ಆಕ್ಸಿಡೆಂಟ್-ನಲ್ಲಿ ಒಂದು ಕಾಲು ಕಳೆದುಕೊಂಡರೂ ಛಲ ಬಿಡದೆ ಭಾರತಕ್ಕೆ ಬ್ಯಾಡ್ಮಿಂಟನ್-ನಲ್ಲಿ ಚಿನ್ನ ತಂದುಕೊಟ್ಟ ಮಾನಸಿ ಜೋಶಿಯವರ ಸಾಧನೆಯ ಕಥೆ ಓದಿ, ನಿಮಗೂ ಸ್ಪೂರ್ತಿಯಾಗುತ್ತೆ!!

0
304

ಸಾಧನೆ ಮಾಡಿದರೆ ಹೀಗೆ ಮಾಡಬೇಕು, ಎನ್ನುವ ಮಟ್ಟಕ್ಕೆ ಸಾಧಿಸಿ ದೇಶಕ್ಕೆ ಚಿನ್ನ ತಂದು ಕೊಟ್ಟ ಹೆಮ್ಮೆಯ ಮಗಳು ಮಾನಸಿ ಜೋಶಿ ಬಗ್ಗೆ ತಿಳಿದರೆ ಎಂತಹವರಿಗೂ ಸಾಧಿಸುವ ಛಲ ಬರುತ್ತದೆ. ಜೋಶಿ ಪ್ಯಾರಾ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದಾಳೆ. ಎಲ್ಲ ಆಟಗಾರರಂತೆ ಇವಳು ಗೆದ್ದಿರಬಹುದು ಎನ್ನುವುದು ಊಹೆ ಆದರೆ. ಇವಳ ಸಾಧನೆಯೇ ಬೇರೆಯಿದೆ. ಏಕೆಂದರೆ ಇರುವುದು ಒಂದೇ ಕಾಲು ಅದರಲ್ಲಿ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿ ವಿಶ್ವ ಮಟ್ಟದಲ್ಲಿ ಸಾಧಿಸಿ ತೋರಿಸಿದ್ದಾಳೆ.

Also read: ಸಂಬಳದ ಹಣವನ್ನೆಲ್ಲಾ ಅನಾಥರಿಗೆ ದಾನ ಮಾಡಿದ ಪ್ರಪಂಚದ ಪ್ರಪ್ರಥಮ ಸಹಸ್ರಮಾನದ ವ್ಯಕ್ತಿ ಶ್ರೀ ಕಲ್ಯಾಣಸುಂದರಂ ಇಡಿ ಜಗ್ಗತಿಗೆ ಮಾದರಿ..

ಹೌದು ಸ್ವಿಜರ್‌ಲ್ಯಾಂಡ್‌ನಲ್ಲಿ ನಡೆದ ಪ್ಯಾರಾ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟ ಮಾನಸಿ ಜೋಶಿ, ಭಾರತದ ಮೊಟ್ಟಮೊದಲ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿ ಇತಿಹಾಸ ಸೃಷ್ಟಿಸಿದ್ದಾರೆ. ಅಪಘಾತದಲ್ಲಿ ಕಾಲು ಕಳೆದುಕೊಂಡ ಮಾನಸಿ ಜೋಶಿಯ ಸಾಧನೆ ಸಿಂಧುಗಿಂತಲೂ ಮಿಗಿಲಾಗಿದೆ. ಅದರಂತೆ 3 ಬಾರಿ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದ ಪಾರುಲ್ ಪರ್ಮರ್ ಅವರನ್ನು 21-12 ಹಾಗೂ 21-7 ನೇರ ಅಂತರದಿಂದ ಸೋಲಿಸುವ ಮೂಲಕ ಮಾನಸಿ ಅವರು ಚಾಂಪಿಯನ್ ಆಗಿದ್ದಾರೆ. ಈ ಹಿಂದೆ ಪಿ.ವಿ.ಸಿಂಧು ಅವರು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ್ತಿ ಎಂಬ ದಾಖಲೆಯನ್ನು ಬರೆದಿದ್ದರು. ಈ ಸಿಹಿ ಸುದ್ದಿಯ ಬೆನ್ನಲ್ಲೇ ಈಗ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಪಟ್ಟ ಕೂಡ ಭಾರತೀಯ ಆಟಗಾರ್ತಿಯ ಮುಡಿಗೇರಿದೆ.

Also read: ಹಾಲು ಮಾರಿ ಜೀವನ ಮಾಡುವ ವ್ಯಕ್ತಿ ಇಂದು 54 ಸಾವಿರ ಕೋಟಿ ಒಡೆಯನಾಗಿ ಸಾವಿರಾರು ಜನರಿಗೆ ಉದ್ಯೋಗ ನೀಡುವ ಹಂತಕ್ಕೆ ಬೆಳೆದಿದ್ದು ಹೇಗೆ ಗೊತ್ತಾ??

ಕಾಲಿಲ್ಲದಿದ್ದರೂ ಸಾಧನೆ?

ಮಾನಸಿ ಗೆ 2011 ರ ಡಿಸೆಂಬರ್ ಅಲ್ಲಿ ಒಂದು ಕರಾಳ ದಿನ ಎದುರಾಗಿ, ಅಪಘಾತ ಸಂಭವಿಸಿ ಲಾರಿಯೊಂದು ಅವರಿಗೆ ಡಿಕ್ಕಿ ಹೊಡೆದಯಿತು ಇದರಲ್ಲಿ ಮಾನಸಿಯ ಕಾಲು ಸಂಪೂರ್ಣವಾಗಿ ಪುಡಿ ಪುಡಿಯಾಗಿ ರಸ್ತೆ ತುಂಬಾ ರಕ್ತ ಹರಿಯಿತು. ಅವಳ ವಯಸ್ಸು ಆಗ ಬರಿ 22. ಆಗಿತ್ತು ಹಲವು ಕನಸ್ಸುಗಳನ್ನು ಹೊತ್ತಿರುವ ಅವಳ ಕಾಲ್ಲನ್ನು ಕತ್ತರಿಸಲೇ ಬೇಕಾಯಿತು. 45 ದಿನಗಳ ಜೀವಂತ ನರಕವನ್ನ ಕುಳಿತೇ ನೋಡಿದ್ದಳು. ಅವರ ಕಾಲಿಗೆ ತೀವ್ರ ಪೆಟ್ಟಾಗಿದ್ದ ಕಾರಣಕ್ಕೆ ಗ್ಯಾಂಗ್ರಿನ್ ಆಗಿ ಅವರ ಒಂದು ಕಾಲನ್ನು ವೈದ್ಯರು ಶಸ್ತ್ರಚಿಕಿತ್ಸೆ ಮಾಡಿ ಕತ್ತರಿಸಿದ್ದರು. ಬಳಿಕ ಪ್ರೋಸ್ಟೆಟಿಕ್ ಕಾಲನ್ನು ಅಳವಡಿಸಿಕೊಂಡು ಮಾನಸಿ ನಡೆಯಲು ಆರಂಭಿಸಿದರು. ಇದೆಲ್ಲ ಆದ ನಂತರ ಮಾನಸಿಯಲ್ಲಿ ಛಲ ಉಕ್ಕಿ ಹರಿಯಲು ಶುರುವಾಯಿತು. ಅದನ್ನೇ ಬೆನ್ನಟಿದ ಜೋಶಿ 2012ರಲ್ಲಿ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ತಮ್ಮ ಹೊಸ ಪಯಣ ಆರಂಭಿಸಿದರು.

Also read: ಕೈಕಾಲು ಇಲ್ಲದ 17 ವರ್ಷದ ಯುವತಿ ಅಂಗವೈಕಲ್ಯವನ್ನು ಮೀರಿ ಸಾಧನೆ ಮಾಡುತ್ತಿರುವ ಸಾಧನೆ, ಪ್ರತಿಭೆ ಎಲ್ಲರಿಗೂ ಮಾದರಿಯಾಗಿದೆ..

ಬಳಿಕ ಅಂತರ-ಕಂಪನಿ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದರು. ಆ ಚಿನ್ನದ ಪದಕವೇ ಅವರು ಒಂದೊಳ್ಳೆ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ್ತಿಯಾಗಲು ಸ್ಫೂರ್ತಿ ಆಯ್ತು. 2014ರಲ್ಲಿ ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಲು ಪ್ರಯತ್ನಿಸಿದ್ದರು, ಆದರೆ ಅವರ ಪ್ರಯತ್ನಕ್ಕೆ ಫಲ ಸಿಕ್ಕಿರಲಿಲ್ಲ. ಅದೇ ವರ್ಷ ಮಾನಸಿ ಅವರು ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕ ಗೆದ್ದಿದ್ದರು. 2015ರಲ್ಲಿ ಸ್ಪ್ಯಾನಿಶ್ ಪ್ಯಾರಾ ಇಂಟರ್‌ನ್ಯಾಷನಲ್‌ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್‍ನಲ್ಲಿ ಸ್ಪರ್ಧಿಸಿದ್ದರು. ಈ ವೇಳೆ ಅವರಿಗೆ ಆಟಗಾರ ರಾಕೇಶ್ ಪಾಂಡ್ಯ ಅವರು ಪಾರ್ಟ್‌ನರ್‌ ಆಗಿ ಸಿಕ್ಕರು. ಅಲ್ಲಿಂದ ಹಲವು ಅಂತರಾಷ್ಟ್ರೀಯ ಪಂದ್ಯದಲ್ಲಿ ಮಾನಸಿ ಹಾಗೂ ರಾಕೇಶ್ ಜೋಡಿ ಮೋಡಿ ಮಾಡಿತ್ತು. ಪ್ಯಾರಾ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿರುವುದಕ್ಕೆ ಖುಷಿಯಾಗುತ್ತಿದೆ. ಇದು ನನ್ನ ವೃತ್ತಿ ಜೀವನದ ಚಿನ್ನದ ಕ್ಷಣ. ಚಾಂಪಿಯನ್ ಆಗುವುದು ಸುಲಭದ ಮಾತಲ್ಲ. ಅದಕ್ಕೆ ಸಾಕಷ್ಟು ಶ್ರಮಿಸಿದ್ದೇನೆ ಎಂದು ಮಾನಸಿ ಹೇಳಿದ್ದಾರೆ.