ಆಯುಷ್ಮಾನ್ ಯೋಜನೆಯ ಷರತ್ತು ಅನೇಕರನ್ನು ಹೊರಗಿಟ್ಟಿದೆ, ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆ ಬರಿ ಬೊಬ್ಬೆ ಅನ್ನಿಸುತ್ತೆ..

0
1246

ಬಡವರಿಗೆ ಉಪಯೋಗವಾಗುವ ಸಲುವಾಗಿ ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಯೋಜನೆಯನ್ನು ಜಾರಿಗೆ ತಂದಿದ್ದು, ಯೋಜನೆಯನ್ನು ಕೆಲವರು ದುರಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅರ್ಹತೆಯಿಲ್ಲದವರು ಯೋಜನೆಯ ಫಲಾನುಭವಿಗಳಾಗಿದ್ದಾರೆಂದು ವರದಿಗಳಾಗಿರುವೆ. ಹೀಗಾಗಿ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಎಚ್ಚೆತ್ತುಕೊಂಡಿದ್ದು, ಅರ್ಹ ಫಲಾನುಭವಿಗಳನ್ನು ಗುರುತಿಸುವಂತೆ ರಾಜ್ಯ ಸರ್ಕಾರಗಳಿಗೆ ಸುತ್ತೋಲೆಯನ್ನು ಹೊರಡಿಸಿದೆ.

Also read: ಗೀತಾ ಗೋಪಿನಾಥ್, ಈ ಕನ್ನಡತಿ ಅಂತಾರಾಷ್ಟ್ರೀಯ ಹುದ್ದೆಗೇರಿದ್ದ ಸಾಧನೆ; ಕನ್ನಡಿಗರು ಏನು ಬೇಕಾದರೂ ಮಾಡಬಹುದು ಅಂತ ತೋರಿಸುತ್ತೆ..

ಇನ್ನು ಸಾಮಾಜಿಕ ಆರ್ಥಿಕ ಮತ್ತು ಜಾತಿ ಗಣತಿಯಲ್ಲಿ ಕೆಲ ಷರತ್ತುಗಳನ್ನು ವಿಧಿಸಿ ಈ ಮೂಲಕ ಯೋಜನೆಗೆ ಅರ್ಹ ಫಲಾನುಭವಿಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಎನ್’ಹೆಚ್ಎ ಸೂಚನೆ ನೀಡಿದೆ. ಆಯುಷ್ಮಾನ್ ಭಾರತ್ ರಾಷ್ಟ್ರೀಯ ಆರೋಗ್ಯ ರಕ್ಷಾ ಮಿಷನ್ 50 ಕೋಟಿ ಜರನ್ನು ಒಳಗೊಳ್ಳುವ ಯೋಜನೆಯಾಗಿದೆ. ಇದು ವಿಶ್ವದ ಅತೀದೊಡ್ಡ ಆರೋಗ್ಯ ಯೋಜನೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದಕ್ಕಾರಿ ಸರ್ಕಾರ ವಾರ್ಷಿಕ ಸುಮಾರು ರೂ.12 ಸಾವಿರ ಕೋಟಿ ವೆಚ್ಚ ಮಾಡಲಿದೆ. ಬಡವರಿಗೆ ಗುಣಮಟ್ಟದ ಚಿಕಿತ್ಸೆ ಪಡೆಯಲು ವಿಮಾ ಸೌಲಭ್ಯನ್ನು ನೀಡಲಾಗುತ್ತದೆ.

Also read: ಮೋದಿಯ ದುರಾಡಳಿತ ಹೀಗೆ ಮುಂದುವರೆದರೆ, ಹಣದುಬ್ಬರ ಹೆಚ್ಚಾಗಿ, ಬಡವರು ಹೇಗೆ ಬದುಕಬೇಕು?

ಚಿಂದಿ ಆಯುವವರು, ಭಿಕ್ಷುಕರು, ದೇಶೀಯ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಕಲ್ಲು ಹೊರುವವರು, ಕಾರ್ಮಿಕರು, ವರ್ಣ ಚಿತ್ರಕಾರರು, ಭದ್ರತಾ ಸಿಬ್ಬಂದಿಗ, ಕೂಲಿ ಕಾರ್ಮಿಕಲು ಹಾಗೂ ನೈರ್ಮಲ್ಯ ಕೆಲಸಗಾರರು ಸೇರಿ ಬಡಲವು ಯೋಜನೆಗೆ ಅರ್ಹ ಫಲಾನುಭವಿಗಳಾಗಿರುದ್ದಾರೆ. ದೇಶದ 10 ಕೋಟಿ ಕುಟುಂಬಗಳ ಜನರು ಅಥವಾ 50 ಕೋಟಿ ಜನ ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ. ಪ್ರಸ್ತುತ ಯೋಜನೆಗೆ ನೊಂದಾಯಿಸಿಕೊಂಡಿರುವ ರಾಜ್ಯಗಳ ಆರೋಗ್ಯ ಯೋಜನೆ ಹಾಗೂ ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಯ ಫಲಾನುಭವಿಗಳೂ ಸಹ ಆಯುಷ್ಮಾನ್ ಭಾರತದ ಪ್ರಯೋಜನವನ್ನು ಪಡೆಯಲಿದ್ದಾರೆ.

Also read: ದೇಶ ಬಿಡುವುದಕ್ಕೆ ಮುಂಚೆ ವಿಜಯ್ ಮಲ್ಯ ಬಿ.ಜೆ.ಪಿ.ಗೆ 35 ಕೋಟಿ ರು.ಗಳ ಚೆಕ್ ನೀಡಿದ್ದರ ಹಿಂದಿನ ಮರ್ಮ ಏನು??

2011 ಗ್ರಾಮೀಣ ಮತ್ತು ನಗರಾಭಿವೃದ್ಧಿಗಳ ಸಾಮಾಜಿಕ-ಆರ್ಥಿಕ ಸ್ಥಿತಿಯ ಅಧ್ಯಯನದಂತೆ ಜನರ ಮನೆಯಲ್ಲಿ ದ್ವಿಚಕ್ರ, ಮೂರು ಚಕ್ರಗಳು, ನಾಲ್ಕು ಚಕ್ರಗಳನ್ನು, ಮೀನು ಹಿಡಿಯುವ ಬೋಟುಗಳು, ಯಾತ್ರೀಕೃತ ಕೃಷಿ ಉಪಕರಣಗಳು, ಕಿಸಾನ್ ಕ್ರೆಡಿಟ್ ಕಾರ್ಡ್, ರೂ.50ಸಾವಿರಕ್ಕೂ ಹೆಚ್ಚು ಹಣವನ್ನು ಖಾತೆಯಲ್ಲಿ ಹೊಂದಿದ್ದಾರೆಯೇ, ಸರ್ಕಾರಿ ಉದ್ಯೋಗಸ್ಥರೇ ಎಂಬಲ್ಲಾ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ. ಇದರಲ್ಲಿ ತಿಂಗಳಿಗೆ ರೂ.10 ಸಾವಿರಕ್ಕೂ ಹೆಚ್ಚು ದುಡಿಯುತ್ತಿರುವವರು, ತೆರಿಗೆ ಪಾವತಿ ಮಾಡುತ್ತಿರುವವರು, ಮೂರು ಅಥವಾ ಅದಕ್ಕೂ ಹೆಚ್ಚು ಕೊಠಿಡಿಗಳನ್ನು ಮನೆಯಲ್ಲಿ ಹೊಂದಿರುವವರು, ಫ್ರಿರ್ಡ್, ಲ್ಯಾಂಡ್ ಲೈನ್ ಫೋನ್ ಗಳನ್ನು ಹೊಂದಿರುವವರು ಯೋಜನೆಯಿಂದ ಹೊರಗಿಡಲಾಗುತ್ತದೆ. ಜನಗಣತಿಯಲ್ಲಿ ಇಷ್ಟೆಲ್ಲಾ ಮಾಹಿತಿಗಳನ್ನು ಕಲೆಹಾಕಿದ್ದರು, ಅರ್ಹತೆಯೇ ಇಲ್ಲದ ಜನರು ಫಲಾನುಭವಿಗಳಾಗಿರುವುದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ ಎಚ್ಚೆತ್ತುಕೊಂಡಿರುವ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಇದೀಗ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಅರ್ಹ ಫಲಾನುಭವಿಗಳನ್ನು ಗುರುತಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.