ತಮ್ಮ ಕಣ್ಣಿನ ದೃಷ್ಟಿ ಕಳೆದುಕೊಂಡರೂ ತಮ್ಮ ವಿದ್ಯಾರ್ಥಿಗಳ ಜೀವನವನ್ನು ರೂಪಿಸುತ್ತಿರುವ ಈ ಶಿಕ್ಷಕನ ಯಶೋಗಾಥೆ ಕೇಳಿ..

0
648

ಮನಸ್ಸಿದ್ದರೆ ಮಾರ್ಗ ಅನ್ನೋದು ಎಲ್ಲರಿಗೂ ಗೊತ್ತಿದೆ. ಮನಸ್ಸು ಮಾಡಿದರೆ ಯಾರು ಏನು ಬೇಕಾದರು ಮಾಡಬಹುದು ಅನ್ನೋದಕ್ಕೆ ಶಿಕ್ಷಕ ನಿರಂಜನ್ ಕುಮಾರ್ ಝಾ ಅವರೇ ಸತ್ಯ ನಿದರ್ಶನ. ಹೌದು.. ನಾವಿಂದು ಹೇಳೋಕೊರಟಿರುವುದು ಕಣ್ಣಿಲ್ಲದ ಶಿಕ್ಷಕನ ಯಶೋಗಾಥೆ ಬಗ್ಗೆ. ರಾಜಸ್ಥನದ ಉದಯ್‘ಪುರದಲ್ಲಿರುವ ಗುಲಾಭಾಗ್‘ನಲ್ಲಿ 10 ಮತ್ತು 12ನೇ ತರಗತಿ ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ವಿಷೇಶವೆಂದರೆ ಇವರಿಗೆ ಕಣ್ಣಿಲ್ಲ. ನಿರಂಜನ್ 3ನೇ ತರಗತಿಯ ಪರೀಕ್ಷೆ ಬರೆಯುವಾಗ ನಿರ್ಧಿಷ್ಟ ಕಾರಣವಿಲ್ಲದೇ ತಮ್ಮ ದೃಷ್ಟಿಯನ್ನು ಕಳೆದುಕೊಂಡರು.

ಸಾಮಾನ್ಯವಾಗಿ ಎಲ್ಲರು ಭಯ ಆದಾಗ ಕಣ್ಣು ಮುಚ್ಚುವುದು ಸಹಜ. ಹಾಗೆಯೇ ನಿರಂಜನ್ ಕೂಡಾ ತಮಗೆ ಭಯವಾದಾಗ ಕಣ್ಳು ಮುಚ್ತಿದ್ರಂತೆ. ಅಂದು ಪರೀಕ್ಷೆ ಬರೆಯುವಾಗ ತಮ್ಮದೇ ಕೊಠಡಿಯಲ್ಲಿದ್ದ ವಿದ್ಯಾರ್ಥಿಯೋಬ್ಬ ಹಾವು..ಹಾವು ಎಂದು ಚೀರಿಕೊಂಡನಂತೆ. ಆಗ ಭಯಗೊಂಡ ನಿರಂಜನ್ ಗಟ್ಟಿಯಾಗಿ ತಮ್ಮ ಎರಡೂ ಕಣ್ಣುಗಳನ್ನು ಮುಚ್ಚಿಕೊಂಡಿದ್ದಾರೆ. ಆದರೆ ಭಯ ಕಡಿಮೆಯಾದರೂ ಕಣ್ಣು ಮಾತ್ರ ತೆರೆಯಲಾಗಲೇ ಇಲ್ಲ. ಕಣ್ಮ ರೆಪ್ಪೆಗಳು ಗಟ್ಟಿಯಾಗಿ ಅಂಟಿಕೊಂಡು ಬಿಟ್ಟಿದ್ದವು. ನಂತರ ಯಾವ ವೈದ್ಯರ ಬಳ ತೋರಿಸಿದರೂ ಪ್ರಯೋಜನವಾಗಲಿಲ್ಲ.

ನಂತರ ನಿರಂಜನ್ ಅವರ ಶಾಲಾ ಶಿಕ್ಷಕರಾಗಿದ್ದ ಜೀತೇಂದ್ರ ಸಿಂಗ್, ಗಣಿತ ಮತ್ತು ಫಿಸಿಕ್ಸ್ ಪಾಠ ಮಾಡಲು ಶುರುವಿಟ್ರು. ಆಗ ಬ್ರೈಲ್ ಲಿಪಿ ಇಲ್ಲದ ಕಾರಣ ನಿರಂಜನ್ ಗೆ ಜೀತೇಂದ್ರ ಅವರು ಮೌಖಿಕವಾಗಿ ಹೇಳಿಕೊಡುತ್ತಿದ್ದದ್ದು ಅರ್ಥ ಮಾಡಿಕೊಳ್ಳುತ್ತಿದ್ದರು. ಹೀಗೆ ಕಲಿತ ನಂತರ, ಕಾನ್ವೆಂಟ್ ಒಂದರಲ್ಲಿ ಪಾಠ ಮಾಡುತಿದ್ದರು. ಆಗ ಅದೇ ಶಾಲೆಯ ಪ್ರಾಂಶುಪಾಲರ ಸೋದರಳಿಯನ ಸ್ನೇಹಿತನ ಮಗನಿಗೆ ಟ್ಯೂಷನ್ ಮಾಡಲು ಶುರು ಮಾಡಿದರು. ಈಗ ನಿರಂಜನ್ ಕುಮಾರ್ ಝಾ 50 ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

ಇಷ್ಟೇ ಅಲ್ಲದೇ ನಿರಂಜನ್ ಕುಮಾರ್ ಟಿವಿ ಮತ್ತು ರೇಡಿಯೋ ಕೇಳುತ್ತಾರೆ. ಕಲಿಕೆಗೆ ರೇಡಿಯೋ ಒಂದು ಉತ್ತಮ ಮಾಧ್ಯಮ ಎನ್ನುತ್ತಾರೆ.