ಕೊಳಗೇರಿಯಲ್ಲಿ ಸ್ವಂತ ಮನೆ ಕಟ್ಟುವ ಕನಸು ಕಟ್ಟಿಕೊಂಡಿದ ಬಡ ತಾಯಿಗೆ ಬಂಗಲೆಯನ್ನೇ ಕಟ್ಟಿಸಿದ ಮಗ, ಮಿಲಿಯನ್ ವಹಿವಾಟು ಸಂಸ್ಥೆಯ ಒಡೆಯನಾದ..

0
580

ಕಡು ಬಡತನದಿಂದ ಬಹು ಎತ್ತರಕ್ಕೆ ಸಾಧನೆ ಮಾಡಿದ ಸಾಧಕರ ಬಗ್ಗೆ ಪ್ರತಿಬಾರಿಯೂ ಒತ್ತಿ ಹೇಳುವುದು, ಅವರ ಕಷ್ದದ ಜೀವನ ಹೇಗೆ ಬದಲಾಯಿತು ಎನ್ನುವ ಬಗ್ಗೆ ಮನರಂಜನೆ ಸಿಗಲಿ ಅಂತಲ್ಲ, ಸಾಧನೆ ಮಾಡುವ ವ್ಯಕ್ತಿ ಮನಸು ಮಾಡಿದರೆ ಏನ್ ಬೇಕಾದರೂ ಮಾಡಬಹುದು ಎನ್ನುವ ಛಲ ಪ್ರತಿಯೊಬ್ಬರಲ್ಲೂ ಹುಟ್ಟಲಿ ಎನ್ನುವುದಕ್ಕೆ ಇಂತಹ ಸಾಧಕರ ಬಗ್ಗೆ ತಿಳಿಸುವುದು. ಇವತ್ತಿನ ಸಾಧಕರ ಪಟ್ಟ ಪಡೆದ ವ್ಯಕ್ತಿ ತನ್ನ ಹುಟ್ಟುತ್ತಲೇ ಬಡತನದಲ್ಲಿ ಹುಟ್ಟಿ ಇರಲು ಸರಿಯಾಗಿ ಊಟ ಮನೆಯಿಲ್ಲದೆ ತಾಯಿಯ ಮಾತಿನಿಂದ ಪೆರಿತನಾಗಿ ಈಗ 1.2 ಮಿಲಿಯನ್ ವರೆಗೆ ವಹಿವಾಟು ನಡೆಸಿದ್ದಾರೆ.

ಶರತ್ ಬಾಬು’ ಎನ್ನುವರು ಚೆನ್ನೈನ ಮಡಿಪಾಕ್ಕಂ ಕೊಳಗೇರಿಯಲ್ಲಿ ಹುಟ್ಟಿಬೆಳೆದರು ಇವರು ಗುಡಿಸಲು ಮನೆಯಲ್ಲಿ ಬಾಲ್ಯವನ್ನು ಕಳೆದರು, ಮನೆಯಲ್ಲಿ ಕಂಡು ಬಡತನ ತಾಯಿ ಒಬ್ಬರೇ ಕೂಲಿ ನಾಲಿ ಮಾಡಿ ಮನೆ ನೋಡಿಕೊಳ್ಳುತ್ತಿದರು. ಅವರ ತಾಯಿ ಮಕ್ಕಳಿಗೆ ಬಿಸಿಯೂಟ ತಯಾರಿಸಲು ಶಾಲೆಯಲ್ಲಿ ಕೆಲಸ ಮಾಡುತ್ತಿದರು. ಇಡ್ಲೀ ಮಾರಾಟ ಮಾಡುತ್ತಿದರು, ನಂತರ ಸಂಜೆ ವಯಸ್ಕರ ಶಿಕ್ಷಣದ ತರಗತಿಗೆ ಹೋಗುತ್ತಿದರು ಹೀಗೆ ದುಡಿದು ಬಂದ 30 ರೂಪಾಯಿಯಲ್ಲಿ ಮಗನಿಗೆ ಶಿಕ್ಷಣ ಕೊಡಿಸಬೇಕು ಎನ್ನುವ ಛಲದಿಂದ ಮಗನನ್ನು ಐಐಎಂ ಪದವೀಧರನನ್ನಾಗಿ ಮಾಡಿದರು. ತಾಯಿಯ ಕಷ್ಟವನ್ನು ನೋಡಿದ ಶರತ್ ಓದಿನಲ್ಲಿ ಮುಂದೆ ಬಂದ. ಈ ಸಮಯದಲ್ಲಿ ಸ್ವಂತ ಮನೆಕಟ್ಟುವ ಕನಸು ಕಂಡಿದರು ಶರತ್ ತಾಯಿ.

ಶಾಲೆಗೆ ಟಾಪರ್ ಆದ ಶರತ್;

ತಾಯಿಯ ಮಾತುಗಳಿಂದ ಪ್ರಭಾವಿತನಾಗಿದ್ದ ಶರತ್ ಬಾಬು ಕಷ್ಟಪಟ್ಟು ಓದುತ್ತಿದ್ದ. ಈತನಿಗೆ ಮನೆಯ ಸದಸ್ಯರು ಕೂಡ ಸಹಾಯ ಮಾಡಿದರು. ಅದಕ್ಕೆ ಪ್ರತಿಫಲ ಎಂಬಂತೆ ಪ್ರಾಥಮಿಕ ವಿದ್ಯಾಭ್ಯಾಸದಲ್ಲಿಯೇ ಶರತ್ ಟಾಪರ್ ಆಗಿ ಪ್ರತಿಭಾವಂತನಾಗಿ ಎಲ್ಲದರಲ್ಲಿಯೂ ಫಸ್ಟ್ ಬರುತ್ತಿದ್ದ. ಎಸ್ಸೆಸ್ಸೆಲ್ಸಿಯಲ್ಲಿ ಶರತ್ ಟಾಪರ್ ಆಗಿದ್ದ ಶರತ್ ದ್ವಿತೀಯ ಪಿಯುಸಿ ಶಿಕ್ಷಣ ಪಡೆಯುವಾಗ ಬಹಳಷ್ಟು ಕಷ್ಟದಲ್ಲಿದ ಕಾಲೇಜಿನ ಫೀಸ್ ಗಾಗಿ ಶರತ್ ಬುಕ್ ಬೈಂಡಿಂಗ್ ಹಾಕಿ ಹಣ ಸಂಪಾದಿಸಿ ಕಾಲೇಜ್ ಗೆ ಹಣ ಕಟ್ಟುತ್ತಿದ್ದ. ನಂತರ ದ್ವಿತೀಯ ಪಿಯುಸಿಯಲ್ಲಿ ಶರತ್ ಟಾಪರ್ ಆದ. ಮುಂದಿನ ಓದಿಗಾಗಿ ರಾಜಸ್ಥಾನದ ಬಿರ್ಲಾ ಇನ್ಸ್‌ಟ್ಯೂಟ್ (BITS) ನಲ್ಲಿ ಶರತ್‌ಗೆ ಸುಲಭವಾಗಿ ಬಿರ್ಲಾ ಇನ್ಸ್ ಟ್ಯೂಟ್ ಆಫ್ ಟೆಕ್ನಾಜಲಿ ಅಂಡ್ ಸೈನ್ಸ್‌ನಲ್ಲಿ ಪ್ರವೇಶ ಸಿಕ್ಕಿತ್ತು.

BITS ಸೇರಲು ಹಣ ವಿಲ್ಲದಾಯಿತು ಆಗ ಶರತ್ ಬಾಬು ತಾಯಿ ಮತ್ತು ಅಕ್ಕಂದಿರು ತಮ್ಮ ಚಿನ್ನದ ಒಡವೆ ಅಡವಿಟ್ಟು ಹಣ ಕೊಟ್ಟರಂತೆ, ಹೀಗೆ ಅವರಿವರ ಹತ್ತಿರ ಸಹಾಯ ಪಡೆದು ಶಿಕ್ಷಣ ಪಡೆದರಂತೆ. ಆಗ ತಮ್ಮ ತಾಯಿಯ ಆಸೆಯಂತೆ ಇಂಜಿನಿಯರ್ ಆಗುವ ಕನಸು ಕಾಣಲು ಹೋಗದ ಶರತ್ ಗೆ ಇದೇ ಸಮಯದಲ್ಲಿ ಪೋಲಾರಿಸ್ ಇಂಡಸ್ಟ್ರಿಯಲ್ಲಿ ಕೆಲಸ ಸಿಗುತ್ತದೆ. ಅಲ್ಲೇ ಎರಡು ವರ್ಷ ದುಡಿದು ಮನೆಯ ಸಾಲವನ್ನು ತೀರಿಸಿ ಮೂರನೇ ಬಾರಿ ಸಿಎಟಿ ಪಾಸ್ ಮಾಡಿ ಅಹ್ಮದಾಬಾದ್ ನಲ್ಲಿ ಐಐಎಂಗೆ ಪ್ರವೇಶ ಪಡೆದುಬಿಟ್ಟರಂತೆ. ಐಐಎಂಗೆ ಪ್ರವೇಶ ಪಡೆದ ನಂತರ ಕೈತುಂಬಾ ಸಂಬಳ ನೀಡುವ ಉದ್ಯೋಗದ ಆಫರ್ ಗಳು ಬರಲು ಶುರುವಾದವಂತೆ.

ಆ ಸಮಯದಲ್ಲೇ ವರ್ಷಕ್ಕೆ 8 ಲಕ್ಷ ರೂಪಾಯಿ ಸಂಬಳದ ಆಫರ್ ಬಂದಾಗ ಆ ಕೆಲಸ ಮಾಡಬೇಕೆ ಎಂಬ ಗೊಂದಲ ಉಂಟಾಗಿತ್ತಂತೆ ಶರತ್‌ಗೆ. ಏಕೆಂದರೆ ಸ್ವಂತ ಕಂಪೆನಿ ಶುರುಮಾಡುವತ್ತ ಯೋಚನೆಯಲ್ಲಿದರಂತೆ. ಐಐಎಂ ಪದವೀಧರನಾದ ಶರತ್. ಅದರಂತೆ 27 ವಯಸ್ಸಿನಲ್ಲಿ ಒಂದು ಚಿಕ್ಕ ಕಚೇರಿ, ಮೂವರು ಸಿಬ್ಬಂದಿಗಳ ಜೊತೆ ಒಂದು ಲಕ್ಷ ರೂಪಾಯಿ ಬಂಡವಾಳದೊಂದಿಗೆ ಫುಡ್ ಕಿಂಗ್ ಕೆಟರಿಂಗ್ ಸರ್ವಿಸ್ ಪ್ರೈ. ಲಿಮಿಟೆಡ ಎಂಬ ತನ್ನ ಮೊದಲ ಕಂಪೆನಿಯನ್ನು ಆರಂಬಿಸುತ್ತಾರೆ. ಅಹ್ಮದಾಬಾದ್‌ನ ಸಾಫ್ಟ್ ವೇರ್ ಕಂಪನಿಯೊಂದರಿಂದ ಮೊದಲ ಬಾರಿ ಆರ್ಡರ್ ಪಡೆಯುತ್ತಾರೆ. ನಂತರ ಅಹ್ಮದಾಬಾದ್ ಐಐಎಂ ಕೂಡ ಆರ್ಡರ್ ನೀಡಿದಾಗ ಸಾಲ ಪಡೆದುಕೊಂಡು ದೊಡ್ಡ ಆಫಿಸ್ ತೆರೆಯುತ್ತಾರೆ. ಈಗ ಆ ಆಫಿಸ್ ಎಷ್ಟು ಬೆಳೆದು ನಿಂತಿದೆ ಎಂದರೆ 39ರ ಹರೆಯದ ಶರತ್ ಜೊತೆ 15 ಸಾವಿರ ಮಂದಿ ದುಡಿಯುತ್ತಿದ್ದಾರೆ. ಅವರ ವಾರ್ಷಿಕ ಆದಾಯ 1.2 ಮಿಲಿಯನ್ ಅಮೆರಿಕನ್ ಡಾಲರ್ ಆಗಿವೆ.

ಮೊದಲಿನಿಂದ ಮಗ ಇಂಜಿನಿಯರ್ ಆಗುವ ಕನಸು ಕಾಣುತ್ತಿದ್ದ ತಾಯಿಗೆ ಉದ್ಯಮಿಯಾಗಿ ಬೆಳೆದುತೋರಿಸಿದ್ದಾರೆ. ತನ್ನದೇ ಒಂದು ಒಳ್ಳೆ ಮನೆ ಕಟ್ಟಿಸಬೇಕೆಂಬ ಕನಸು ಹೊತ್ತಿದ್ದ ಆತನ ತಾಯಿ ಇಂದು ಐಶಾರಾಮಿ ಬಂಗಲೆಯನ್ನೇ ಗಿಫ್ಟ್ ನೀಡಿದ್ದಾನೆ. ಇದು ಅಲ್ಲವೇ ನಿಜವಾದ ಸಾಧನೆ.