ಫೇಸ್‍ಬುಕ್ ಪ್ರಿಯತಮೆಗಾಗಿ ಲಕ್ಷಾಂತರ ರೂ. ಖರ್ಚು ಮಾಡಿ ಗುಡಿ ನಿರ್ಮಿಸಿ ಗೆಳತಿಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ ಟೆಕ್ಕಿ.!

0
174

ಸಾಮನ್ಯವಾಗಿ ತಂದೆ-ತಾಯಿಗಳಿಗೆ ಮತ್ತು ಮನೆಯವರ ನೆನಪಿಗಾಗಿ ದೇವಸ್ಥಾನ ಕಟ್ಟುವುದು ನೋಡಿದ್ದೀರಾ ಆದರೆ ಪ್ರೀತಿಸಿದ ಹುಡುಗಿಯ ದೇವಸ್ಥಾನ ಕಟ್ಟಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಎಲ್ಲಿವೂ ಕೇಳಿಲ್ಲ, ಆದರೆ ಇಲ್ಲೊಬ್ಬ ಟೆಕ್ಕಿ ಲಕ್ಷಾಂತರ ಹಣ ಕರ್ಚು ಮಾಡಿ ತನ್ನ ಪ್ರೀತಿಯ ಹುಡುಗಿಗೆ ದೇವಸ್ಥಾನ ಕಟ್ಟಿಸಿದ್ದಾನೆ. ಇದರ ಮೂಲಕ ತನ್ನಲ್ಲಿರುವ ಪ್ರೀತಿಯನ್ನು ಸಾರಿ ಹೇಳಿದ್ದಾನೆ. ಆದರೆ ಇದನ್ನು ಕೇಳಲು ಪ್ರೀತಿಯ ಹುಡುಗಿಯೇ ಇಲ್ಲ ಎನ್ನುವುದು ಅಲ್ಲಿ ನೆರೆದಿದ್ದ ಜನರಿಗೆ ಬೇಸರವಾಗಿದೆ. ಹಾಗಾದ್ರೆ ಇಷ್ಟೊಂದು ಪ್ರೀತಿಸುವ ಹುಡುಗನನ್ನು ಬಿಟ್ಟು ಪ್ರಿಯತಮೆ ಎಲ್ಲಿ ಹೋದಳು.

ಹೌದು ಕೆಲವು ಸಿನಿಮಾಗಳಲ್ಲಿ ತೋರಿಸುವಂತೆ ಪ್ರೀತಿಸುವ ಹುಡುಗಿ ಸಾವನ್ನಪ್ಪಿದ ನಂತರ ಹೀರೋ ಅವಳ ಗೋರಿಯ ಮುಂದೆ ಕುಳಿತು ಕಾವಲುಗಾರನಾಗಿ ಪೂಜೆ ಮಾಡುತ್ತಾನೆ ಇರುತ್ತಾನೆ. ಇನ್ನೂ ಕೆಲವು ವ್ಯಕ್ತಿಗಳು ಸಮಾಜದಲ್ಲಿ ಗುರುಗಳು ಎಂದು ಖ್ಯಾತಿ ಪಡೆದರೆ ಅವರಿಗೆ ದೇವಸ್ಥಾನ ಕಟ್ಟಿಸಿ ಪೂಜಿಸುವುದು ಹಲವೆಡೆ ಕಂಡು ಬರುತ್ತೆ, ಆದರೆ ಇದೆಲ್ಲವನ್ನು ಮೀರಿ ತನ್ನನು ಅಗಲಿದ facebook ಲವರ್ಗೊಸ್ಕರ ದೇವಸ್ಥಾನ ಕಟ್ಟಿದರೆ ಹುಡುಗಿಯ ಮನೆಯವರು ಮಗಳ ಮೂರ್ತಿಯನ್ನು ತಂದು ಕೊಟ್ಟಿದ್ದಾರೆ.

ಇದೆಲ್ಲವೂ ನಡೆದಿರುವುದು ಆಶ್ಚರ್ಯ ಅನಿಸಿದರು. ಆಂಧ್ರಪ್ರದೇಶದ ಯುವಕನೊಬ್ಬ ಫೇಸ್‍ಬುಕ್ ಗೆಳತಿಯ ನೆನಪಿಗಾಗಿ ಗುಡಿ ಕಟ್ಟಿಸಿ, ಪೂಜಾರಿಯಾಗಿದ್ದಾರೆ. ವಿಜಯನಗರಂ ಜಿಲ್ಲೆಯ ಜಾಮಿ ಗ್ರಾಮದ ಯುವಕ ಎರ್ನಿಬಾಬು ಪ್ರೇಮ ಗುಡಿ ಕಟ್ಟಿ, ಗೆಳತಿಯ ಪ್ರತಿಮೆ ಪ್ರತಿಷ್ಠಾಪಿಸಿ ಪ್ರೇಮಿ. ವೃತ್ತಿಯಿಂದ ಇಲೆಕ್ಟ್ರಿಕಲ್ ಮೆಕಾನಿಕ್ ಆಗಿರುವ ಎರ್ನಿಬಾಬುಗೆ ಫೇಸ್‍ಬುಕ್‍ನಲ್ಲಿ ಯುವತಿ ಪರಿಚಯವಾಗಿದ್ದಳು. ಬಳಿಕ ಯುವತಿಯ ಫೋನ್ ನಂಬರ್ ಪಡೆದ ಆಕೆಯ ಜೊತೆಗೆ ಚಾಟಿಂಗ್ ಮಾಡುತ್ತಿದ್ದ. ಈ ಪರಿಚಯ ಸ್ನೇಹವಾಗಿ ಬದಲಾಗಿತ್ತು. ಬಳಿಕ ಒಬ್ಬರು ಹೈದರಾಬಾದ್‍ನಲ್ಲಿ ಎರಡು ಬಾರಿ ಭೇಟಿಯಾಗಿ, ಪ್ರೇಮ ಪ್ರಸ್ತಾಪ ಮಾಡಿದ್ದರು.

ದುರದೃಷ್ಟವಶಾತ್ ಕಳೆದ ವರ್ಷ ಅನಾರೋಗ್ಯದಿಂದ ಯುವತಿ ಮೃತಪಟ್ಟಿದ್ದಳು. ಈ ಆಘಾತದಿಂದ ಎರ್ನಿಬಾಬು ಹೊರ ಬರಲು ಭಾರೀ ಕಷ್ಟಪಡುತ್ತಿದ್ದಾನೆ. ಪ್ರೇಮಿಯ ನೆನಪಿನಲ್ಲಿಯೇ ಹೆಚ್ಚು ಕಾಲ ಕಳೆಯುತ್ತಿದ್ದ. ಮಗನ ನಡೆಯಿಂದಾಗಿ ಪೋಷಕರು ನೊಂದುಕೊಂಡಿದ್ದರು. ಗೆಳತಿಯು ಆಗಾಗ ನನ್ನ ಕನಸಿನಲ್ಲಿ ಬರುತ್ತಾಳೆ ಎಂದು ಎರ್ನಿಬಾಬು ಸ್ನೇಹಿತರ ಮುಂದೆ ಹೇಳಿಕೊಂಡಿದ್ದ ಅಂತಿಮವಾಗಿ ತನ್ನ ಪ್ರೀತಿಯ ದ್ಯೋತಕವಾಗಿ ಪ್ರೇಮ ಗುಡಿ ನಿರ್ಮಿಸಲು ತೀರ್ಮಾನಿಸಿದ್ದು, ಇದಕ್ಕೆ ಆತನ ಪೋಷಕರೂ ಒಪ್ಪಿಗೆ ಸೂಚಿಸಿದರು.
ಇದನ್ನು ಕೇಳಿ ಕೆಲವರು ಹುಚ್ಚರ ಸಂತೆ ಎಂದು ಆಡಿಕೊಂಡರು ಆದರು ಯುವಕ ತನ್ನ ಪ್ರೀತಿಗಾಗಿ ಪ್ರೇಮ ಗುಡಿ ನಿರ್ಮಿಸಲು ತೀರ್ಮಾನಿಸಿದ ಈ ವಿಚಾರ ತಿಳಿಯುತ್ತಿದ್ದಂತೆ. ಯುವತಿಯ ಪೋಷಕರು ತಮ್ಮ ಪುತ್ರಿಯ ವಿಗ್ರಹವನ್ನು ಜಾಮಿ ಗ್ರಾಮಕ್ಕೆ ಕಳುಹಿಸಿದ್ದಾರೆ. ಎರ್ನಿಬಾಬು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗೆಳತಿಯ ವಿಗ್ರಹವನ್ನು ಅದ್ಧೂರಿ ಮೆರವಣಿಗೆ ಮೂಲಕ ತಂದು ಪ್ರತಿಷ್ಠಾಪನೆ ಮಾಡಿದ್ದಾನೆ. ಈ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ, ಗ್ರಾಮದ 300ಕ್ಕೂ ಅಧಿಕ ಜನರಿಗೆ ಅನ್ನ ಸಂತರ್ಪನೆ ನೆರವೇರಿಸಿದ್ದಾನೆ. ಇದನ್ನು ಕಂಡು ಕೆಲವರ ಕಣ್ಣಿರು ಹಾಕಿದ್ದಾರೆ.