ಲಕ್ಷಾಂತರ ಸಂಬಳ ಬರುವ ಐಟಿ ಕೆಲಸವನ್ನು ಬಿಟ್ಟು ಕೃಷಿ ಮಾಡಿ 20 ಕೋಟಿ ರೂ ಒಡೆಯರಾದ ಸ್ನೇಹಿತರು ನಿಮಗೂ ಮಾದರಿ.!

0
456

ಇಂದಿನ ದಿನಗಳಲ್ಲಿ ಕೃಷಿಯಲ್ಲಿ ಲಾಭವಿಲ್ಲವೆಂದು ಉದ್ಯೋಗ ಅರಸಿ ನಗರಗಳತ್ತ ಹಳ್ಳಿಯ ಯುವಕರು ಬರುತ್ತಿದ್ದಾರೆ. ಆದರೆ ಕೆಲವರು ನಗರಗಳಲ್ಲಿ ಲಕ್ಷಾಂತರ ರೂ. ಹಣ ಬರುವ ಉದ್ಯೋಗಕ್ಕೆ ರಾಜೀನಾಮೆ ನೀಡಿ. ಕೃಷಿ ಮಾಡಲು ಹಳ್ಳಿಗೆ ತೆರಳುತ್ತಿದ್ದಾರೆ. ಇದರಲ್ಲಿ ಕೆಲವರು ಸಾಧನೆ ಮಾಡಿ ಮಾದರಿ ವ್ಯಕ್ತಿಯಾಗಿದ್ದಾರೆ. ಇಂತಹವರ ಬಗ್ಗೆ ಹೆಚ್ಚಿನ ಒತ್ತು ಕೊಟ್ಟು ಹೇಳುವುದು ಏಕೆಂದರೆ ಹಳ್ಳಿಯಲ್ಲಿ ವೈಜ್ಞಾನಿಕ ಕೃಷಿ ಪದ್ಧತಿ ಮಾಡದೇ, ಬರಿ ಸಂಪ್ರದಾಯಕ ಬೆಳೆ ಮಾಡಿ ನಷ್ಟವನ್ನು ಅನುಭವಿಸುತ್ತಿರುವ ಕೃಷಿಕರು ಇಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇಲ್ಲೊಬ್ಬರು ಐಟಿ ಕ್ಷೇತ್ರದಲ್ಲಿ ಉತ್ತಮ ಸಂಬಳವಿರುವ ಕೆಲಸವನ್ನು ತ್ಯಜಿಸಿ ಕೃಷಿಯತ್ತ ತಿರುಗಿ ಈಗ 20 ಕೋಟಿ ರೂ ಒಡೆಯರಾಗಿ ಮಾದರಿ ವ್ಯಕ್ತಿಯಾಗಿದ್ದಾರೆ.

ಹೌದು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ಅಶೋಕ್ ಜೆ ಮತ್ತು ಶ್ರೀರಾಮ್ ಎನ್ನುವರಿಗೆ ಮುಂದಿನ ದಿನಗಳು ನೆನಪಿಗೆ ಬಂದು ಭಯವಾಯಿತು ಆಗ ಬೇರೆ ಏನಾದರು ಮಾಡಬೇಕೆಂದು. ಆಗ 2008ರಲ್ಲಿ ಸರ್ಕಾರ ಶ್ರೀಗಂಧದ ಕೃಷಿಯ ಮೇಲಿನ ನಿಯಮಗಳನ್ನು ಸರಳಗೊಳಿಸಿದ ನಂತರ ಶ್ರೀಗಂಧದ ಮರ ಬೆಳೆಸುವ ಬಗ್ಗೆ ಅವರು ಯೋಚನೆ ಮಾಡಿದರು. ಅದಕ್ಕಾಗಿ ಭೂಮಿಯನ್ನು ಹುಡುಕಲಾರಂಭಿಸಿ, ಗ್ರಾಮೀಣ ಪ್ರದೇಶಗಳಿಗೆ ಪ್ರಯಾಣ ಬೆಳೆಸಿದರು. ಎರಡು ವರ್ಷಗಳ ಶ್ರಮದ ನಂತರ ಭೂಮಿಯನ್ನು ಪಡೆದುಕೊಂಡು ಆಂಧ್ರಪ್ರದೇಶದ ರಾಯದುರ್ಗದಲ್ಲಿ ಶ್ರೀಗಂಧದ ಕೃಷಿಯನ್ನು ಪ್ರಾರಂಭಿಸಿದರು.

ಅಶೋಕ ಮತ್ತು ಶ್ರೀರಾಮ್ ಸಂತೋಷದಿಂದ ಪ್ರಕೃತಿಯನ್ನು ಪ್ರೀತಿಸಲು ದೊಡ್ಡ ಅವಕಾಶ ಸಿಕ್ಕಿತು ಎಂದು ಮರಗಳನ್ನು ಬೆಳೆಸಲು ಬಯಸಿದ್ದರು. ತಾವು ಉಳಿತಾಯ ಮಾಡಿದ 1 ಕೋಟಿ ರೂ. ಯಿಂದ ತಮ್ಮ ಪಯಣವನ್ನು ಆರಂಭಿಸಿ ಶ್ರೀಗಂಧದ ಬೀಜಗಳನ್ನು ಅಶೋಕ ಅವರ ಪೂರ್ವಜರ ಆಸ್ತಿಯ 30 ಎಕರೆ ಭೂಮಿಯಲ್ಲಿ ಬಿತ್ತಲಾಯಿತು. “ಇಬ್ಬರೂ ಪೂರ್ಣ ಸಮಯದ ಉದ್ಯೋಗದಲ್ಲಿದ್ದ ಕಾರಣ ಕೃಷಿಭೂಮಿಗೆ ಭೇಟಿ ನೀಡಲು ಅವರಿಗೆ ಸಮಯವಿರಲಿಲ್ಲ ಆದ್ದರಿಂದ ಅವರು ಸುಮಾರು 15 ವರ್ಷಗಳ ಗರ್ಭಾವಸ್ಥೆಯನ್ನು ಹೊಂದಿರುವ ಅಂದರೆ 15 ವರ್ಷಕ್ಕೆ ಬೆಳೆಯುವ ಸುಧೀರ್ಘ ಸಮಯದ ಶ್ರೀಗಂಧದ ಮರವನ್ನು ಬೆಳೆಯಲು ನಿರ್ಧರಿಸಿದರು.

ಹೀಗೆ ಬೆಳೆಯನ್ನು ಬೆಳೆಯುತಾ ಹೊಸಚಿಗುರು ಎನ್ನುವ ಸಂಸ್ಥೆ ಸ್ಥಾಪಿಸಿ ಹೊಸದಾಗಿ ಕೃಷಿ ಮಾಡುವರಿಗೆ ಮಾರ್ಗದರ್ಶನವನ್ನು ನೀಡಿ ಸಹಾಯವನ್ನು ಕೂಡ ಮಾಡುತ್ತಿದ್ದಾರೆ. ಸಧ್ಯ ಒಂದು ತುಂಡು ಭೂಮಿಯಲ್ಲಿ ಕೃಷಿಯನ್ನು ಪ್ರಾರಂಭಿಸಿ, ಈಗ ಕಂಪನಿಯು 18 ಯೋಜನೆಗಳನ್ನು ಪಡೆದು, 800 ಎಕರೆಯಲ್ಲಿ ಮರಗಳನ್ನು ಬೆಳೆಸುತ್ತಿದೆ. ಇಷ್ಟು ಕಡಿಮೆ ಸಮಯದಲ್ಲಿ ಬಹುದೂರ ಬೆಳೆದು ಅಶೋಕ ಮತ್ತು ಶ್ರೀರಾಮ್ ಸರಿಸುಮಾರು 20 ಕೋತಿ ಆದಾಯದ ಒಡೆಯರಗಿದ್ದಾರೆ. ಅದಕ್ಕಾಗಿ ಯಾವುದೇ ಕೆಲಸದಲ್ಲಿ ಪೂರ್ಣ ಪ್ರಮಾಣದ ಶ್ರಮವಿದ್ದರೆ ಜೀವನದಲ್ಲಿ ಏನು ಬೇಕಾದರೂ ಜಯಿಸಬಹುದು ಎಂದು ಈ ಸಾಧಕರು ಹೇಳುತ್ತಾರೆ.

Also read: ಕೈತುಂಬಾ ಬರೋ ಸಂಬಳ ಬಿಟ್ಟು ಬಡ ರೋಗಿಗಳನ್ನು ಹುಡುಕಿಕೊಂಡು ಹೋಗಿ ಉಚಿತ ಚಿಕಿತ್ಸೆ ಕೊಡುತ್ತಿರುವ ಈ ವ್ಯೆದ್ಯರಿಗೆ ಯಾವ ಪ್ರಶಸ್ತಿ ಕೊಡಬೇಕು.?