ಹೆಚ್ಚಾಗಿ ಪುರುಷರಲ್ಲೇ ಕಂಡು ಬರುತ್ತಿರುವ ಐದು ಬಗೆಯ ಕ್ಯಾನ್ಸರ್-ಗಳನ್ನ ಮೊದಲ ಹಂತದಲ್ಲಿ ಸ್ಕ್ರೀನಿಂಗ್ ಮೂಲಕ ಪತ್ತೆಹಚ್ಚುವುದು ಹೇಗೆ??

0
369

ಇತ್ತೀಚಿನ ದಿನಮಾನಗಳಲ್ಲಿ ಕ್ಯಾನ್ಸರ್ ಕಾಯಿಲೆ ಸಾಮಾನ್ಯವಾಗಿ ಹರಡುತ್ತಿದೆ. ಅದರಲ್ಲಿ ಹೆಚ್ಚಾಗಿ ಪುರುಷರಲ್ಲಿ ಕಂಡು ಬರುವ ಕ್ಯಾನ್ಸರ್ ಬಾಯಿಯ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್, ಕರುಳಿ ಕ್ಯಾನ್ಸರ್, ಹೊಟ್ಟೆಯ ಕ್ಯಾನ್ಸರ್. ಗಂಟಲಿನ ಕ್ಯಾನ್ಸರ್‌ ರೀತಿಯಲ್ಲಿ ಹೆಚ್ಚಿನ ಸಾವನ್ನು ತರುತ್ತಿದೆ. ಇದಕ್ಕಾಗಿ ಬಹಳಷ್ಟು ಜಾಗೃತಿ ವಹಿಸಿ ದುಶ್ಚಟಗಳಾದ ಸ್ಮೋಕಿಂಗ್, ತಂಬಾಕು ಸೇವನೆ, ಆಲ್ಕೋಹಾಲ್ ಚಟಗಳನ್ನು ಬಿಟ್ಟು, ಆರೋಗ್ಯಯಿತ ತರಕಾರಿಗಳನ್ನು ಸೇವಿಸಿ. ವ್ಯಾಯಾಮ, ಯೋಗ, ಡಯಟ್ ಮಾಡುವುದು ಆರೋಗ್ಯಕ್ಕೆ ಒಳ್ಳೆಯ ಅಭ್ಯಾಸವಾಗಿದೆ. ಅದರಲ್ಲಿ ಮೊದಲನೆಯ ಹಂತದಲ್ಲಿ ಪುರುಷರ ಕ್ಯಾನ್ಸರ್ ಪತ್ತೆಹಚ್ಚುವುದು ಹೇಗೆ ಎನ್ನುವುದು ಸಂಶೋಧನೆಯೊಂದು ತಿಳಿಸಿದೆ.

Also read: ಪಪ್ಪಾಯ ಎಲೆಗಳು ಉಪಯೋಗಿಸೋದ್ರಿಂದ ಎಲ್ಲ ತರಹದ ಜ್ವರದಿಂದ ಹಿಡಿದು ಕ್ಯಾನ್ಸರ್-ವರೆಗೆ ಗುಣಪಡಿಸಬಹುದು ಈ ಮನೆಮದ್ದಿನ ಬಗ್ಗೆ ತಿಳಿದುಕೊಳ್ಳಿ!!

ಕ್ಯಾನ್ಸರ್ ಪತ್ತೆ ಹೇಗೆ?

ಸಾಮಾನ್ಯವಾಗಿ ಪುರುಷರಲ್ಲಿ ಕ್ಯಾನ್ಸರ್ ಪತ್ತೆಗೆ ಸ್ಕ್ರೀನಿಂಗ್ ತಂತ್ರಜ್ಞಾನ ಸಹಕಾರಿಯಾಗಿದ್ದು, ಈ ಕುರಿತು ಗ್ಲೋಬೋಕ್ಯಾನ್ 2018 ಸಂಶೋಧನೆಯ ಪ್ರಕಾರ ಭಾರತೀಯ ಪುರುಷರು ಎದುರಿಸುವ 36 ಬಗೆಯ ಕ್ಯಾನ್ಸರ್‌ ಪತ್ತೆಯಾಗಿದೆ. ಅದರಲ್ಲಿ ಭಾರತೀಯ ಪುರುಷರಲ್ಲಿ ಅತೀ ಹೆಚ್ಚು ಕಂಡು ಬರುವ ಕ್ಯಾನ್ಸರ್ ಎಂದರೆ ಬಾಯಿಯ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಅನ್ನನಾಳದ ಕ್ಯಾನ್ಸರ್, ಕರುಳಿ ಕ್ಯಾನ್ಸರ್, ಹೊಟ್ಟೆಯ ಕ್ಯಾನ್ಸರ್. ಗಂಟಲಿನ ಕ್ಯಾನ್ಸರ್‌ನಿಂದಾಗಿ ಶೇ. 25ರಷ್ಟು ರೋಗಿಗಳು ಭಾರತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಬರಿಯ ಶ್ವಾಸಕೋಶ ಹಾಗೂ ಬಾಯಿಯ ಕ್ಯಾನ್ಸರ್ ಶೇ.25ರಷ್ಟು ಕ್ಯಾನ್ಸರ್ ಸಾವಿಗೆ ಕಾರಣವಾಗುತ್ತದೆ. ಒಂದು ಒಳ್ಳೆಯ ವಿಷಯವೆಂದರೆ, ಬಹುತೇಕ ಕ್ಯಾನ್ಸರ್‌ಗಳನ್ನು ಆರಂಭದಲ್ಲೇ ಗುರುತಿಸಿದರೆ ಗುಣ ಹೊಂದಲು ಅಥವಾ ತಡೆಯಲು ಸಾಧ್ಯವಿದೆ ಎಂಬುದು. ತಿಳಿಸಿದೆ.

ಈ ಕ್ಯಾನ್ಸರ್ ಕಾಯಿಲೆ ಬಂದಾಗ ಆರಂಭದಲ್ಲಿ ಯಾವುದೇ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಳ್ಳದೆ ಇರುವುದರಿಂದ ಕಾಯಿಲೆಯು ಕೊನೆಯ ಹಂತದಲ್ಲಿ ಬೆಳಕಿಗೆ ಬರುವುದೇ ಹೆಚ್ಚು. ಈ ಸಂದರ್ಭದಲ್ಲಿ ಚಿಕಿತ್ಸೆ ಕೆಲಸ ಮಾಡದೆ ಸಾವುನೋವುಗಳು ಜಾಸ್ತಿ. ಇದಕ್ಕಿರುವ ಒಂದೇ ಮಾರ್ಗವೆಂದರೆ ಆಗಾಗ ಕಾಯಿಲೆಯ ಪರೀಕ್ಷೆ ಮಾಡಿಸಿಕೊಳ್ಳುವುದು. ಅದರಂತೆ ಮೊದಲೇ ಸ್ಕ್ರೀನಿಂಗ್ ಮಾಡುವುದರಿಂದ ಗುಣಪಡಿಸಬಹುದು. ಅದಕ್ಕೆ ಸ್ಕ್ರೀನಿಂಗ್ ಮಾಡಿಸುವ ಮುನ್ನ ನಿಮ್ಮ ವೈದ್ಯರ ಬಳಿ ಸಲಹೆ ಪಡೆಯಿರಿ. ಸ್ಕ್ರೀನಿಂಗ್‌ನಿಂದ ಏನಾದರೂ ಅಡ್ಡ ಪರಿಣಾಮವಿದೆಯೇ, ಯಾವಾಗ ಸ್ಕ್ರೀನಿಂಗ್ ಮಾಡಿಸಿಕೊಳ್ಳುವುದು ಉತ್ತಮ ಎಂದು ತಿಳಿದುಕೊಳ್ಳುವುದು ಒಳ್ಳೆಯದು. ಅದರಂತೆ 40 ವಯಸ್ಸಿನ ಬಳಿಕ ಪುರುಷರು ವರ್ಷಕ್ಕೊಮ್ಮೆ ಅಥವಾ 2 ವರ್ಷಕ್ಕೊಮ್ಮೆ ಈ ಸ್ಕ್ರೀನಿಂಗ್ ಟೆಸ್ಟ್‌ಗಳನ್ನು ಮಾಡಿಸಿಕೊಳ್ಳುತ್ತಿರುವುದು ಬಹುಮುಖ್ಯವಾಗಿದೆ.

1. ಬಾಯಿಯ ಕ್ಯಾನ್ಸರ್ ಸ್ಕ್ರೀನಿಂಗ್

Also read: ಪಾರಂಪರಿಕ ವೈದ್ಯರು ಹೇಳುವ ಪ್ರಕಾರ ಶುಂಠಿ ಕಷಾಯ ಆರೋಗ್ಯಕ್ಕೆ ತುಂಬಾ ಒಳ್ಳೇದು, ಕ್ಯಾನ್ಸರ್ ಖಾಯಿಲೆಗೂ ಇದು ರಾಮ ಬಾಣ ಅಂತೆ!!

ತುಟಿ, ನಾಲಗೆ, ಕೆನ್ನೆ, ದವಡೆ ಈ ಭಾಗದಲ್ಲಿ ಕ್ಯಾನ್ಸರ್ ಉಂಟಾಗುವುದು. ತಂಬಾಕು ಸೇವನೆಯ ಅಭ್ಯಾಸ ಇರುವವರಲ್ಲಿ, ಮದ್ಯಪಾನಿಗಳಲ್ಲಿ ಈ ಬಗೆಯ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತದೆ. ಈ ಭಾಗದಲ್ಲಿ ಸಣ್ಣ ಗಡ್ಡೆಯಾಗಿ ಕಾಣಿಸಿಕೊಳ್ಳುವ ಕ್ಯಾನ್ಸರ್ ನಂತರ ಬೆಳೆಯುತ್ತಾ, ಹರಡುತ್ತಾ ಹೋಗುತ್ತದೆ. ಬಾಯಿ ಕ್ಯಾನ್ಸರ್‌ನ ಲಕ್ಷಣಗಳು ಕಂಡು ಬಂದು, ಕ್ಯಾನ್ಸರ್ ಹೌದೇ ಅಲ್ಲವೇ ಎಂದು ತಿಳಿದು ಕೊಳ್ಳಲು ಸ್ಕ್ರೀನಿಂಗ್ ಮಾಡಿಸುವುದು ಒಳ್ಳೆಯದು.

2. ಶ್ವಾಸಕೋಶದ ಕ್ಯಾನ್ಸರ್ ಸ್ಕ್ರೀನಿಂಗ್

Also read: ಮೂಲಂಗಿ ಸೇವನೆಯಿಂದ ಕ್ಯಾನ್ಸರ್ ಕೋಶಗಳ ನಿವಾರಣೆ ಜೊತೆಗೆ ಎಷ್ಟೊಂದು ಅರೋಗ್ಯ ಲಾಭಗಳಿವೆ ನೋಡಿ..

ಶ್ವಾಸಕೋಶದ ಕ್ಯಾನ್ಸರ್ ಹೆಚ್ಚಾಗಿದ್ದು, ಸಿಗರೇಟು ಚಟ ಹೊಂದಿದ್ದವರು ಹಾಗೂ ಹೊಂದಿರುವವರು ಹೆಚ್ಚಾಗಿ ಇದಕ್ಕೆ ಬಲಿಯಾಗುತ್ತಾರಾದರೂ, ತಂಬಾಕು ಅಥವಾ ಸಿಗರೇಟು ಸೇವನೆ ಅಭ್ಯಾಸ ಇಲ್ಲದವರೂ ವಾಯುಮಾಲಿನ್ಯ ಸೇರಿದಂತೆ ಇತರೆ ಕಾರಣಗಳಿಂದಾಗಿ ಒಮ್ಮೊಮ್ಮೆ ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗಬಹುದು. ಇದು ಸಾಮಾನ್ಯವಾಗಿ ಕಡೆಯ ಸ್ಟೇಜ್‌ನಲ್ಲೇ ಬೆಳಕಿಗೆ ಬರುವುದರಿಂದ ಚಿಕಿತ್ಸೆ ಫಲಿಸುವ ಸಾಧ್ಯತೆಗಳು ಕಡಿಮೆ. ಆದ್ದರಿಂದ ಇದರ ಸ್ಕ್ರೀನಿಂಗ್ ಟೆಸ್ಟ್ ಮಾಡಿಸಿಕೊಳ್ಳುತ್ತಿರಬೇಕು. 55ರಿಂದ 5 ವಯೋಮಾನದ ಪುರುಷರು, ಅದರಲ್ಲೂ ಅವರು ಹೆವೀ ಸ್ಮೋಕರ್‌ಗಳಾಗಿದ್ದರೆ ಲಂಗ್ ಕ್ಯಾನ್ಸರ್‌ಗೆ ಸ್ಕ್ರೀನಿಂಗ್ ಮಾಡಿಸಿಕೊಳ್ಳಬೇಕು.

3. ಗಂಟಲಿನ ಕ್ಯಾನ್ಸರ್ ಸ್ಕ್ರೀನಿಂಗ್

Also read: ಕೇವಲ ಮಹಿಳೆಯರಿಗೆ ಅಷ್ಟೇ ಅಲ್ಲ ಪುರುಷರಿಗೂ ಸ್ತನ ಕ್ಯಾನ್ಸರ್ ಬರಬಹುದು, ಹೇಗೆ ಅಂತ ಈ ಮಾಹಿತಿ ನೋಡಿ..

ಧೂಮಪಾನಿಗಳಲ್ಲಿ ಗಂಟಲಿನ ಕ್ಯಾನ್ಸರ್ ಹೆಚ್ಚಾಗಿ ಕಮಡು ಬರುತ್ತದೆ. ಧೂಮಪಾನ ಮಾಡದವರಲ್ಲಿಯೂ ಈ ಕ್ಯಾನ್ಸರ್ ಬಂದಿರುವ ಉದಾಹರಣೆಗಳಿವೆ. ಧೂಮಪಾನ ಹೊರತು ಪಡಿಸಿ ಕಲುಷಿತ ವಾತಾವರಣ ಕೂಡ ಗಂಟಲಿನ ಕ್ಯಾನ್ಸರ್‌ಗೆ ಪ್ರಮುಖ ಕಾರಣ. ಗಂಟಲಿನ ಕ್ಯಾನ್ಸರ್‌ ಪ್ರಾರಭದಲ್ಲಿ ಗೊತ್ತಾಗುವುದೇ ಇಲ್ಲ, ಆರಂಭಿಕ ಹಂತದಲ್ಲಿ ಸೂಕ್ತ ಚಿಕಿತ್ಸೆ ಸಿಕ್ಕರೆ ಗುಣಪಡಿಸಲು ಸುಲಭ. ಇದನ್ನು ಆರಂಭದಲ್ಲಿಯೇ ಸ್ಕ್ರೀನಿಂಗ್‌ ಮೂಲಕ ಪತ್ತೆ ಹಚ್ಚಬಹುದು. ಧೂಮಪಾನ ಮಾಡುವ 55-75 ವರ್ಷದ ಒಳಗಿನ ಪುರುಷರು ಈ ರೀತಿ ಸ್ಕ್ರೀನಿಂಗ್ ಮಾಡಿಸುವುದು ಒಳ್ಳೆಯದು. ಇದನ್ನು ಲೋ ಡೋಸ್‌ CT ಸ್ಕ್ಯಾನ್ ಮೂಲಕ ಕ್ಯಾನ್ಸರ್ ಇದೆಯೇ ಇಲ್ಲವೇ ಎಂದು ಪತ್ತೆಹಚ್ಚಬಹುದು.

4. ಪ್ರೊಸ್ಟೇಟ್ ಕ್ಯಾನ್ಸರ್ ಸ್ಕ್ರೀನಿಂಗ್

Also read: ಪೋಷಕರೇ ನಿಮ್ಮ ಮಕ್ಕಳಿಗೆ ಕ್ಯಾನ್ಸರ್ ಬರದಂತೆ ತಡೆಯಲು ಈ ಕ್ರಮಗಳನ್ನು ಪಾಲಿಸಿ..

ಪುರುಷರಲ್ಲಿ ವೀರ್ಯ ದ್ರವ ಉತ್ಪಾದನೆಗೆ ಕಾರಣವಾಗುವ ಪ್ರೋಸ್ಟೇಟ್ ಗ್ಲ್ಯಾಂಡ್‌ನಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯತೊಡಗಿದರೆ ಅದನ್ನು ಪ್ರೊಸ್ಟೇಟ್ ಕ್ಯಾನ್ಸರ್ ಎನ್ನಲಾಗುತ್ತದೆ. ಪ್ರೊಸ್ಟೇಟ್ ಎನ್ನುವುದು ವೀರ್ಯಾಣುಗಳಲ್ಲಿ ಒಂದು ರೀತಿಯ ದ್ರವವನ್ನು ಉತ್ಪತ್ತಿ ಮಾಡುವ ಹಾಗೂ ಮೂತ್ರ ವಿಸರ್ಜನೆಯನ್ನು ನಿಯಂತ್ರಿಸುವ ಗ್ರಂಥಿ. ಪ್ರೊಸ್ಟೇಟ್ ಕ್ಯಾನ್ಸರ್ ಉಂಟಾದಾಗ ಈ ಗ್ರಂಥಿಯ ಗಾತ್ರ ಹೆಚ್ಚಾಗುವುದು. ಇದನ್ನು ಮೊದಲನೇ ಹಂತದಲ್ಲಿ ಪತ್ತೆ ಹಚ್ಚಿದರೆ ರೇಡಿಯೋಥೆರಪಿ ಹಾಗೂ ಶಸ್ತ್ರ ಚಿಕಿತ್ಸೆ ಮೂಲಕ ಗುಣಪಡಿಸಬಹುದು.

5. ಕರುಳಿನ ಕ್ಯಾನ್ಸರ್ ಸ್ಕ್ರೀನಿಂಗ್

Also read: ನಾವ್ ಹೇಳಿದಂತೆ ಈ ರೀತಿ ಮಾಡ್ತಾ ಬನ್ನಿ ನಿಮಗೆ ಬಾಯಿ ಕ್ಯಾನ್ಸರ್ ಬರುವ ಪ್ರಮೇಯ ಶೇಕಡ 50% ಕಮ್ಮಿಯಾಗುತ್ತೆ!!

50 ವರ್ಷ ದಾಟಿದ ಪುರುಷರು ಈ ಕರುಳಿನ ಕ್ಯಾನ್ಸರ್‌ನ ಸ್ಕ್ರೀನಿಂಗ್ ಮಾಡುವುದು ಒಳ್ಳೆಯದು. ಇದು ವಂಶಪಾರಂಪರ್ಯವಾಗಿ ಕೂಡ ಬರುವುದರಿಂದ ಅಂಥ ಕುಟುಂಬದ ಸದಸ್ಯರು ಈ ಸ್ಕ್ರೀನಿಂಗ್ ಮಾಡಿಸುವುದು ಒಳ್ಳೆಯದು. CT ಕೋಲೋನೋಗ್ರಾಫಿ ಮೂಲಕ ಪತ್ತೆ ಹಚ್ಚಬಹುದು. ಆರಂಭದಲ್ಲಿ ಕ್ಯಾನ್ಸರ್ ಅಲ್ಲದೆ ಹಾಗೆಯೇ ಸಣ್ಣ ಗಂಟುಗಳಾಗಿ ಕಾಣಿಸಿಕೊಳ್ಳುವ ಈ ಕರುಳಿನ ಕ್ಯಾನ್ಸರ್, ನಿಧಾನವಾಗಿ ಕ್ಯಾನ್ಸರ್ ಕೋಶಗಳಿಂದ ಆವೃತವಾಗುತ್ತದೆ. 50 ವರ್ಷ ದಾಟಿದ ಪುರುಷರು ವಾರ್ಷಿಕವಾಗಿ 75 ವರ್ಷದವರೆಗೂ ಈ ಪರೀಕ್ಷೆ ಮಾಡಿಸಿಕೊಳ್ಳುತ್ತಲೇ ಇರಬೇಕು.