ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ ಚಿತ್ರದ ಮೊದಲ ಪೋಸ್ಟರ್​ ಬಿಡುಗಡೆ; ಚಿತ್ರದ ಮೋದಿ ನೋಡಿ ದೇಶವೆ confused..

0
540

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜೀವನ ಚರಿತ್ರೆ ಬೆಳ್ಳಿತೆರೆಯ ಮೇಲೆ ಬರುತ್ತಿದೆ ಅಂತ ತಿಳಿದ ದೇಶದ ಜನರು ಮತ್ತು ಮೋದಿ ಫ್ಯಾನ್ಸ್ ಹಲವು ವಿಚಾರಕ್ಕೆ ಒಳಗಾಗಿದ್ದರು ಏಕೆಂದರೆ ಇಡಿ ಪ್ರಪಂಚವೇ ಮೆಚ್ಚುವ ಪ್ರಧಾನಿ ಮೋದಿಯವರ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ, ಮತ್ತು ಈ ಚಿತ್ರ ಯಾವಾಗೆ ಸೆಟ್ಟೇರಲಿದೆ ಎಂದು ಹಲವು ವಿಚಾರಕ್ಕೆ ಒಳಗಾಗಿದ್ದರು. ಈಗ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು. ಮೋದಿ ಪಾತ್ರದಲ್ಲಿ ಕಾಣುತ್ತಿರುವ ವಿವೇಕ್​ ಒಬೆರಾಯ್​ ಅವರನ್ನು ನೋಡಿ ಇವರು ನರೇಂದ್ರ ಮೋದಿಯವರ ಇಲ್ಲ ವಿವೇಕ್ ಅಂತ ಗೊಂದಲಕ್ಕೆ ಒಳಗಾಗಿದ್ದಾರೆ.

ಹೌದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜೀವನಚರಿತ್ರೆಯ ಸಿನಿಮಾ ಬರುವ ವಿಷಯ ದೇಶದೆಲ್ಲಡೆ ಸುದ್ದಿ ಮಾಡಿದೆ. ಓಮುಂಗ್ ಕುಮಾರ್ ಅವರ ನಿರ್ದೇಶನದಲ್ಲಿ ಬರುತ್ತಿರುವ ಈ ಚಿತ್ರಕ್ಕೆ ಇನ್ನು ಹೆಸರು ಫೈನಲ್ ಆಗಿಲ್ಲ, ಇನ್ನು ಮೋದಿ ಪಾತ್ರದಲ್ಲಿ ಕರ್ನಾಟಕದ ಅಳಿಯ ವಿವೇಕ್ ಪಾತ್ರವನ್ನು ಪ್ರಚೋದಿಸಲು ಸಿದ್ಧರಾಗಿದ್ದಾರೆ. ಮತ್ತು ಸುರೇಶ್ ಒಬೆರಾಯ್ ಮತ್ತು ಸಂದೀಪ್ ಸಸಿಂಗ್ ಅವರು ನಿರ್ಮಾಣ ಮಾಡಲಿದ್ದಾರೆ. ಇನ್ನು ಮೊದಲ ಪೋಸ್ಟರ್ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ 23 ಭಾಷೆಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಪೋಸ್ಟರ್ ಅಲ್ಲಿ ವಿವೇಕ್ ಮೋದಿಯವರಂತೆ ಕಾಣುತ್ತಿರುವುದು ಎಲ್ಲರಿಂದ ಮೆಚ್ಚುಗೆ ಪಡೆದಿದೆ.

ಮೋದಿ ಪಾತ್ರದಲ್ಲಿ ವಿವೇಕ್;

ಈ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗುತ್ತಿದ್ದಂತೆ ವಿವೇಕ್ ಅವರು ಮಾತನಾಡಿ ನಾನು ಮೋದಿಯವರ ಫ್ಯಾನ್, ಈಗ ನನಗೆ ಮೋದಿಯವರ ಪಾತ್ರ ಮಾಡುತ್ತಿರುವುದು ಜೀವನದ ಸಾಧನೆಯಾಗಿದೆ. ಅಷ್ಟೊಂದು ದೊಡ್ಡ ವ್ಯಕ್ತಿಯವರ ಪಾತ್ರವನ್ನು ನಿರ್ವಹಿಸುತ್ತಿರುವುದು ನನ್ನ ಸೌಭಾಗ್ಯವಾಗಿದೆ. ನಾನು ನಿಜವಾಗಿವೂ ಅದೃಷ್ಟವಂತ. ಏಕೆಂದರೆ ವಿಶ್ವದ ಅತಿ ಎತ್ತರದ ನಾಯಕರಲ್ಲಿ ನರೇಂದ್ರ ಭಾಯಿ ಒಬ್ಬರು ಮತ್ತು ಅವರ ವೈಯಕ್ತಿಕ ಗುಣಗಳನ್ನು ಪರದೆಯ ಮೇಲೆ ತರಲು ನಂಬಲಾಗದ ಸವಾಲಾಗಿದೆ. ಈ ಅದ್ಭುತ ಸಿನಿಮಾವನ್ನು ಚಿತ್ರಿಸಲು ದೇಶದ ಎಲ್ಲರ ಆಶೀರ್ವಾದ ಬೇಕಿದೆ. ಮೋದಿಯವರ ಪಾತ್ರ ಮಾಡಿ ನಾನು ಅವರ ವ್ಯಕ್ತಿತ್ವವನ್ನು ಇಡಿ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇನೆ. ಈ ಪಾತ್ರ ನನ್ನ ಜೀವನವನ್ನೇ ಬದಲಾವಣೆ ಮಾಡಲಿದೆ ಎಂದು ತಮ್ಮ ಅನಿಸಿಕೆಗಳನ್ನು ಹೊರಹಾಕಿದ್ದಾರೆ.

ದೇಶದ ಜನರಿಗೆ ಸ್ಪೂರ್ತಿ ನೀಡುವ ಸಿನಿಮಾ;

ಸಾಮಾನ್ಯ ರೈಲ್ವೆ ನಿಲ್ದಾಣದಲ್ಲಿ ಟೀ ಮಾರಿ ಹೇಗೆ ದೇಶದ ಪ್ರಧಾನಿಯಾದರು ಎಂಬ ಕಥಾ ಹಂದರ ಒಳಗೊಂಡ ಚಿತ್ರ ಎಂದಾಕ್ಷಣ ಜನರಲ್ಲಿ ಆದಾಗಲೇ ಕುತೂಹಲ ಮನೆ ಮಾಡಿತ್ತು. ಮೋದಿ ಅವರ ಪಾತ್ರ ವಿವೇಕ್​ ಒಬೆರಾಯ್​ ಮಾಡಲಿದ್ದಾರೆ ಎಂದಾಕ್ಷಣ ಅನುಮಾನ ಕೂಡ ವ್ಯಕ್ತವಾಗಿತ್ತು. ಕಾರಣ ಚಿಕ್ಕ ವಯಸ್ಸಿನ ವಿವೇಕ್​, ಮೋದಿಯವರನ್ನು ಹೋಲುವುದು ಸಾಧ್ಯವಾ ಎಂಬ ಪ್ರಶ್ನೆ ಹುಟ್ಟಿಕೊಂಡಿತು. ಆದರೆ, ಇದೀಗ ಬಿಡುಗಡೆಯಾಗಿರುವ ಚಿತ್ರದ ಪೋಸ್ಟರ್​ ಈ ಸಂದೇಹವನ್ನು ಸುಳ್ಳು ಮಾಡಿವೆ. ಮತ್ತು ಮೋದಿಯವರ ಬಗ್ಗೆ ಅಪಾರ ನಂಬಿಕೆಯನ್ನು ಇಟ್ಟುಕೊಂಡಿದ ಜನರಿಗೆ ಅವರ ಸಂಪೂರ್ಣ ವ್ಯಕ್ತಿತ್ವ ಅರಿತು ಸ್ಪೂರ್ತಿಯಾಗಲಿದೆ. ಒಟ್ಟಾರೆಯಾಗಿ ಅನೇಕ ಕುತೊಹಲ ಮೂಡಿಸಿದ ಚಿತ್ರ ಯಾವ ರೀತಿಯಲ್ಲಿ ಮೋಡಿ ಬರುತ್ತೆ ಅಂತ ಕಾದು ನೋಡಬೇಕಿದೆ.

Also read: ಮೋದಿಗೆ ಮತ ಹಾಕಬೇಡಿ ಎಂದು ನರೇಂದ್ರ ಮೋದಿ ಪತ್ನಿ ಹೇಳಿರುವ ವೀಡಿಯೊ ವೈರಲ್, ಕಿಡಿಗೇಡಿಗಳು ಮಾಡಿರುವ ಈ ಸುಳ್ಳ ವೀಡಿಯೊವನ್ನು ನಂಬಬೇಡಿ!!