ಎಳೆಯ ಮನಸ್ಸಿಗೆ ಟಿವಿಯಿಂದ ಹಾನಿ

0
468

ನಿಮ್ಮ ಮಕ್ಕಳು ದಿನಕ್ಕೆ ಎರಡು ಗಂಟೆಗಳಿಂದ ಹೆಚ್ಚಿನ ಹೊತ್ತು ಟಿವಿ ನೋಡುವುದು, ಕಂಪ್ಯೂಟರ್ ಗೇಮ್ಸ್ ಆಡುವುದನ್ನು ಮಾಡುತ್ತಿದ್ದಾರೆಯೇ? ಅಂದರೆ ಸ್ವಲ್ಪ ಜಾಗ್ರತೆ ವಹಿಸಿರಿ, ಇಂತಹ ಮಕ್ಕಳಿಗೆ ಮಾನಸಿಕ ಸಮಸ್ಯೆಗಳು ಬರುವ ಅಪಾಯ ಹೆಚ್ಚಾಗಿರುತ್ತದೆಂದು ಬ್ರಿಟನ್’ನ ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ದೈಹಿಕ ಶ್ರಮವು ನಮ್ಮ ದೇಹದ ಹಾಗೂ ಮಾನಸಿಕ ಆರೋಗ್ಯಕ್ಕೆ ಎಷ್ಟು ನೆರವಾಗುತ್ತದೆ ಎಂಬುದು ನಮಗೆ ತಿಳಿದಿರುವ ವಿಷಯವೇ ಆಗಿದೆ. ಗಂಟೆಗಟ್ಟಲೆ ಟಿವಿ ನೋಡುವುದು, ಕಂಪ್ಯೂಟರ್ ಮುಂದೆ ಕಾಲ ಕಳೆಯುವುದು ಇಂತಹ ವರ್ತನೆಗಳು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆಯೆಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ.

ಆದರೆ ದೈಹಿಕ ಶ್ರಮ ವಹಿಸುವುದರ ಬದಲು ಟಿವಿ ಹಾಗೂ ಕಂಪ್ಯೂಟರ್ ಗಳ ಮುಂದೆ ಹೆಚ್ಚು ಸಮಯ ಕೆಳೆಯುವುದರಿಂದ ಉಂಟಾಗುವ ನಷ್ಟವನ್ನು ತುಂಬಿಕೊಳ್ಳುವುದನ್ನು ಕುರಿತು ಯಾರೂ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಇದನ್ನು ಗುರುತಿಸುದಕ್ಕೆ ಬ್ರಿಟನ್ನಿನ ಸಂಶೋಧಕರು ಇತ್ತೀಚೆಗೆ ಒಂದು ಅಧ್ಯಯನ ನಡೆಸಿದರು.

ಮಕ್ಕಳಿಗೆ ಹೋಲಿಸಿದರೆ ಟಿವಿ ಹಾಗೂ ಕಂಪ್ಯೂಟರ್’ಗಳ ಮುಂದೆ ದಿನಕ್ಕೆ ಎರಡು ಗಂಟೆಗಳಿಗಿಂತ ಹೆಚ್ಚಿನ ಸಮಯವನ್ನು ಕಳೆಯುತ್ತಿರುವವರಲ್ಲಿ ಮಾನಸಿಕ ಸಮಸ್ಯೆಗಳು ಸುಮಾರೂ ಶೇ.60ರಷ್ಟು ಹೆಚ್ಚಾಗಿ ಇರುವುದನ್ನು ಕಂಡು ಹಿಡಿದ್ದಾರೆ.

ಟಿವಿಯನ್ನು ವೀಕ್ಷಿಸುವ ಸಮಯ ಹಗಲು ಹೊತ್ತಾಗಿದ್ದರೆ ಈ ಸಮಸ್ಯೆ ಎರಡು ಪಟ್ಟಿಗಿಂತ ಅಧಿಕವಾಗಿರುತ್ತದೆ. ಟಿವಿ ಹಾಗೂ ಕಂಪ್ಯೂಟರ್ ನೋಡುವ ಸಮಯವು ಹೆಚ್ಚಾಗುವ ಜೊತೆಗೆ ಒಂದು ಗಂಟೆಗಿಂತ ಕಡಿಮೆ ಸಮಯ ವ್ಯಾಯಮ ಮಾಡುತ್ತಿದ್ದರೆ ಸಹ ಮಾನಸಿಕ ಸಮಸ್ಯೆಗಳು ಹೆಚ್ಚಾಗಿ ತಲೆದೋರುವ ಸಾಧ್ಯತೆಗಳಿವೆ. ಮಾನಸಿಕ ಆರೋಗ್ಯಕ್ಕೆ ಉಂಟಾದ ನಷ್ಟವನ್ನು ಭರಿಸುವುದು ದೈಹಿಕ ಶ್ರಮದ ಮೂಲಕ ಸಾಧ್ಯವಾಗುವುದಿಲ್ಲವೆಂದು ತಿಳಿದಿರುವುದು ಗಮನಾರ್ಹ. ಆದ್ದರಿಂದ ಮಕ್ಕಳಿಗೆ ದಿನಕ್ಕೆ ಗಂಟೆಗಿಂತ ಹೆಚ್ಚಿನ ಹೊತ್ತು ಟಿವಿ ಹಾಗೂ ಕಂಪ್ಯೂಟರ್ ಮುಂದೆ ಕಳೆಯದಂತೆ ನೋಡಿಕೊಳ್ಳುವುದು ಒಳ್ಳೆಯದೆಂದು ಸಂಶೋಧಕರು ಸೂಚಿಸಿದ್ದಾರೆ.

ಇದರಿಂದ ಕುಟುಂಬದಲ್ಲಿರುವವರೊಂದಿಗೆ ಬೆರೆತು ಕಳೆಯುವ ಸಮಯ ಹೆಚ್ಚಾಗುವುದರಿಂದ ಉತ್ತಮ ಫಲಿತಾಂಶ ಕಂಡುಬರುತ್ತದೆ ಎಂದು ಸಂಶೋಧಕರು ವಿವರಿಸಿದ್ದಾರೆ.