ರಾಯರು ಇನ್ನೂ ಬೃಂದಾವನದಲ್ಲೇ ಇದ್ದಾರೆ ಎಂಬುದಕ್ಕೆ ಇಲ್ಲಿದೆ ಸಾಕ್ಷಿ..! ಪವಾಡ ಪುರುಷ ಗುರುರಾಘವೇಂದ್ರ ನಂಬಿ ಕೆಟ್ಟವರಿಲ್ಲ…!!

0
4179

ದಾರಿ ಕಾಣದಾಗಿದೆ ರಾಘವೇಂದ್ರನೇ ಎಂದು ದಾರಿ ತೋರಿಸುವಂತೆ ರಾಯರನ್ನು ಪ್ರಾರ್ಥಿಸುವವರ ಸಂಖ್ಯೆ ದೊಡ್ಡದು. ಗುರುಸಾರ್ವಭೌಮರೆಂದೂ, ಕಲಿಯುಗದ ಕಲ್ಪತರು ಕಾಮಧೇನು ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳು. ಗುರು ರಾಯರನ್ನು ನೆನೆಸಿಕೊಂಡರೆ ಸಾಕು ಸಕಲ ಅಭೀಷ್ಟಗಳು ಮತ್ತು ಲೌಕಿಕ ಅಭೀಷ್ಟಗಳು ನೆರವೇರುತ್ತವೆ ಹಾಗೆ ಪವಾಡಗಳನ್ನು ಶೃಷ್ಟಿಸಿ ಭಕ್ತ ಸಮೂಹಕ್ಕೆ ಆಸರೆಯಾಗಿ ಕಲಿಯುಗದ ಪವಾಡ ಪುರುಷ ಗುರುರಾಯರು ಪ್ರತಿಯೊಬ್ಬ ಭಕ್ತರ ಮನದಲ್ಲಿ ಇಂದಿಗೂ ಬದುಕಿದ್ದಾರೆ.

ಈಗಾಗಲೆ 339 ವರ್ಷಗಳು ಗತಿಸಿದ್ದು ಇನ್ನೂ ಮುಂದಿನ 361 ವರ್ಷಗಳವರೆಗೆ ರಾಯರು ಜಾಗೃತರಾಗಿದ್ದು ಭಕ್ತರನ್ನು ಹರಸುತ್ತಾರೆ ಎಂಬ ವಿಶ್ವಾಸ ಅವರ ಭಕ್ತಾದಿಗಳಲ್ಲಿದೆ. ರಾಯರು ಹಿಂದೆ ಇದ್ದರು, ಇಂದೂ ಇದ್ದಾರೆ ಮುಂದೆಯೂ ಇರುತ್ತಾರೆ. ತನ್ನನ್ನು ನಂಬಿದ ಭಕ್ತರನ್ನ ರಾಯರು ಎಂದಿಗೂ ಕೈ ಬಿಡುವುದಿಲ್ಲ. ಹಾಗೇನೆ ದೃಢ ಭಕ್ತಿಯಿಂದ ರಾಯರನ್ನು ಯಾರು ಬೇಡುತ್ತಾರೆ ಅವರ ಜೀವನದಲ್ಲಿ ಪವಾಡ ಸೃಷ್ಟಿಸುತ್ತಾರೆ.

ರಾಯರ ಪವಾಡಗಳು

ರಾಘವೇಂದ್ರರು ದೈವಜ್ಞರರು, ಪವಾಡ ಪುರುಷರು. ಅವರ ಮಹಿಮೆಗಳು ಅಪಾರ. ಬ್ರಿಟಿಷ್ ಅಧಿಕಾರಿಗೆ ಬೃಂದಾವನದಲ್ಲಿ ರಾಯರ ದರ್ಶನವಾಗಿತ್ತು. ಒಂದೂವರೆ ದಶಕಗಳ ಹಿಂದೆ ಆಗಿನ ಕಾಲದ ಬ್ರಿಟಿಷ್ ಚಕ್ರಾಪತ್ಯದ ಕಲೆಕ್ಟರಾಗಿದ್ದ ಸರ್ ಥಾಮಸ್ ಮನ್ರೋ ಅವರಿಗೆ ರಾಯರು ದರ್ಶನ ನೀಡಿದ್ದರು. ಇದು ರಾಯರು ಇನ್ನೂ ಬೃಂದಾವನದಲ್ಲೇ ಇದ್ದಾರೆ ಎಂಬುದಕ್ಕೆ ಸಾಕ್ಷಿ. ಅಷ್ಟೆ ಯಾಕೆ ರಾಯರ ಮಹಿಮೆಗೆ ತೆಲೆಬಾಗಿದ್ದರು ಮುಸ್ಲಿಂ ನವಾಬರು, ದನ ಕಾಯುವವನು ದಿವಾನನಾಗಿ ಮೆರೆದಿದ್ದು ರಾಯರ ಅನುಗ್ರಹದಿಂದ. ಇಂತಹ ಅನೇಕ ಉದಾಹರಣೆಗಳು ನಮಗೆ ಸಿಗುತ್ತವೆ. ಅದರಲ್ಲೂ ರಾಯರು ಕೊಟ್ಟ ಮಂತ್ರಾಕ್ಷತೆಯ ಶಕ್ತಿಯಿಂದ ದುಶ್ಟ ಶಕ್ತಿಯ ನಾಶವಾದ ಕಥೆ ಕೇಳಿದರೆ ಸಾಕು ಕೇಳಿದವರ ಸಕಲ ಸಂಕಷ್ಟಗಳು ದೂರಾಗುತ್ತದೆ. ಅವರು ನೀಡಿದ ಮಂತ್ರಾಕ್ಷತೆಯಲ್ಲಿ ಅಷ್ಟು ಮಹಿಮೆ ಇರಬೇಕಾದರೆ ಅವರ ಕೃಪಾ ಕಟಾಕ್ಷವನ್ನು ಹೊಂದಿದವರು ಸಕಲ ಇಷ್ಟಾರ್ಥಗಳನ್ನು ಹೊಂದುತ್ತಾರೆ.

“ಬೃಂದಾವನ ಪ್ರದಕ್ಷಿಣ ನಮಸ್ಕಾರಾಭಿಸ್ತುತಿ” ಅಂದರೆ ಬೃಂದಾವ ನೋಡಿದರೆ, ರಾಯರಿಗೆ ಅಭಿಷೇಕ ಮಾಡುವುದನ್ನ ನೋಡಿದರೆ, ರಾಯರಿಗೆ ಅಭಿಷೇಕ ಮಾಡಿದಂತಹ ಅಭಿಷೇಕವನ್ನು ಪಾನ ಮಾಡಿದರೆ ಇವೆಲ್ಲವುದರಿಂದ ದೋಷ ಪರಿಹಾರವಾಗುತ್ತದೆ. ಗುರು ರಾಯರಿಗೆ ಮಾಡುವ ಆರತಿ ದರ್ಶನ ಪಡೆದರೆ ಸಾಕು ಶುಭಪಲ ಹರಸಿ ಬರುವುದು ಖಚಿತ. ಮಂತ್ರಾಲಯ ವಾಸಿಯಾದ ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆಯಲ್ಲಿ ಸಾಕಷ್ಟು ಜನ ತಮ್ಮ ತನು ಮನದಿಂದ ಆ ರಾಯರನ್ನ ಆರಾಧಿಸಿ ಸಕಲ ಇಷ್ಟಾರ್ಥಗಳನ್ನು ಪಡೆದುಕೊಳ್ಳುತ್ತಾರೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.