ವರ್ಷಕೊಮ್ಮೆ ದರ್ಶನಕ್ಕೆ ತೆರೆಯುವ ಹಾಸನಾಂಬ ದೇವಾಲಯವು ಈ ವರ್ಷ 7 ದಿನವೂ 24 ಘಂಟೆ ದರ್ಶನಕ್ಕೆ ತೆರೆದಿರುತ್ತದೆ!!

0
1099

ಅಧಿದೇವತೆ ಹಾಸನಾಂಬೆ ಎಂದು ಪ್ರಸಿದ್ಧಿ ಪಡೆದಿರುವ ದೇವಿಯ ದರ್ಶನ ನವೆಂಬರ್ 1 ರಿಂದ ಪ್ರಾರಂಭವಾಗಲಿದ್ದು ನ.9 ರ ವರೆಗೆ ದಿನದ 24 ಘಂಟೆಗಳು ಭಕ್ತರಿಗೆ ದರ್ಶನ್ ಮಾಡಲು ಅವಕಾಶವಿದೆ. ವರ್ಷಕೊಮ್ಮೆ ಮಾತ್ರ ಅವಕಾಶ ವಿರುವ ಹಾಸನಾಂಬೆ ದರ್ಶನ್ ಬೇರೆದೇವರ ಹಾಗೆ ಅವಕಾಶವಿಲ್ಲ, ಇದು ವರ್ಷಕ್ಕೆ ಒಂದೇ ಸಾರಿ ಇರುವುದರಿಂದ 9 ದಿನವು ಹಗಲು-ರಾತ್ರಿ ಸಾವಿರಾರು ಜನರು ದೇವಿಯ ದರ್ಶನಕ್ಕೆ ನಿಂತ್ತಿರುತ್ತಾರೆ.

ಇದು ಹೊಯ್ಸಳರ ಕಾಲದ ಸಪ್ತಮಾತೃಕೆಯರ ಹುತ್ತದ ರೂಪದ ವಿಗ್ರಹ ದೇಗುಲದಲ್ಲಿದ್ದು, ಭಕ್ತರು ಎಲ್ಲ ಸಮಯದಲ್ಲೂ ದರ್ಶನ ಮಾಡಲು ಸಾಧ್ಯವಿಲ್ಲ. ವರ್ಷಕೊಮ್ಮೆ ಆಶ್ವೀಜ ಮಾಸ ಪೂರ್ಣಿಮೆಯಿಂದ ಬಲಿಪಾಡ್ಯಮಿ ಮಾರನೆ ದಿನದವರೆಗೂ ದರ್ಶನಕ್ಕೆ ಅವಕಾಶವಿದೆ. ಭಕ್ತರು ಈ ಸಮಯದಲ್ಲಿ ದೇವಿಯ ದರ್ಶನ ಮಾಡಿ ತಮ್ಮ ಕಷ್ಟ -ನಷ್ಟಗಳಿಂದ ಹೊರ ಬರಲು ದರ್ಶನ ಮಾಡಿ ಪಾವನರಾಗುತ್ತಾರೆ.

ದರ್ಶನ್ ಸಮಯ: ನ. 1 2018 ರ ಬೆಳಗಿನ ಜಾವ 5 ಗಂಟೆಯಿಂದ, ನ. 9 2018 ರ ಬೆಳಗಿನ ಜಾವ 5 ವರೆಗೆ ದರ್ಶನಕ್ಕೆ ಅವಕಾಶವಿದ್ದು, ನೇರ ದರ್ಶನಕ್ಕೆ 300 ರಿಂದ 1,000 ವರೆಗೆ ಟಿಕೆಟ್ ನಿಗದಿಪಡಿಸಲಾಗಿದ್ದು. ದೇವಾಸ್ಥಾನದ ಹಿಂಬಾಗಿಲ ಗೇಟಿನಿಂದ ವಯೋವೃದ್ಧರಿಗೆ, ಅಂಗವಿಕಲರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ದೇವಸ್ಥಾನದ ಆಡಳಿತ ಎಚ್.ಎಲ್. ನಾಗರಾಜ್ ತಿಳಿಸಿದ್ದಾರೆ.

ರೋಮಾಂಚನವಾದ ಬಾಗಿಲು ತೆರೆಯಿವ ದೃಷ:

ವರ್ಷದ ನಂತರ ದೇವಸ್ಥಾನದ ಬಾಗಿಲು ತೆರೆಯಿವ ಈ ಸಮಯದಲ್ಲಿ ತಳವಾರ ಮನೆತನದವರು ಹಾಜರಿದ್ದು, ಬಾಗಿಲು ತೆರೆದೊಡನೆ ದೇವಿಯ ದರ್ಶನ ಶುಭಕರವಲ್ಲ ಎಂಬ ಹಿನ್ನೆಲೆಯಲ್ಲಿ ಗರ್ಭಗುಡಿಯ ಮುಂದೆ ಅರಸು ಮನೆತನದವರಾದ ನರಸಿಂಹರಾಜ ಅರಸುರವರು ದೇವಿಯನ್ನು ಭಜಿಸುತ್ತ ಒಂದೆ ಏಟಿನಲ್ಲಿ ಬಾಳೆ ಕಂದನ್ನು ಕತ್ತರಿಸಿದ ಕ್ಷಣದಲ್ಲಿ ದೇವಾಲಯದ ಬಾಗಿಲು ತೆರೆಯಲಾಗುವ ರೋಮಾಂಚನದ ಕ್ಷಣವನ್ನು ನೋಡಲು ಎರಡು ಕಣ್ಣುಗಳು ಸಾಲದು ಈ ದ್ರುಶವನ್ನು ನೋಡಲು ಸಾವಿರಾರು ಭಕ್ತರು ದಿನದ ಮುಂಚೆನೇ ಕಾದು ಕುಳಿತ್ತಿರುತ್ತಾರೆ.

ದೇವಿಯ ವಿಶೇಷತೆ:

ಹಾಸನ ಜಿಲ್ಲೆಯ ಅನುಪಮ ಪ್ರಭಾವದ ಶಕ್ತಿದೇವತೆ, ಸಪ್ತ ಮಾತೃಕೆಯರಲ್ಲಿ ಒಬ್ಬಳಾದ ನಗರದ ಗ್ರಾಮದೇವತೆ ಹಾಸನಾಂಬ ದೇವಿಯ ದರ್ಶನ ಭಾಗ್ಯ ವರ್ಷಕ್ಕೊಮ್ಮೆ ಮಾತ್ರ.ಹೊಯ್ಸಳರ ಕಾಲದ ಸಪ್ತಮಾತೃಕೆಯರ ಹುತ್ತದ ರೂಪದ ವಿಗ್ರಹ ದೇಗುಲದಲ್ಲಿದ್ದು, ಬೇರೆ ದೇವರಂತೆ ಹಾಸನಾಂಬೆಯನ್ನು ಭಕ್ತರು ಎಲ್ಲ ಸಮಯದಲ್ಲೂ ದರ್ಶನ ಮಾಡಲು ಸಾಧ್ಯವಿಲ್ಲ. ವರ್ಷಕ್ಕೊಮ್ಮೆ ಆಶ್ವೀಜ ಮಾಸ ಪೂರ್ಣಿಮೆಯಿಂದ ಬಲಿಪಾಡ್ಯಮಿ ಮಾರನೆ ದಿನದವರೆಗೂ ದರ್ಶನ ಮಾಡಬಹುದು. ನಂತರ ಮುಂದಿನ ಒಂದು ವರ್ಷದವರೆಗೆ ದೇವಿಯ ದರ್ಶನ ಸಿಗುವುದಿಲ್ಲ. ವರ್ಷದ ನಂತರ ಬಾಗಿಲು ತೆರೆಯುವ ಸಮಯಕ್ಕೆ ಶಾಸ್ತ್ರೋಕ್ತವಾಗಿ ವಿಧಿ- ವಿಧಾನ ಪೂರ್ವಕ ಮಂಗಳವಾದ್ಯಗಳ ಉದ್ಘೋಷಗಳೊಂದಿಗೆ ಹಾಸನಾಂಬೆಯ ದೇಗುಲದ ದ್ವಾರವನ್ನು ತೆರೆಯಲಾಗುವುದು. ಇನ್ನೊಂದು ವಿಶೇಷ; ಪ್ರತಿ ವರ್ಷ ದೇವಾಲಯದ ಬಾಗಿಲು ಮುಚ್ಚುವ ಸಮಯದಲ್ಲಿ ದೇವಿಯ ಎದುರು ಇಡುವ ನೈವೇದ್ಯ ಮತ್ತೆ ಮುಂದಿನ ವರ್ಷ ಬಾಗಿಲು ತೆರೆದಾಗ ಹಾಗೆ ಇರುತ್ತೆದೆ. ಅಲ್ಲದೆ ದೇವರ ಎದುರಿನ ದೀಪ ವರ್ಷವಿಡೀ ಉರಿಯುತ್ತಲೇ ಇರುತ್ತದೆ.
ಈ ವರ್ಷ ನಿಮಗೆ ದೇವಿಯ ದರ್ಶನ ಮಾಡುವ ಭಾಗ್ಯವದಗಿ ಬಂದಿದೆ, ಆದಕಾರಣ ದೇವಿಯ ದರ್ಶನ ಮಾಡಿ ಕೃಪೆಗೆ ಪಾತ್ರರಾಗಿ.