ಡಿ ಕೆ ಶಿ ಆಯಿತು ಈಗ ಎಸ್.ಎಂ. ಕೃಷ್ಣ ಅಳಿಯನಿಗೆ ಬಂತು ಐಟಿ ಸಂಕಟ!! ಮುಂದೆ ಯಾರು??

0
591

ಮಾಜಿ ಎಸ್​ ಎಂ ಕೃಷ್ಣ ಅಳಿಯ ಸಿದ್ದಾರ್ಥ್​ ಮನೆ ಹಾಗೂ ಕಚೇರಿ ಮೇಲೆ ಐಟಿ ಅಧಿಕಾರಿಗಳು ಇಂದು ಗುರುವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ. ಸಿದ್ದಾರ್ಥ ಅವರ ಒಡೆತನದ ಕಾಫಿ ಡೇ, ವೇ2 ವೆಲ್ತ್ , ಸೆರಾಯ್ ಗ್ರೂಪ್ ಆಫ್ ಹೋಟೆಲ್ ಸೇರಿದಂತೆ ಹಲವು ಕೇಂದ್ರ ಕಚೇರಿಗಳು ಹಾಗೂ ಯುಬಿಸಿಟಿ ಬಳಿ ಇರುವ ಕಾಫಿ ಡೇ ಮುಖ್ಯ ಕಚೇರಿ ಮೇಲೆ ಧಿಕಾರಿಗಳು ದಾಳಿ ನೆಡೆಸಿದ್ದಾರೆ.

ಎಲ್ಲೆಲ್ಲಿ ಐಟಿ ದಾಳಿಯಾಗಿದೆ?

  • ಬೆಂಗಳೂರಿನ ಮಲ್ಯ ಸಿಗ್ನಲ್ ಬಳಿಯಿರುವ ಕಾಫಿ ಡೇ ಮುಖ್ಯ ಕಚೇರಿ ಎಬಿಸಿ ಮೇಲೆ ದಾಳಿ.
  • ಅಲ್ಲದೆ ಸಿದ್ದಾರ್ಥ್ ಕುಟುಂಬದವರ ಮನೆ, ಕಚೇರಿ ಸೇರಿದಂತೆ ಹಲವು ಕಡೆ ದಾಳಿ.
  • ಚಿಕ್ಕಮಗಳೂರಿನ ಮೂಡಿಗೆರೆ ರಸ್ತೆಯಲ್ಲಿರುವ ಎಬಿಸಿ, ಕಾಫಿ ಡೇ ಮೇಲೂ ದಾಳಿ.
  • ಸಿದ್ದಾರ್ಥ್ ಕುಟುಂಬದವರಿಗೆ ಸೇರಿರುವ ಚೆನ್ನೈನಲ್ಲಿರುವ ಲಾಜಿಸ್ಟಿಕ್ ಕಂಪೆನಿಯ ಮೇಲೆ ದಾಳಿ.
  • ಚೇತನಾಹಳ್ಳಿಯಲ್ಲಿರುವ ಎಸ್ಟೇಟ್‌ನಲ್ಲಿ ಬ್ರಿಟೀಷ್‌ ಕಾಲದ ಬಂಗಲೆಯಲ್ಲಿ ಸಿದ್ಧಾರ್ಥ ತಂದೆ ಗಂಗಯ್ಯ ಹೆಗ್ಡೆ , ತಾಯಿ ವಾಸಂತಿ ವಾಸವಾಗಿದ್ದ ಮನೆಮೇಲೆ ದಾಳಿ.

ಇತ್ತೀಚೆಗೆ ಅಷ್ಟೇ ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಿವಾಸ ಹಾಗೂ ಕಚೇರಿಗಳ ಮೇಲೆ ನಡೆದ ಐಟಿ ದಾಳಿ ದೇಶಾದ್ಯಂತ ಭಾರೀ ಚರ್ಚೆಯಾಗಿತ್ತು. ಈ ಬೆನ್ನಲೇ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ದಾರ್ಥರವರ ಕಚೇರಿ, ನಿವಾಸಗಳ ಮೇಲೂ ಐಟಿ ದಾಳಿ ನಡೆದಿದೆ. ಎಸ್‌ಎಂ ಕೃಷ್ಣ 46 ವರ್ಷಗಳ ಕಾಲ ಕಾಂಗ್ರೆಸ್ ನಾಯಕರಾಗಿದ್ದರು, ಈ ವರ್ಷದ ಮಾರ್ಚ್‌ನಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ನಡೆದಿರುವ ದಾಳಿ ರಾಜಕೀಯ ವಲಯದಲ್ಲಿ ಕೋಲಾಹಲ ಎಬ್ಬಿಸುವ ಸಾಧ್ಯತೆ ಇದೆ.

source: ndtv.com

ಇದರ ಜೊತೆ ಜೊತೆಗೆ ಸಚಿವ ಡಿ.ಕೆ.ಶಿವಕುಮಾರ್‌ ಅವರ ಆಪ್ತ ರಜನೀಶ್‌ ಮನೆ ಮೇಲೆ ಕೂಡ ಐಟಿ ದಾಳಿ ನಡೆದಿದೆ ಎಂದು ಹೇಳಲಾಗಿದೆ. ಈ ಹಿಂದೆ ಡಿ.ಕೆ.ಶಿ ಅವರ ಮನೆಮೇಲೆ ದಾಳಿ ನೆಡೆದಾಗ ರಜನೀಶ್‌ ಅವರ ಮನೆ ಮೇಲೂ ದಾಳಿ ನೆಡೆದಿತ್ತು ಈಗ ಅದು ಮುಂದುವರೆದ ಭಾಗವಾಗಿ ಮತ್ತೆ ದಾಳಿ ನೆಡೆಸಲಾಗಿದೆ.

40 ಕ್ಕೂ ಹೆಚ್ಚು ಅಧಿಕಾರಿಗಳು, 8 ಇನ್ನೋವಾ ಕಾರುಗಳಲ್ಲಿ ಬಂದ ಐಟಿ ಅಧಿಕಾರಿಗಳು ವಿವಿಧ ಜಾಗಗಳಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಿದ್ದಾರೆ. ಐಟಿ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಮಂಗಳೂರು ನೋಂದಣಿ ಸಂಖ್ಯೆಯ 2 ಕಾರುಗಳಲ್ಲಿ ಬಂದಿರುವ ಅಧಿಕಾರಿಗಳು, ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಯ ಮೊಬೈಲ್​ಗಳನ್ನ‌ ವಶಕ್ಕೆ ಪಡೆದಿದ್ದಾರೆ.