ಅಂದು ಕುರಿಕಾಯಿತ್ತಿದ ಹುಡುಗಿ ಇಂದು ಫ್ರಾನ್ಸ್​ ದೇಶದ ಶಿಕ್ಷಣ ಮಂತ್ರಿ; ಸಾಧನೆ ಮಾಡುವ ಮನಸ್ಸಿದ್ದರೆ ಒಂದು ಸಾರಿ ಈ ಕಥೆ ಓದಿ..

0
1430

ಮಹಿಳೆಯರಿಗೆ ಸಾಧನೆ ಮಾಡುವ ಗುರಿಯೊಂದಿದ್ದರೆ ಏನ್ ಬೇಕಾದರೂ ಸಾಧನೆ ಮಾಡಬಹುದು ಎನ್ನುವುದಕ್ಕೆ ಫ್ರಾನ್​ ದೇಶದ ಶಿಕ್ಷಣ ಮಂತ್ರಿ ನಜತ್ ಬೆಲ್ಕಾಸಮ್ ಅವರ ಸಾಧನೆ ನೋಡಿದರೆ ಆನೆಯಷ್ಟು ಆತ್ಮಬಲ ಬರುತ್ತೆ. ಹೌದು ಮಹಿಳೆ ಇಲ್ಲದೆ ಜಗತ್ತು ನಡೆಯದು! ಸತ್ಯಕ್ಕೆ ಹೆಣ್ಣು ಜೀವ ಕೊಡುವ ದೇವತೆ; ಮಗುವಾಗಿ, ಮಡದಿಯಾಗಿ, ತಾಯಿಯಾಗಿ ಮನುಷ್ಯ ಜೀವನಕ್ಕೆ ಅರ್ಥ ಸೂಚಿಸುವ ಹೆಣ್ಣು ಬರಿ ಸೇವೆಯಲ್ಲಿ ಪಾಲನೆಯಲ್ಲಿ ಅಷ್ಟೇ ಅಲ್ಲ, ದೇಶವಾಳುವುದರಿಂದ ಹಿಡಿದು ದೇಶ ರಕ್ಷಣೆಗಾಗಿ ಯುದ್ದಕ್ಕೆ ನಿಂತ ದೀರೆ ಮಹಿಳೆಯಾಗಿದ್ದಾಳೆ. ಇದೆಲ್ಲದಕ್ಕೆ ಒಂದು ನಿದರ್ಶನ “ಕುರಿಕಾಯಿತ್ತಿದ ಹುಡುಗಿ ಇಂದು ಶಿಕ್ಷಣ ಮಂತ್ರಿ” ಯಾದ ಸ್ಪೂರ್ತಿಯ ಕಥೆ ಇಲ್ಲಿದೆ ನೋಡಿ.


Also read: LIC ತಂದ ಹೊಸ ಪಾಲಿಸಿ’ ತಿಂಗಳಿಗೆ 420 ರೂ ಕಟ್ಟಿ 15 ಲಕ್ಷದವರೆಗೆ ವಿಮೆ ಪಡೆಯರಿ..

ಜೀವನ ಆಧಾರಕ್ಕಾಗಿ ಕುರಿಸಾಕುತ್ತಿದ ಬಡ ಮುಸ್ಲಿಂ ಕುಟುಂಬದಲ್ಲಿ 1977 ರಂದು ನಜತ್ (ಮೊರಾಕ್ಕೊದ ಎಂಬಲ್ಲಿ) ಜನಿಸಿದರು. ಬಡ ಕುಟುಂಬವಾದರಿಂದ ಶಾಲೆಯ ಮೆಟ್ಟಿಲೇರುವ ನಜತ್ ತನ್ನ ನಾಲ್ಕನೇ ವಯಸ್ಸಿಗೆ ಕುರಿಕಾಯಿವ ಕೆಲಸವನ್ನು ಪ್ರಾರಂಭಿಸಿದರು ಹೀಗೆ ನಜತ್ ಸುಮಾರು ವರ್ಷಗಳ ಕಾಲ ಇದೆ ಕೆಲಸದಲ್ಲಿ ನಿರತರಾಗುತ್ತಾರೆ. ನಜತ್ ಜನಿಸಿದ ಊರಿನಲ್ಲಿ ಕುಡಿಯಲು ನೀರು ಕೂಡ ಸಿಗುತ್ತಿರಲಿಲ್ಲ ನೀರಿಗಾಗಿ ಅದೆಷ್ಟೋ ಕಿಲೋಮಿಟರ ನಡೆದುಕೊಂಡು ಹೋಗಬೇಕಿತ್ತು. ಈ ಕೆಲಸವನ್ನು ಬಾಲ್ಯದಲ್ಲೇ ವಹಿಸಿಕೊಂಡಿದ್ದ ನಜತ್ ಜೀವನದಲ್ಲಿ ಹೋರಾಟ ಮಾಡುತ್ತಾನೆ ಬೆಳೆದರು. ನಂತರ ಕಾರಣಾಂತರಗಳಿಂದ 1982 ರಲ್ಲಿ ನಜತ್ ಕುಟುಂಬವು ಫ್ರಾನ್ಸ್​ಗೆ ವಲಸೆ ಬಂದರು. ಫ್ರಾನ್ಸ್ ದೇಶದಲ್ಲಿ ಪ್ರೆಂಚ್ ಭಾಷೆ ಇರುವುದರಿಂದ ನಜತ್ ಕುಟುಂಬಕ್ಕೆ ಜೀವನ ಸಾಗಿಸುವುದೇ ಕಷ್ಟವಾಯಿತು ಇದರಿಂದ ಫ್ರಾನ್ಸ್- ಸ್ಥಳಿಯರ ಜತೆಗೆ ಬೆರೆಯಲು ಆಗಲೆಯಿಲ್ಲ. ನಂತರ ನಜತ್ ಕುಟುಂಬವು ಫ್ರಾನ್ಸ್​ನ ಚಿಕಾರ್ ಗ್ರಾಮದಲ್ಲಿ ವಾಸಿಸಲು ನಿರ್ಧಾರ ಮಾಡಿ ಅಲ್ಲಿವು ಕೂಡ ಕುರಿ ಮೇಯಿಸುವುದನ್ನೇ ಮುಂದುವರೆಸಿದರು.


Also read: ಪದವಿ ಮಾಡಿದವರಿಗೆ ಕೆನರಾ ಬ್ಯಾಂಕ್’ ನಲ್ಲಿ 800 ಪ್ರೊಬಷನರಿ ಆಫೀಸರ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ..

ಈ ಎಲ್ಲ ಬದಲಾವಣೆಯಿಂದ ನಜತ್ ಅವರಿಗೆ ಜೀವನದ ಬಗ್ಗೆ ಕ್ರಮೇಣವಾಗಿ ಆಸೆಗಳ ಗುರಿಗಳು ಹುಟ್ಟಿದವು. ನಾನು ಕೂಡಾ ಒಳ್ಳೆಯ ಶಿಕ್ಷಣ ಪಡೆಯಲೇಬೇಕು ಎಂಬ ಮಹಾನ್ ಆಸೆಯನ್ನು ಹೊತ್ತರು. ಈ ನಂತರ ಕುಟುಂಬದ ಅನುಮತಿಯೊಂದಿಗೆ ಅಂತು ಇಂತೂ ನಜತ್ ಶಾಲೆಯ ಮೆಟ್ಟಿಲೇದರು, ತಮ್ಮ ಕನಸ್ಸಿನ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು ನಿರಂತರ ಪ್ರಯತ್ನ ಮಾಡಿ ಪ್ರಥಮ ಪಿಯುಸಿ ಪೂರೈಸುವುದರೊಳಗೆ ಫ್ರೆಂಚ್ ಭಾಷೆಯಲ್ಲಿ ಸಂಪೂರ್ಣ ಪಾಂಡಿತ್ಯವನ್ನು ಪಡೆದರು. ಹಾಗೆಯೆ ನಜತ್ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡು 2002ರಲ್ಲಿ “ಪ್ಯಾರಿಸ್ ಇನ್ಸ್ಟಿಟ್ಯೂಟ್ ಆಫ್ ಪೊಲಿಟಿಕಲ್ ಸ್ಟಡೀಸ್​”ನಲ್ಲಿ ಪದವಿಯನ್ನು ಪಡೆದುಕೊಂಡ ನಜತ್ ಕಾಲೇಜು ಜೀವನದಲ್ಲೇ ನಾಯಕಿಯ ವರ್ಚಸ್ಸು ಪಡೆದಿದ್ದರು. ಇದರಿಂದಾಗಿ ಮುಂದೆ ಸೋಷಿಯಲಿಸ್ಟ್ ಪಾರ್ಟಿಯೊಂದಿಗೆ ಗುರುತಿಸಿಕೊಂಡಿದ್ದರು. ಈ ನಡುವೆ ನಜತ್- ಗೆ ಹಲವಾರು ಸಮಸ್ಯೆಗಳು ಬಂದವು ಅವೆಲ್ಲವನ್ನು ಗೆದ್ದುರು. ನಜತ್ ಕುಟುಂಬವು ಇನ್ನೂ ಕಷ್ಟದಲ್ಲೇ ಇತ್ತು ತಾವು ಕೂಡ ಅಲ್ಲಿನ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡಿ ಗೆದ್ದು ಹೆಸರು ಮಾಡಿ ರಾಜಕೀಯ ಜೀವನಕ್ಕೆ ಕಾಲಿಟ್ಟರು.


Also read: ದೀಪಾವಳಿ ಹಬ್ಬಕ್ಕೆ ಟ್ರೈನ್-ನಲ್ಲಿ ಪ್ರಯಾಣ ಮಾಡುವವರಿಗೆ ಸಿಹಿ ಸುದ್ದಿ..

ಈ ಸಮಯದಲ್ಲಿ ನಜತ್ ಅವರ ದೈರ್ಯ ಆತ್ಮ ಬಲವನ್ನು ಕಂಡು 2012ರಲ್ಲಿ ಫ್ರೆಂಚ್ ಅಧ್ಯಕ್ಷ ಫ್ರಾನ್ಸುವಾ ಹೊಲಾಂಡ್ ನಜತ್ ಅವರನ್ನು ಮಹಿಳಾ ಹಕ್ಕುಗಳ ಸಚಿವಾಲಯದ ವಕ್ತಾರರನ್ನಾಗಿ ನೇಮಿಸಿದರು. ಈ ಅವಕಾಶವನ್ನು ತನ್ನ ಜೀವನದ ಬುನಾದಿಯಾಗಿಟ್ಟುಕೊಂಡು ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಫ್ರಾನ್ಸ್​ ಜನರ ಮನಗೆದ್ದರು. ಈ ನಡುವೆ ಫ್ರಾನ್ಸ್- ನಲ್ಲಿ ನಜತ್ ಅವರ ಹೆಸರು ಎತ್ತರಕ್ಕೆ ಬೆಳೆದು ಅವರ ಸಾಧನೆಯ ಕೆಲಸ ಕ್ಯಾಬಿನೆಟ್​ನಲ್ಲೂ ಚರ್ಚೆಗೆ ಕಾರಣವಾಯಿತು. ಹೀಗೆ ತಮ್ಮ ಸಮಯವನ್ನೆಲ್ಲ ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಮುಡಿಪಾಗಿಟ್ಟು. ಫ್ರೆಂಚ್​ನ ಮೊದಲ ಮಹಿಳಾ ಶಿಕ್ಷಣ ಮಂತ್ರಿಯಾಗಿ ಆಯ್ಕೆಯಾದರು. ನಜತ್ ಈಗ ಅದೆಷ್ಟೋ ಜನರಿಗೆ ಸಾಧನೆಯ ಸ್ಪೂರ್ತಿಯಾಗಿದ್ದಾರೆ. ಇವೆಲ್ಲದರರಿಂದ ಪ್ರತಿಯೊಬ್ಬರಿಗೂ ಅರ್ಥವಾಗುವ ವಿಷಯವೆಂದರೆ ಸಾಧನೆಗೆ ಹೆಣ್ಣು ಗಂಡು ಎಂಬ ಬೇಧವಿಲ್ಲ ಮಾಡುವ ಪ್ರಯತ್ನ ಪರಿಪೂರ್ಣವಾಗಿದ್ದರೆ ಸಾಧನೆಯ ದಾರಿ ಮುಟ್ಟುವುದು ದೊಡ್ಡದೇನಲ್ಲ.