ಶ್ರೀ ಲಂಕಾದಲ್ಲಿ ನಡೆಸಿದ ಬಾಂಬ್ ದಾಳಿಯಂತೆ ಕರ್ನಾಟಕ ಸೇರಿ 8 ರಾಜ್ಯಗಳ ಮೇಲೆ ಉಗ್ರರ ಕಣ್ಣು; ರಾಜ್ಯದ ತುಂಬೆಲ್ಲ ಹೈ ಅಲರ್ಟ್ ಘೋಷಣೆ..

0
315

ಶ್ರೀಲಂಕಾದಲ್ಲಿ ಬಾಂಬ್ ದಾಳಿಯ ಹಿನ್ನೆಲೆಯಲ್ಲಿ ದೇಶದ 8 ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಉಗ್ರರ ಕಟ್ಟು ಶ್ರೀ ಲಂಕಾ ನಂತರ ಭಾರತದ ಮೇಲಿದೆ ಎನ್ನುವ ಸೂಚನೆಯಿಂದ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ, ಗೋವಾ, ಮತ್ತು ಮಹಾರಾಷ್ಟ್ರದಲ್ಲಿ ಗುಪ್ತಚರ ಇಲಾಖೆ ಎಚ್ಚರಿಕೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅದರಂತೆ ಕರ್ನಾಟಕದ ಹಲವು ಪ್ರವಾಸಿ ತಾಣಗಳಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

Also read: ಶ್ರೀ ಲಂಕಾದಲ್ಲಿ ಬಾಂಬ್ ಸ್ಪೋಟ, ಮಂಡ್ಯದಲ್ಲಿ ಹೈ ಅಲರ್ಟ್ ಘೋಷಣೆ; ಕೊಲಂಬೋದಲ್ಲಿ ಬ್ಲಾಸ್ಟ್ ಆದ ಬಾಂಬ್-ಗಳಿಗೂ ಮಂಡ್ಯಕ್ಕೂ ಏನು ಸಂಬಂಧ?? ಈ ಸ್ಟೋರಿ ಓದಿ..

ಹೌದು ಶ್ರೀ ಲಂಕಾದಲ್ಲಿ ಬಾಂಬ್ ಸ್ಪೋಟಗೊಳಿಸಿ 253 ಜನರನ್ನು ಬಲಿ ತೆಗೆದುಕೊಂಡು 500 ರಕ್ಕೂ ಹೆಚ್ಚ್ಚು ಜನರನ್ನು ಗಾಯಗೊಳಿಸಿದ ಉಗ್ರರ ಕರಿನೆರಳು ಭಾತರದ ಮೇಲಿದೆ ಎನ್ನುವ ಮಾಹಿತಿ ಬಂದಿದೆ. ಭಾರತವನ್ನು ಗುರಿಯಾಗಿಸಿಕೊಂಡು ಈ ದಾಳಿ ಮಾಡುತ್ತಿರುವ ಉಗ್ರರು ಮತ್ತೆ ಹಲವು ನಗರಗಳ ಮೇಲೆ ಕಣ್ಣಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಬೆಂಗಳೂರಿನ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಮಾತನಾಡಿ ಎಚ್ಚರಿಕೆ ನೀಡಿದ್ದು. ತಮಿಳುನಾಡಿನಲ್ಲಿ 19 ಉಗ್ರರು ಅಡಗಿದ್ದಾರೆ, ದಕ್ಷಿಣ ರಾಜ್ಯಗಳ ಮೇಲೆ ದಾಳಿಗೆ ಸಜ್ಜಾಗಿದ್ದಾರೆ ಎಂದು ವ್ಯಕ್ತಿಯೊಬ್ಬ ಕರೆ ಮಾಡಿ ಹೇಳಿದ್ದು, ಎಲ್ಲ ರಾಜ್ಯಗಳ ಡಿಜಿಪಿಗಳು ಹೈ ಅಲರ್ಟ್‌ ಘೋಷಿಸಿದ್ದಾರೆ ಎನ್ನಲಾದ ಸುದ್ದಿಯೊಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.

Also read: ಕೊಲಂಬೋ ಸರಣಿ ಬಾಂಬ್ ಸ್ಫೋಟದಲ್ಲಿ ಕರ್ನಾಟಕದ ಐವರು ಜೆಡಿಎಸ್ ನಾಯಕರು ಬಲಿ; ಸಾವಿನ ಸಂಖ್ಯೆ 295ಕ್ಕೆ ಏರಿಕೆ..

ಪೊಲೀಸ್‌ ಕಂಟ್ರೋಲ್‌ ರೂಂಗೆ ಕರೆ ಮಾಡಿದ ವ್ಯಕ್ತಿಯು ತಮಿಳುನಾಡಿನಲ್ಲಿ ಉಗ್ರರು ಅಡಗಿದ್ದಾರೆ ಎಂದು ಮಾಹಿತಿ ನೀಡಿದ್ದಾನೆ. ಈ ಮಾಹಿತಿಯನ್ನು ರಾಜ್ಯ ಡಿಜಿಪಿ ನೀಲಮಣಿ ರಾಜು ಅವರು ತಮಿಳುನಾಡು, ಗೋವಾ, ಕೇರಳ, ಆಂಧ್ರ, ಮಹಾರಾಷ್ಟ್ರ, ತೆಲಂಗಾಣ, ಪುದುಚೇರಿ ರಾಜ್ಯಗಳ ಪೊಲೀಸ್‌ ಅಧಿಕಾರಿಗಳಿಗೆ ಮಾಹಿತಿ ರವಾನಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ರಾಜ್ಯ ಪೊಲೀಸರಿಗೂ ಕಟ್ಟೆಚ್ಚರ ವಹಿಸಬೇಕು ಎಂದು ಸಕ್ರ್ಯೂಲರ್‌ ಹೊರಡಿಸಿದ್ದಾರೆ ಎನ್ನಲಾಗಿದ್ದು, ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿಯು ನೀಡಿದ ಮಾಹಿತಿಯ ಸತ್ಯಾಸತ್ಯತೆ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ನಡುವೆ ನೀಲಮಣಿ ರಾಜು ಅವರ ಸಹಿ ಇರುವ ಸಕ್ರ್ಯೂಲರ್‌ ಪ್ರತಿಯೊಂದು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.

ಸಿಎಂ ತವರಲ್ಲಿ ಇನ್ನೂ ಎಚ್ಚರವಹಿಸದ ಅಧಿಕಾರಿಗಳು:

Also read: ಶ್ರೀಲಂಕಾದ ಬಾಂಬ್ ಸ್ಫೋಟದಲ್ಲಿ ಮೃತರ ಸಂಖ್ಯೆಯಲ್ಲಿ ಬಾರಿ ಏರಿಕೆ; ದಾಳಿಯ ಬಗ್ಗೆ 10 ದಿನಗಳ ಮುನ್ನವೇ ಮಾಹಿತಿ ಲಭಿಸಿದ್ದರೂ ಕೃತ್ಯ ತಡೆಯಲು ಶ್ರೀಲಂಕಾ ವಿಫಲ..

ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು ಬಿಗಿ ಬಂದೋಬಸ್ತ್ ಜೊತೆಗೆ ತಪಾಸಣೆಯನ್ನು ನಡೆಸಲಾಗುತ್ತಿದೆ. ಆದರೆ ಸಿಎಂ ತವರು ಕ್ಷೇತ್ರದಲ್ಲಿ ಮಾತ್ರ ಪೊಲೀಸರು ಇನ್ನೂ ಚುನಾವಣೆಯ ಗುಂಗಿನಿಂದ ಹೊರಬಂದಿಲ್ಲ. ಸರಣಿ ಬಾಂಬ್ ಸ್ಫೋಟ ನಡೆದು ಮೂರು ದಿನಗಳೇ ಕಳೆದರೂ ಇನ್ನೂ ಕೂಡ ಆಯಾಕಟ್ಟಿನ ಜಾಗಗಳಲ್ಲಿ ತಪಾಸಣೆಯಿರಲಿ, ಪೇದೆಗಳಿಂದ ಬೀಟ್ ಕೂಡ ಮಾಡಿಸಲು ಸಾಧ್ಯವಾಗಿಲ್ಲ. ಈ ಹಿಂದೆ ಭೌದ್ದ ಧರ್ಮಗುರು ದಲೈಲಾಮರ ಹತ್ಯೆಗೆ ಸಂಚು ರೂಪಿಸಿದ್ದ ಮೋಸ್ಟ್ ವಾಂಟೆಡ್ ಉಗ್ರ ಮುನಿರಲ್ ಶೇಖ್ ಹಾಗೂ ಆತನ ಸಹಚರರು ರಾಮನಗರದಲ್ಲಿ ಸೆರೆ ಸಿಕ್ಕಿದ್ದರು. ಅಲ್ಲದೇ ಬೆಂಗಳೂರು ನಗರ ಹಾಗೂ ಚನ್ನಪಟ್ಟಣದಲ್ಲಿ ಕೇರಳ ಮೂಲದ 10 ಮಂದಿ ಆರೋಪಿಗಳು ಬಾಂಬ್ ಸ್ಫೋಟಿಸುವ ಸಂಚು ರೂಪಿಸಿದ್ದರು. ಇಷ್ಟೆಲ್ಲ ನಡೆದರೂ ಕೂಡ ಪೊಲೀಸರು ಮಾತ್ರ ಎಚ್ಚರವಹಿಸುತ್ತಿಲ್ಲ ಎನ್ನುವ ಮಾಹಿತಿ ಕೇಳಿ ಬರುತ್ತಿದೆ.