ಸ್ವಾತಂತ್ರ್ಯೋತ್ಸಕ್ಕೆ ”ಉತ್ತಮ ಕಾನ್ಸ್ ಟೇಬಲ್” ಅವಾರ್ಡ್ ಪಡೆದು ಮರುದಿನವೇ ಲಂಚ ಪಡೆಯುವಾಗ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಪೊಲೀಸ್.!

0
153

ಮೊದಲಿನಿಂದಲೂ ಸರ್ಕಾರಿ ಇಲಾಖೆಯಲ್ಲಿ ಲಂಚದ ರುಚಿ ಹೆಚ್ಚು ಎನ್ನುವ ಮಾತುಗಳು ಕೇಳಿಬರುತ್ತಿದ್ದವು ಅವೆಲ್ಲ ಹುಟ್ಟುವುದು ಬರಿ ಪೊಳ್ಳು ಮಾತಿನಿಂದ ಅಲ್ಲ ಅದೆಷ್ಟೋ ಜನರು ಪ್ರತಿದಿನವೂ ಲಂಚ ನೀಡಿ ಆಮೇಲೆ ನೊಂದುಕೊಂಡು ಬಹಿರಂಗ ಮಾಡುವುದು ಇದ್ದೆ ಇದೆ. ಅದರಂತೆ ಪೊಲೀಸ್ ಇಲಾಖೆಯಲ್ಲಿವೂ ಲಂಚ ಹೆಚ್ಚು ಎನ್ನುವ ಪಶ್ನೆಗಳು ಮೂಡಿವೆ. ಏಕೆಂದರೆ ಕೆಲವು ಘಟನೆಗಳಲ್ಲಿ ಜನರು ಲಂಚ ನೀಡಿ ಕೇಸ್ ನಿಕಾಲಿ ಮಾಡಿಕೊಳ್ಳುತ್ತಿರುವುದು ನಡೆಯುತ್ತಿದೆ. ಈ ಪಾಪಕ್ಕೆ ಎಲ್ಲ ಪೊಲೀಸ್ ಅಧಿಕಾರಿಗಳು ಹೊಣೆಯಾಗುತ್ತಾರೆ ಎಂದು ಹೇಳಲು ಸಾದ್ಯವಾಗುವುದಿಲ್ಲ, ಅದಕ್ಕಾಗಿ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕರ್ತ್ಯವೇ ನಿರ್ವಹಿಸಿ ಪ್ರಶಸ್ತಿ ಪಡೆದ ಸಾಕಷ್ಟು ಅಧಿಕಾರಿಗಳನ್ನು ನೋಡಬಹುದು.

Also read: ಕರ್ನಾಟಕದಲ್ಲಿ ಸಂಭವಿಸುತ್ತಿರುವ ವಿಪತ್ತುಗಳಿಗೆ ಕಾರಣ ತಿಳಿಸಿದ ಸಂಶೋಧಕ ಟಿ.ವಿ.ರಾಮಚಂದ್ರ; ಮರದಿಂದ ಬೀಳುವ ಕಸವೂ ಕಾರಣವಂತೆ!!

ಇಂತಹ ದಕ್ಷ ಕಾರ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿಗಳಿಗೆ ಮತ್ತು ಪೇದೆಗಳಿಗೆ ಮೊನ್ನೆ ತಾನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಅವಾರ್ಡ್ ನೀಡಲಾಗಿದೆ, ಇದು ಇಡಿ ದೇಶದ ಎಲ್ಲ ನಗರಗಳಲ್ಲಿವೂ ನಡೆದಿದೆ. ಇಂತಹ ಸಮಾರಂಭದಲ್ಲಿ ಉತ್ತಮ ಕಾನ್ಸ್ ಟೇಬಲ್ ಪಡೆದು ಪ್ರಾಮಾಣಿಕನೆಂದು ಹೆಸರು ಪಡೆದ ಪೇದೆಯೊಬ್ಬ ಮರುದಿನವೇ ಸಾವಿರಾರು ರೂ. ಲಂಚಕ್ಕೆ ಕೈ ಚಾಚಿ ರೆಡ್ ಹ್ಯಾಂಡ್ ಆಗಿ ಸಿಕ್ಕ ಪ್ರಕರಣವೊಂದು ಹೈದರಾಬಾದ್ ನ ಮೆಹಬೂಬ್ ನಗರದ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಪೇದೆ “ತಿರುಪತಿ ಪಲ್ಲೆ ರೆಡ್ಡಿ” ಕಾನ್ಸ್ ಟೇಬಲ್ ಪೊಲೀಸ್​ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಯದಲ್ಲಿ ತೋರಿದ ಶ್ರದ್ಧೆ ಮತ್ತು ಕಠಿಣ ಪರಿಶ್ರಮವನ್ನು ಗುರುತಿಸಿ ಆಗಸ್ಟ್​ 15 ರಂದು ಉತ್ತಮ ಪೇದೆ ಪ್ರಶಸ್ತಿ ನೀಡಲಾಗಿತ್ತು. ಅಬಕಾರಿ ಸಚಿವ ವಿ.ಶ್ರೀನಿವಾಸ್ ಅವರು ಉತ್ತಮ ಕಾನ್ಸ್ ಟೇಬಲ್ ಎಂಬ ಪ್ರಶಸ್ತಿ ನೀಡಿ ಗೌರವಿಸಿದ್ದರು.

Also read: ಚಿಂತಾಮಣಿಯಲ್ಲಿ ಶಂಕಿತ ಉಗ್ರರ ಕಾರ್ ಆಕ್ಸಿಡೆಂಟ್; ಉಗ್ರರ ದಾಳಿ ಹಿನ್ನೆಲೆ ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಣೆ.!

ಅದರಂತೆ ಉತ್ತಮ ಕಾನ್ಸ್ ಟೇಬಲ್ ಪ್ರಶಸ್ತಿ ಪಡೆದು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದ. ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ರೇಮಾ ರಾಜೇಶ್ವರಿ ಕೂಡಾ ಹಾಜರಿದ್ದರು. ಇಂತಹ ದೊಡ್ಡ ವ್ಯಕ್ತಿಗಳ ಕೈಯಲ್ಲಿ ಪ್ರಶಸ್ತಿ ಪಡೆದ ಪೇದೆ ನನಗೆ ಇಲಾಖೆಯೇ ಮೆಚ್ಚಿ ಅವಾರ್ಡ್ ನೀಡಿದೆ ನನ್ನ ಮೇಲೆ ಭರವಸೆ ಇದೆ ಎಂದು ಮರುದಿನವೇ ವ್ಯಕ್ತಿಯೊಬ್ಬನ ಮೇಲೆ ಪ್ರಕರಣ ದಾಖಲಿಸದೇ ಇರಲು 17 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಕಾನ್ಸ್ ಟೇಬಲ್ ತಿರುಪತಿ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿರುವುದಾಗಿ ವರದಿ ತಿಳಿಸಿದೆ.

ಲಂಚ ನೀಡುತ್ತಿದ್ದ ವ್ಯಕ್ತಿ ಪರವಾನಿಗೆ ಇದ್ದರೂ ಕೂಡಾ ಮರಳು ಸಾಗಣೆ ಮಾಡುತ್ತಿದ್ದ ರಮೇಶ್ ಎಂಬವರಿಗೆ ಲಂಚ ಕೊಡುವಂತೆ ಕಾನ್ಸ್ ಟೇಬಲ್ ತಿರುಪತಿ ರೆಡ್ಡಿ ಪೀಡಿಸುತ್ತಿದ್ದರು ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ ಲಂಚ ನೀಡುವಂತೆ ರಮೇಶ್​ ಎಂಬುವರಿಗೆ ತಿರುಪತಿ ರೆಡ್ಡಿ ಒಂದು ವರ್ಷದಿಂದ ಕಿರುಕುಳ ನೀಡುತ್ತಿದ್ದ. ರೆಡ್ಡಿಯ ಕಿರುಕುಳದಿಂದ ಬೇಸತ್ತ ರಮೇಶ್​ ತೆಲಂಗಾಣ ಎಸಿಬಿಗೆ ದೂರು ನೀಡಿದ್ದರು. ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಎಸಿಬಿ ತಂಡ ತಿರುಪತಿ ರೆಡ್ಡಿಯನ್ನು ಶುಕ್ರವಾರ ಸಂಜೆ 5 ಗಂಟೆಗೆ ರೆಡ್​ ಹ್ಯಾಂಡ್​ ಆಗಿ ಹಿಡಿದಿದ್ದಾರೆ. ರೆಡ್ಡಿಯನ್ನು ಬಂಧಿಸಲಾಗಿದ್ದು, ಇದೀಗ ಬಂಧಿತ ಕಾನ್ಸ್ ಟೇಬಲ್ ರೆಡ್ಡಿಯನ್ನು ಎಸಿಬಿ ಕೋರ್ಟ್ ಗೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.