ಸೂರತ್ ನ ಟೀ ಮಾರುವ ವ್ಯಕ್ತಿ ಬಳಿ ಇದ್ದ ಹಣ 400 ಕೋಟಿ..!

0
861

ಸೂರತ್ ನ ಟೀ ಮಾರುವ ವ್ಯಕ್ತಿ ಬಳಿ ಇದ್ದ ಹಣ ನೋಡಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್ ಆಗಿದ್ದಾರೆ. ಅ ಹಣ ಎಷ್ಟು ಅಂತಕೇಳಿದರೆ ನೀವು ಸಹ ಶಾಕ್ ಅಗ್ತಿರಾ ಅವನ ಬಳಿ ಸಿಕ್ಕಿದ್ದು ಒಂದಲ್ಲ ಎರಡಲ್ಲ ಬರೊಬ್ಬರಿ  400 ಕೋಟಿ ರೂ.

ಪ್ರಧಾನಿ ನರೇಂದ್ರ ಮೋದಿ ಸರಕಾರದ 500, 1000 ನೋಟು ರದ್ದಾದ ಬಳಿಕ  ವಿಷಯ ಯಲ್ಲೆಡೆ ತಿಳಿಯುತ್ತಿದಂತೆ ಜನರು ತಮ್ಮ ಬಳಿ ಇರುವ ಹಣವನ್ನು ಬದಲಿಸಿ ಕೋಳ್ಳುತ್ತಿದ್ದಾರೆ. ಇನ್ನು ಕೆಲವರು ಸರ್ಕಾರಕ್ಕೆ ಮೋಸಮಾಡಿ ಒಳಗಿಂದೋಳಗೆ ಹಣವನ್ನು ಬದಲಿಸಿಕೋಳ್ಳುತ್ತಿದ್ದಾರೆ. ಇದರಿಂದ ಐಟಿ ದಾಳಿಯಿಂದ ಕೂಡ ಕಪ್ಪು ಹಣ ಹೊರಬರುತ್ತಿದೆ. ಸಾಮಾನ್ಯ ವ್ಯಕ್ತಿಯಿಂದ, ಕೋಟ್ಯದಿಪತಿ ವರೆಗಿನ ಕಪ್ಪು ಹಣ ಹೊರಬರುತ್ತಲೇ ಇದೆ.

ಸೂಕ್ತ ಮಾಹಿತಿ ಮೇರೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಕಿಶೋರ್ ಬಿಜಿಯಾವಾಲಾ ಎಂಬಾತನ ಬ್ಯಾಂಕ್ ಖಾತೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಆತನ ಬಳಿ 400 ಕೋಟಿ ಹಣ ಇರೋದನ್ನು ನೋಡಿದ ಅಧಿಕಾರಿಗಳು ದಂಗಾಗಿದ್ದಾರೆ. ಕಿಶೋರ್ ಬಿಜಿಯಾವಾಲಾನ 8 ಬ್ಯಾಂಕ್ ಲಾಕರ್ ಜಪ್ತಿ ಮಾಡಿದ್ದಾರೆ. ಈ ವೇಳೆ 13 ಕೆ.ಜಿ ಚಿನ್ನ, 180 ಕೆ.ಜಿ. ಬೆಳ್ಳಿ ಹಾಗೂ 1 ಕೋಟಿ ನಗದು ಸಿಕ್ಕಿದೆ. ಅದ್ರಲ್ಲಿ 90 ಲಕ್ಷ ಹೊಸ ನೋಟಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಇದ್ರ ಜೊತೆಗೆ 5, 10 ಹಾಗೂ 50 ರೂಪಾಯಿ ಮುಖ ಬೆಲೆಯ ನೋಟುಗಳು ಸಿಕ್ಕಿವೆ. 4.50 ಲಕ್ಷದ ಕಿಸಾನ್ ವಿಕಾಸ್ ಪತ್ರ ಕೂಡ ಕಿಶೋರ್ ಬಳಿ ಇದೆ.

30 ಬ್ಯಾಂಕ್ ಖಾತೆಗಳನ್ನು ಹೊಂದಿರುವ ಕಿಶೋರ್, ನೋಟು ನಿಷೇಧದ ನಂತ್ರ 50 ಲಕ್ಷ ರೂಪಾಯಿಯನ್ನು ಖಾತೆಗೆ ಜಮಾ ಮಾಡಿದ್ದಾನೆ. ಆ ನಂತ್ರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆನ್ನು ಬಿದ್ದಿದ್ದಾರೆ. ಕಿಶೋರ್ ವಿಚಾರಣೆ ನಡೆಯುತ್ತಿದೆ. 31 ವರ್ಷಗಳ ಹಿಂದೆ ಕಿಶೋರ್ ಸೂರತ್ ಗೆ ಬಂದಿದ್ದ ಎನ್ನಲಾಗಿದೆ.

ಬಂದ ಕೆಲವೇ ವರ್ಷಗಳಲ್ಲಿ ಆತ ಸ್ಥಳೀಯ ಪ್ರದೇಶದಲ್ಲಿ ಹೆಸರು ಗಳಿಸಿದ್ದ. ಟೀ ಮಾರುವ ಜೊತೆಗೆ ಬಡ್ಡಿ ವ್ಯವಹಾರ ಮಾಡ್ತಾ ಇದ್ದ ಎನ್ನಲಾಗಿದೆ.

ಕಪ್ಪುಕುಳಗಳನ್ನು ಮಟ್ಟ ಹಾಕಲು 500 ಹಾಗೂ 1000 ರೂ. ನೋಟುಗಳ ಮೇಲೆ ನಿಷೇಧ ಹೇರಿದ ತಮ್ಮ ನಿರ್ಧಾರ ಕಡಕ್ ಚಹಾ ಇದ್ದಂತೆ ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. 500, 1000 ರೂ. ನೋಟು ರದ್ದಾದ ಬಳಿಕ ಬಡವರು ಗಡದ್ದಾಗಿ ನಿದ್ರೆ ಮಾಡುತ್ತಿದ್ದಾರೆ. ಆದರೆ ಶ್ರೀಮಂತರು ಮಾತ್ರ ನಿದ್ರೆ ಮಾತ್ರೆಗಾಗಿ ಅಲೆದಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಬಡವರ ಬೆಂಬಲವಿದೆ. ಎಂದು ಮೋದಿ ಹೇಳಿದ ಮಾತು ಆದರೆ ಈ ಸೂರತ್ ನ ಟೀ ಮಾರುವವನ ಬಳಿ ಇದೆ 400 ಕೋಟಿ ಹಣ ಇದಕ್ಕೆ ಸರ್ಕಾರ ಎನನ್ನುತ್ತೆದೆ?