ಈ ಆರು ವಿಷಯಗಳು ಹೇಗೆ ತೆನಾಲಿರಾಮ ನಿಮಗೆ ಸ್ಫೂರ್ತಿಯಾಗಬಹುದು ಎಂದು ಹೇಳುತ್ತವೆ….!

0
2394

ಪುರಾಣ ಕಾಲದಿಂದಲೂ ವಿಭಿನ್ನ ಕಥೆಗಳನ್ನು ಕೇಳುತ್ತ ಬಂದಿದ್ದೇವೆ. ಈ ಕಥೆಗಳಲ್ಲಿ ನವರಸಗಳು ತುಂಬಿವೆ. ಅಕ್ಬರ್ ಬೀರಬಲ್ ಕಥೆಗಳು, ಅರೆಬಿಯನ್ ನೈಟ್ಸ್, ತೆನಾಲಿರಾಮನ ಕಥೆಗಳು, ದೆವ್ವದ ಕಥೆಗಳು, ರಾಮಾಯಣ, ಮಹಾಭಾರತದ ಕಥೆಗಳು, ಉಪಕಥೆಗಳು ಜನಪ್ರಿಯವಾಗಿವೆ. ಇಂತಹ ಕತೆಗಳಲ್ಲಿ ತೆನಾಲಿರಾಮನ ಕಥೆಗಳು ನವರಸಗಳಿಂದ ಮತ್ತು ಆಗಾಗ್ಗೆ ಸಾಕಷ್ಟು ನೀತಿಯನ್ನು ಹೇಳುತ್ತವೆ. ಇವುಗಳನ್ನು ತಿಳಿದುಕೊಂಡರೆ ಸಾಕು ನಮ್ಮ ಬದುಕಿಗೆ ದಾರಿದೀಪಗಳಾಗುತ್ತವೆ.

ತೆನಾಲಿ ರಾಮಕೃಷ್ಣ, ಜನರು ಅವರನ್ನು ಪ್ರೀತಿ ವಾತ್ಸಲ್ಯಗಳಿಂದ ‘ತೆನಾಲಿರಾಮ’ ಎಂದೇ ಸ್ಮರಿಸುತ್ತಾರೆ. ಆವರು ಹದಿನಾರನೆಯ ಶತಮಾನದ ಭಾರತ ದೇಶದ ವಿಜಯನಗರ ಸಾಮ್ರಾಜ್ಯದ ಆಸ್ಥಾನ ಕವಿ. ಅವರು ತೆನಾಲಿ ಎಂಬ ಊರಿನವರು. ಇಂದಿಗೂ ಜನರು ಅವರ ವಿನೋದದಿಂದ ಕೂಡಿದ ಅತಿಶಯವಾದ ಬುದ್ಧಿ ಚಾತುರ್ಯ, ವಿವೇಕ ಹಾಗೂ ಪ್ರತಿಭೆಗಳಿಗಾಗಿ ಸ್ಮರಿಸಿಕೊಳ್ಳುತ್ತಾರೆ. ತೆನಾಲಿ ರಾಮನ ಕಥೆಗಳಲ್ಲಿ ಮುಖ್ಯವಾಗಿ ಪ್ರಬಂಧ ಶೈಲಿಯಲ್ಲಿದ್ದು ಅದರಲ್ಲಿ ಹಾಸ್ಯ ಹಾಗು ವ್ಯಂಗ್ಯ ರಸಗಳು ಕೂಡಿರುತ್ತವೆ.

ತೆನಾಲಿ ರಾಮನ ಕಥೆಗಳಿಂದ ಯುವಪೀಳಿಗೆಗಳು ಸ್ಫೂರ್ತಿ ಪಡೆದುಕೊಳ್ಳಬಹುದು ಯಾಕೆಂದರೆ ಅವನ ಕಥೆಗಳಲ್ಲಿ ನೀತಿ ಮತ್ತು ಸಮಸ್ಯೆಗಳನ್ನು ವ್ಯವಹರಿಸುವ ರೀತಿ ಸಮಯಪ್ರಜ್ಞೆ ಇವೆಲ್ಲೆವನ್ನು ಅನುಸರಿಸಿದರೆ ಇಂದಿನ ಶತಮಾನದ ಯುವಪೀಳಿಗೆ ಅತ್ಯತ್ತಮವಾದ ಬದುಕನ್ನು ರೂಪಿಸಬಹುದು. ಹೇಗೆ ತೆನಾಲಿರಾಮನ ಕಥೆಗಳು ಸ್ಪೂರ್ತಿಯನ್ನು ನೀಡುತ್ತವೆ ಅನ್ನುವುದಕ್ಕೆ ಇಲ್ಲಿದೆ ಕೆಲವು ಕಾರಣಗಳು.

1. ತೆನಾಲಿರಾಮ ಸಾಮಾಜಿಕ ರೂಢಿಗಳ ವಿರುದ್ಧ ಹೋರಾಡಿ ದೊಡ್ಡ ವಿದ್ವಾಂಸರಾದರು.

ರಾಮಕೃಷ್ಣನು ತನ್ನ ಬಾಲ್ಯದಲ್ಲಿ ಯಾವುದೇ ವ್ಯವಸ್ಥಿತವಾದ ಶಿಕ್ಷಣವನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದರೂ ಅವರಿಗೆ ಇದ್ದ ಜ್ಞಾನದ ಬಾಯಾರಿಕೆಯಿಂದಾಗಿ ಉತ್ತಮ ವಿದ್ವಾಂಸರಾದರು. ವೈಷ್ಣವ ಪಂಡಿತರು ರಾಮಕೃಷ್ಣನನ್ನು ತಮ್ಮ ಅನುಯಾಯಿಯಾಗಿ ಸ್ವೀಕರಿಸಲು ತಿರಸ್ಕರಿಸಿದರು ಏಕೆಂದರೆ ಅವನು ಶಿವನ ಭಕ್ತರಾಗಿದ್ದರು. ಆದರೆ, ತೆನಾಲಿ ರಾಮನು ತನ್ನ ಅಚಲ ನಿರ್ಣಯದಿಂದ ಪ್ರಕಾಶಮಾನವಾದ ದಾರಿ ತಾವೇ ಕಂಡುಕೊಂಡನು.

ಮೂಲ: storypick.com

2. ತೆನಾಲಿರಾಮ ಸೋಮಾರಿ ಯಾಗಿದ್ದರು, ಆದರೆ ಅವನು ಅದನ್ನು ಉಪಯೋಗಿಸಿಕೊಳ್ಳುತ್ತಿರುವ ರೀತಿ ಅದ್ಭುತ.

ತೆನಾಲಿ ರಾಮನು ಬಹಳ ಬುದ್ಧಿವಂತ ವ್ಯಕ್ತಿ. ಮತ್ತು ಅದರ ಜೊತೆಗೆ ಅವರು ಸೋಮಾರಿಯಾಗಿದ್ದರು, ಆದರೆ ಅವನ ಗುಣಮಟ್ಟವನ್ನು ಬಿಡುತ್ತಿರಲಿಲ್ಲ. ಬಿಲ್ ಗೇಟ್ಸ್ ಒಮ್ಮೆ ಹೀಗೆಂದು ಹೇಳಿದ್ದಾನೆ, “ನಾನು ಕಠಿಣ ಪರಿಶ್ರಮವನ್ನು ನಂಬಿದ್ದೇನೆ, ಆದರೆ ಮಾತುಷ್ಯನ ಚುರುಕುತನ ಮತ್ತು ಅವನ ವಾಕ್ ಚಾತುರ್ಯ ದಿಂದ ಸೋಮಾರಿತನವನ್ನು ಕೂಡ ಹೇಗೆ ಬಳಸಬೇಕೆನ್ನುವುದಕ್ಕೆ ಒಂದು ಒಳ್ಳೆ ಉದಾಹರಣೆ ಈ ವ್ಯಕ್ತಿ “.

ಮೂಲ: storypick.com

3. ತೆನಾಲಿರಾಮನ ಬುದ್ಧಿವಂತಿಕೆಯಿಂದ ಪ್ರಭಾವಿತರಾದ ರಾಜ ಅವನನ್ನು ಆಸ್ಥಾನದ ಅಷ್ಟದಿಗ್ಗಜರ ಗುಂಪಿನಲ್ಲಿ ಸ್ಥಾನ ನೀಡಿದ.

ಮೂಲ: storypick.com

ರಾಮಕೃಷ್ಣನು ಭಗವತ ಮೇಳ ಎಂಬ ಪ್ರಸಿದ್ಧ ತಂಡವನ್ನು ಸೇರಿಕೊಂಡನು. ಒಮ್ಮೆ ಈ ತಂಡವು ತಮ್ಮ ಪ್ರದರ್ಶನ ನೀಡಲು ವಿಜಯನಗರಕ್ಕೆ ಬಂದಿದ್ದರು. ಆಗ ಶ್ರೀಕೃಷ್ಣದೇವರಾಯ ಹಾಗೂ ಅಲ್ಲಿನ ಜನ ರಾಮಕೃಷ್ಣನ ಪ್ರದರ್ಶನವನ್ನು ಕಂಡು ಆಕರ್ಷಿತರಾದರು. ಶ್ರೀಕೃಷ್ಣದೇವರಾಯನು ರಾಮಕೃಷ್ಣನ ಪ್ರದರ್ಶನ ಮೆಚ್ಚಿ ತನ್ನ ಆಸ್ಥಾನದಲ್ಲಿ ರಾಮಕೃಷ್ಣನನ್ನು ಕವಿಯಾಗಿ ನೇಮಿಸಿ, ಅಷ್ಟದಿಗ್ಗಜರ ಗುಂಪಿನಲ್ಲಿ ಸ್ಥಾನ ನೀಡಿದ.

4. ತಮಾಷೆ ಮತ್ತು ಹಾಸ್ಯದಂತೆಯೇ, ಅವರ ಕಲೆಯು ತೆನಾಲಿರಾಮನ ಅಗಾಧ ಪ್ರತಿಭೆಯನ್ನು ಪ್ರದರ್ಶಿಸುತಿತ್ತು.

ತೆನಾಲಿರಾಮ ವಿನೋದದಿಂದ ಕೂಡಿದ ಅತಿಶಯವಾದ ಬುದ್ಧಿ ಚಾತುರ್ಯ, ವಿವೇಕ ಹಾಗೂ ಪ್ರತಿಭೆ, ಮತ್ತು ಸಮಯಪ್ರಜ್ಞೆಯಿಂದ ಶ್ರೀಕೃಷ್ಣದೇವರಾಯನ ಸಾಮ್ರಾಜ್ಯವನ್ನು ವೈರಿಗಳ ಆಪತ್ತಿನಿಂದ ಅನೇಕ ಬಾರಿ ಕಾಪಾಡಿದ್ದಾನೆ.

5. ಸತತವಾಗಿ ಶ್ರೀಕೃಷ್ಣದೇವರಾಯನ ಆಸ್ಥಾನದಲ್ಲಿ ಬೆಳೆಯುತ್ತ ಬಂದಿದ್ದ ಏಕೈಕ ವ್ಯಕ್ತಿ.

ಆಸ್ಥಾನದಲ್ಲಿ ಅವನ ಸ್ಥಾನ ಎಂದಿಗೂ ಕಡಿಮೆಯಾಗಿರಲಿಲ್ಲ. ಅವನು ಯಾವಾಗಲೂ ಬೆಳೆಯುತ್ತಲೇ ಬಂದಿದ್ದಾನೆ. ಆಸ್ಥಾನದ ಇತರ ಕವಿಗಳಿಂದ ಒದಗಿಬಂದ ಅನೇಕ ಸಮಸ್ಯೆಗಳನ್ನು ತನ್ನ ಬುದ್ದಿವಂತಿಕೆ ಮತ್ತು ಹಾಸ್ಯ ಪ್ರವೃತ್ತಿಯೆಂದ ಸಮಸ್ಯೆಗಳನ್ನು ನಿವಾರಿಸುತ್ತ ಬಂದಿದ್ದಾನೆ.

ಮೂಲ: storypick.com

6. ಸ್ವತಃ ಶ್ರೀಕೃಷ್ಣದೇವರಾಯನು ತೆನಾಲಿಯನ್ನು ಸತತವಾಗಿ ಪರೀಕ್ಷಿಸುತ್ತ ಬಂದಿದ್ದಾನೆ.

ಕೃಷ್ಣದೇವರಾಯ ತೆನಾಲಿಯನ್ನು ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸಿಲುಕಿಸಿ ಅನೇಕ ಸವಾಲುಗಳನ್ನೂ ಹಾಕಿದ್ದನು, ಮತ್ತು ತೆನಾಲಿರಾಮನ ಚಾಣಕ್ಯದಿಂದ ಅತ್ಯಂತ ಅದ್ಭುತವಾದ ಪರಿಹಾರಗಳನ್ನು ನೀಡಿ ರಾಜನಿಗೆ ಅಚ್ಚರಿಗೊಳಿಸಿದ್ದನು. ಈ ರೀತಿಯಾಗಿ ಕ್ರಮೇಣ ರಾಮಕೃಷ್ಣನು ಒಬ್ಬ ಪ್ರಸಿದ್ಧ ವಿದೂಷಕ ಎಂಬ ಖ್ಯಾತಿ ಪಡೆದನು.

ಮೂಲ: storypick.com