ಎಷ್ಟು ಹಣ ಕಟ್ಟಿದ್ರೆ ಎಷ್ಟು ತೆರಿಗೆ ಕಟ್ಟಾಗುತ್ತೆ?

0
2178

ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದಾಗಿ ಟ್ಯಾಕ್ಸ್ ಟೆರರಿಸಂಗೆ ತೆರೆ ಬೀಳಲಿದೆ ಮತ್ತು ಇನ್ನುಮುಂದೆ ಗ್ರಾಹಕನೇ ದೊರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಈ ಪ್ರಕಾರ ನಿವು ಜಮಮಾಡುವ ಹಣಕ್ಕೆ ಎಷ್ಟು ತೆರಿಗೆ ಕಟ್ಟಾಗುತ್ತೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ನೋಟು ಜಮಾ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತೆರಿಗೆ ವಿಚಾರವನ್ನು ಸ್ಪಷ್ಟವಾಗಿ ಹೇಳಿದೆ. 2.5 ಲಕ್ಷದವರೆಗೆ ಹಣ ಜಮಾವಣೆ ಮಾಡುವವರು ಯಾವುದೇ ತೆರಿಗೆ ನೀಡಬೇಕಾಗಿಲ್ಲ. 2.5 ಲಕ್ಷ ಹಾಗೂ ಅದಕ್ಕಿಂತ ಹೆಚ್ಚು ಹಣ ಜಮಾ ಮಾಡುವವರು ಕಡ್ಡಾಯವಾಗಿ ತೆರಿಗೆ ನೀಡಬೇಕು. ಜೊತೆಗೆ ಶೇಕಡಾ 200 ರಷ್ಟು ದಂಡ ಕಟ್ಟಬೇಕೆಂದು ಸರ್ಕಾರ ಹೇಳಿದೆ.

2.5 ಲಕ್ಷಕ್ಕಿಂತ ಹೆಚ್ಚು ಹಣ ಜಮಾವಣೆ ಮಾಡುವವರ ಮಾಹಿತಿಯನ್ನು ಬ್ಯಾಂಕ್ ಗಳು ಆದಾಯ ಇಲಾಖೆಗೆ ನೀಡಲಿವೆ. ಹಣ ಕಟ್ಟುವ ಮುನ್ನ ಎಷ್ಟು ಹಣ ಕಟ್ಟಿದ್ರೆ ಎಷ್ಟು ತೆರಿಗೆ ಕಟ್ಟಬೇಕೆಂಬ ಮಾಹಿತಿಯನ್ನು ತಿಳಿದುಕೊಳ್ಳಿ.

ಜಮಾ ಮಾಡುವ ಹಣಕ್ಕೆ ತೆರಿಗೆ ಎಷ್ಟು ಕಟ್ ಆಗುತ್ತೆ..?

2 ಲಕ್ಷದಿಂದ 2.5 ಲಕ್ಷ ರೂಪಾಯಿ

ಶುದ್ಧ ತೆರಿಗೆ : ಶೂನ್ಯ

ನೀವು ಯಾವುದೇ ತೆರಿಗೆ ಕಟ್ಟುವ ಅಗತ್ಯವಿಲ್ಲ.

5 ಲಕ್ಷ ರೂಪಾಯಿಗೆ ತೆರಿಗೆ:

ಮೊದಲ 2.5 ಲಕ್ಷದವರೆಗೆ ತೆರಿಗೆ -ಶೂನ್ಯ

ಎರಡನೇ 2.5 ಲಕ್ಷಕ್ಕೆ ಶೇ.10 ರಷ್ಟು ತೆರಿಗೆ : 25000 ರೂ.

ತೆರಿಗೆಗೆ ಶೇ.200 ರಷ್ಟು ದಂಡ: 50,000 ರೂ.

ನಿವ್ವಳ ತೆರಿಗೆ : 75,000 ರೂ.

ನಿಮಗೆ ಸಿಗುವ ಹಣ : 4,25,000 ರೂ.

10 ಲಕ್ಷ ರೂಪಾಯಿ

ಮೊದಲ 2.5 ಲಕ್ಷದವರೆಗೆ ತೆರಿಗೆ -ಶೂನ್ಯ

ಎರಡನೇ 2.5 ಲಕ್ಷಕ್ಕೆ ಶೇ.10 ರಷ್ಟು ತೆರಿಗೆ : 25000 ರೂ.

ಉಳಿದ 5 ಲಕ್ಷ ರೂ.ಗೆ ಶೇಕಡಾ 20 ರಷ್ಟು ತೆರಿಗೆ: 1,00,000 ರೂ.

ಒಟ್ಟು ತೆರಿಗೆ : 1,25,000 ರೂ.

ಒಟ್ಟು ತೆರಿಗೆ ಮೇಲೆ ಶೇ.200 ರಷ್ಟು ದಂಡ : 2,50,000 ರೂ.

ನಿವ್ವಳ ತೆರಿಗೆ : 3,75,000 ರೂ.

ನಿಮಗೆ ಸಿಗುವ ಹಣ : 6,25,000 ರೂ.

20 ಲಕ್ಷ ರೂಪಾಯಿಗೆ:

ಮೊದಲ 2.5 ಲಕ್ಷದವರೆಗೆ ತೆರಿಗೆ -ಶೂನ್ಯ

ಎರಡನೇ 2.5 ಲಕ್ಷಕ್ಕೆ ಶೇ.10 ರಷ್ಟು ತೆರಿಗೆ : 25000 ರೂ.

5 ಲಕ್ಷ ರೂ.ಗೆ ಶೇಕಡಾ 20 ರಷ್ಟು ತೆರಿಗೆ: 1,00,000 ರೂ.

10 ಲಕ್ಷ ರೂ.ಗೆ ಶೇ. 30ರಷ್ಟು ತೆರಿಗೆ : 3,00,000 ರೂ.

ಒಟ್ಟು ತೆರಿಗೆ : 4,25,000 ರೂ.

ತೆರಿಗೆ ಮೇಲೆ ಶೇ.200 ರಷ್ಟು ದಂಡ: 8,50,000

ನಿವ್ವಳ ತೆರಿಗೆ: 12,75,000 ರೂ.

ನಿಮಗೆ ಸಿಗುವ ಹಣ : 7,25,000 ರೂಪಾಯಿ

30 ಲಕ್ಷ ರೂಪಾಯಿಗೆ :

ಮೊದಲ 2.5 ಲಕ್ಷದವರೆಗೆ ತೆರಿಗೆ -ಶೂನ್ಯ

ಎರಡನೇ 2.5 ಲಕ್ಷಕ್ಕೆ ಶೇ.10 ರಷ್ಟು ತೆರಿಗೆ : 25000 ರೂ.

5 ಲಕ್ಷ ರೂ.ಗೆ ಶೇಕಡಾ 20ರಷ್ಟು ತೆರಿಗೆ: 1,00,000 ರೂ.

20 ಲಕ್ಷ ರೂ.ಗೆ ಶೇ. 30ರಷ್ಟು ತೆರಿಗೆ : 6,00,000 ರೂ.

ಒಟ್ಟು ತೆರಿಗೆ : 7,25,000 ರೂ.

ತೆರಿಗೆ ಮೇಲೆ ಶೇ.200 ರಷ್ಟು ದಂಡ: 14,50,000 ರೂ.

ನಿವ್ವಳ ತೆರಿಗೆ : 21,75,000ರೂ.

ನಿಮಗೆ ಸಿಗುವ ಹಣ : 8,25,000 ರೂಪಾಯಿ

40 ಲಕ್ಷ ರೂಪಾಯಿಗೆ :

ಮೊದಲ 2.5 ಲಕ್ಷದವರೆಗೆ ತೆರಿಗೆ -ಶೂನ್ಯ

ಎರಡನೇ 2.5 ಲಕ್ಷಕ್ಕೆ ಶೇ.10 ರಷ್ಟು ತೆರಿಗೆ : 25000 ರೂ.

5 ಲಕ್ಷ ರೂ.ಗೆ ಶೇಕಡಾ 20ರಷ್ಟು ತೆರಿಗೆ: 1,00,000 ರೂ.

30 ಲಕ್ಷ ರೂಪಾಯಿಗೆ ಶೇಕಡಾ 30 ರಷ್ಟು ತೆರಿಗೆ : 9,00,000ರೂ.

ಒಟ್ಟು ತೆರಿಗೆ : 10,25,000 ರೂ.

ಶೇ.200 ರಷ್ಟು ದಂಡ: 20,50,000 ರೂ.

ನಿವ್ವಳ ತೆರಿಗೆ : 30,75,000 ರೂ.

ನಿಮಗೆ ಸಿಗುವ ಹಣ : 9,25,000 ರೂ.

50 ಲಕ್ಷ ರೂಪಾಯಿಗೆ :

ಮೊದಲ 2.5 ಲಕ್ಷದವರೆಗೆ ತೆರಿಗೆ -ಶೂನ್ಯ

ಎರಡನೇ 2.5 ಲಕ್ಷಕ್ಕೆ ಶೇ.10 ರಷ್ಟು ತೆರಿಗೆ : 25000 ರೂ.

5 ಲಕ್ಷ ರೂ.ಗೆ ಶೇಕಡಾ 20 ರಷ್ಟು ತೆರಿಗೆ: 1,00,000 ರೂ.

40 ಲಕ್ಷ ರೂ.ಗೆ ಶೇ. 30 ರಷ್ಟು ತೆರಿಗೆ : 12,00,000ರೂ.

ಒಟ್ಟು ತೆರಿಗೆ : 13,25,000 ರೂ.

ಶೇ.200 ರಷ್ಟು ದಂಡ: 26,50,000ರೂ.

ನಿವ್ವಳ ತೆರಿಗೆ : 39,75,000ರೂ.

ಸಿಗುವ ಹಣ: 10,25,000 ರೂ.

1 ಕೋಟಿ ರೂಪಾಯಿಗೆ ತೆರಿಗೆ

ಮೊದಲ 2.5 ಲಕ್ಷದವರೆಗೆ ತೆರಿಗೆ -ಶೂನ್ಯ

ಎರಡನೇ 2.5 ಲಕ್ಷಕ್ಕೆ ಶೇ.10 ರಷ್ಟು ತೆರಿಗೆ : 25000 ರೂ.

5 ಲಕ್ಷ ರೂ.ಗೆ ಶೇಕಡಾ 20 ರಷ್ಟು ತೆರಿಗೆ: 1,00,000 ರೂ.

90 ಲಕ್ಷ ರೂಪಾಯಿಗೆ ಶೇ.30ರಷ್ಟು ತೆರಿಗೆ : 27,00,000 ರೂ.

ಒಟ್ಟು ತೆರಿಗೆ : 28,25,000 ರೂ.

ಶೇಕಡಾ 200 ರಷ್ಟು ದಂಡ: 56,50,000 ರೂ.

ನಿವ್ವಳ ತೆರಿಗೆ : 84,75,000 ರೂ.

ಕೈಗೆ ಸಿಗುವ ಹಣ : 15,25,000 ರೂ