ಶಿವಭಕ್ತರು ಜೀವನದಲ್ಲಿ ಒಮ್ಮೆಯಾದರೂ ಈ ಐತಿಹಾಸಿಕ ಅಧ್ಭುತ ವಾಸ್ತುಶಿಲ್ಪ ಉಳ್ಳ ದೇವಸ್ಥಾನಕ್ಕೆ ಭೇಟಿ ನೀಡಲೇಬೇಕು!!

0
1969

ಭಾರತ ಪ್ರಾಚೀನ ಕಾಲದಿಂದಲೂ ವಾಸ್ತು ಶಿಲ್ಪ ಚಾರಿತ್ರಿಕಯುಗದ ಆರಂಭಕಾಲದಿಂದಲೂ ಪ್ರಾಮುಖ್ಯ ಗಳಿಸಿಕೊಂಡಿದೆ. ಇಲ್ಲಿಯ ನಾನಾ ಅರಸುತನಗಳೂ ಶ್ರೀಮಂತ ವಂಶಗಳೂ ಇದಕ್ಕೆ ಯಾವಾಗಲೂ ಪ್ರೋತ್ಸಾಹ ನೀಡುತ್ತಾ ಬಂದಿವೆ. ಅಲ್ಲದೆ ನಮ್ಮ ದೇಶ ತನ್ನ ವಿಶಿಷ್ಪ ಭೌಗೋಳಿಕ ಸನ್ನಿವೇಶದ ಕಾರಣದಿಂರಾಗಿ ಅನೇಕ ವಾಸ್ತುಶೈಲಿಗಳ ಸಂಗಮ ಸ್ಥಾನವಾಗಿದೆ. ಅಂದಿನ ಕಾಲದ ಕುಶಲ ಕರ್ಮಿಗಳ, ಶಿಲ್ಪಿಗಳ ಅಗಾಧ ಕೌಶಲ್ಯತೆಯನ್ನು ಇಂದಿಗೂ ಕೂಡ ನಾವು ಕಾಣುವಂತಾಗಿರುವುದು. ಈ ಪೈಕಿ 1000 ವರ್ಷಗಳ ಇತಿಹಾಸವುಳ್ಳ ತಂಜಾವೂರಿನ ಬೃಹದೇಶ್ವರ ದೇವಾಲಯವೂ ಒಂದಾಗಿದೆ. ಇದು ಯುನೆಸ್ಕೋದಿಂದ ವಿಶ್ವ ಪಾರಂಪರಿಕ ತಾಣ ಎಂದು ಘೋಷಿಸಲ್ಪಟ್ಟಿರುವ ಶಿವನ ದೇವಾಲಯಗಳಲ್ಲಿ ಇದು ಕೂಡ ಒಂದು.

 

ಇನ್ನೂ ವಾಸ್ತು ಶಿಲ್ಪ ಕಲೆಯ ದೃಷ್ಟಿಯಿಂದ ಭಾರತದಲ್ಲಿ ಕಂಡುಬರುವ ಹಿಂದೂ ದೊಡ್ಡ ದೇವಾಲಯಗಳನ್ನು ಗಮನಿಸುವಾಗ ಅಗ್ರಗಣ್ಯ ದೇವಸ್ಥಾನಗಳ ಸಾಲಿಗೆ ತಂಜಾವೂರಿನ ಬೃಹದೇಶ್ವರ ದೇವಾಲಯ ಸೇರುತ್ತದೆ. ಈ ದೇವಸ್ಥಾನವು ಸುಮಾರು 16 ನೇಯ ಶತಮಾನದಲ್ಲಿ ನಿರ್ಮಿಸಿದರೆನ್ನಲಾಗುವ ಕೋಟೆಯ ಗೋಡೆಗಳಿಂದ ಸುತ್ತು ವರೆದಿದೆ. ಕಾವೇರಿ ನದಿಯ ತಟದಲ್ಲಿ ಪರ್ವತದಂತೆ ನಿಂತಿರುವ ಇದು ಒಂದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ, ಮತ್ತು 216 ಅಡಿ ಎತ್ತರವಿರುವ ಈ ದೇವಾಲಯವನ್ನು ಅಡಿಪಾಯ ಇಲ್ಲದೆ ಕಟ್ಟಲಾಗಿದೆಯಂತೆ. ದ್ರಾವಿಡ ಶೈಲಿಯಲ್ಲಿರುವ ದೇವಾಲಯ ಚೋಳ ವಂಶದ ರಾಜ ರಾಜ ಅರಸನ ಕಾಲದಲ್ಲಿ ನಿರ್ಮಿಸಲ್ಪಟ್ಟಿದ್ದು, ವಿಶ್ವದ ಅತ್ಯಂತ ಅದ್ಭುತ ವಾಸ್ತುಶಿಲ್ಪಗಳಲ್ಲಿ ಒಂದಾಗಿದೆ. ಈ ದೇವಸ್ಥಾನವು ಪುರಾತನ ವಾಸ್ತುಶಾಸ್ತ್ರ ಹಾಗು ಆಗಮ ಶಾಸ್ತ್ರಗಳ ಬುನಾದಿಯ ಮೇಲೆ ನಿರ್ಮಾಣವಾಗಿದೆ ಎಂದು ಶಾಸನಗಳ ಮೂಲಕ ತಿಳಿದು ಬಂದಿದೆ.

 

ಸಾಮಾನ್ಯವಾಗಿ ದಕ್ಷಿಣ ಭಾರತದ ದೇವಾಲಯಗಳು ರಾಜಗೋಪುರವನ್ನು ಹೊಂದಿರುತ್ತದೆ. ಇದು ವಿಶ್ವದ ಅತ್ಯಂತ ಎತ್ತರದ ಗೋಪುರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸುಂದರ ರಚನೆಗಳು, ಕಲೆಗಾರಿಕೆಗೆ ಪ್ರಸಿದ್ಧಿ ಪಡೆದಿದೆ. ಜೊತೆಗೆ ಗರ್ಭಗುಡಿಯಲ್ಲಿ ಹೆಸರೇ ಸೂಚಿಸುವಂತೆ ಬೃಹತ್ ಶಿವಲಿಂಗವಿದ್ದು ವಿಶ್ವದಾದ್ಯಂತ ಪ್ರವಾಸಿಗರನ್ನು ಸೆಳೆಯುತ್ತಿದೆ. 13 ಅಡಿ ಎತ್ತರದ ಶಿವಲಿಂಗವು ಐದು ತಲೆಯ ಸರ್ಪದ ನೆರಳಿನಲ್ಲಿ ಕಂಗೊಳಿಸುತ್ತದೆ.

ದೇವಾಲಯದ ಗೋಪುರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು. ಗೋಪುರವನ್ನು ವಿಶಿಷ್ಠ ರೀತಿಯಲ್ಲಿ ನಿರ್ಮಿಸಲಾಗಿದೆ. ನೀವು ನಂಬುವುದಿಲ್ಲ. ದೇವಾಲಯದ ‘ವಿಮಾನ’ ಅಥವಾ ಗೋಪುರವು ವಿಶ್ವದಲ್ಲಿನ ಎಲ್ಲಾ ದೇವಾಲಯಗಳಿಗಿಂತ ಹೆಚ್ಚು 216 ft (66 m)ಎತ್ತರದ ಕಳಶಪ್ರಾಯವಾಗಿದೆ. ಗೋಪುರದ ಮೇಲ್ಭಾಗಕ್ಕೆ ನೇರವಾದ ಸಂಪರ್ಕ ಸಾಧಿಸುವ ಅನುಕೂಲ ವೊದಗಿಸಲಾಗಿದೆ. ಗೋಪುರದಲ್ಲಿ ಆರಾಮವಾಗಿ ನಿಂತು ನೀವು ಎಲ್ಲವನ್ನೂ ವೀಕ್ಷಿಸಬಹುದಾಗಿದೆ. ಈ ಕಟ್ಟಡದ ಅತ್ಯಂತ ಮಹತ್ವದ ಅಂಶವೆಂದರೆ ಮಧ್ಯಾಹ್ನದ ವೇಳೆ ಈ ಗೋಪುರದ ನೆರಳು ಇದರ ಆವರಣದಲ್ಲಿ ಕಾಣಿಸುವುದಿಲ್ಲ, ಅಲ್ಲದೇ ನೆಲಕ್ಕೆ ಬೀಳುವುದಿಲ್ಲ ಇದು ನಿಜಕ್ಕೂ ಬೆರಗು ಮೂಡಿಸುವಂತಿದ್ದು. ವಿಮಾನ ಗೋಪುರದ ಅಡಿಯ ಭಾಗ ಮೇಲ್ಭಾಗಕ್ಕಿಂತ ದೊಡ್ಡದಾಗಿರುವ ಕಾರಣ ಮಧ್ಯಾಹ್ನದ ಬಿಸಿಲಿನಿಂದ ಉಂಟಾಗುವ ನೆರಳು ಗೋಪುರದ ಅಡಿಯ ಭಾಗದಲ್ಲೇ ಸೇರಿ ಹೋಗುತ್ತದೆ. ನೆಲದ ಮೇಲೆ ಬೀಳುವುದಿಲ್ಲ. ಹೀಗೆ ವಿಶಾಲ ಐತಿಹಾಸಿಕ ಪರಿಸರ ಹೊಂದಿರುವ ತಂಜಾವೂರಿನ ಬೃಹದೇಶ್ವರ ದೇವಾಲಯ ಸಾಕಷ್ಟು ಅಚ್ಚರಿ, ವಿಸ್ಮಯಗಳನ್ನು ಒಳಗೊಂಡಿದೆ.

 

ಅಲ್ಲದೆ ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಮೂಲ ದೇವರಿಗೆ ಅಭಿಮುಖವಾಗಿ ಒಂದೆ ಕಲ್ಲಿನಲ್ಲಿ ಕೆತ್ತಲಾದ ನಂದಿಯ ವಿಗ್ರಹವನ್ನು ಕಾಣಬಹುದು. ಈ ಪ್ರತಿಮೆಯು16 ಅಡಿ ಉದ್ದ ಹಾಗು 13 ಅಡಿಗಳಷ್ಟು ಎತ್ತರವಿದೆ. ಇದನ್ನು 16ನೆ ಶತಮಾನದ ವಿಜಯನಗರ ಆಳ್ವಿಕೆ ಕಾಲದಲ್ಲಿ ಸ್ಥಾಪಿಸಲಾಗಿದೆ. ಈ ದೇಗುಲ ಭಾರತದ ಪ್ರಾಚೀನ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದೆ. ಸಂಪೂರ್ಣ ಗ್ರಾನೈಟ್‍ನಿಂದ ನಿರ್ಮಿತವಾಗಿದ್ದು ವಿಶ್ವದ ಮೊದಲ ಗ್ರಾನೈಟ್ ದೇವಾಲಯವೆಂದು ಹೆಸರುವಾಸಿ.