ಜೀವನದಲ್ಲಿ ಸೋಲಿನ ನಿರಾಶೆಯೇನು?? ನಿಮಗಾಗಿ ಒಂದಿಷ್ಟು ಸಾಲುಗಳು ತಪ್ಪದೇ ಓದಿ..

0
2945

Kannada News | kannada Useful Tips

ಪ್ರತಿ ಮನುಷ್ಯನು ಒಂದೊಂದು ಕಷ್ಟಕರ ಸಂದರ್ಭಗಳನ್ನು ದಾಟಿಯೇ ಬರುವನು.. ಜೀವನ ಎಂಬುದು ಹೂವಿನ ಹಾಸಿಗೆಯಲ್ಲ.. ಸ್ವಲ್ಪ ದೂರವಾದರು ಮುಳ್ಳಿನ ಮೇಲೆ ನಡೆದೇ ಸಾಗಬೇಕು.. ಅಂತಹ ಸಂಧರ್ಭದಲ್ಲಿ ನಮ್ಮೊಡನೆ ಯಾರಿರಬೇಕು ಗೊತ್ತೆ?? ನಾವುಗಳು ದುರ್ಬಲ ಮನಸ್ಸಿನವರಾದರೆ ನಮ್ಮ ಆ ಕೆಟ್ಟ ಪರಿಸ್ಥಿತಿಯನ್ನು ಎದುರಿಸಲು ಅಪ್ಪ ಅಮ್ಮನ ಮೊರೆ ಹೋಗಿತ್ತೀವಿ.. ಮದುವೆಯಾಗಿದ್ದರೆ ಗಂಡ, ಹೆಂಡತಿಯ ಬಳಿ.. ಹೆಂಡತಿ ಗಂಡನ ಬಳಿ ಹೋಗುತ್ತಾರೆ..

ಆದರೆ ನಾವೊಬ್ಬ ಧೃಡ ಮನಸ್ಸಿನವನಾಗಿದ್ದರೆ ಖಂಡಿತ ನಮ್ಮ ಆತ್ಮ ಸ್ಥೈರ್ಯ ಇದ್ದರೆ ಸಾಕು.. ಯಾರಿಗೂ ನಮ್ಮಿಂದ ತೊಂದರೆಯಾಗಬಾರದೆಂದು ಚಿಂತಿಸುವವರೆ ಗಟ್ಟಿ ಮನಸಿನವರು.. ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು ಆದರೆ ಅತಿಯಾದ ನಂಬಿಕೆ ಒಳ್ಳೆಯದು ಅಲ್ಲಾ.. ಬುದ್ದಿವಂತರಾಗಿ ಚಿಂತಿಸಿ ಕಷ್ಟ ಪರಿಹಾರ ಮಾಡಿಕೊಳ್ಳಲು ದಾರಿಯನ್ನು ಹುಡುಕಬೇಕು..

ನಮ್ಮ ಜೊತೆಯಿರಬೇಕಾದ 3 ಅಂಶಗಳು

1. ಆತ್ಮ ಸ್ಥೈರ್ಯ

ನಮ್ಮ ಮೇಲೆ ನಮಗೆ ಇರುವ ನಂಬಿಕೆಯೆ ಆತ್ಮ ಸ್ಥೈರ್ಯ. ಹೌದು ನಾವು ಮಾಡುವ ಪ್ರತಿ ಕೆಲಸದಲ್ಲೂ ನಮಗೆ ನಂಬಿಕೆ ಇರಬೇಕು.. ಮಾಡಿಯೇ ತೀರುತ್ತೇನೆ ಎಂಬ ಹಟವಿರಬೇಕು, ಕಷ್ಟಕರವಾದ ಸನ್ನಿವೇಶ ಬಂದಾಗ ನನ್ನಿಂದಾಗದು ಎಂದು ಯಾವತ್ತೂ ಹಿಂಜರಿಯಬಾರದು..

2. ತಾಳ್ಮೆ

ಇದು ಬಹಳ ಮುಖ್ಯವಾದ ಅಂಶ, ತಾಳಿದವನು ಬಾಳಿಯಾನು ಎಂಬ ಗಾದೆ ಮಾತಿನಂತೆ ಸನ್ನಿವೇಶವನ್ನು ಎದುರಿಸಲು ತಾಳ್ಮೆ ಬಹಳ ಮುಖ್ಯ, ನಮ್ಮ ಆ ಕೆಟ್ಟ ಸನ್ನಿವೇಶದಲ್ಲಿ ತಾಳ್ಮೆ ಇರದಿದ್ದರೆ ಅತಿರೇಕಕ್ಕೂ ಹೋಗಿಬಿಡಬಹುದು ಅಥವಾ ಅವಿವೇಕಿಯೂ ಆಗಿಬಿಡಬಹುದು.. ತಾಳ್ಮೆಇಂದ ಯೋಚಿಸಿ ಬಗೆಹರಿಸಿ ಕೊಳ್ಳುವುದು ಒಳ್ಳೆಯದು.

3. ಪರಿಶ್ರಮ

ನಮ್ಮ ಸೋಮಾರಿತನದಿಂದಲೇ ಅನೇಕ ಸಂಕಷ್ಟ ಗಳನ್ನು ನಾವು ತಂದುಕೊಳ್ಳುತ್ತೇವೆ.. ತಾಳ್ಮೆ ಇಂದ ಯೋಚಿಸಿದ ಕಾರ್ಯ ಸಫಲವಾಗಬೇಕಾದರೆ ಪರಿಶ್ರಮ ಅತಿ ಮುಖ್ಯ.. ಕೂಲಿ ಮಾಡುವ ಮನುಷ್ಯನ ದೇಹವಷ್ಟೇ ಅಲ್ಲ ಮನಸ್ಸೂ ಕೂಡ ಬಹಳ ಧೃಡ ವಾಗಿರುತ್ತದೆ ಏಕೆಂದರೆ ಅವನು ಶ್ರಮವಹಿಸಿ ಮಾಡುವ ಕೆಲಸದ ಮೇಲೆ ಅವನಿಗೆ ನಂಬಿಕೆ ಇರುತ್ತದೆ.. ಒಂದು ಬಾರಿ ಸೋತರೇನಂತೆ ಮುಂದೊಂದು ದಿನ ನಿಮ್ಮ ಶ್ರಮ ನಿಮ್ಮನ್ನು ಉನ್ನತ ಮಟ್ಟಕ್ಕೇರಿದುವುದಂತೂ ಸತ್ಯ. ಹೊಸ ದಾರಿಗಳನ್ನು ಹುಡುಕಿ ಯಶಸ್ಸನ್ನು ಪಡೆಯಿರಿ.. ನಿರಾಶರಾಗಬೇಡಿ..

ಸಾವೆಂಬುದೇ ಸೋಲು
ಗೆಲ್ಲಲು ನೂರು ದಾರಿಗಳಿರಿತ್ತವೆ..
ಸೋಲು ಗೆಲುವಿಗಿಂತ ಸಾಗುವ ದಾರಿಗೆ ಮಹತ್ವ ಕೊಡಿ ಬೆಸ್ಟ್ ಆಫ಼್ ಲಕ್ ನಿಮ್ಮ ಭವಿಷ್ಯ ಚನ್ನಾಗಿರಲಿ.

ಶೇರ್ ಮಾಡಿ ಸೋತ ಹೃದಯಕ್ಕೊಂದಿಷ್ಟು ಉರುಪು ತುಂಬುವ ಕೆಲಸವಾಗುವುದು..

Also Read: ಒಂದು ಕ್ಷಣ ನಿಮಗೆ ಮನಸ್ಸು ಇದ್ರೆ ಈ ಸ್ಟೋರಿ ನೋಡಿ…!