯಾಟೂ ಬಗ್ಗೆ ಯುವಕರಿಗೆ ಎಷ್ಟು ಹುಚ್ಚು ಎಂದರೆ ಅಸನೀಯ ನೋವನ್ನು ಸಹಿಸಿಕೊಂಡರು ಅವರು ಟ್ಯಾಟೂ ಹಾಕಿಸಿಕೊಳ್ಳುತ್ತಾರೆ.

ಟ್ಯಾಟೂ ಹಾಕಿಸಿಕೊಳ್ಳುವವರು ಹುಚ್ಚು ಹದಿಹರಿಯದರಿಗೆ ಬಹಳ ತೊಂದರೆ ಕೊಡುತ್ತದೆ. ಟ್ಯಾಟೂ ಹಾಕಿಸಿಕೊಳ್ಳುವುದನ್ನು ವೈದ್ಯರು ಆರೋಗ್ಯದ ದೃಷ್ಠಿಯಿಂದ ಹಾನಿಕಾರಕ ಎನ್ನುತ್ತಾರೆ.

ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ತೆಗೆದುಕೊಳ್ಳಬೇಕಾ ಸಲಹೆಗಳು:

*ಟ್ಯಾಟೂ ಹಾಕಿಸಿಕೊಳ್ಳುವಾಗ ಹೊಸ ಹೈಜಿನಿಕ್ ಸೂಜಿ ಉಪಯೋಗಿಸಿ, ಡಿಸ್ಪೋಸಬಲ್ ಸೂಜಿ ಇರದಿದ್ದರೆ ಉಪಯೋಗಿಸಿದ ಸೂಜಿಯನ್ನು ಚೆನ್ನಾಗಿ ಸ್ಪರಿಲೈನ್ ಮಾಡಿ ಉಪಯೋಗಿಸಿ.

*ಟ್ಯಾಟೂ ಹಾಕಿದ ನಂತರ ಶರೀರದ ಮೇಲೆ ಅಲರ್ಜಿ ಅಥವಾ ತ್ವಚೆಯ ಮೇಲೆ ಉರಿ, ಕೆಂಪುಬಣ್ಣ, ನವೆ ಇತ್ಯಾದಿ ಉಂಟಾದರೆ ಕೂಡಲೇ ಚರ್ಮತಜ್ಞರನ್ನು ಭೇಟಿಯಾಗಿ.

*ಟ್ಯಾಟೂ ಹಾಕಿಸಿಕೊಂಡ ನಂತರ ಅದರ ಮೇಲೆ ಯಾವುದೇ ರೀತಿಯ ಮನೆಮದ್ದುಗಳು, ಲೋಶನ್ ಹಚ್ಚಬೇಡಿ.

*ಎಕ್ಸ್ ಪರ್ಟ್ ಗಳಿಂದಲೇ ಟ್ಯಾಟೂ ಹಾಕಿಸಿಕೊಳ್ಳಿ, ಫುಟ್ ಪಾತ್ ನಲ್ಲಿ ಹಾಕುವುದರಿಂದ ದೂರವಿರಿ.

*ಕೈಗಳ ಮೇಲೆ ಟ್ಯಾಟೂ ಹಾಕಿಸಿಕೊಂಡರೆ ಕೈಗಳನ್ನು ಅಗತ್ಯವಾಗಿ ಸೋಪ್ ನಿಂದ ತೊಳೆಯಿರಿ.

*ಸೂರ್ಯನ ತೀವ್ರ ಕಿರಣಗಳಿಂದ 2-3 ದಿನಗಳವರೆಗೆ ಟ್ಯಾಟೂ ಹಾಕಿದ ತ್ವಚೆಯನ್ನು ರಕ್ಷಿಸಿಕೊಳ್ಳಿ.

*ಸ್ನಾನ ಮಾಡುವಾಗ ಶವರ್ ನಿಂದ ರಭರಸವಾಗಿ ಬರುವ ನೀರಿನಿಂದ ರಕ್ಷಿಸಿಕೊಳ್ಳಿ. ಟ್ಯಾಟೂವನ್ನು ಹಾಕಿದ ಜಾಗದಲ್ಲಿ ಹತ್ತಿಯ ಬಟ್ಟೆ ಅಥವಾ ಹತ್ತಿಯನ್ನು ಒದ್ದೆಮಾಡಿ ಹಗುರವಾಗಿ ಕ್ಲೀನ್ ಮಾಡಿ.

ಟ್ಯಾಟೂ ಹಾಕುವವರು ಒಬ್ಬ ಏಡ್ಸ್ ರೋಗಿಯ ಶರೀರದ ಮೇಲೆ ಟ್ಯಾಟೂ ಹಾಕಿದ ನಂತರ ಆ ಸೂಜಿಗಳನ್ನು ಬದಲಾಯಿಸದೇ. ಯಾರಾದರೂ ಆರೋಗ್ಯವಂತ ಯುವಕ ಅಥವಾ ಯುವತಿಯರ ಶರೀರದ ಮೇಲೆ ಟ್ಯಾಟೂ ಹಾಕಿದರೆ ಅವರಿಗೂ ಏಡ್ಸ್ ಬರಬಹುದು, ಚರ್ಮರೋಗಿಗೆ ಟ್ಯಾಟೂ ಹಾಕಿದ ನಂತರ ಆ ಸೂಜಿಗಳಿಂದನೇ ಬೇರೆಯವರಿಗೂ ಟ್ಯಾಟೂ ಹಾಕಿದರೆ ಅವರಿಗೂ ಚರ್ಮರೋಗ ಬರುತ್ತದೆ. ಹಾಗು ಟ್ಯಾಟೂ ಹಾಕುವವರು ವೈದ್ಯರುಗಳ ಈ ವಿಚಾರವನ್ನು ಒಪ್ಪುವುದಿಲ್ಲ. ನಿಮ್ಮ ಜಾಗ್ರತೆಯಲ್ಲಿ ನನೀವು ಟ್ಯಾಟೂವನ್ನು ಹಾಕಿಸಿಕೊಳ್ಳಿ.