ದಿ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ

0
743

ದಿ ಬೆಂಗಳೂರು ಸಿಟಿ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಖಾಲಿಯಿರುವ ಕಿರಿಯ ಸಹಾಯಕರು ಮತ್ತು ಅಟೆಂಡರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ಚಾನಿಸಲಾಗಿದೆ.

ಹುದ್ದೆಯ ವಿವರ
ಹುದ್ದೆಯ ಹೆಸರು: ಕಿರಿಯ ಸಹಾಯಕರು
ಹುದ್ದೆ ಸಂಖ್ಯೆ-63
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದಾದರು ಪದವಿ ಪಡೆದಿರಬೇಕು
ವೇತನ ಶ್ರೇಣಿ: ರೂ.20000 -36300 /-
ಹುದ್ದೆಯ ಹೆಸರು: ಅಟೆಂಡರ್
ಹುದ್ದೆ ಸಂಖ್ಯೆ: 11
ವಿದ್ಯಾರ್ಹತೆ: ಕನಿಷ್ಠ ಎಸ್ ಎಸ್ ಎಲ್ ಸಿ ತೇರ್ಗಡೆ ಹೊಂದಿರಬೇಕು
ವೇತನ ಶ್ರೇಣಿ: ರೂ.14500 -26700 /-
ವಯೋಮಿತಿ
ವಯೋಮಿತಿ ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಟ ವಯೋಮಿತಿಯನ್ನು ಹೊಂದಿರಬೇಕು ಹಾಗೂ ನಿಗದಿತ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು. ವರ್ಗೀಕರಣದ ವಯೋಮಿತಿ
ಸಾಮಾನ್ಯ ವರ್ಗ- 18 ರಿಂದ 35 ವರ್ಷ
2ಎ, 2ಬಿ, 3ಎ, 3ಬಿ- 18 ರಿಂದ 38 ವರ್ಷ
ಪ.ಜಾ./ಪ.ಪಂ/ಪ್ರ-1- 18 ರಿಂದ 40 ವರ್ಷ
ಅರ್ಜಿ ಸಲ್ಲಿಕೆ
ಅಭ್ಯರ್ಥಿಗಳು ಬ್ಯಾಂಕಿನ ಅಧಿಕೃತ ವೆಬ್ಸೈಟ್ ವಿಳಾಸ www.bccbl.co.in ಗೆ ಭೇಟಿ ನೀಡಬೇಕು TBCCBANK RECRUITMENT  2017 ಎಂದು ಮೂಡುತ್ತದೆ ಮತ್ತು ಅಧಿಸೂಚನೆ/ ಪರೀಕ್ಷಾ ಶುಲ್ಕವಿವರಗಳು ಲಭ್ಯವಾಗಲಿದ್ದು, ಅಭ್ಯರ್ಥಿಗಳು ಅಧಿಸೂಚನೆಯಲ್ಲಿನ ವಿವರಗಳನ್ನು ಮತ್ತು ಅರ್ಜಿ ಸಲ್ಲಿಸುವ ಸೂಚನೆಗಳನ್ನು ತಪ್ಪದೇ ಓದಿಕೊಂಡು ಅದರಂತೆ ಆನ್-ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡತಕ್ಕದ್ದು.
ಅರ್ಜಿಯನ್ನು ಭರ್ತಿ ಮಾಡುವ ಸಂದರ್ಭದಲ್ಲಿ ತಾಂತ್ರಿಕ ತೊಂದರೆ ಅಥವಾ ಸಮಸ್ಯೆ ಎದುರಾದಲ್ಲಿ ಸಹಾಯವಾಣಿ 8951107408 ಅನ್ನು ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 6:00 ಗಂಟೆವರೆಗೆ ಸಂಪರ್ಕಿಸಬಹುದಾಗಿದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ: 05-04-2017
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26-04-2017
ಶುಲ್ಕ ಪಾವತಿಸಲು ಕೊನೆಯ ದಿನಾಂಕ: 27-04-2017
ಅರ್ಜಿ ಶುಲ್ಕ
ಕಿರಿಯ ಸಹಾಯಕ ಹುದ್ದೆಗೆ
ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ರೂ.600/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.400/-
ಅಟೆಂಡರ್ ಹುದ್ದೆಗೆ
ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ ರೂ.400/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ.300/-
ಶುಲ್ಕ ಪಾವತಿಸುವ ವಿಧಾನ
ಅರ್ಜಿ/ಪರೀಕ್ಷಾ ಶುಲ್ಕದ ಚಲನ್ ಡೌನ್ಲೋಡ್ ಮಾಡಿದ ನಂತರ ಕರ್ನಾಟಕ ರಾಜ್ಯದಲ್ಲಿನ ಯಾವುದೇ ಗಣಕೀಕೃತ ಭಾರತೀಯ ಅಂಚೆ ಕಛೇರಿಯ ಶಾಖೆಯಲ್ಲಿ (e-payment enabled post offices) ಸಂದಾಯ ಮಾಡತಕ್ಕದ್ದು. ಈ ವಿಧಾನ ಹೊರತುಪಡಿಸಿ ಬೇರೆ ಯಾವುದೇ ರೀತಿಯಲ್ಲಿ ಶುಲ್ಕ ಪಾವತಿಸಲು ಅವಕಾಶವಿರುವುದಿಲ್ಲ.
ಅಯ್ಕೆ ವಿಧಾನ
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಕರೆಪತ್ರಗಳ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
ಆದ್ಯತೆ
ಕಿರಿಯ ಸಹಾಯಕ ಹುದ್ದೆಗೆ
ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಕಂಪ್ಯೂಟರ್ ಜ್ಞಾನ ಹೊಂದಿರಬೇಕು
ಡಿಪ್ಲೊಮಾ ಇನ್ ಸೆಕ್ರೆಟಿರಿಯಲ್ ಪ್ರಾಕ್ಟೀಸ್ ಅಥವಾ ಡಿಪ್ಲೊಮಾ ಇನ್ ಬ್ಯಾಂಕಿಂಗ್ ಅಥವಾ ಡಿಪ್ಲೊಮಾ ಇನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರಬೇಕು
ಸಹಕಾರಿ ಬ್ಯಾಂಕುಗಳಲ್ಲಿ ಕೆಲಸ ಮಾಡಿದ ಅನುಭವ ಇರಬೇಕು
ಅಟೆಂಡರ್ ಹುದ್ದೆಗೆ
ಸಹಕಾರಿ ಬ್ಯಾಂಕುಗಳಲ್ಲಿ ಕೆಲಸ ಮಾಡಿದ ಅನುಭವ
ಸೂಚನೆ
ಅಭ್ಯರ್ಥಿಗಳು ಕರ್ನಾಟಕ ನಿವಾಸಿಗಳಾಗಿದ್ದು, ಕನ್ನಡ ಭಾಷೆ ಬರೆಯಲು ಮತ್ತು ಓದಲು ಬಲ್ಲವರಾಗಿರಬೇಕು
ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ ವಿಳಾಸ : www.bccbl.co.in