ಪಶು ವೈದ್ಯೆ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಮಾಡಿ ಕೊಂದ ರೀತಿಯಲ್ಲಿ ನಮ್ಮ ಮಕ್ಕಳನ್ನು ಕೊಲ್ಲಿ; ಆರೋಪಿಗಳ ಕುಟುಂಬಸ್ಥರ ಹೇಳಿಕೆಗೆ ಭಾರಿ ಮೆಚ್ಚುಗೆ.!

0
520

ದೇಶದಲ್ಲಿ ವಿಚಿತ್ರ ರೀತಿಯಲ್ಲಿ ಅತ್ಯಾಚಾರಗಳು ನಡೆಯುತ್ತಿದ್ದು, ಪಾಪಿಗಳಿಗೆ ಸರಿಯಾದ ಶಿಕ್ಷೆ ಆಗದೆ ಇರುವುದೇ ಅತ್ಯಾಚಾರಗಳು ಪುನರಾವರ್ತನೆ ಆಗಲು ಆಗುತ್ತಿದೆ. ಅದರಲ್ಲಿ ಕೆಲವು ಪ್ರಕರಣಗಳನ್ನು ನೋಡಿದರೆ ದೇಶವೇ ಬೆಚ್ಚಿ ಬಿಳಿಸುವಂತಿದೇ ಏಕೆಂದರೆ ಅಮಾಯಕ ಮಹಿಳೆಯರ ಮೇಲೆ ಅತ್ಯಾಚಾರ ಗೈದು ಬೆಂಕಿ ಹಚ್ಚಿ ಸುಟ್ಟು, ಇಲ್ಲಾ ಕಲ್ಲಿನಿಂದ ಚೆಚ್ಚಿ ಕೊಲೆ ಮಾಡುತ್ತಿರುವುದು ಭಯ ಹುಟ್ಟಿಸುವಂತಿದೆ. ತೆಲಂಗಾಣದಲ್ಲಿ ನಡೆದ ಪಶುವೈದ್ಯೆಯ ಅತ್ಯಾಚಾರ ಕೂಡ ಇಡಿ ದೇಶವನ್ನೇ ನಡುಗಿಸಿದೆ.

ಹೌದು ಪಶುವೈದ್ಯೆ ಪ್ರಿಯಾಂಕಾರೆಡ್ಡಿ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸದಂತೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಪ್ರಕರಣ ಸಂಬಂಧ ತ್ವರಿತ ತನಿಖೆ ನಡೆಸಿರುವ ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅತ್ಯಾಚಾರ ಆರೋಪಿಗಳಾದ ಮೊಹಮ್ಮದ್ ಆರೀಫ್, ಚೆನ್ನಕೇಶವಲು, ಶಿವಾ ಮತ್ತು ನವೀನ್ ಅವರ ಕುಟುಂಬಗಳು ಕೆಳ ಮಧ್ಯಮ ವರ್ಗದ ಕುಟುಂಬಗಳು. ಆದರೆ, ಇವರು ಮಾಡಿರುವ ಘೋರ ಅಪರಾಧಕ್ಕೆ ಇದೀಗ ಅವರು ಕುಟುಂಬಸ್ಥರು ಸಮಾಜದ ನಡುವೆ ತಲೆ ತಗ್ಗಿಸಿ ಭಯದ ವಾತಾವರಣದಲ್ಲಿ ಹೆಣಗಾಡುತ್ತಾ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.

26 ವರ್ಷದ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿಯನ್ನು ಸ್ಕೂಟಿ ಪಂಕ್ಚರ್ ಹಾಕಿಸಿಕೊಡುವ ನೆಪದಲ್ಲಿ ಲಾರಿ ಚಾಲಕ ಮಹ್ಮದ್ ಪಾಷಾ, ಮೂವರು ಕ್ಲೀನರ್ ಗಳಾದ ನವೀನ್, ಚೆನ್ನಕೇಶವುಲು ಮತ್ತು ಶಿವಾ ಸೇರಿ ಕಿಡ್ನಾಪ್ ಮಾಡಿ, ಸಾಮೂಹಿಕ ಅತ್ಯಾಚಾರ ಮಾಡಿದ್ದರು. ಅಲ್ಲದೆ ವೈದ್ಯೆಯ ಮೃತ ದೇಹವನ್ನು ಸುಟ್ಟು ಹಾಕಿದ್ದರು. ಹೀಗಾಗಿ ಈ ನಾಲ್ಕೂ ಜನರ ಕುಟುಂಬಗಳು ಸ್ವತಃ ತಮ್ಮ ಮಕ್ಕಳ ಸಾವನ್ನೇ ಭಯಸುವಂತಾಗಿದೆ. ಈ ಕುರಿತು ಮಾಧ್ಯಮಗಳು ಆರೋಪಿ ಚನ್ನಕೇಶವಲು ಅವರ ತಾಯಿಯನ್ನು ಪ್ರಶ್ನಿಸಿದಾಗ, “ನನಗೂ ಮಗಳಿದ್ದಾಳೆ. ಸಾಯುವಾಗ ಪಶುವೈದ್ಯೆ ಅನುಭವಿಸಿದ ನೋವು ನನಗೆ ಅರ್ಥವಾಗುತ್ತದೆ. ಅವನನ್ನು ಗಲ್ಲಿಗೇರಿಸಿ, ಶೂಟ್ ಮಾಡಿ ಸಾಯಿಸಿ” ಎಂದು ಹೇಳುವ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.

ಒಂದು ವೇಳೆ ನನ್ನ ಮಗ ಈ ಪಾಪ ಮಾಡಿದ್ದಾನೆ ಎಂದು ಸಾಬೀತಾದರೆ ಖಂಡಿತಾ ಆತನಿಗೆ ಶಿಕ್ಷೆಯಾಗಬೇಕು. ಬೇಕಾದರೆ ಪ್ರಿಯಾಂಕ ರೆಡ್ಡಿಯನ್ನು ಹೇಗೆ ಆರೋಪಿಗಳು ಅಮಾನುಷವಾಗಿ ಕೊಲೆಗೈದಿದ್ದಾರೋ ಹಾಗೆಯೇ ನನ್ನ ಮಗನನ್ನೂ ಹತ್ಯೆ ಮಾಡಿ ಏಕೆಂದರೆ ನಾನು ಒಬ್ಬಳು ಹೆಣ್ಣು. ನನಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮಕ್ಕಳಿಗೆ ಹೀಗಾದರೆ ಹೆತ್ತ ಕರುಳು ಎಷ್ಟು ನೋವು ಪಡುತ್ತದೆ ಎಂದು ನನಗೂ ತಿಳಿದಿದೆ. ನನ್ನ ಮಗ ತಪ್ಪಿತಸ್ಥ ಆಗಿದ್ದರೆ ಆತನಿಗೆ ಶಿಕ್ಷೆ ಖಂಡಿತ ಆಗಬೇಕು. ಈ ರೀತಿ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ ಹೀನಾಯ ಕೆಲಸ ಮಾಡುವವರಿಗೆ ಕಠಿಣ ಶಿಕ್ಷೆ ಕೊಡಬೇಕು. ಆಗ ಮುಂದೆ ಇಂತಹ ದುಷ್ಕೃತ್ಯಕ್ಕೆ ಯಾರು ಕೈ ಹಾಕಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬ ಆರೋಪಿ ಮೊಹಮ್ಮದ್ ಅವರ ಪೋಷಕರು ಮಾತನಾಡಿ, “ಕೃತ್ಯ ನಡೆದ ಅದೇ ದಿನ ಆತ ಮನೆಗೂ ಬಂದಿದ್ದ. ಏನು ನಡೆದಿದೆ ಎಂಬುದು ದೇವರಿಗೆ ಮಾತ್ರ ತಿಳಿದಿದೆ. ಹೀಗಾಗಿ ನೀವು ಆತನನ್ನು ಏನು ಬೇಕಾದರೂ ಮಾಡಿ, ಯಾವ ಶಿಕ್ಷೆಯನ್ನು ಬೇಕಾದರೂ ನೀಡಿ” ಎಂದು ಹೇಳಿದ್ದಾರೆ. ಇವರ ಹೇಳಿಕೆಗೆ ಸಾರ್ವಜನಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.