ಹುಬ್ಬಳ್ಳಿ ಧಾರವಾಡದ ಛಬ್ಬಿ ಗ್ರಾಮದ ಕೆಂಪು ಗಣೇಶನ ಮೂರ್ತಿಯ ಮಹಿಮೆ ಬಗ್ಗೆ ಗೊತ್ತೇ…?

0
499

ಗಣೇಶ ಚತುರ್ಥಿ ಹಬ್ಬ ಬಂದೇ ಬಿಟ್ಟಿತು. ಸೆ.13ರಂದು ದೇಶದಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಆಚರಿಸಲಾಗುತ್ತದೆ. ಬಹುತೇಕರು ಮನೆಯಲ್ಲಿ ಪುಟ್ಟ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಹಾಗೂ ಮನೆಯಲ್ಲಿ ಪ್ರತಿಷ್ಠಾಪನೆ ಮಾಡದೆ ಇರುವವರು ದೇವಸ್ಥಾನದಲ್ಲಿ ಪ್ರತಿಷ್ಠಾಪನೆ ಮಾಡಿರುವ ಗಣೇಶನಲ್ಲಿಗೆ ಹೋಗಿ ಪೂಜೆ ಮಾಡಿಸುತ್ತಾರೆ. ಈ ಗಣೇಶೋತ್ಸವದಂದು ನಾವು ನಿಮಗೆ ವಿಶೇಷವಾದ ರೀತಿಯಲ್ಲಿ ಆಚರಿಸಲಾಗುವ ಗಣೇಶನ ಉತ್ಸವವನ್ನು ನಿಮಗೆ ತಿಳಿಸಿಕೊಡಲಿದ್ದೇವೆ.

Also read: ಮಾರುವೇಷದಲ್ಲಿ ಭಕ್ತರನ್ನ ಪರೀಕ್ಷಿಸುವ ಶ್ರೀ ಅಂಜನೇಯ ಬರುವ ಬಡೇ ಹನುಮಾನ್ ಜಿ ಮಂದಿರದ ವಿಸ್ಮಯದ ಸಂಗತಿಗಳು .

ಗಣೇಶ ಚತುರ್ಥಿಯಂದು ಇಲ್ಲಿನ ವೈಭವ ನೋಡಲು ಕಣ್ಣುಗಳೆರಡು ಸಾಲದು. ಈ ದಿನ ಇಲ್ಲಿನ ವಾತಾವರಣವೇ ವಿಭಿನ್ನವಾಗಿರುತ್ತದೆ. ಬಹಳ ವಿಶೇಷವಾಗಿ ಇಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅದು ಹುಬ್ಬಳಿ ತಾಲೂಕಿನ ಛಬ್ಬಿ ಗಣೇಶನ ಹಬ್ಬ. ಹುಬ್ಬಳ್ಳಿ- ಧಾರವಾಡ ಸುತ್ತಮುತ್ತಲಿನ ಜನತೆಗೆ ಭಕ್ತರ ಬೇಡಿಕೆ ಈಡೇರಿಸುವ ಜಾಗೃತ ದೇವರು ಎಂದೇ ಪ್ರಸಿದ್ಧಯನ್ನು ಹೊಂದಿದೆ. ಇಲ್ಲಿನ ವಿಶೇಷವಾದ ಗಣೇಶ್ ಮೂರ್ತಿಯನ್ನು ದೇವಸ್ಥಾನದಲ್ಲಿ ಪ್ರತಿಷ್ಟಾಪನೆ ಮಾಡಲಾಗುವುದಿಲ್ಲ. ಬದಲಿಗೆ ಈ ಗ್ರಾಮದ ಕುಲಕರ್ಣಿ ಮನೆತನದವರು ಮಾತ್ರ ಈ ವಿಗ್ರಹವನ್ನು ಅವರ ಮನೆಯಲ್ಲಿಯೇ ಪ್ರತಿಷ್ಟಾಪನೆಯನ್ನು ಮಾಡಲಾಗುತ್ತದೆ. ಗಣೇಶ ಚತುರ್ಥಿ ಸಂದರ್ಭದಲ್ಲಿ ಮೂರು ದಿನಗಳ ಕಾಲ ಈ ಗಣೇಶನನ್ನು ತಲೆತಲಾಂತರದಿಂದ ಈ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಾರೆ.

Also read: ಧಾರ್ಮಿಕ ಹಿನ್ನೆಲೆಯನ್ನು ಹೊಂದಿದ ಉಜ್ಜಿರೆ ‘ಸೂರ್ಯ ದೇವಸ್ಥಾನ’ದ ವಿಶಿಷ್ಟ ಧಾರ್ಮಿಕ ಆಚರಣೆ ಹಿನ್ನಲೆಯ ಬಗ್ಗೆ ತಿಳಿದುಕೊಳ್ಳಿ

ಇಲ್ಲಿ ಪ್ರತಿಷ್ಠಾಪಿಸುವ ಗಣೇಶನ ಮೂರ್ತಿಯು ಕೆಂಪು ಬಣ್ಣದ್ದಾಗಿರುವುದು ವಿಶೇಷ. ಕೆಂಪು ಗಣಪತಿಯ ವಿಶೇಷವೇನೆಂದರೆ, ಬಲಗೈಯಲ್ಲಿ ಮುರಿದ ದಂತ, ಎಡಗೈಯಲ್ಲಿ ಈಶ್ವರ್‌ ಲಿಂಗು ಹಾಗೂ ಉಳಿದೆರಡು ಕೈಗಳಲ್ಲಿ ಆಯುಧಗಳನ್ನು ಹೊಂದಿರುತ್ತಾನೆ. ಇಂತಹ ಗಣಪತಿಯನ್ನು ಮೈಸೂರು ಹಾಗೂ ಇಂದೋರಿನ ಅರಮನೆಗಳಲ್ಲಿ ಮಾತ್ರ ಕಾಣಬಹುದು.

Also read: ಸಂತಾನ ಅಪೇಕ್ಷೆ ಹಾಗು ದೃಷ್ಟಿ ದೋಷವಿರುವವರು ಈ ಸೂರ್ಯ ದೇವಸ್ಥಾನಕ್ಕೆ ಭೇಟಿ ಕೊಟ್ಟರೆ ತಮ್ಮ ಕಷ್ಟಗಳೆಲ್ಲವೂ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ…!!

ಇಲ್ಲಿನ ಗಣೇಶನ ದರ್ಶನ ಮಾಡಿ ಆತನೆದುರು ತಲೆಬಾಗಿದರೆ ಇಷ್ಟಾರ್ಥ ನೆರವೇರಿಸುತ್ತಾನೆ ಎಂಬುದರ ಬಗ್ಗೆ ಅನೇಕ ಉದಾಹರಣೆಗಳು ಇಲ್ಲಿ ಸಿಗುತ್ತವೆ. ಮದುವೆಯಾಗದವರಿಗೆ ಕಂಕಣ ಭಾಗ್ಯ, ಮಕ್ಕಳಗಾದವರಿಗೆ ಸಂತಾನ ಭಾಗ್ಯ, ಹೀಗೆ ಬೇಡಿದವರಿಗೆ ಬೇಡಿದ ವರ ನೀಡುವ ಛಬ್ಬಿ ಗಣೇಶ ತನ್ನದೇ ಆದ ವಿಶಿಷ್ಠತೆಯಿಂದ ಭಕ್ತರ ಮನದಲ್ಲಿ ನೆಲೆಸಿದ್ದಾನೆ. ಪ್ರತಿ ವರ್ಷ ಮೂರು ದಿನಗಳ ಅವಧಿಯಲ್ಲಿ ಸುಮಾರು 2 ಲಕ್ಷಕ್ಕೂ ಅಧಿಕ ಭಕ್ತರು ಇಲ್ಲಿಗೆ ಆಗಮಿಸಿ ಗಣಪತಿ ದರ್ಶನ ಪಡೆಯುತ್ತಾರೆ.

ಇಲ್ಲಿಗೆ ಹೋಗುವುದು ಹೇಗೆ:

ಹುಬ್ಬಳ್ಳಿಯಿಂದ 20 ಕಿ.ಮೀ. ದೂರದಲ್ಲಿರುವ ಛಬ್ಬಿ ಗ್ರಾಮ. ಯಾತ್ರಿಕರಿಗೆ ಹುಬ್ಬಳ್ಳಿ ನಗರದಿಂದ ಅನೇಕ ಬಸ್ ಸಂಪರ್ಕವಿದೆ.