ಚಹಾ.. ಕ್ಕೂ ಮಾನವನಿಗೂ ಬಹಳ ಅವಿನಾಭಾವ ಸಂಬಂಧವಿದೆ. ಪ್ರತಿನಿತ್ಯವೂ ಒಂದು ಕಪ್ ಆದರು ಚಹಾ ಇಲ್ಲದಿದ್ದರೆ ದಿನಕ್ಕೆ ಉಲ್ಲಾಸವೇ ಇರುವುದಿಲ್ಲ, ಅದಕ್ಕಾಗಿಯೇ ಮನೆಯಲ್ಲಿ ಮೊದಲು ಚಹಾ ಕೊಡುವುದು, ಸಂಬಂಧಿಕರು ಬಂದರೆ ಚಹಾ ಆದರು ಕುಡಿದು ಹೋಗಿ ಎನ್ನುವುದು. ಏಕೆಂದರೆ ಚಹಾ..ದಲ್ಲಿ ಸಂಬಂಧವನ್ನು ಗಟ್ಟಿಗೊಳಿಸುವ ಶಕ್ತಿಯ ಜೊತೆಗೆ ಹಲವು ಅರೋಗ್ಯ ಲಾಭಗಳು ಕೂಡ ಇದೆ ಎನ್ನುವುದಕ್ಕೆ ಹಲವು ಸಂಶೋಧನೆಗಳು ನಡೆದಿವೆ. ಅದಕ್ಕಾಗಿ ಮತ್ತೊಂದು ಸಂಶೋಧನೆ ಹೊರಬಂದಿದ್ದು ನಿಯಮಿತವಾಗಿ ಚಹಾ ಕುಡಿದರೆ ಜ್ಞಾಪಕ ಶಕ್ತಿ ಹೆಚ್ಚುತ್ತದೆ ಎಂದು ಹೇಳಿದೆ.
ಚಹಾ ಕುಡಿದರೆ ಜ್ಞಾಪಕ ಶಕ್ತಿ ಹೆಚ್ಚತ್ತಾ?
ಹೌದು ಬಿಸಿ ಬಿಸಿ ಚಹಾ ಮೆದುಳಿನ ಆರೋಗ್ಯವನ್ನು ವೃದ್ಧಿಸುತ್ತೆ, ಮನಸ್ಸಿಗೆ ಅದೇನೋ ಉಲ್ಲಾಸ ನೀಡುತ್ತೆ, ಇದಕ್ಕಾಗಿ ನಡೆದ ಇಲ್ಲೊಂದು ಸಮೀಕ್ಷೆ ಪ್ರಕಾರ, ಚಹಾ ಕುಡಿದ್ರೆ ಒಳ್ಳೇದು ಎಂದು ಹೇಳಲಾಗಿದೆ. ಚಹಾ ಕುಡಿಯುವುದರಿಂದ ವಯೋ ಸಹಜವಾಗಿ ಮೆದುಳಿನ ಶಕ್ತಿ ಕುಂಠಿತವಾಗುವುದನ್ನು ತಡೆಯುತ್ತದೆ. ಜ್ಞಾಪಕ ಶಕ್ತಿ ಮತ್ತು ಕಲ್ಪನಾ ಸಾಮಾರ್ಥ್ಯ ಟೀ ಕುಡಿಯದವರಿಗಿಂತ ಉನ್ನತ ಮಟ್ಟದಲ್ಲಿರುವುದು ಕಂಡುಕೊಳ್ಳಲಾಗಿದೆ. ಕೇಂಬ್ರಿಡ್ಜ್ ಮತ್ತು ಎಸ್ಸೆಕ್ಸ್ ವಿಶ್ವವಿದ್ಯಾಲಯದ ಸಂಶೋಧಕರು ಈ ಸಮೀಕ್ಷೆ ನಡೆಸಿದ್ದಾರೆ. ಸಮೀಕ್ಷೆಗೆ 36 ಮಂದಿಯನ್ನು ಆಯ್ದುಕೊಳ್ಳಲಾಗಿತ್ತು. ಅವರೆಲ್ಲರೂ 60 ವರ್ಷ ಮೇಲ್ಪಟ್ಟವರು. ಅವರಿಗೆ ಚಹಾ ಕುಡಿಯಲು ಹೇಳಲಾಗಿದ್ದು, ಇದರೊಂದಿಗೆ ಬುದ್ಧಿಮತ್ತೆ ಪರೀಕ್ಷೆ ಮಾಡಲಾಗಿದೆ. ಜತೆಗೆ ಎಮ್ಆರ್ಐ ಸ್ಕ್ಯಾನಿಂಗ್ ಕೂಡ ಮಾಡಲಾಗಿದೆ. ಅದರಂತೆ ದಿನಕ್ಕೆ ನಾಲ್ಕು ಬಾರಿ ಚಹಾ ಕುಡಿಯುವವರಿಗೆ 25 ವರ್ಷದ ಚಟುವಟಿಕೆಗಳ ಬಗ್ಗೆ ಉತ್ತಮ ನೆನಪು, ಆಲೋಚನೆಗಳು ಇರುತ್ತವೆ ಎಂದು ಹೇಳಲಾಗಿದೆ.
Also read: ವಿಸ್ಕಿ ‘ಟಿ’ ಮಾಡಿ ಕುಡಿದು ನೋಡಿ.. ಆಲಸ್ಯವೆಲ್ಲ ಮಾಯವಾಗಿ ಕೆಲಸದಲ್ಲಿ ಹುರುಪು ಬರುತ್ತೆ..!!
ಸೈಂಟಿಫಿಕ್ ಜರ್ನಲ್ ಏಜಿಂಗ್ನಲ್ಲಿ ಸಂಶೋಧನೆ ಕುರಿತ ವಿವರಗಳನ್ನು ಪ್ರಕಟಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ಸಿಂಗಾಪುರ ರಾಷ್ಟ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ತಂಡದ ನಾಯಕ ಫೆಂಗ್ ನಮ್ಮ ಫಲಿತಾಂಶಗಳು ನಿಯಮಿತವಾಗಿ ಚಹಾ ಕುಡಿಯುವುದರಿಂದ ಮೆದುಳಿನ ಸಂಘಟನೆಯಲ್ಲಿ ವಯಸ್ಸಿಗೆ ಸಂಬಂಧಿಸಿದ ಕುಸಿತದ ವಿರುದ್ಧ ರಕ್ಷಣಾತ್ಮಕ ಪರಿಣಾಮ ಬೀರುವುದನ್ನು ಸೂಚಿಸಿದೆ. ಇದರಿಂದ ಮೆದುಳಿನ ವ್ಯವಸ್ಥಿತ ಭಾಗದ ಕಾರ್ಯವು ಆರೋಗ್ಯಕರವಾಗಿರುವುದು ಕಂಡು ಬಂದಿದೆ’ ಎಂದು ಫೆಂಗ್ ಲೀ ಹೇಳಿದ್ದಾರೆ.
ಈ ಹಿಂದೆ ಸಹ ನಿಯಮಿತ ಚಹಾ ಸೇವನೆಯು ಮಾನವನ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಹಲವು ಅಧ್ಯಯನಗಳು ತಿಳಿಸಿವೆ. ಆದರೆ ಈ ಬಾರಿ ಸಂಶೋಧನೆಯಿಂದ ಮೆದುಳಿನ ಮೇಲೆ ಸಕಾರಾತ್ಮಕ ಪರಿಣಾಮ, ಮನಸ್ಥಿತಿ ಸುಧಾರಣೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ತಡೆಗಟ್ಟುವಿಕೆಯನ್ನು ಸಂಶೋಧಕರು ಕಂಡು ಹಿಡಿದಿದ್ದಾರೆ. ಪ್ರೊಫೆಸರ್ ಫೆಂಗ್ ನೇತೃತ್ವದಲ್ಲಿ ನಡೆದ ಈ ಅಧ್ಯಯನದ ಫಲಿತಾಂಶದಲ್ಲಿ ದೈನಂದಿನ ಚಹಾ ಸೇವನೆ ಮಾಡುವವರಲ್ಲಿ, ಜ್ಞಾಪಕ ಶಕ್ತಿಯ ಅಪಾಯ ಶೇ. 50 ಪ್ರತಿಶತದಷ್ಟು ಕಡಿಮೆ ಎಂಬುದು ತಿಳಿದು ಬಂದಿದೆ.