ಒಬ್ಬ ಒಳ್ಳೆಯ ವಿದ್ಯಾರ್ಥಿಗೆ ಗುರಿವಿನ ಮೇಲೆ ಇರುವ ಭಕ್ತಿ ಎಷ್ಟು? ಗುರು’ಗೆ ತನ್ನ ಶಿಷ್ಯನ ಮೇಲಿರುವ ನಂಬಿಕೆ ಎಷ್ಟು?

0
792

ಮುಂದೆ ‘ಗುರಿ’ ಹಿಂದೆ ‘ಗುರು’ ಇರಬೇಕು ಗುರು ಹೇಳಿದ ದಾರಿಯಲ್ಲಿ ನೆಡದ ಶಿಷ್ಯರು ಹಾಳಾದ ಯಾವುದೇ ಇತಿಹಾಸ ವಿಲ್ಲ, ಆದ್ರೆ ನಾವೂ ಎಷ್ಟೋ ಸಾರಿ ಶಿಕ್ಷಕರ ಮಾತನು ಕೇಳದೆ ಮತ್ತು ಅವರಿಗೆ ಗೌವರ ಕೊಡದೆ ಅವರ ಮಾತನ್ನು ನಗೆಬುಟ್ಟಿಗೆ ಹಾಕಿ ಟೀಚರ್ಸ್ ಏನ್ ಮೊದ್ಲು ಎಂಜಾಯ್ ಮಾಡಿಲ್ವಅಂತಾ ಗೋಣಗುವುದು ಇದೆ ಮತ್ತೆ ನಮ್ಮ ಪ್ರೀತಿಯ ಗುರುವಿನ ಬಗ್ಗೆ ನೀಚಬುದ್ದಿಯ ಸಹಚರನೊಬ್ಬ ಅಥವಾ ಯಾರೇ ಏನ್ ಹೇಳಿದ್ರು ಅದು ನೀಜವೆಂದು ನಂಬಿ ಗುರುವನ್ನು ಕೆಳಮಟ್ಟದಲ್ಲಿ ನೋಡುವ ಶಿಷ್ಯರು ಆಗಿನ ಕಾಲಕ್ಕಿಂತ ಈಗಿನ ಕಾಲದಲ್ಲೇ ಹೆಚ್ಚಾಗಿದ್ದಾರೆ.

Also read: ವಯಸ್ಸಾದವರನ್ನು ವೃದ್ದಾಶ್ರಮಕ್ಕೆ ದೂಡುವ ಕಟುಕರಿಗೆ, ಈ ಕಥೆ ತೋರಿಸಿ; ಅವರ ಮನಸ್ಸೂ ಕರಗಬಹುದು!!

ಒಬ್ಬ ಗುರು ತನ್ನ ವಿದ್ಯಾರ್ಥಿಯನ್ನು ಕಡಿಮೆ ಅಂದ್ರು ತನ್ನ ಸ್ವಂತ ಮಕ್ಕಳನ್ನು ಪ್ರಿತಿಸುವಷ್ಟು ಪ್ರೀತಿಯಿಂದ ನೋಡಿಕೊಳುತ್ತಾನೆ ಅಂತೆ ಒಂದು ವೇಳೆ ಗುರುವಿನ ಆಪ್ತರು ಅವರ ನಂಬಿಕೆಯ ವಿದ್ಯಾರ್ಥಿ ಮೇಲೆ ಸುಳ್ಳು ಕೆಟ್ಟ ಆಪಾದನೆ ಹೇಳಲು ಬಂದ್ರೆ ಆ ಸಮಯದಲ್ಲಿ ಗುರುವಿನ ನಂಬಿಕೆ ಮತ್ತು ಪ್ರೀತಿಗೆ ಸಾಕ್ರಟಿಸ್ ಅವರ ಈ ನಿದರ್ಶನವೆ ಸಾಕ್ಷಿಯಾಗಿದೆ ನೋಡಿ.

ಒಂದು ದಿನ ಸಾಕ್ರಟಿಸ್ ಏಕಾಂಗಿಯಾಗಿ ತಮ್ಮ ಮನೆ ಅಂಗಳದಲ್ಲಿ ನಡೆದಾಡುತ್ತಿದ್ದಾಗ ಅವನಿಗೆ ಸ್ನೇಹಿತನೊಬ್ಬ ಸಾಕ್ರಟಿಸ್ಅವರಿಗೆ ನಿಮ್ಮ ಶಿಷ್ಯನೊಬ್ಬನ ಬಗ್ಗೆ ನಾನೊಂದು ವಿಷಯ ಕೇಳಿದೆ ಆ ಸಂಗತಿ ನಿನಗೆ ಗೊತ್ತಿದೆಯಾ? ಎಂದು ಕೇಳಿದ. ಅದಕ್ಕೆ ಸಾಕ್ರಟಿಸ್, “ಒಂದು ನಿಮಿಷ ತಾಳು ನೀನು ಆ ವಿಷಯ ಹೇಳುವ ಮೊದಲು ನಿನಗೊಂದು ಮೂರು ಹಂತದ ಪರೀಕ್ಷೆಯೊಡ್ಡುತ್ತೇನೆ. ನನ್ನ ಶಿಷ್ಯನ ಬಗ್ಗೆ ಹೇಳುವ ಮೊದಲು ಈ ಪರೀಕ್ಷೆಗೆ ನಿನ್ನನ್ನು ಒಳಪಡಿಸುವೆ” ಎಂದ ಅದಕ್ಕೆ ಆತ ಒಪ್ಪಿಕೊಂಡ.

Also read: ದುಡ್ಡಿನ ಮಹತ್ವ ಸಾರುತ್ತೆ ಈ ಕಥೆ. ಶ್ರೀಮಂತರು ತಿನ್ನುವ ಒಂದು ಪಿಜ್ಜಾದಿಂದ ಒಂದು ಬಡ ಕುಟುಂಬ ಒಂದು ಹಬ್ಬವನ್ನೇ ಮಾಡುತ್ತಾರೆ..!

1.ನೇ ಪರಿಕ್ಷೆ ಅಂದ್ರೆ ಸತ್ಯ! “ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳುವ ಸಂಗತಿ ಸತ್ಯ ಎಂಬುದು ನಿನಗೆ ಮನವರಿಕೆಯಾಗಿರಬೇಕು”  ಎಂದ ಸಾಕ್ರಟೀಸ್. ಅದಕ್ಕೆ ಸ್ನೇಹಿತ ಅದು ಸತ್ಯ ಹೌದೋ, ಅಲ್ಲವೋ ಎಂಬುದು ನನಗೆ ಗೊತ್ತಿಲ್ಲ. ನನಗೆ ಯಾರೋ ಹೇಳಿದರು. ನಾನು ಅದನ್ನು ಕೇಳಿದೆ ಅಷ್ಟೆ’ ಎಂದ. ಅವನ ಮಾತಿಗೆ ಸಾಕ್ರಟಿಸ್, ಹೌದಾ? ಆದರೆ ನೀನು ಹೇಳೋದು ಸತ್ಯವೋ, ಸುಳ್ಳೋ ಎಂಬುದು ನಿನಗೆ ಗೊತ್ತಿಲ್ಲ ಅಂತಾಯಿತು. ಪರವಾಗಿಲ್ಲ ಬಿಡು. ಹಾಗಾದರೆ ಈಗ 2ನೇ ಪರಿಕ್ಷೆ ಎರಡನೆ ಹಂತದ ಪರೀಕ್ಷೆ. “ಇದು ಒಳ್ಳೆಯ ವಿಚಾರದ ಪರೀಕ್ಷೆ” ಅಂದರೆ ನನ್ನ ಶಿಷ್ಯನ ಬಗ್ಗೆ ನೀನು ಹೇಳಲಿರುವ ಮಾತು ಒಳ್ಳೆಯದೋ, ಕೆಟ್ಟದ್ದೋ?’ ಎಂದು ಕೇಳಿದ ಅದಕ್ಕೆ ಸ್ನೇಹಿತ, ಇಲ್ಲ…ಇಲ್ಲ… ಅದು ಒಳ್ಳೆಯ ವಿಷಯವಲ್ಲ ಎಂದ. ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳಲಿರುವ ಸಂಗತಿ ಕೆಟ್ಟದ್ದು ಅಂತಾಯಿತು. ಅಂದರೆ ಅದು ಸತ್ಯ ಸಂಗತಿ ಹೌದೋ ಅಲ್ಲವೋ ಎಂಬುದು ನಿನಗೆ ಗೊತ್ತಿರದಿದ್ದರೂ ಪರವಾಗಿಲ್ಲ. ನೀನು ಅವನ ಬಗ್ಗೆ ಕೆಟ್ಟದನ್ನು ಹೇಳಬೇಕೆಂದು ಬಯಸಿದ್ದೀಯಾ ಅಂತಾಯಿತು’ ಎಂದ ಸಾಕ್ರಟಿಸ್. ಈ ಮಾತನ್ನು ಕೇಳಿ ಸ್ನೇಹಿತನ ಮುಖ ಗಡಿಗೆ ಅಂತೆ ಆಯಿತ್ತು.

ಒಂದು ಕ್ಷಣ ಆತ ತಬ್ಬಿಬ್ಬಾದ. ಸಾಕ್ರಟಿಸ್ ಮುಂದುವರಿಸಿದ ನನ್ನ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ನಿನಗೆ ಇನ್ನೂ ಒಂದು ಅವಕಾಶವಿದೆ. 3ನೇ ಪರೀಕ್ಷೆಯನ್ನು ಒಡ್ಡುತ್ತೇನೆ. “ಈ ಹಂತಕ್ಕೆ ಉಪಯುಕ್ತತೆ ಹಂತ ಎಂದು ಹೆಸರು”  ಅಂದರೆ ನೀನು ನನ್ನ ಶಿಷ್ಯನ ಬಗ್ಗೆ ಹೇಳಲಿರುವ ಸಂಗತಿಯಿಂದ ನನಗಾಗಲಿ, ಸಮಾಜಕ್ಕಾಗಲಿ, ಅಥವಾ ನಿನಗಾಗಲಿ ಯಾವುದಾದರೂ ರೀತಿಯಿಂದ ಪ್ರಯೋಜನವಾಗುತ್ತದೆ? ಉಪಯೋಗವಾಗುತ್ತದೆ? ಎಂದು ನಿನಗೆ ಅನಿಸುತ್ತಿದೆಯಾ? ಅದಕ್ಕೆ ಸ್ನೇಹಿತ, ಇಲ್ಲ ಅದರಿಂದ ಯಾರಿಗೂ ಲಾಭವಾಗುತ್ತದೆಂದು ನನಗೆ ಅನಿಸುತ್ತಿಲ್ಲ ಎಂದ. ಆ ಸ್ನೇಹಿತನನ್ನು ಹತ್ತಿರಕ್ಕೆ ಕರೆದ ಸಾಕ್ರಟಿಸ್ ಹೇಳಿದ ಆಪ್ತನೆ ನೀನು ಹೇಳಲಿರುವ ಸಂಗತಿ ಸತ್ಯವೋ, ಸುಳ್ಳೋ ಎಂಬುದು ಗೊತ್ತಿಲ್ಲ. ಅದರಿಂದ ಯಾವ ಪುರುಷಾರ್ಥ ಸಾಧನೆಯಾಗುತ್ತದೆಂಬುದೂ ಗೊತ್ತಿಲ್ಲ. ಅದರಿಂದ ನನಗಾಗಲಿ, ನಿನಗಾಗಲಿ, ಸಮಾಜಕ್ಕಾಗಲಿ ಯಾವ ಪ್ರಯೋಜನವೂ ಇಲ್ಲ. ಹೀಗಿರುವಾಗ ಅಂಥ ವಿಷಯವನ್ನು ನನಗೇಕೆ ಹೇಳುತ್ತೀಯಾ? ನಿನ್ನ ಬಾಯಿ ಚಪಲ ತೀರಿಸಿಕೊಳ್ಳಲು ಬೇರೆಯವರ ಬಗ್ಗೆ ಇಲ್ಲಸಲ್ಲದ ಸಂಗತಿ ಹೇಳ್ತೀಯಲ್ಲ, ನಿನಗೆ ನಾಚಿಕೆ ಆಗೊಲ್ಲವಾ? ನಾಲ್ಕು ಜನರಿಗೆ ಉಪಯೋಗವಾಗುವ ಕೆಲಸವಿದ್ದರೆ ಮಾಡು, ಇಲ್ಲದಿದ್ದರೆ ಇಲ್ಲಿಂದ ಜಾಗ ಖಾಲಿ ಮಾಡು ಎಂದು ಹೇಳಿದರು.

ಈ ದೃಷ್ಟಾಂತದ ಮೂಲಕ ಹೇಳಬಯಸುವುದೇನೆಂದರೆ ಸ್ನೇಹಿತರೆ, ಪ್ರತಿ ನಿತ್ಯ ಸಾಕ್ರೆಟಿಸ್‌ನಿಗೆ ಅವನ ಸ್ನೇಹಿತ ಹೇಳಲು ಬಂದಂತೆ ನಮಗೆಲ್ಲರಿಗೂ ನಮ್ಮ ಸ್ನೇಹಿತರು ಹಲವಾರು ವಿಷವಾಗುವ ವಿಷಯವನ್ನು ತರುತ್ತಿರುತ್ತಾರೆ. ಅದು ಎಷ್ಟೊಂದು ಸತ್ಯೇ ಅಸತ್ಯೇ ಮತ್ತು ಈ ವಿಷಯದಿಂದ ಯಾರ ನಂಬಿಕೆ ಘನತೆಗೆ ದಕ್ಕೆಯಾಗುತ್ತೆ ಮತ್ತು ನಮಗೆ ಇದರಿಂದ ಸಿಗುವುದು ಏನು ಎಂಬ ಮಾರ್ಗವನ್ನು ಹಿಡಿಯಬೇಕು.