ಇನ್ಮುಂದೆ ಕ್ಯಾನ್ಸರ್ ಚಿಕ್ಸಿತೆಗೆ ಹಣದ ಚಿಂತೆ ಬಿಡಿ; ಕೇವಲ 7 ರೂ ಪಾವತಿಸಿ 50 ಲಕ್ಷದವರೆಗೆ ವಿಮಾ ಪಡೆಯರಿ, ಭಾರತೀಯ ಜೀವ ವಿಮಾ ನಿಗಮದ ಹೊಸ ಯೋಜನೆ ..

0
2692

ಆರೋಗ್ಯ ವಿಮೆ: ಕೇವಲ 7 ರೂ. ಪಾವತಿಸಿ 50 ಲಕ್ಷದವರೆಗೆ ವಿಮಾ ಮೊತ್ತ ಪಡೆಯಿರಿ:

ಭಾರತಿಯ ಜೀವ ವಿಮಾ ನಿಗಮವು ಜನರಿಗೆ ಆಧಾರ ಕೊಂಡಿಯಾಗಿ ವ್ಯಕ್ತಿ ವಿಶ್ವಾಸದಿಂದ ಜೀವನ ನಡೆಸಲು ಬಂದಿರುವ ಒಂದು ಮಾಹಾನ್ ಕೊಡಿಗೆಯಾಗಿದೆ ಇದರ ಸಪಲತೆಯನ್ನು ದಿನನಿತ್ಯವೂ ಕೋಟ್ಯಾಂತರ ಜನರು ಪದೆಯಿತ್ತಿದ್ದಾರೆ. ಹಾಗೆಯೇ ಇದರಲ್ಲಿ ಬೇರೆ ತರಹದ ವಿಮೇಗಳಿದ್ದು ಪಾಲಿಸಿಯು ವಿಮಾ ಕಂಪೆನಿ ಮತ್ತು ವ್ಯಕ್ತಿಯ ಅಥವಾ ಆತನ ಹೊಣೆಗಾರರ ನಡುವಿನ ಒಂದು ಒಪ್ಪಂದವಾಗಿದೆ. ಆ ಒಪ್ಪಂದವನ್ನು ಮಾಸಿಕವಾಗಿ ಅಥವಾ ವಾರ್ಷಿಕವಾಗಿ ನವೀಕರಿಸಬಹುದು.
ಇಂತಹ ಯೋಜನೆಯಲ್ಲಿ ಆರೋಗ್ಯ ವಿಮಾ ಕೂಡ ಬಹಳಷ್ಟು ಉಪಯುಕ್ತವಾಗಿದೆ. ಕಂಪೆನಿಯಿಂದ ರಕ್ಷಣೆ ಕೊಡಲ್ಪಡುವ ಆರೋಗ್ಯ ಸಂಬಂಧಿತ ಖರ್ಚುವೆಚ್ಚಗಳ ಪ್ರಕಾರ ಮತ್ತು ಮೊತ್ತವನ್ನು ಮೊದಲೇ, ಸದಸ್ಯರ ಒಪ್ಪಂದದಲ್ಲಿ ಅಥವಾ “ವಿಮಾ ರಕ್ಷಣೆಯ ಸಾಕ್ಷ್ಯ”ದ ಕಿರು ಪುಸ್ತಕದಲ್ಲಿ ನಿರ್ದಿಷ್ಟಪಡಿಸಲಾಗುತ್ತದೆ. ವಿಮೆ ಮಾಡಿದ ವ್ಯಕ್ತಿಯು ಅನೇಕ ಜವಾಬ್ದಾರಿಯನ್ನು ಹೊಂದಿರುತ್ತಾನೆ.

Also read: ಇನ್ಮೇಲೆ ನಿಮ್ಮ ಹಳೆಯ ವಾಹನಗಳು ರಸ್ತೆಗಿಳಿಯುವಂತಿಲ್ಲ?? ಈ ನಿಯಮ ಕರ್ನಾಟಕದ ತುಂಬೆಲ್ಲ ಜಾರಿಗೆ…

ಈ ಎಲ್ಲ ಯೋಜನೆಯಲ್ಲಿ ಭಾರತೀಯ ಜೀವ ವಿಮಾ ನಿಗಮವು ಜನರ ಆರೋಗ್ಯ ಸುರಕ್ಷತಾ ದೃಷ್ಟಿಯಲ್ಲಿ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಈ ಹೊಸ ಯೋಜನೆಯಲ್ಲಿ ಪಾಲಿಸಿದಾರರಿಗೆ ಕ್ಯಾನ್ಸರ್‌ ರೋಗ ಉಂಟಾದರೆ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ಅನುಕೂಲವಾಗುವಂತೆ ವಿಮೆಯನ್ನು ಸಿದ್ಧಪಡಿಸಿದೆ. ಕಡಿಮೆ ಮೊತ್ತದ ಹೆಚ್ಚು ಲಾಭದಾಯಕವಾಗಿರುವ ಈ ಪಾಲಿಸಿಗೆ ವರ್ಷಕ್ಕೆ 2400 ರೂ.ಗಳನ್ನು ಪಾವತಿಸಬೇಕು. ಅಂದರೆ ಪ್ರತಿದಿನ ಕೇವಲ 7 ರೂ. ಕಟ್ಟಿದರೆ ಕ್ಯಾನ್ಸರ್‌ನ ಆರಂಭಿಕ ಹಂತ ಮತ್ತು ನಂತರದ ಹಂತಗಳಿಗೆ ವಿಮಾ ಮೊತ್ತ ದೊರೆಯಲಿದೆ.
ನೀವು 10 ಲಕ್ಷದ ಪಾಲಿಸಿ ಯೋಜನೆಯನ್ನು ತೆಗೆದುಕೊಂಡಲ್ಲಿ. ನಂತರ ಎರಡು ವರ್ಷಗಳ ಬಳಿಕ ನಿಮಗೆ ಆರಂಭಿಕ ಕ್ಯಾನ್ಸರ್ ಕಂಡು ಬಂದರೆ ನಿಮಗೆ 2.5 ಲಕ್ಷ ನೀಡಲಾಗುತ್ತದೆ. ಮುಂದಿನ ಮೂರು ವರ್ಷ ನೀವು ಯಾವುದೇ ಪ್ರಿಮಿಯಂ ಪಾವತಿಸಬೇಕಾಗಿಲ್ಲ. 5 ವರ್ಷಗಳ ನಂತರ ಕ್ಯಾನ್ಸರ್ ರೋಗವು ಮಹತ್ವದ ಘಟ್ಟ ತಲುಪಿದ್ದರೆ ಉಳಿದ 7.5 ಲಕ್ಷ ವಿಮಾ ಮೊತ್ತವನ್ನು ಎಲ್​ಐಸಿ ಪಾವತಿಸುತ್ತದೆ.
ಆದರೆ ಈ ಯೋಜನೆಯಲ್ಲಿ ಯಾವುದೇ ರೀತಿಯ ಮೆಚ್ಯೂರಿಟಿ ಲಾಭಗಳು ಸಿಗುವುದಿಲ್ಲ. ಹಾಗೆಯೇ ಇಲ್ಲಿ ಸಾಲವನ್ನು ತೆಗೆದುಕೊಳ್ಳಲಾಗುವುದಿಲ್ಲ. ಇದರ ಹೊರತಾಗಿ ಈ ಪಾಲಿಸಿಯನ್ನು ಆನ್​ಲೈನ್​ ಮೂಲಕ ಖರೀದಿಸಿದರೆ ಶೇ.7ರಷ್ಟು ರಿಯಾಯಿತಿಯನ್ನು ಪಡೆದುಕೊಳ್ಳಬಹುದು.

ಕ್ಯಾನ್ಸರ್ ಯೋಜನೆ ಸಂಬಂಧಪಟ್ಟ ಮಾಹಿತಿ:

Also read: ಚತ್ತೀಸ್ಘಡದಲ್ಲಿ ಚುನಾವಣೆಗೂ ಮುಂಚೆಯೇ ಆಪರೇಷನ್ ಕಮಲ ನಡೆದು ಹೋಯಿತೇ??

 • ಈ ಪಾಲಿಸಿಯನ್ನು ಕಟ್ಟಲು 20 ವರ್ಷ ನಂತರ ಕಟ್ಟಬೇಕು
 • ಈ ಪಾಲಿಸಿಯನ್ನು 65 ವರ್ಷದವರೆಗೆ ಕತ್ತಬಹುದಾಗಿದೆ
 • ಮೆಚ್ಯೂರಿಟಿಯ ಕನಿಷ್ಠ ವಯಸ್ಸು: 50 ವರ್ಷ
 • ಮೆಚ್ಯೂರಿಟಿಯ ಗರಿಷ್ಠ ವಯಸ್ಸು: 75 ವರ್ಷ
 • ಕನಿಷ್ಠ ವಿಮಾ ಮೊತ್ತ: 10 ಲಕ್ಷ
 • ಗರಿಷ್ಠ ವಿಮಾ ಮೊತ್ತ : 50 ಲಕ್ಷ
 • ಪಾಲಿಸಿಯ ಕನಿಷ್ಠ ಅವಧಿ: 10 ವರ್ಷ
 • ಗರಿಷ್ಠ ಅವಧಿ: 30 ವರ್ಷ

ಈ ಯೋಜನೆ ಲಾಭಗಳೇನು?

Also read: ಸಂಸದ್ ಆದರ್ಶ ಗ್ರಾಮ ಯೋಜನೆಯಡಿಯಲ್ಲಿ ಮೋದಿ ಸರ್ಕಾರದ ಮಂತ್ರಿಗಳ ಗ್ರಾಮಗಳ ಸ್ಥಿತಿ ಸಂಪೂರ್ಣ ಹಾಳಾಗಿವೆ..

 • ಈ ಪಾಲಿಸಿಯನ್ನು ಪಡೆದುಕೊಂಡ ವ್ಯಕ್ತಿಯು ಎರಡು ಹಂತದಲ್ಲಿ ವಿಮಾ ಮೊತ್ತಕ್ಕೆ ಅರ್ಜಿ ಸಲ್ಲಿಸಬಹುದು. ಇದರಲ್ಲಿ ಕ್ಯಾನ್ಸರ್ ರೋಗದ ಆರಂಭಿಕ ಹಂತ ಮತ್ತು ಕ್ಯಾನ್ಸರ್ ರೋಗ ನಿರ್ಣಯದ ಹಂತ. ಇದನ್ನು ಅವಲಂಭಿಸಿ ವಿಮಾ ಮೊತ್ತವನ್ನು ನಿರ್ಣಯಿಸಲಾಗುತ್ತದೆ.
 • ಆರಂಭಿಕ ಹಂತ ಇಲ್ಲಿ ಪಾಲಿಸಿದಾರರಿಗೆ ಆರಂಭಿಕ ಘಟ್ಟದ ಕ್ಯಾನ್ಸರ್‌ ಪತ್ತೆಯಾದರೆ ಶೇ.25ರಷ್ಟು ಖಾತರಿಯ ವಿಮೆ ಪರಿಹಾರ ಮೊತ್ತ ಸಿಗಲಿದೆ. ಅಲ್ಲದೆ ಮುಂದಿನ ಮೂರು ವರ್ಷಗಳ ತನಕ ಪ್ರಿಮಿಯಂ ನೀಡಬೇಕಾಗಿಲ್ಲ. ಆದರೆ ಈ ಪ್ರಯೋಜನಗಳನ್ನು ಕೇವಲ ಆರಂಭಿಕ ಹಂತದಲ್ಲಿ ಮಾತ್ರ ನೀಡಲಾಗುತ್ತದೆ.
 • ಇದಾದ ಮುಂದಿನ ಹಂತದಲ್ಲಿ ನಿಮ್ಮ ರೋಗವು ಆರಂಭಿಕ ಹಂತದಲ್ಲೇ ಗುರುತಿಸಲ್ಪಟ್ಟರೆ ಯಾವುದೇ ವಿಮೆಯನ್ನು ನೀಡಲಾಗುವುದಿಲ್ಲ. ಅಲ್ಲದೆ ನೀವು ಈಗಾಗಲೇ ಪ್ರಯೋಜನವನ್ನು ಪಡೆದುಕೊಂಡಿರುವುದರಿಂದ ನಿಮ್ಮ ವಿಮಾ ಮೊತ್ತವು ಪಾವತಿಸಿದ ವಿಮಾ ಮೊತ್ತಕ್ಕಿಂತ ಕಡಿಮೆ ಕಟ್ಟುವುದು ಇರುತ್ತದೆ.
 • ಕ್ಯಾನ್ಸರ್‌ ರೋಗದ ಮಹತ್ವದ ಘಟ್ಟದಲ್ಲಿದ್ದರೆ, ಶೇ.100ರಷ್ಟು ಖಾತರಿಯ ಮೊತ್ತ ಪರಿಹಾರ ಸಿಗಲಿದೆ. ನೀವು ಆರಂಭಿಕ ಹಂತದಲ್ಲಿ ವಿಮೆಯನ್ನು ಪಡೆದುಕೊಂಡಿದ್ದರೆ ಈ ಮೊತ್ತವು ಕಡಿಮೆಯಾಗುತ್ತದೆ.
 • 10 ವರ್ಷಗಳವರಗೆ ವಿಮೆ ಮೊತ್ತದ ಶೇ.1ರಷ್ಟು ನಿಮಗೆ ನೀಡಲಾಗುತ್ತದೆ. ಈ ವೇಳೆ ನೀವೇನಾದರೂ ಮೃತಪಟ್ಟರೆ, ಈ ಮೊತ್ತವು ನಾಮಿನಿಗೆ ಪಾವತಿಸಲಾಗುತ್ತದೆ.
  ಕ್ಯಾನ್ಸರ್​ನ ಮಹತ್ವದ ಘಟ್ಟದಲ್ಲಿದ್ದರೆ ನೀವು ಯಾವುದೇ ಪ್ರೀಮಿಯಂ ಪಾವತಿಸಬೇಕಾಗಿಲ್ಲ.
 • ಅದೇ ರೀತಿಯ ನೀವು ನೇರವಾಗಿ ರೋಗದ ಎರಡನೇ ಹಂತದ ಪ್ರಯೋಜನಗಳನ್ನು ಪಡೆದುಕೊಂಡರೆ, ಆರಂಭಿಕ ಹಂತದ ಕ್ಯಾನ್ಸರ್ ಲಾಭಗಳನ್ನು ಪಡೆಯಲು ಸಾಧ್ಯವಿಲ್ಲ.
  ಪ್ರಮುಖ ಹಂತದ ಕ್ಯಾನ್ಸರ್ ವಿಮೆಯನ್ನು ಪಡೆದುಕೊಂಡ ಬಳಿಕ ನಿಮ್ಮ ಪಾಲಿಸಿಯು ಅಂತ್ಯಗೊಳುತ್ತದೆ.