ಅಮೆಜಾನ್-ನಲ್ಲಿ ತೆಂಗಿನ ಚಿಪ್ಪು ಮಾರಾಟಕ್ಕಿದೆ, ತೆಂಗಿನ ಚಿಪ್ಪಿಗೆ ಸಾವಿರಾರು ರುಪಾಯಿ ಬೆಲೆ ಕಂಡು ಶಾಕ್ ಆಗೋದಂತೂ ಗ್ಯಾರಂಟಿ!!

0
703

ಕಾಲಮಾನ ಚೇಂಜ್ ಆಗುತ್ತಿದೆ ಅಂತ ಎಲ್ಲರಿಗು ಗೊತ್ತಿದೆ ಆದರೆ ಯಾವ ರೀತಿಯಲ್ಲಿ ಆಗುತ್ತಿದೆ ಅಂತ ಯಾರಿಗೂ ಊಹಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಮಾರುಕಟೆಯಲ್ಲಿ ಯಾವ ವಸ್ತುಗಳಿಗೆ ಬೆಲೆ ಹೆಚ್ಚಾಗುತ್ತೆ ಅಂತ ತಿಳಿಯಲು ಸಾದ್ಯವಾಗುತ್ತಿಲ್ಲ. ಏಕೆಂದರೆ ಆನ್ಲೈನ್ ಮಾರುಕಟೆ ಬಂದಾಗಿನಿಂದ ಕಸಕ್ಕೂ ಬೆಲೆಬಂದಿದೆ ಅಂತ ತಿಳಿದಿತ್ತು. ಹಾಗೆಯೇ ಸಗಣಿ ಕುಳ್ಳು ಹೀಗೆ ಅನೇಕ ರೀತಿಯ ವಸ್ತುಗಳು ಮಾರಾಟಕ್ಕೆ ಸಿಕ್ಕು ಜನರಿಗೆ ನಗೆ ತರಿಸಿತ್ತು. ಆದರೆ ಈಗ ತೆಂಗಿನ ಕಾಯಿ ಚಿಪ್ಪು ಆನ್ಲೈನ್ -ನಲ್ಲಿ ಮಾರಟವಾಗುತ್ತಿದೆ ಅದರ ಬೆಲೆ ಕೇಳಿದ ಎಲ್ಲರು ಬೆರಗಾಗಿದ್ದಾರೆ.


Also read: ಅತ್ಯಾಚಾರ ತಡೆಯಲು ಹೊಸ ಡಿವೈಸ್; ಇದನ್ನು ಅಳವಡಿಸಿಕೊಂಡರೆ ಮಹಿಳೆಯರಿಗೆ ಕಾಮುಕರಿಂದ ಯಾವುದೇ ತೊಂದರೆ ಆಗುವುದಿಲ್ಲವಂತೆ..

ಹೌದು ಕಸವೆಂದು ಬಿಸಾಕುವ ಚಿಪ್ಪು ಸುಮಾರು 2 ಸಾವಿರದಿಂದ 3 ಸಾವಿರದವರೆಗೆ ಮಾರಾಟವಾಗುತ್ತಿದೆ. ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ ವ್ಯಂಗ್ಯವಾಡುವ ಒಂದು ಚಿಪ್ಪಿನ ಬೆಲೆ ಇಷ್ಟೊಂದು ಅಂದ್ರೆ ಯಾರಿಗೆ ತಾನೇ ಆಶರ್ಯವಾಗುದಿಲ್ಲ ಹೇಳಿ? ಏಕೆಂದರೆ ಸಾಮಾನ್ಯವಾಗಿ ತೆಂಗಿನ ಕಾಯಿ ಸುಲಿದು, ತುರಿದ ಬಳಿಕ ಉಳಿದ ಚಿಪ್ಪು ನಿರುಪಯುಕ್ತ ಎಂದು ಕಸದ ಬುಟ್ಟಿಗೆ ಎಸೆಯುವವರು ಹಲವರಿದ್ದಾರೆ. ಇನ್ನು ಹಳ್ಳಿಗಳಲ್ಲಿ ಬಿಸಿ ನೀರು ಕಾಯಿಸಿಕೊಳ್ಳಲು ದಾಸ್ತಾನಿರಿಸುತ್ತಾರೆ. ಇನ್ನು ಕಲಾವಿದರಾದರೆ ಇದರಿಂದ ವಿವಿಧ ಕಲಾಕೃತಿಗಳನ್ನು ನಿರ್ಮಿಸುತ್ತಾರೆ. ಆದರೀಗ ನಾವು ಇದರಿಂದ ಯಾವ ಲಾಭವೂ ಇಲ್ಲ ಎಂಬ ತೆಂಗಿನ ಕಾಯಿ ಚಿಪ್ಪನ್ನು ಪ್ರಸಿದ್ಧ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್ ಆಮೆಜಾನ್‌ನಲ್ಲಿ ಮಾರಾಟಕ್ಕಿಟ್ಟಿದ್ದಾರೆ. ಇದರಲ್ಲೇನು ಅಚ್ಚರಿ ಇಲ್ಲದಿದ್ದರೂ, ಒಂದು ಚಿಪ್ಪಿನ ಬೆಲೆ ಮಾತ್ರ ಗ್ರಾಹಕರ ನಿದ್ದೆಗೆಡಿಸಿದೆ.


Also read: 12 ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ UPSC ಮೂಲಕ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಇದು ನಿಜವಾದ, ಸತ್ಯವಾದ ತೆಂಗಿನ ಕಾಯಿ. ಹೀಗಾಗಿ ಅದರಲ್ಲಿ ಬಿರುಕು, ಬಾಗಿದ ಮತ್ತು ಇತರ ಓರೆಕೋರೆ ಇರಬಹುದು’ ಎಂದು ಮಾರಾಟಕ್ಕೆ ಇರಿಸಲಾಗಿರುವ ಚಿಪ್ಪಿನ ಬಗ್ಗೆ ವಿವರಣೆ ನೀಡಲಾಗಿದೆ.ಸುಶಾನ್‌ ಪೂಜಾರಿ ಎಂಬುವರು ಟ್ವೀಟ್‌ ಮಾಡಿ “ತೆಂಗಿನ ಚಿಪ್ಪಿನ ಮೇಲೆ ಶೇ.65ರಷ್ಟು ಡಿಸ್ಕೌಂಟ್‌ ನೀಡಿ ಶ್ರೀಮಂತನಾಗುವೆ. ಬಳಿಕ ವೆಬ್‌ಸೈಟ್‌ ಅನ್ನು ಖರೀದಿಸುವೆನೋ ಎಂದು ತಿಳಿದುಕೊಳ್ಳುತ್ತೇನೆ’ ಎಂದು ಬರೆದು ಕೊಂಡಿದ್ದಾರೆ. ಕುತೂಹಲಕರ ವಿಚಾರವೆಂದರೆ ಅಮೆಜಾನ್‌ನಿಂದ ಅದನ್ನು ಖರೀದಿ ಮಾಡಿದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೋರೂಮ್‌ಗಳಲ್ಲಿ ಹೋದರೆ ಅದಕ್ಕೆ 3 ಸಾವಿರ ರೂ. ನೀಡಬೇಕು. ವೆಬ್‌ಸೈಟ್‌ನಲ್ಲಿ ಕಡಿಮೆಯಲ್ಲಿ ಸಿಕ್ಕಿದೆ ಎಂದು ಹೇಳಿ ಕೊಂಡಿದ್ದಾರೆ.


Also read: ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಜನವರಿ 15 ಉಚಿತ ಸ್ಟಂಟ್‌ ಅಳವಡಿಸಲಾಗುವುದು..!! ಸಾಧ್ಯವಾದಷ್ಟು ಬಡಜನರಿಗೆ ಈ ಸುದ್ದಿಯನ್ನು ತಲುಪಿಸಿ!!

ಇನ್ನು ಇದಕ್ಕೆ ಕೆಲವರು ರಿವ್ಯೂ ಮಾಡಿ, ರೇಟಿಂಗ್ ಕೂಡ ನೀಡಿ ಅಮೆಜಾನ್ ತಾಣದ ಕಾಲೆಳೆದಿದ್ದಾರೆ. ‘ಇದು ತೋರಿಸಿದ ಗಾತ್ರದಷ್ಟು ದೊಡ್ಡದಾಗಿಲ್ಲ, ಚಿಕ್ಕದಾಯಿತು’ ಅಂತ ಕೊರಗಿ ಒಬ್ಬರು ಕಮೆಂಟ್ ಮಾಡಿದ್ದರೆ, ಮತ್ತೊಬ್ಬರು, ‘ಈ ಬೆಲೆಗೆ ಅರ್ಧ ತೆಂಗಿನ ಕಾಯಿಯ ಚಿಪ್ಪು ನೀಡುವ ಬದಲು, ಎರಡು ಚಿಪ್ಪುಗಳನ್ನು (ಇಡೀ ಕಾಯಿಯದ್ದು)ನೀಡಿದರೆ ಒಳ್ಳೇದಿತ್ತು ಅಂತ ಕಿಚಾಯಿಸಿದ್ದಾರೆ. ಮತ್ತು ಈ ಕೆಲಸಕ್ಕೆ ಬಾರದ ಚಿಪ್ಪುಗಳನ್ನು ಯಾರು ಖರೀದಿ ಮಾಡುತ್ತಾರೋ, ಅವರನ್ನು ನೋಡಿದ್ರೆ ಪಾಪ ಅನಿಸ್ತಿದೆ ಎಂದು ಒಬ್ಬರು ಬರೆದಿದ್ದರೆ, 15 ರೂಪಾಯಿ ಕೊಟ್ಟರೆ ಇಡೀ ತೆಂಗಿನಕಾಯಿಯೇ ಸಿಗುತ್ತದೆ. ನಿಮ್ಮಲ್ಲಿ ಹಣ ಜಾಸ್ತಿ ಇದೆಯೆಂದಾದರೆ ಹೋಗಿ ಬಡವರಿಗೆ ಹಂಚಿಬಿಡಿ ಅಂತನೂ ಇನ್ನೊಬ್ಬರು ಬಿಟ್ಟಿ ಸಲಹೆ ಕೊಟ್ಟಿದ್ದಾರೆ. ಹೀಗೆ ತೆಂಗಿನಕಾಯಿ ಚಿಪ್ಪು ದೇಶದೆಲ್ಲಡೆ ತನ್ನದೇ ಆದ ಹವಾ ಸೃಷ್ಟಿ ಮಾಡಿದೆ.