ಫುಟ್ ಬಾಲ್ ಆಡುವವರಿಗೆ ಮೆದುಳು ರೋಗನಾ…!

0
506

ಇದೇನಪ್ಪ ಅಂತೀರಾ ಇದು ನಿಜ ಏಕೆ ಅಂದ್ರೆ ಇಲ್ಲಿ ನೋಡಿ ಫುಟ್ ಬಾಲ್ ಆಡುವಾಗ ತಲೆಯಲ್ಲಿ ಡಿಚ್ಚಿ ಹೊಡೆಯುವ ಅಭ್ಯಾಸವಿದೆಯೇ? ಫುಟ್ ಬಾಲ್ ಆಡುವುದರಿಂದ ಮೆದುಳು ರೋಗ ಬರುವ ಸಾಧ್ಯತೆ ಹೆಚ್ಚಿದೆಯಂತೆ! ಹಾಗೆಂದು ಲಂಡನ್ ನ ನ್ಯೂರೋಲಜಿ ವಿವಿಯೊಂದು ನಡೆಸಿದ ಸಂಶೋಧನೆಯಲ್ಲಿ ತಿಳಿದುಬಂದಿದೆ.

Image result for ಫುಟ್ ಬಾಲ್

ಸುದೀರ್ಘ ಸಮಯದಿಂದಲೂ ತಲೆಯಿಂದ ಡಿಚ್ಚಿ ಹೊಡೆದು ಫುಟ್ ಬಾಲ್ ಆಡುವುದರಿಂದ ಮೆದುಳು ರೋಗ ಬರುತ್ತದೆಂದು ಸಂಶೋಧನೆಯಿಂದ ತಿಳಿದುಬಂದಿದೆ. ಇದಕ್ಕಾಗಿ ಅಧ್ಯಯನಕಾರರು 14 ಫುಟ್ ಬಾಲ್ ಆಟಗಾರರ ಮೇಲೆ ಅಧ್ಯಯನ ನಡೆಸಿದ್ದಾರೆ. ಅದೂ ಸುಮಾರು ವರ್ಷ ಈ ಆಟಗಾರರನ್ನು ಪರೀಕ್ಷೆಗೊಳಪಡಿಸಿ ನಂತರ ಈ ತೀರ್ಮಾನಕ್ಕೆ ಬಂದಿದ್ದಾರೆ.

ಇವರಿಗೆಲ್ಲಾ 60 ವಯಸ್ಸಿನಲ್ಲಿ ಮೆದುಳು ರೋಗ ಶುರುವಾಗಿತ್ತು. ಸಾಮಾನ್ಯವಾಗಿ 70 ವರ್ಷ ದಾಟಿದ ಮೇಲೆ ಮೆದುಳು ರೋಗ ಕಾಣಿಸಿಕೊಳ್ಳುತ್ತದೆ. ಈ ಪ್ರಯೋಗದಲ್ಲಿ ಪಾಲ್ಗೊಂಡ 14 ಮಂದಿಯಲ್ಲಿ 12 ಮಂದಿ ತೀವ್ರ ತರದ ಮೆದುಳು ರೋಗದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.