ಅಂದದತ್ವಚೆಯ ಪೋಷಣೆಗೆ ಎಳನೀರು ಸಿದ್ದ ಔಷಧ!

0
2280

ಎಳನೀರಿನಲ್ಲಿ ಪ್ರಮುಖವಾಗಿ ಚರ್ಮಕ್ಕೆ ಆರ್ದ್ರತೆ ನೀಡುವ ಗುಣವಿರುವುದರಿಂದ ಚರ್ಮಕ್ಕೆ ಉತ್ತಮ ಪೋಷಣೆ ದೊರಕುತ್ತದೆ ಹಾಗೂ ಚರ್ಮ ನೈಸರ್ಗಿಕವಾದ ಬಣ್ಣವನ್ನು ಪಡೆಯಲು ನೆರವಾಗುತ್ತದೆ. ಅಲ್ಲದೇ ಚರ್ಮದ ರಂಧ್ರಗಳನ್ನು ತೆರೆದು ಅದರೊಳಗೆ ಸಂಗ್ರಹವಾಗಿದ್ದ ಧೂಳು ಮತ್ತಿತರ ಕಣಗಳನ್ನು ಹೊರಹಾಕಲೂ ನೆರವಾಗುತ್ತದೆ. ಮತ್ತು ಆರೋಗ್ಯವನ್ನು ಕೂಡ ಕಾಪಡುತ್ತದೆ. ಅದಕ್ಕೆ ತಾನೆ ಎಳನೀರಿಗೆ ಸರಿಸಾಟಿ ಯಾವುದೂ ಇಲ್ಲ. ಅದಕ್ಕೆ ತಾನೆ “ಕಲ್ಪವೃಕ್ಷ” ಅಂತ ನಮ್ಮ ಹಿರಿಯರು ತೆಂಗಿನ ಮರಕ್ಕೆ ಹೆಸರಿಟ್ಟಿದ್ದು. ವಾಂತಿ. ಭೇದಿ ಮತ್ತೆ ಅಜೀರ್ಣ ಆದಾಗ ಕೂಡ ಏಳನೀರು ಕುಡಿಬೇಕು. ಸುಸ್ತು ಹೋಗುತ್ತೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ವೈದ್ಯರು ಎಳನೀರನ್ನೇ ಶಿಫಾರಸ್ಸು ಮಾಡೋದು ಇದೇ ಕಾರಣಕ್ಕೆ.

  • ವಯಸ್ಸಾದರೂ ಚರ್ಮ ಬೇಗ ಸುಕ್ಕು-ಸುಕ್ಕಾಗಲ್ಲ :ಎಳನೀರಿನಲ್ಲಿರೋ ಪೌಷ್ಟಿಕಾಂಶ ಚರ್ಮದ ಸುಕ್ಕು ತಡೆಗಟ್ಟುತ್ತೇ. ಇಡೀ ಮೈಗೆ ಎಳನೀರು ಹಚ್ಚಿಕೊಂಡ್ರೆ ಕೋಲ್ಡ್ ಕ್ರೀಮ್ ಕೆಲಸ ಮಾಡುತ್ತೆ..
  • ಇದೆಲ್ಲದರ ಹೊರತಾಗಿಯೂ ಮೊಸರಿನಿಂದ, ಎಳನೀರಿನಿಂದ ಮುಖಕ್ಕೆ ಮಸಾಜ್ ಮಾಡಿಕೊಂಡರೂ ಮುಖ ಕಂಗೊಳಿಸುವಂತೆ ಮಾಡುತ್ತೆ.
  • ಹೌದು ಪ್ರತಿದಿನ ಬೆಳಿಗೆ ನೀರಿನಿಂದ ಮುಖ ತೊಳೆದ ಬಳಿಕ ಕೊಂಚ ಎಳನೀರನ್ನು ಕೈಗೆ ತೆಗೆದುಕೊಂಡು ಮುಖಕ್ಕೆ ನೇರವಾಗಿ ಚಿಮುಸಿಕೊಳ್ಳಿ. ಈ ನೀರು ಹಾಗೇ ಆರಲು ಬಿಡಿ. ಇದು ದಿನವಿಡೀ ನಿಮ್ಮ ಚರ್ಮವನ್ನು ಕಾಂತಿಯುಕ್ತವಾಗಿಸಿ ತಾಜಾ ಸ್ಥಿತಿಯಲ್ಲಿರಿಸಲು ನೆರವಾಗುತ್ತದೆ.
  • ಸಮಪ್ರಮಾಣದಲ್ಲಿ ಅರಿಶಿನ ಮತ್ತು ಚಂದನದ ಪುಡಿಗಳನ್ನು ಕೊಂಚ ಎಳನೀರಿನಲ್ಲಿ ಹಾಕಿ ಮುಖಲೇಪ ತಯಾರಿಸಿ ನಿತ್ಯವೂ ಮುಖಕ್ಕೆ ಹಚ್ಚಿ ಹದಿನೈದು ನಿಮಿಷ ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳುವುದರಿಂದ ಚರ್ಮದ ರಂದ್ರಗಳು ದೊಡ್ಡದಾಗಿ ಎಲ್ಲಾ ಕಲ್ಮಶಗಳು ಹೊರಹೋಗಲು ನೆರವಾಗುತ್ತದೆ. ಸೋಪು ಉಪಯೋಗಿಸಬೇಡಿ. ನಿಯಮಿತ ಬಳಕೆಯಿಂದ ಚರ್ಮದ ಕಾಂತಿ ಹೆಚ್ಚುತ್ತದೆ.

  • ಬಿಸಿಲಿನ ಝಳಕ್ಕೆ ಚರ್ಮದ ಬಣ್ಣ ಗಾಢವಾಗುವುದನ್ನು ತಪ್ಪಿಸಲು ಎಳನೀರು ಮತ್ತು ಮುಲ್ತಾನಿ ಮಿಟ್ಟಿ ಯ ಮಿಶ್ರಣವನ್ನು ತೆಳುವಾಗಿ ಮುಖ ಮತ್ತು ಕೈಗಳ ಮೇಲೆ ಹೆಚ್ಚಿ.
  • ಒಂದು ವೇಳೆ ಮುಖದಲ್ಲಿ ಮೊಡವೆಗಳಿದ್ದರೆ ರಾತ್ರಿ ಮಲಗುವ ಮುನ್ನ ಹತ್ತಿಯುಂಡೆಯನ್ನು ಎಳನೀರಿನಲ್ಲಿ ಅದ್ದಿ ಮೊಡವೆಗಳ ಮೇಲೆ ಆವರಿಸುವಂತೆ ಪಟ್ಟಿ ಮಾಡಿ ಮಲಗಿ. ಬೆಳಿಗ್ಗೆದ್ದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ.
  • ಸೌತೆಕಾಯಿ ರಸ ಮತ್ತು ಎಳನೀರುಗಳನ್ನು ಸಮಪ್ರಮಾಣದಲ್ಲಿ ಬೆರೆಸಿ ಮುಖಕ್ಕೆ ಆಗಾಗ ಹಚ್ಚಿಕೊಳ್ಳುತ್ತಾ ಬನ್ನಿ. ಇದರಿಂದ ನಿಧಾನವಾಗಿ ನಿಮ್ಮ ಚರ್ಮ ತನ್ನ ಮೂಲ ಬಣ್ಣವನ್ನು ಪಡೆಯಲು ಸಾಧ್ಯವಾಗುತ್ತದೆ.
  • ದಿನ ಎಳನೀರಿನಿಂದ ಮುಖ ತೊಳೆದರೆ ಚರ್ಮ ನಯವಾಗಿ, ಹೊಳಪಾಗುತ್ತೆ. ಅದಕ್ಕೆ ಸ್ವಲ್ಪ ಶ್ರೀಗಂಧ ಹಾಗೂ ಅರಿಶಿನ ಮಿಕ್ಸ್ ಮಾಡಿ ಹಚ್ಚಿಕೊಂಡರೆ ಮುಖ ಪೂರ್ತಿ ಒಂದೇ ಬಣ್ಣ ಬರುತ್ತದೆ.