ದೇಶದ ಪ್ರಸಿದ್ಧ ಸಾಫ್ಟ್​ವೇರ್ ಕಂಪನಿ HCL’ ಶೀಘ್ರದಲ್ಲೇ 30 ಸಾವಿರ ಉದ್ಯೋಗ ನಿಡುವ ಬರವಸೆ..

0
437

ಭಾರತದ ಟಾಪ್ 10 ಕಂಪೆನಿಗಳಲ್ಲಿ ಒಂದಾದ HCL ಕಂಪನಿ 2018-19ರ ಸಾಲಿನಲ್ಲಿ, ಕಂಪನಿಗೆ ಅಗತ್ಯವಿರುವ ಸಾವಿರಾರು ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದ್ದು, ಅನುಭವವಿರುವ ಮತ್ತು ಫ್ರೆಷರ್ಸ್ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಎಚ್‌ಸಿಎಲ್ ತಿಳಿಸಿದೆ. ಇತ್ತೀಚೆಗೆ ಕ್ಯಾಂಪಸ್ ಇಂಟರ್​ವ್ಯೂ ನಡೆಸಿದ್ದ HCL ಕಂಪನಿ 28 ಸಾವಿರ ಹೊಸ ಉದ್ಯೋಗಿಗಳನ್ನು ನೇಮಕ ಮಾಡುವುದಾಗಿ ತಿಳಿಸಿತ್ತು. ಕಂಪನಿಯು ತಂತ್ರಜ್ಞಾನ ಹೊರಗುತ್ತಿಗೆ ಹಾಗೂ ಐಟಿ ಸೇವೆಗಳನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲು ಮುಂದಾಗಿದ್ದು, ಇದರಿಂದಾಗಿ ಹೊಸ ಉದ್ಯೋಗಗಳು ಸೃಷ್ಟಿಯಾಗಿದೆ ಎನ್ನಲಾಗಿದೆ.


Also read: ಪದವಿ ಮಾಡಿದವರಿಗೆ ಕೆನರಾ ಬ್ಯಾಂಕ್’ ನಲ್ಲಿ 800 ಪ್ರೊಬಷನರಿ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಕಂಪನಿಯು ಡಿಜಿಟಲ್ ಅಂಡ್ ಅನಾಲಿಟಿಕ್ಸ್, ಕ್ಲೌಡ್, ಐಓಟಿ, ಸೈಬರ್ ಸೆರ್ಕ್ಯೂ ರಿಟಿ ಸೇರಿದಂತೆ 17 ಹೊಸ ಒಪ್ಪಂದಗಳಿಗೆ ಸಹಿ ಹಾಕಿದ್ದು, ಇದರಿಂದ HCLನಲ್ಲಿ ಭಾರೀ ಉದ್ಯೋಗ ಸೃಷ್ಟಿಯಾಗಿದೆ ಎನ್ನಲಾಗಿದೆ. ಎಚ್‌ಸಿಎಲ್‌ ಸಂಸ್ಥೆ ಡಿಜಿಟಲ್‌& ಅನಾಲಿಟಿಕ್ಸ್‌, ಕ್ಲೌಡ್‌, ಐಒಟಿ, ಸೈಬರ್‌ಸೆಕ್ಯುರಿಟಿ ಮತ್ತು ಇತರ ಸೇವೆಗಳ ವಿಭಾಗಗಳಲ್ಲಿ ಗ್ರಾಹಕರನ್ನು ಹೊಂದಿದು. ಈಗಾಗಲೇ ಎಚ್‌ಸಿಎಲ್‌ ಟೆಕ್ನಾಲಜೀಸ್‌ ಸಂಸ್ಥೆಯಲ್ಲಿ 127875 ಉದ್ಯೋಗಿಗಳಿದ್ದು, ಜುಲೈ-ಸೆಪ್ಟೆಂಬರ್‌ನಲ್ಲಿ 3,754 ಮಂದಿ ಸೇರ್ಪಡೆಯಾಗಿ ಕೆಲಸದಲ್ಲಿದ್ದಾರೆ.

Also read: Nokia 6.1 ಪ್ಲಸ್’ 15.999 ರೂ. ಬೆಲೆಯುಳ್ಳ ಮೊಬೈಲ್; ಮೇಲೆ ಭರ್ಜರಿ ಆಫರ್; ಕೇವಲ ರೂ. 999 ಗೆ ಖರೀದಿಸಿ..

HCL ಟೆಕ್ನಾಲಜೀಸ್​​ನಲ್ಲಿ ಈಗಾಗಲೇ 1 ಲಕ್ಷಕ್ಕೂ ಅಧಿಕ ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಮೆರಿಕದಲ್ಲಿರುವ ಸಂಸ್ಥೆಯ 17 ಸಾವಿರ ಸಿಬ್ಬಂದಿಗಳಲ್ಲಿ ಶೇ. 64.7 ರಷ್ಟು ಮಂದಿ ಸ್ಥಳೀಯರಿದ್ದಾರೆ. ಡಾಲರ್ ಎದುರು ರೂಪಾಯಿ ಮೌಲ್ಯವು ಕುಸಿಯುತ್ತಿರುವುದರಿಂದ ಐಟಿ ವಲಯಕ್ಕೆ ಹೆಚ್ಚಿನ ಲಾಭವಾಗುತ್ತಿದ್ದು, ಇದರಿಂದ ಹೊರ ಗುತ್ತಿಗೆ ಸೇರಿದಂತೆ ಸೇವೆಯನ್ನು ವಿಸ್ತರಿಸಲು ಕಂಪನಿ ಮುಂದಾಗಿದೆ. ಏಕೆಂದರೆ ಡಾಲರ್ ಮೌಲ್ಯದ ಹೆಚ್ಚಳದಿಂದ ಐಟಿ ಕಂಪನಿಗಳ ಆದಾಯ ಕೂಡ ಅಧಿಕವಾಗಿದೆ ಎಂದು ಹೇಳಲಾಗಿದೆ.
20018-19 ರಲ್ಲಿ ಕಂಪನಿಯು 25 ರಿಂದ 30 ಸಾವಿರ ಸಿಬ್ಬಂದಿಗಳನ್ನು ಆಯ್ಕೆ ಮಾಡಿಕೊಳ್ಳಲಿದೆ. ಇದರಲ್ಲಿ ಅನುಭವಿ ಇಂಜಿನಿಯರ್ ಹಾಗೂ ಹೊಸಬರನ್ನು ನೇಮಕ ಮಾಡಲಾಗುವುದು ಎಂದು HCL ಎಚ್​ಆರ್​ ವಿಭಾಗದ ಮುಖ್ಯಸ್ಥ ಅಪ್ಪಾರಾವ್ ತಿಳಿಸಿದ್ದಾರೆ.


Also read: ಪುರಾಣಗಳ ಪ್ರಕಾರ ವಾಸ್ತುದೋಷ ಹೋಗಲಾಡಿಸಲು ಇದು ಒಂದು ಇದ್ರೆ ಸಾಕು, ವಾಸ್ತು ದೋಷ ಎಲ್ಲ ಮಾಯಾ ಆಗುತ್ತೆ..!

HCL ಕಂಪನಿ ಭಾರತೀಯ ಮೂಲದ ಸಾಫ್ಟ್ ವೇರ್ ಕಂಪನಿಯಾಗಿದ್ದು ಸ್ವಲ್ಪ ವರ್ಷಗಳ ಹಿಂದೆ ಅಮೆರಿಕದ ಮೈಕ್ರೋಸಾಫ್ಟ್ ಕಂಪನಿಯಿಂದ ಐದು ವರ್ಷಗಳ ಅವಧಿಯ ಸುಮಾರು 170 ಮಿಲಿಯನ್ ಡಾಲರ್ ಹಣದ ಐಟಿ ಸರ್ವೀಸ್ ಗುತ್ತಿಗೆಯನ್ನು ಪಡೆದುಕೊಂಡು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತ್ತು.
ಸದ್ಯ ಮೈಕ್ರೋಸಾಫ್ಟ್ ನ ಆನ್ ಲೈನ್ ಸರ್ವೀಸ್ ಬಿಜಿನೆಸ್ ಟೆಕ್ನಾಲಜಿ ಸರ್ವೀಸ್ ಎಚ್ ಸಿಎಲ್ ಕಂಪನಿ ಸೇವೆ ಒದಗಿಸುತ್ತಿದೆ. ಉಭಯ ಕಂಪನಿಗಳ ನಡುವೆ ಹೊಂದಿರುವ ಉತ್ತಮ ಬಾಂಧವ್ಯ ಹಾಗೂ ವಿಶ್ವಾಸದ ಹಿನ್ನೆಲೆಯಲ್ಲಿ ಎಚ್ ಸಿಎಲ್ ಗೆ ಕಂಪನಿಯ ನೂತನ 30 ಸಾವಿರ ಉದ್ಯೋಗಿಗಳನ್ನು ನೇಮಿಸಲು ಮುಂದಾಗಿದ್ದು, ಕಂಪನಿ ನೀಡಿದ ಭರವಸೆಯಂತೆ ನೇಮಕ ಮಾಡಿಕೊಂಡರೆ ಭಾರತದಲ್ಲಿ ದೊಡ್ಡ ಮಟ್ಟದ ಉದ್ಯೋಗ ನೀಡಿದ ಕಂಪನಿಯಾಗುತ್ತೆ.