ಹಲ್ಲು ನೋವು ಬಂದ್ರೂ ಡೆಂಟಿಸ್ಟ್ ಹತ್ರ ಹೋಗೋಕೆ ಭಯ ಪಡ್ತಿರೋವ್ರು ಈ ಮನೆಮದ್ದುಗಳನ್ನು ಪಾಲಿಸಿ ನೋವಿನಿಂದ ಮುಕ್ತಿ ಪಡೆಯಿರಿ..

0
3057

Kannada News | Health tips in kannada

ಉತ್ತಮ ಆರೋಗ್ಯಕರ ದಂತಪಂಕ್ತಿಯು ಮುಖದ ಸೌಂದರ್ಯವನ್ನು ವೃದ್ಧಿಸುತ್ತದೆ. ಹಲ್ಲುಗಳನ್ನು ಸ್ವಚ್ಛವಾಗಿಟ್ಟುಕೊಂಡು, ಕಾಳಜಿಯಿಂದ ಕಾಪಾಡಿಕೊಂಡರೆ ಅವು ಮಧ್ಯ ವಯಸ್ಸಿನ ನಂತರವೂ ದೃಢವಾಗಿ ಉಳಿದು ನಮಗೆ ಸೇವೆ ಸಲ್ಲಿಸುತ್ತವೆ.ಅತಿಬಿಸಿ, ತಣ್ಣನೆಯ ಪದಾರ್ಥಗಳು, ಸಿಹಿತಿಂಡಿಗಳು, ಹಲ್ಲುಗಳಿಗೂ ಹಾಗು ಒಟ್ಟಾರೆ ಆರೋಗ್ಯಕ್ಕೂ ಶತ್ರುಗಳು.ಹಲ್ಲು ನೋವು ಉಂಟಾಗಲು ಮುಖ್ಯ ಕಾರಣವೇನೆಂದರೆ ಹಲ್ಲು ಹುಳುಕಾಗುವುದು ಹಾಗಾಗಿ ಹಲ್ಲುಗಳ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು.ಹಲ್ಲು ನೋವು ಬಂದರೆ ಮುಖ ,ಕತ್ತು, ತಲೆಯ ಭಾಗಗಳು ಸಿಡಯಲಾರಂಬಿಸಿ ಬೇರೇನೂ ಕೆಲಸ ಮಾಡದಂತೆ ತಡೆಯೊಡ್ಡುತ್ತವೆ.

ಹಲ್ಲು ನೋವಿನ ಶಮನಕ್ಕೆ ಮನೆ ಔಷಧಿಗಳು:

 • ಹಲ್ಲು ಹುಳುಕು ಕಡಿಮೆ ಇದ್ದಲ್ಲಿ ಲವಂಗದೆಣ್ಣೆಯನ್ನು ಹಚ್ಚುತ್ತಿರಬೇಕು.
 • ಒಂದೆರಡು ಕಾಳು ಕರಿಮೆಣಸಿಗೆ ೩-೪ ಲವಂಗವನ್ನು ಸೇರಿಸಿ ಕುಟ್ಟಿ ನೋವಾಗಿರುವ ಹಲ್ಲಿನ ಸುತ್ತಲೂ ಸವರಿದರೆ ನೋವು ಕಡಿಮೆಯಾಗುತ್ತದೆ.
 • ವಸಡು ಹುಣ್ಣಿಗೆ ಒಂದೆರಡು ಎಸಳು ಬೆಳ್ಳುಳ್ಳಿ ಜೊತೆ ಉಪ್ಪು ಸೇರಿಸಿ ಅರೆದು ನೋವಾಗಿರುವ ಜಾಗದ ಸುತ್ತ ಹಚ್ಚಬೇಕು.
 • ಗರಿಕೆ ಹುಲ್ಲನ್ನು ತಾಂಬೂಲ ಜಗಿಯುವಂತೆ ಜಗಿದ ರಸ ಉಗುಳುವುದರಿಂದ ಹಲ್ಲುಗಳ ಸವೆತವನ್ನು ತಡೆಗಟ್ಟಬಹುದು.
  ಆಗಾಗ ಜೀರಿಗೆ ಅಥವಾ ಹಸಿ ಈರುಳ್ಳಿಯನ್ನು ಅಗಿಯುತ್ತಿದ್ದರೆ ಹಲ್ಲುಗಳು ಬೇಗನೆ ಸವೆಯುವುದಿಲ್ಲ. —
 • ಊಟದ ನಂತರ ಸ್ವಲ್ಪ ಓಂ ಕಾಳನ್ನುಬಾಯಿಗೆ ಹಾಕಿಕೊಂಡು ಜಗಿದ್ದಲ್ಲಿ ಸದೃಢ ಹಲ್ಲುಗಳು ನಿಮ್ಮದಾಗುತ್ತದೆ.
 • ಪ್ರತಿದಿನ ಹಸಿಬೇವಿನ ಕಡ್ಡಿಯಿಂದ ಹಲ್ಲನ್ನು ತಿಕ್ಕುವುದರಿಂದ ಹಲ್ಲು ಬಲಗೊಳ್ಳುತ್ತದೆ. ಬಾಯಿ ದುರ್ವಾಸನೆ ನಿವಾರಣೆಯಾಗಿ, ವಸಡಿನ ಹುಣ್ಣು ಗುಣವಾಗುವುದು.

 • ನಾಲ್ಕೈದು ವಿಲ್ಯೆದೆಲೆಗಳನ್ನು ಎರಡು ಬಟ್ಟಲು ನೀರಿಗೆ ಹಾಕಿ ಕುದಿಸಿ, ಆ ನೀರಿನಿಂದ ಬಾಯಿ ಮುಕ್ಕಳಿಸಿದ್ದಲ್ಲಿ ನೋವು ನಿವಾರಣೆಯಾಗುತ್ತದೆ.
 • ನಾಲ್ಕು ಲವಂಗಗಳನ್ನು ನಿಂಬೆರಸದಲ್ಲಿ ಅರೆದು ಹಲ್ಲು ವಸಡುಗಳನ್ನು ತಿಕ್ಕಬೇಕು.
 • ಪರಂಗಿಕಾಯಿಯ ಮೇಲ್ಭಾಗವನ್ನು ಮೊಲೆಯಿಂದ ಗೀಚಿದ್ದಲ್ಲಿ ಒಂದು ರೀತಿಯ ದ್ರವ ಸ್ರವಿಸುತ್ತದೆ.ಅದನ್ನು ಹಚ್ಚಿದ್ದಲ್ಲಿ ಹಲ್ಲುನೋವು ಕಡಿಮೆಯಾಗುತ್ತದೆ.
 • ಎರಡು ಬಟ್ಟಲು ನೀರಿಗೆ ಐದಾರು ಲವಂಗ ಅಥವಾ ಎರಡು ಟೀ ಸ್ಪೂನ್ ಓಮ್ ಹಾಕಿ ಚೆನ್ನಾಗಿ ಕುದಿಸಿ ದಿನದಲ್ಲಿ ನಾಲ್ಕಾರು ಸಲ ಆ ನೀರಿನಿಂದ ಬಾಯಿ ಮುಕ್ಕಳಿಸಬೇಕು.
 • ಇಂಗನ್ನು ನಿಂಬೆರಸದಲ್ಲಿ ಕರಗಿಸಿ, ಸ್ವಲ್ಪ ಬಿಸಿಮಾಡಿ ಅದರಲ್ಲಿ ಸ್ವಚ್ಛವಾದ ಹತ್ತಿಯನ್ನು ಅಡ್ಡಿ ನೋಯುತ್ತಿರುವ ಹಲ್ಲಿನ ಮೇಲಿಟ್ಟರೆ ಕಡಿಮೆಯಾಗುತ್ತದೆ.
 • ನಿಂಬೆಹಣ್ಣಿನ ಸಿಪ್ಪೆ ಅಥವಾ ನೆಲ್ಲಿ ಚಟ್ಟನ್ನು ನುಣ್ಣಗೆ ಅರೆದು, ಅದ್ರಿಂದ ವಸಡನ್ನು ಉಜ್ಜಿದ್ದಲ್ಲಿ ಬಾಯಲ್ಲಿ ನೀರೂರುತ್ತದೆ. ಆ ನೀರನ್ನು ಉಗಿಯುತ್ತಿದ್ದರೆ ನೋವು ಇಳಿಯುತ್ತದೆ.

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840

Also read: ನಿಮ್ಮ ಮನೆಯಲ್ಲಿ ಡಯಾಬಿಟಿಸ್ ಇರುವವರು ಇದ್ದಾರೆಯೇ?? ಹಾಗಿದ್ದರೇ ನೀವು ಈ ಲೇಖನವನ್ನು ಓದಲೇಬೇಕು..

Watch: