ಮುಂದಿನ ತಿಂಗಳೇ ಬಿಎಸ್​ವೈ ಅಧಿಕಾರ ಬಿಳ್ಳುತ್ತೆ; ಡಿಕೆಶಿ ಸಿಎಂ ಆಗುವುದು ಖಚಿತ? ಮೋದಿಗೆ ಕಾದಿದೆ ದೊಡ್ಡ ಗಂಡಾಂತರ. ಏನಿದು ಬ್ರಹ್ಮಾಂಡ ಭವಿಷ್ಯ??

0
319

ದೇಶದಲ್ಲಿ ದಿನಕ್ಕೊಂದು ರಾಜಕೀಯ ಬೆಳವಣಿಗೆಗಳು ಕಂಡು ಬರುತ್ತಿದ್ದು, ಯಾರು ರಾಜ್ಯದ ಸಿಎಂ ಆಗುತ್ತಾರೋ ಯಾವಾಗ ಸರ್ಕಾರ ಬಿಳ್ಳುತ್ತೋ ಎನ್ನುವ ಅನುಮಾನದಲ್ಲಿ ಸರ್ಕಾರ ನಡೆಯುತ್ತಿದೆ. ಅದರಲಿ ಕೇಂದ್ರ ಸರ್ಕಾರ ಕೂಡ ಜನರಿಗೆ ನೀಡಿದ ಭರವಸೆಯನ್ನು ಇಡೇರಿಸುವಲ್ಲಿ ವಿಫಲವಾಗುತ್ತಿರುವುದು ಮೋದಿ ಮೇಲೆ ಜನರು ನಂಬಿಕೆ ಕಳೆದು ಕೊಳ್ಳಲು ಮುಖ್ಯ ಕಾರಣವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಎಲ್ಲ ವಿಚಾರಗಳ ನಡುವೆ ಪ್ರಧಾನಿ ನರೇಂದ್ರ ಮೋದಿಯವರಿಗೆ ನವೆಂಬರ್ 4 ರಿಂದ ಗಂಡಾಂತರ ಇದೆ. ಈ ಅವಧಿಯಲ್ಲಿ ಅಪಮೃತ್ಯು ಗಂಡಾಂತರದಿಂದ ಪಾರಾದರೆ ಇನ್ನೂ ಎರಡು ಮುಕ್ಕಾಲು ವರ್ಷ ಪ್ರಧಾನಿಯಾಗಿರುತ್ತಾರೆ. ಡಿ.ಕೆ.ಶಿವಕುಮಾರ್ ಕರ್ನಾಟಕದ ಮುಂದಿನ‌ ನೂತನ ಸಿಎಂ ಆಗಲಿದ್ದಾರೆ. ಎನ್ನುವ ಚರ್ಚೆ ಶುರುವಾಗಿದೆ.

ಹೌದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದು ಭಾರಿ ವಿಚಿತ್ರವಾದ ಮಾತುಗಳನ್ನು ಆಡಿದ್ದಾರೆ. ಎರಡನೇ ಬಾರಿ ದೇಶದ ಅಧಿಕಾರ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿಗೆ ದೊಡ್ಡ ಕಂಟಕ ಎದುರಾಗಲಿದೆ. ಇದೇ ನವೆಂಬರ್​ 4ರಿಂದ ಸಂಕ್ರಾಂತಿವರೆಗೆ ಮೋದಿಗೆ ಸಮಯ ಸರಿಯಿಲ್ಲ. ಅವರಿಗೆ ಕಷ್ಟ ಎದುರಾಗಲಿದೆ ಎಂದು ಬ್ರಹ್ಮಾಂಡ ಗುರೂಜಿ ಭವಿಷ್ಯ ನುಡಿದಿದ್ದಾರೆ. ಮುಂದುವರಿದು ಹೇಳಿದ ಬ್ರಹ್ಮಾಂಡ ಗುರೂಜಿ, ರಾಜ್ಯದಲ್ಲಿ ಈ ಹಿಂದೆ ಇದ್ದವರು ಮತ್ತೆ ಯಾರೂ ಸಿಎಂ ಆಗಲ್ಲ. ಮತ್ತೆ ಹೊಸ ಸರ್ಕಾರ ಬಂದರೆ ಹೊಸಬರೇ ಮುಖ್ಯಮಂತ್ರಿ ಆಗುತ್ತಾರೆ. ಯಾವುದೇ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ ಎಂದ ಗುರೂಜಿ ಮುಂದೆ ಇನ್ನೂ ಪ್ರಕೃತಿ ವಿಕೋಪಗಳು ಆಗಲಿವೆ ಎಂದರು.
ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ

ನವೆಂಬರ್​ 4ರ ಬಳಿಕ ಎರಡು ದೊಡ್ಡ ಗ್ರಹಗಳು ಒಂದೆಡೆ ಸೇರಲಿವೆ. ರಾಜ್ಯದಲ್ಲಿ ಯಡಿಯೂರಪ್ಪ ಅವರಿಗೆ ಮುಂದಿನ ದಿನಗಳಲ್ಲಿ ಕಷ್ಟ ಎದುರಾಗಲಿದೆ. ಯಡಿಯೂರಪ್ಪ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಅವಧಿಯನ್ನು ಪೂರೈಸುವುದಿಲ್ಲ. ಅವರ ಬಳಿಕ ಹೊಸಬರು ರಾಜ್ಯದ ಸಿಎಂ ಆಗಿ ಅಧಿಕಾರ ಚುಕ್ಕಾಣಿ ಹಿಡಿಯಲಿದ್ದಾರೆ ಎಂದರು. ದಕ್ಷಿಣ ಭಾರತದಲ್ಲಿ ಕರ್ನಾಟಕದಿಂದ ಖಾತೆ ತೆರೆದಿರುವ ಬಿಜೆಪಿ ಮುಂದಿನ ದಿನಗಳಲ್ಲಿ ಇಲ್ಲಿ ಕೂಡ ಅಧಿಕಾರ ಕಳೆದುಕೊಳ್ಳಲಿದೆ. ದಕ್ಷಿಣ ಭಾರತದ ಯಾವುದೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ, ಅಧಿಕಾರದಲ್ಲಿದ್ದ ಯಾವೊಬ್ಬ ವ್ಯಕ್ತಿಯೂ ಮುಂದೆ ಅಧಿಕಾರಕ್ಕೆ ಬರುವುದಿಲ್ಲ. ಮತ್ತೆ ಹೊಸ ಸರ್ಕಾರ ಬಂದರೆ ಹೊಸಬರೇ ಸಿಎಂ ಆಗ್ತಾರೆ. ಯಾವುದೇ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲ್ಲ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ.

ಡಿಕೆಶಿ ಸಿಎಂ‌ ಆಗೋದು ಖಚಿತ:

ಯಡಿಯೂರಪ್ಪಗೆ ಪೂರ್ಣ ಅವಕಾಶ ಇಲ್ಲವೇ ಇಲ್ಲ. ಕೋಟಿ ಕೋಟಿ ಹಣ ಮಾಡಿದವರು ಕೃಷ್ಣ ಜನ್ಮಸ್ಥಳಕ್ಕೆ ಸೇರಲೇ‌ ಬೇಕು. ಮುಂದಿನ ಹತ್ತು ವರ್ಷದಲ್ಲಿ ಒಮ್ಮೆ ಡಿಕೆಶಿ ಸಿಎಂ‌ ಆಗೋದು ನಿಶ್ಚಿತ. ಹತ್ತು ವರ್ಷಗಳೊಳಗೆ ಒಮ್ಮೆಯಾದರೂ ಐದು ವರ್ಷಗಳ ಅವಧಿಗೆ ಡಿಕೆಶಿ ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಮುಂದೆ ಇನ್ನೂ ಹೆಚ್ಚಿನ ಪ್ರಕೃತಿ ವಿಕೋಪಗಳು ಆಗಲಿವೆ. ಅಲ್ಲದೆ ದೇಶದಲ್ಲಿ ಯುದ್ದದ ಭೀತಿ ಸಹ ಇದ್ದು ಇದನ್ನು ತಪ್ಪಿಸುವಲ್ಲಿ‌ ಮಹಿಳಾ‌ ಮಂತ್ರಿಯ ಪಾತ್ರ ಹೆಚ್ಚಿದೆ ಅವರು ಯುದ್ದವನ್ನು ತಡೆಯುತ್ತಾರೆ ಎಂದರು. ಜನರು ಎಚ್ಚರಿಕೆಯಿಂದ ಇರಬೇಕು ಎಂದೂ ಹೇಳಿದ್ದಾರೆ.