ಬದನೇಕಾಯಿ ಕದ್ದು ತಪ್ಪಿಸಿಕೊಂಡ ತೆನಾಲಿ ರಾಮನ ಬುದ್ದಿವಂತಿಕೆ ಮೆಚ್ಚಲೇಬೇಕು..!

0
2400

ಒಂದು ದಿನ ಕೃಷ್ಣದೇವರಾಯ ಏರ್ಪಡಿಸಿದ ಭೋಜನಕೂಟದಲ್ಲಿ ತನ್ನ ತೋಟದ ಬದನೆಯ ಪಲ್ಯ ಮಾಡಿಸಿದ. ಆ ಬದನೆಯ ಪಲ್ಯ ಎಷ್ಟು ರುಚಿ ಆಗಿತ್ತೆಂದರೆ ಎಲ್ಲರೂ ಮತ್ತೆ ಮತ್ತೆ ಹಾಕಿಸಿಕೊಂಡು ತಿಂದರು. ಊಟದ ಬಳಿಕ ಎಲ್ಲರ ಬಾಯಲ್ಲೂ ರಾಯನ ತೋಟದ ಬದನೆಯದ್ದೇ ಗುಣಗಾನ. ಮನೆಗೆ ಬಂದವನೇ ತೆನಾಲಿ ರಾಮ ಹೆಂಡತಿಯಲ್ಲಿ ಆ ಬದನೆಯ ಸ್ವಾದದ ವರ್ಣನೆಯನ್ನು ಬಾಯಲ್ಲಿ ನೀರೂರುವಷ್ಟು ಮಾಡಿದ. ಇದನ್ನು ಕೇಳಿದವಳೇ ಅವನ ಹೆಂಡತಿ, ಅದೇ ತೋಟದಿಂದ ಬದನೆ ತಂದು ತಮ್ಮಲ್ಲೂ ಅದನ್ನು ಅಡುಗೆಮಾಡಿ ತಿನ್ನಬೇಕೆಂದು ಹಠಹಿಡಿದಳು.

ಮೂಲ: youtube.com

ಆದರೆ ಕೃಷ್ಣ ದೇವರಾಯನಿಗೆ ಆ ಬದನೆಯ ಬಗ್ಗೆಎಷ್ಟೊಂದು ಮೋಹ ಇತ್ತೆಂದರೆ, ಆ ತೋಟದ ಬದನೆ ಕಾಯಲು ವಿಶೇಷ ವ್ಯವಸ್ಥೆಮಾಡಿದ್ದಷ್ಟೇ ಅಲ್ಲ, ಒಂದು ಬದನೆ ಕಾಣೆ ಆದರೂ ಕದ್ದವರ ತಲೆ ಕಡಿಯುವ ಆಜ್ಞೆ ಮಾಡಿದ್ದ. ಆದ್ದರಿಂದ ಈಎಲ್ಲ ಸಂಗತಿಯನ್ನು ಹೆಂಡತಿಗೆ ಬಗೆಬಗೆಯಾಗಿ ತೋಡಿಕೊಂಡ ತೆನಾಲಿ ರಾಮ. ಆದರೂ ಹೆಂಡತಿ ಹಠ ಬಿಡಲಿಲ್ಲ. ಕೊನೆಗೆ ತೆನಾಲಿರಾಮ ತನ್ನೆಲ್ಲಾ ಜಾಣ್ಮೆ ಬಳಸಿ, ಕಾವಲುಗಾರರ ಕಣ್ಣು ತಪ್ಪಿಸಿ, ರಾಯನ ತೋಟದಿಂದ ಒಂದು ಬದನೆ ಕದ್ದುತಂದು ಹೆಂಡತಿಗೆ ಕೊಟ್ಟ. ಅವಳು ಅದರ ಅಡುಗೆ ಮಾಡಿ, ರುಚಿ ಸವಿದಳು.

ಮೂಲ: youtube.com

ಅವರಿಗೆ ಒಬ್ಬನೇ ಮಗ, ಆರು ವರ್ಷದ ಹುಡುಗ ಮನೆಯ ಮೇಲ್ಗಡೆ ಮಲಗಿದ್ದ. ಅವನಿಗೆ ಇಷ್ಟು ರುಚಿಯ ಬದನೆಯಪಲ್ಯ ಕೊಡದಿದ್ದರೆ ಹೇಗೆ ಎನ್ನುವ ಒತ್ತಾಯ ಅವಳದ್ದು. ತೆನಾಲಿ ರಾಮನಿಗೆ ಅಂಜಿಕೆ. `ಈ ಹುಡುಗ ಎಲ್ಲಿಯಾದರೂ ಬಾಯಿ ಬಿಟ್ಟರೆನಮ್ಮ ಗತಿ ಏನು’ ಎಂದು. ಆದರೆ ಹೆಂಡತಿಗೆ ಒತ್ತಡ ತಡೆಯಲಾಗಲಿಲ್ಲ. ಕೊನೆಗೆ ತೆನಾಲಿ ರಾಮ ಒಂದು ಉಪಾಯ ಮಾಡಿದ. ಒಂದು ಬಕೆಟ್ ನೀರು ತೆಗೆದುಕೊಂಡು, ಮೇಲಕ್ಕೆ ಮಗ ಮಲಗಿದ್ದಲ್ಲಿಗೆ ಹೋಗಿ, ಮಗನ ಮೇಲೆ ಚೆಲ್ಲಿ, `ನೋಡು ಮಳೆ ಬರುತ್ತಿದೇ, ಏಳು, ಊಟ ಮಾಡು’ ಎಂದು ಎಬ್ಬಿಸಿ ಕೆಳಗೆ ಕರೆದುಕೊಂಡು ಹೋಗಿ, ಒದ್ದೆಬಟ್ಟೆ ತೆಗೆಸಿ, ಬೇರೆ ಬಟ್ಟೆ ಹಾಕಿಸಿ, ಬದನೆ ಪಲ್ಯ ಬಡಿಸಿ ಊಟಮಾಡಿಸಿದ. ಹುಡುಗ ತುಂಬಾ ಖುಷಿಯಿಂದ ಊಟ ಮಾಡಿದ.

ತೆನಾಲಿರಾಮ ಮತ್ತೆ ಮಗನಲ್ಲಿ `ಹೊರಗೆ ಮಳೆ ಬರುತ್ತಿದೆ, ನೀನು ಒಳಗೆ ಮಲಗು `ಎಂದು ಒಳಗೆ ಮಲಗಿಸಿದ. ಮರುದಿನ ಸುದ್ದಿ ಆಯಿತು. ಕೃಷ್ಣದೇವರಾಯನ ತೋಟದ ಬದನೆ ಕದ್ದ ವಿಚಾರ. ಚಾಣಾಕ್ಷನಾದ ತೆನಾಲಿರಾಮ ಬಿಟ್ಟರೆ ಬೇರೆಯಾರಿಂದಲೂ ಸಾಧ್ಯ ಇಲ್ಲ ಎಂದು ನಿರ್ಧರಿಸಿದರು. ಆದರೆ ಆತ ನಿಜ ಹೇಳಲಾರ. ಆತನ ಮಗ ಸತ್ಯ ಹೇಳಿಯಾನು’ ಹೀಗೆ ಭಾವಿಸಿ ಮಗನನ್ನು ಕರೆಸಿದರು. ನಿನ್ನೆ ರಾತ್ರಿ ಬದನೆ ಪಲ್ಯ ಊಟ ಮಾಡಿದೆ ಎಂದು ಮಗ ನಿಜ ಹೇಳಿದ. ಇನ್ನೇನು ತೆನಾಲಿರಾಮನ ತಲೆಕಡಿಯುವುದಷ್ಟೇ ಬಾಕಿ.ಆಗ ತೆನಾಲಿ ರಾಮಹೇಳಿದ,’ ಸ್ವಾಮೀ, ಈ ಹುಡುಗ ಕನಸಿನಲ್ಲಿ ಏನೇನೋ ಕನವರಿಸುತ್ತಾನೆ. ಅವನ್ನೆಲ್ಲ ನಿಜ ಎಂದು ಹೇಳಲಿಕ್ಕಾಗುತ್ತದೆಯೇ ಬೇಕಾದರೆ ನೀವೇ ಕೇಳಿ ನಿನ್ನೆ ಮಳೆ ಬಂದಿತ್ತೋ’ಎಂದು. ಹುಡುಗನನ್ನು ಕೇಳಲಾಯಿತು.

ಮೂಲ: youtube.com

ಹುಡುಗ ಹೌದು,ಜೋರು ಮಳೆ ಬಂದಿತ್ತು, ನಾನು ಬಟ್ಟೆ ಬದಲಿಸಿ ಆಮೇಲೆ ಒಳಗೆ ಮಲಗಿದೆ’ ಎಂದ. ನಿಜವಾಗಿ ಮಳೆ ಬಂದೇ ಇರಲಿಲ್ಲ. ಹುಡುಗ ಏನೋ ಭ್ರಮೆಯಿಂದ ಮಾತಾಡುತ್ತಾನೆ ಎಂದು ಭಾವಿಸಿ ತೆನಾಲಿ ರಾಮನನ್ನು ನಿರ್ದೋಷಿ ಎಂದು ಸಾರಿದರು