ದೋಸ್ತಿ ಸರ್ಕಾರದಿಂದ 2019-20 ರ ಬಜೆಟ್ ಮಂಡನೆ; ಯಾವುದಕ್ಕೆ ಎಷ್ಟು ಹಣ? ಸಂಪೂರ್ಣ ಬಜೆಟ್​ ಹೈಲೈಟ್ಸ್​ ಇಲ್ಲಿದೆ..

0
621

ಮೈತ್ರಿ ಸರ್ಕಾರದ ಎರಡನೇ ಬಜೆಟ್ ಅನ್ನು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಮಂಡಿಸುತ್ತಿದ್ದಾರೆ. ಈ ಬಜೆಟ್ ವಿಷಯದಲ್ಲಿ ಬಿಜೆಪಿ ಸರ್ಕಾರದಿಂದ ವಿರೋಧ ಹೇಳಿ ಬರುತ್ತಿತು. ಈ ಎಲ್ಲ ರಾಜಕೀಯ ಬೆಳವಣಿಗೆಯ ಬೆನ್ನಲ್ಲೇ ಕುಮಾರಸ್ವಾಮಿ ವಿಸ್ತಾರವಾದ ಬಜೆಟ್​ ಮಂಡಿಸಿದ್ದಾರೆ. ವಿರೋಧ ಪಕ್ಷಗಳ ಮಾತಿನಂತೆ ಈ ಬಜೆಟ್ ಮಂಡನೆಯಾಗುವುದು ಬಹುತೇಕವಾಗಿ ಅನುಮಾನ ಇತ್ತು ಇದರ ಹಿನ್ನೆಲೆಯಲ್ಲೇ ಎರಡನೇ ಬಜೆಟ್ ಮಂಡಿಸುತ್ತಿರುವ ಕುಮಾರಸ್ವಾಮಿಯವರು ಜನಪ್ರಿಯ ಯೋಜನೆಗಳನ್ನು ಘೋಷಿಸಿದ್ದು, ಅದರ ಸಂಪೂರ್ಣ ವಿವರ ಇಲ್ಲಿದೆ.

ಬಜೆಟ್​ ಹೈಲೈಟ್ಸ್​:

1. ಕೃಷಿ ಭಾಗ್ಯ:

 • ಸಾವಯವ ಕೃಷಿ, ಶೂನ್ಯ ಬಂಡವಾಳ, ಕೃಷಿ ಹಾಗೂ ಇಸ್ರೇಲ್ ಮಾದರಿ ಕಿರು ನೀರಾವರಿ ಕಾರ್ಯಕ್ರಮಗಳಿಗೆ ಒಟ್ಟಾರೆ ರೂ. 472 ಕೋಟಿ ಅನುದಾನ.
 • ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆಯಡಿ ಎಲ್ಲ ವರ್ಗದ ರೈತರಿಗೆ ಶೇ.90 ರಷ್ಟು ಪ್ರೋತ್ಸಾಹಧನ- 368 ಕೋಟಿ ರೂ. ಅನುದಾನ.
 • ಬರಪೀಡಿತ ಮತ್ತು ಅತಿಹೆಚ್ಚು ಅಂತರ್ಜಲ ಕುಸಿತ ಇರುವ 100 ತಾಲ್ಲೂಕುಗಳಲ್ಲಿ ಬರನಿರೋಧಕ ಜಲಾನಯನ ಚಟುವಟಿಕೆಗಳ ಅನುಷ್ಠಾನ-100 ಕೋಟಿ ರೂ.
 • ಸಿರಿಧಾನ್ಯ ಬೆಳೆಗಾರರ ಉತ್ತೇಜನಕ್ಕೆ ‘ರೈತ ಸಿರಿ’ ಯೋಜನೆ- 10 ಕೋಟಿ ರೂ.
 • ಕರಾವಳಿ ಹಾಗೂ ಮಲೆನಾಡು ಜನರಿಗೆ ಭತ್ತ ಬೆಳೆಯಲು ಉತ್ತೇಜಿಸಲು ‘ಕರಾವಳಿ ಪ್ಯಾಕೇಜ್’ 5 ಕೋಟಿ ರೂ.ಗಳ ಅನುದಾನ. ಪ್ರತಿ ಹೆಕ್ಟೇರ್‍ಗೆ ರೈತರಿಗೆ 7,500 ರೂ. ನೇರ ವರ್ಗಾವಣೆ.

2. ಶಾಲಾ ಮಕ್ಕಳಿಗೆ ವಿಶೇಷ ಪ್ಯಾಕೇಜ್:

 • ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್
 • ಕೇಂದ್ರೀಯ ವಿದ್ಯಾಲಯ ಮಾದರಿಯಲ್ಲಿ ಪಬ್ಲಿಕ್ ಸ್ಕೂಲ್
 • 1 ರಿಂದ 10 ನೇ ತರಗತಿ ವರೆಗೆ ಒಂದೇ ಶಾಲೆ
 • 4 ವರ್ಷದಲ್ಲಿ 1000 ಸ್ಕೂಲ್ ಘೋಷಣೆ ಸಾಧ್ಯತೆ
 • ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸುಭದ್ರ ಶಾಲೆ
 • ಸರ್ಕಾರಿ ಶಾಲೆಗಳು ಇಂಗ್ಲಿಷ್ ಮೀಡಿಯಂ ಕಡ್ಡಾಯ
 • ದುಸ್ಥಿತಿಯಲ್ಲಿರುವ ಶಾಲೆಗಳ ಅಭಿವೃದ್ಧಿಗೆ ಸುಭದ್ರ ಯೋಜನೆ
 • ಮಲೆನಾಡು ಶಾಲಾ ವಿದ್ಯಾರ್ಥಿಗಳಿಗೆ ಛತ್ರಿ, ರೈನ್ಕೋಟ್ ಭಾಗ್ಯ

3.ಬರ ಪರಿಹಾರಕ್ಕಾಗಿ ಮೀಸಲು:

ರಾಜ್ಯ ಕಳೆದ 14 ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿದ್ದು, ಬರ ಪರಿಹಾರಕ್ಕಾಗಿ 2.5 ಸಾವಿರ ಕೋಟಿಗಾಗಿ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ರಾಜ್ಯದ 156 ತಾಲೂಕುಗಳು ಬರದಿಂದ ತತ್ತರಿಸಿದ್ದು, ಪ್ರಾದೇಶಿಕ ಭೇಧಭಾವವಿಲ್ಲದೆ ಅಭಿವೃದ್ಧಿ ಪಥವನ್ನು ನಿಖರವಾಗಿ ಗುರುತಿಸಿ ಕಾರ್ಯ ನಿರ್ವಹಿಸಲಾಗುತ್ತಿದೆ.
ಬರ ಪರಿಹಾರ ಕಾರ್ಯಕ್ಕಾಗಿ ಜಿ.ಪಂ. ಗೆ ೩೦೦ ಕೋಟಿ ಹನ ನೀಡಲಾಗಿದೆ.

4. ಆರೋಗ್ಯ ಹಾಗೂ ಗ್ರಾಮೀಣ ಕ್ಷೇತ್ರದಲ್ಲಿ ವಿಶೇಷ ಸ್ಕೀಮ್:

 • ಎಲ್ಲಾ ಜಿಲ್ಲೆಯಲ್ಲಿ ಸರ್ಕಾರಿ ಆಯುರ್ವೇದಿಕ್ ಹೋಮಿಯೋಪತಿ
 • ಬೆಳಗಾವಿ – ಖಾನಾಪುರದಲ್ಲಿ ತಾಯಿ ಮಕ್ಕಳ ಆಸ್ಪತ್ರೆ
 • ಹುಬ್ಬಳ್ಳಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ
 • 10 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗುವ ಆಶಾ ಕಾರ್ಯಕರ್ತೆಯರಿಗೆ 50,000 ಪರಿಹಾರ
 • ಎಲ್ಲಾ ಜಿಲ್ಲೆಗಳಲ್ಲಿರುವ ಔಷದಿ ಅಂಗಡಿಗ ಗಳಿಗೆ ಸ್ವಂತ ಕಟ್ಟಡ ಭಾಗ್ಯ
 • ಶಿವಮೊಗ್ಗದಲ್ಲಿ ಮಂಗನ ಕಾಯಿಲೆ ತಡೆಗಟ್ಟಲು ಸಂಶೋಧನಾ ಕೇಂದ್ರ

5. ತೋಟಗಾರಿಕೆಗೆ 150 ಕೋಟಿ ಪ್ಯಾಕೇಜ್:

 • ಕೃಷಿ ತೋಟಗಾರಿಕೆ, ರೇಷ್ಮೆ, ದಾಳಿಂಬೆ, ದ್ರಾಕ್ಷಿ ಬೆಳೆಯುವ ರೈತರಿಗೆ ರೂ. 150 ಕೋಟಿ ಮೀಸಲು.
 • ಹೊಸ ಬೆಳೆ ವಿಮೆ ಯೋಜನೆಗೆ ನಿರ್ಧರಿಸಲಾಗಿದೆ. ತೋಟಗಾರಿಕೆಗೆ 150 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್. ಧಾರವಾಡದಲ್ಲಿ ಮಾವು ಉತ್ಪಾದನಾ ಘಟಕ ಹಾಗು ಕೋಲಾರದಲ್ಲಿ ಟೊಮ್ಯಾಟೋ ಉತ್ಪಾದನಾ ಘಟಕ ನಿರ್ಮಿಸಲಾಗುವುದು.
 • ಹಾಲಿನ ಪ್ರೋತ್ಸಾಹ ಧನ, ಕ್ಷೇಮಾಭಿವೃದ್ಧಿಗೆ 2500 ಕೋಟಿ
 • ಹಾಲಿನ ಪ್ರೋತ್ಸಾಹ ಧನ ರೂ. 1 ಹೆಚ್ಚಳ. ಈಗಾಗಲೆ ೫ ರೂಪಾಯಿ ನೀಡಲಾಗುತ್ತಿದೆ.
 • ಒಟ್ಟು ಹಾಲು ಉತ್ಪಾದನಾ ಪ್ರೋತ್ಸಾಹ ಧನ 6 ಆಗುತ್ತದೆ. ಜೊತೆಗೆ ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿಗಾಗಿ ಸರ್ಕಾರ 2500 ಕೋಟಿ ಮೀಸಲು.

6. ಉದ್ಯೋಗ ಸೃಷ್ಟಿ:

ಕರ್ನಾಟಕ ರಾಜ್ಯದ ಅಬಿವೃದ್ಧಿಗೆ ಬಗ್ಗೆ ಮೈತ್ರಿ ಸರ್ಕಾರದ ಗುರಿ ಸ್ಪಷ್ಟವಾಗಿದೆ. ಉದ್ಯೋಗ ಸೃಷ್ಟಿ, ನಗರಾಭಿವೃದ್ಧಿ ಹಾಗು ಗ್ರಾಮೀಣಾಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದಿದ್ದಾರೆ. ನಿರುದ್ಯೋಗಿಗಳಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲಾಗುವುದು.

7. ಮನೆ ಕಟ್ಟುವವರಿಗೆ ಪ್ರೋತ್ಸಾಹ ಧನ ಹೆಚ್ಚಳ:

 • ಈಗಿರುವ ₹1.20 -2 ಲಕ್ಷ ಹಣ 2.5 ಲಕ್ಷದವರೆಗೂ ಹೆಚ್ಚಳ
 • ಹಸುಗಳನ್ನು ಕಟ್ಟಿಕೊಳ್ಳಲು ಪಶು ಕುಟೀರ ಭಾಗ್ಯ
 • ಮುಜರಾಯಿ ದೇಗುಲಗಳ ಅಭಿವೃದ್ಧಿಗೆ ಹೆಚ್ಚು ಹಣ ನಿಗದಿ
 • ಮುಜರಾಯಿ ದೇವಸ್ಥಾನಗಳಲ್ಲಿ ಅರ್ಚಕರ ಸಹಾಯ ಧನ ಹೆಚ್ವಳ
 • ವರ್ಷಕ್ಕೆ 48,000 ರೂ ಹಣ 60,000ಕ್ಕೆ ಏರಿಕೆ.

8.ಇಸ್ರೇಲ್ ಮಾದರಿ ಕೃಷಿ:

ಕಳೆದ ಬಜೆಟ್ ನಲ್ಲಿ ಮಂಡಿಸಿರುವಂತೆ ಇಸ್ರೇಲ್ ಮಾದರಿಯ ತಂತ್ರಜ್ಞಾನ ಅನುಷ್ಠಾನಕ್ಕೆ ಹೆಚ್ಚಿನ ಅನುದಾನ ನೀಡಲಾಗುತ್ತದೆ. ಇದಕ್ಕಾಗಿ ರೈತರ ಜೊತೆಗೆ ಸಭೆ ನಡೆಸಿ ನಂತರ ಅನುಷ್ಠಾನ ಮಾಡಲಾಗುವುದು ಎಂದರು. ಮಳೆ ಆಶ್ರಯ ಇರದ ಜಿಲ್ಲೆಗಳಲ್ಲಿ ಇಸ್ರೇಲ್ ಮಾದರಿ ಕೃಷಿ ಅಳವಡಿಕೆಗೆ ಆಧ್ಯತೆ.

9. ಸರ್ಕಾರಿ ನೌಕರರಿಗೆ ಬಂಪರ್:

 • ಸರ್ಕಾರಿ ನೌಕರರಿಗಿರುವ ಅನುದಾನ ಹೆಚ್ಚಳ
 • ನಿವೃತ್ತ ವಯೋಮಿತಿ 60 ವರ್ಷದ ಬದಲು 65 ವರ್ಷಕ್ಕೆ
 • ಸರ್ಕಾರಿ ಸಿಬ್ಬಂದಿಗೆ 4ನೇ ಶನಿವಾರ ರಜೆ ಘೋಷಣೆ ಸಾಧ್ಯತೆ
 • ನೂತನ ಪಿಂಚಣಿ ಯೋಜನೆ ರದ್ದು ಮಾಡುವ ಸಾಧ್ಯತೆ
 • ಔರಾದ್ಕರ್ ವರದಿಯಂತೆ ಪೊಲೀಸರಿಗೆ ಸಮಾನ ವೇತನ ಘೋಷಣೆ.

10. ನೀರಾವರಿ ಯೋಜನೆಗೆ ೧೫೬೩ ಕೋಟಿ ಮೀಸಲು:

ರಾಜ್ಯದಲ್ಲಿ ನಿರಾವರಿ ಯೊಜನೆಗಾಗಿ ರೂ. ೧೫೬೩ ಕೋಟಿ ಮೀಸಲು. ಬಾದಾಮಿಯಲ್ಲಿ ೩೦೦ ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆ. ಕೆರೆ ತುಮಬಿಸುವ ಯೋಜನೆಗೆ ೧೬೦೦ ಕೋಟಿ ಮೀಸಲು.

11. ಶ್ರೀ ಸಿದ್ಧಗಂಗಾ ಶ್ರೀಗಳ ಹುಟ್ಟೂರಿಗೆ ಕಾಣಿಕೆ:

ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಹುಟ್ಟೂರಾದ ಬಾಣಂದೂರಿನ ಅಭಿವೃದ್ಧಿಗೆ ರೂ. 25 ಕೋಟಿ. ಶ್ರೀ ಸಿದ್ಧಗಂಗಾ ಶ್ರೀಗಳ ಹುಟ್ಟೂರು ವಿರಾಪುರದಲ್ಲಿ ಪಾರಂಪರಿಕ ಕೇಂದ್ರ ಸ್ಥಾಪನೆ ಮಾಡಲಾಗುವುದು. ಹಾಸನ ಜಿಲ್ಲೆಯಲ್ಲಿ ನೂತನ ವಿಮಾನ ನಿಲ್ದಾಣ ನಿರ್ಮಾಣ.

12. ಮಾತೃಶ್ರೀ, ಸಂಧ್ಯಾ ಯೋಜನೆ:

ಮಾತೃಶ್ರೀ ಯೋಜನೆ ಮೂಲಕ ಗರ್ಭಿಣಿ ಮಹಿಳೆಯರಿಗೆ ಮಾಸಿಕ 6 ಸಾವಿರ ರೂಪಾಯಿ ನೀಡಲಾಗುವುದು. ಸಂಧ್ಯಾ ಸುರಕ್ಷಾ ಪಿಂಚಣಿಯನ್ನು ರೂ. 600 ರಿಂದ 1000 ರೂಪಾಯಿಗೆ ಏರಿಕೆ ಮಾಡಲಾಗುವುದು.

13. ಮೀನುಗಾರರಿಗೆ ಬಂಪರ್:

ಮೀನುಗಾರರ ಪ್ರೋತ್ಸಾಹಕ್ಕಾಗಿ ಮೀನುಗಾರಿಕೆ ಮಾಡುವವರ ದೋಣಿಗಳಿಗೆ ಶೇ. 50ರಷ್ಟು ಸಹಾಯಧನ ನೀಡಲಾಗುವುದು. ಸಿಗಡಿ ಮೀನು ಕೃಷಿ ಪ್ರೋತ್ಸಾಹಕ್ಕೆ ಶೇ. 50ರಷ್ಟು ಅನುದಾನ ನೀಡಲಾಗುವುದು.

14. ಪಶು ಚಿಕಿತ್ಸೆ ಕೇಂದ್ರ, ನಾಟಿ ಕೋಳಿ ಸಾಕಾಣಿಕೆಗೆ:

ಜಿಲ್ಲೆಗಳಿಗೆ ಸುಸಜ್ಜಿತ ಪಶು ಚಿಕಿತ್ಸೆ ಕೇಂದ್ರ ಸ್ಥಾಪನೆ. ನಾಟಿ ಕೋಳಿ ಸಾಕಾಣಿಕೆಗೆ ರು. 5 ಕೋಟಿ ಮೀಸಲು. ಬಿಯರ್ ಮೇಲಿನ ಅಬಕಾರಿ ಸುಂಕ ಹೆಚ್ಚಳ. ಬೆಂಗಳೂರು, ಮೈಸೂರು, ಬೆಳಗಾವಿಯಲ್ಲಿ ಕಲಬುರಗಿಯಲ್ಲಿ ಭಾಷಾ ಕೌಶಲ್ಯ ಕೇಂದ್ರಗಲ ಸ್ಥಾಪನೆ. ಅಡಮಾನ ಸಾಲದ ಮೇಲೆ ಬಡ್ಡಿ ಸಹಾಯಧನ.

15. 4 ಹೊಸ ತಾಲೂಕು ಘೋಷಣೆ:

ಹಾರೋಹಳ್ಳಿ, ಕಳಸ, ಚೇಳೂರು, ತೇರದಾಳ

16. ಗೃಹಲಕ್ಷ್ಮೀ ಬೆಳೆ ಸಾಲ

ಗೃಹಲಕ್ಷ್ಮೀ ಬೆಳೆ ಸಾಲ ಯೋಜನೆ ಜಾರಿ ಮಾಡಲಾಗುವುದು. ಆಭರಣಗಳ ಮೇಲೆ ಬೆಳೆ ಸಾಲ ನೀಡಲಾಗುವುದು. ರೈತ ಮಹಿಳೆಯರ ಚಿನ್ನದ ಮೇಲೆ ಶೇ. 3ರಷ್ಟು ಬಡ್ಡಿದರದಲ್ಲಿ ಸಾಲ ನೀಡಲಾಗುವುದು. 500 ಸಂಯುಕ್ತ ಸಹಕಾರ ಸಂಘ ಸ್ಥಾಪನೆಗೆ 5 ಕೋಟಿ ರೂಪಾಯಿ ಅನುದಾನ ಮೀಸಲು.