ನಾಗರಹಾವು ನಾಗರಹಾವನ್ನೇ ನುಂಗಿದ ಅಪರೂಪದ ಘಟನೆ ಎಲ್ಲಿ ಅಂತೀರಾ ಇಲ್ಲಿ ನೋಡಿ..!

0
778

ಹೌದು ಹಾವು ಬೇರೆ ಪ್ರಾಣಿಗಳನ್ನು ನುಂಗುವುದು ಅಥವಾ ತಿನ್ನುವುದು ಸಹಜ ಆದ್ರೆ ಈ ನಾಗರಹಾವು ಮತ್ತೊಂದು ನಾಗರಹಾವನ್ನು ನುಂಗಿದೆ. ಇಂತಹ ಘಟನೆಗಳು ತುಂಬ ಅಪರೂಪ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಅಡಗೂರು ಗ್ರಾಮದಲ್ಲಿ ನಾಗರಹಾವೊಂದು ಮತ್ತೊಂದು ನಾಗರಹಾವನ್ನು ನುಂಗುವ ಮೂಲಕ ಬಾರಿ ಸುದ್ದಿಯಾಗಿದೆ.

ಗುರುವಾರ ರಾತ್ರಿ ಗ್ರಾಮದ ಕಾಂತರಾಜು ಅವರ ದನದ ಕೊಟ್ಟಿಗೆಗೆ ನಾಗರಹಾವೊಂದು ಬಂದಿದೆ. ಇದೇ ವೇಳೆ ಇನ್ನೊಂದು ನಾಗರಹಾವು ಕೊಟ್ಟಿಗೆಯ ಮರದ ಕಂಬದ ಮೇಲೆ ಇತ್ತು. ಈ ಎರಡೂ ಹಾವು ಪರಸ್ಪರ ಮುಖಾಮುಖಿಯಾಯ್ತು.

ಮೇಲಿರುವ ಹಾವು, ಕೆಳಗಿರುವ ನಾಗರಹಾವನ್ನು ನುಂಗಿದೆ. ನಾಗರಹಾವಿನ ಬಾಯಲ್ಲಿ ಹೋದ ಇನ್ನೊಂದು ಹಾವು ಉಸಿರುಗಟ್ಟಿ ಸತ್ತುಹೋಗಿದೆ. ನಂತರ ತುಮಕೂರಿನ ಉರಗ ತಜ್ಞ ವಿಪಿನ್ ರಾಯ್ ಸ್ಥಳಕ್ಕೆ ಆಗಮಿಸಿ ಬದುಕಿದ್ದ ಹಾವನ್ನು ಹಿಡಿದು ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ.