ಶುಲ್ಕ ಕಟ್ಟಿಲ್ಲ ಎಂದು ಶಾಲೆಯವರು ಒಬ್ಬ ವಿದ್ಯಾರ್ಥಿನಿಯನ್ನು ಪರೀಕ್ಷೆಯಿಂದ ಹೊರಗಟ್ಟಿದ್ದಾರೆ. ಅದಕ್ಕೆ 14 ವರ್ಷದ ಹುಡುಗಿ ಏನು ಮಾಡಿದಳು ಗೊತ್ತಾ?

0
789

ಮುತ್ತಿನ ನಗರಿ ಹೈದರಾಬಾದಿನಲ್ಲಿ ಒಂದು ಮನಕಲುಕುವ ಘಟನೆಯೊಂದು ನಡೆದಿದೆ. ಬೆಳೆಯುತ್ತಿರುವ ಆಧುನಿಕ ಕಾಲದಲ್ಲಿ ಮಕ್ಕಳ ಮನಸ್ಥಿತಿ ಎಷ್ಟು ದುರ್ಬಲವಾಗಿದೆ ಎಂಬುದಕ್ಕೆ ಈ ಘಟನೆಯೇ ಉದಾಹರಣೆಯಾಗಿದೆ. ಮನೆಯವರು ಶಾಲೆಯ ಶುಲ್ಕ ಕಟ್ಟಿಲ್ಲ ಎಂದು ಶಾಲೆಯವರು ಒಬ್ಬ ವಿದ್ಯಾರ್ಥಿನಿಯನ್ನು ಪರೀಕ್ಷೆಯಿಂದ ಹೊರಗಟ್ಟಿದ್ದಾರೆ. ಅದಕ್ಕೆ 14 ವರ್ಷದ ಹುಡುಗಿ ಏನು ಮಾಡಿದಳು ಗೊತ್ತಾ.

ಹೈದರಾಬಾದಿನ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ 9 ನೇ ತರಗತಿ ವಿದ್ಯಾರ್ಥಿನಿ, ಶಾಲೆಗೆ 2 ಸಾವಿರ ರೂ. ಫೀಸ್ ಕಟ್ಟುವುದು ಬಾಕಿ ಇತ್ತು ಅದಕ್ಕೆ ಅವಳನ್ನು ಕ್ಲಾಸ್‍ನಿಂದ ಹೊರಹಾಕಿದ್ದಾರೆ. ಎಲ್ಲರ ಮುಂದೆ ಅವಮಾನವಾಯಿತು ಎಂದು ಬಾಲಕಿ ತುಂಬಾ ಮನನೊಂದು ತನ್ನ ಸಹೋದರಿಗೆ ಹೇಳಿದ್ದಾಳೆ.

ಶಾಲೆಯವರು ನನ್ನ ಹೆಸರು ಕರೆದು ಕ್ಲಾಸ್‍ನಿಂದ ಹೊರಹಾಕಿದಾಗ ನನಗೆ ಅವಮಾನವಾಯಿತು, ಅವರು ನನಗೆ ಪರೀಕ್ಷೆ ಬರೆಯಲು ಬಿಡಲಿಲ್ಲ, ಎಂದು ತನ್ನ ಅಳಲನ್ನು ಹೇಳಿಕೊಂಡಿದ್ದಾಳೆ ನಂತರ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಮನೆಯಲ್ಲಿ ಇದ್ದ ಸೀಲಿಂಗ್ ಫ್ಯಾನಿಗೆ ನೇಣು ಹಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬಾಲಕಿಯ ಕುಟುಂಬದವರು ನೀಡಿದ ದೂರಿನ ವಿಚಾರಣೆ ನಡೆಸಿದ ಪೊಲೀಸರಿಗೆ ಬಾಲಕಿ ಬರೆದ “ಡೆತ್ ನೋಟ್” ಸಿಕ್ಕಿದೆ. ಅದರಲ್ಲಿ “ಶಾಲೆಯವರು ನನಗೆ ಎಲ್ಲರ ಅವಮಾನ ಮಾಡಿ ಪರೀಕ್ಷೆ ಬರಿಯಲು ಬಿಡಲಿಲ್ಲ ಸಾರಿ ಅಮ್ಮ” ಎಂದು ಬರೆದಿದ್ದಾಳೆ. ಇನ್ನು ಬಾಲಕಿಯ ಈ ನಡೆಗೆ ಶಾಲೆಯವರೇ ಕಾರಣ ಎಂದು ಕುಟುಂಬದವರು ನೀಡಿದ ದೂರಿನ ಮೇರೆಗೆ ಶಾಲೆಯವರ ವಿರುದ್ಧ ಕೇಸು ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.