ತಮ್ಮ ಭ್ರಷ್ಟಾಚಾರ ಮುಚ್ಚಿಟ್ಟುಕೊಳ್ಳಲು ಸಿ.ಬಿ.ಐ.ಗೆ ನಿರ್ಬಂಧ ಹೇರಿದ್ರಾ ಚಂದ್ರಬಾಬು ನಾಯ್ಡು ಮತ್ತೆ ಮಮತಾ ಬ್ಯಾನರ್ಜಿ??

0
411

ಕೇಂದ್ರದ ಅಧೀನದಲ್ಲಿರುವ CBI ಸಂಸ್ಥೆ ರಾಜ್ಯದಲ್ಲಿ ಯಾವುದೇ ತನಿಖೆ ಹಾಗೂ ದಾಳಿ ನಡೆಸುವ ಮುನ್ನ ನಮಗೆ ಮೊದಲು ಮಾಹಿತಿ ನೀಡಬೇಕು. ಬಳಿಕ ಸಿಬಿಐ ರಾಜ್ಯ ಪ್ರವೇಶ ಮಾಡಲು ಅನುಮತಿ ನೀಡಲಾಗುವುದು ಎಂದು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸರ್ಕಾರ ಆಜ್ಞೆ ಹೊರಡಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಲೂಟಿಕೋರರು ತಮ್ಮನ್ನು ರಕ್ಷಿಸಿಕೊಳ್ಳಲು ಸಿಬಿಐಗೆ ದಿಗ್ಭಂದನ ಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.

Also read: ವಿವಿಧ ಬೇಡಿಕೆಗೆ ರೈತರು ಮಾಡುತ್ತಿರುವ ಹೋರಾಟ ರಾಜಧಾನಿಗೆ ತಲುಪಿದ್ದು; ನೀಚಗೆಟ್ಟ, ನಾಚಿಗೆಟ್ಟ, ವಚನಭ್ರಷ್ಟ ಅವಿವೇಕಿ ಮುಖ್ಯಮಂತ್ರಿ ಎಂದ ಪ್ರತಿಭಟನಾಕಾರರು..

ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಲಾಯ್ತು. ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಹಣಕಾಸು ಸಚಿವರು, ಭ್ರಷ್ಟಚಾರ ತೊಲಗಿಸುವ ವಿಚಾರದಲ್ಲಿ ಯಾವುದೇ ರಾಜ್ಯ ಸರ್ಕಾರಕ್ಕೆ ಆಸಕ್ತಿಯಿಲ್ಲ ಎಂದು ಕಿಡಿಕಾರಿ ರಾಜ್ಯ ಸರ್ಕಾರ ಸಿಬಿಐ ಸಂಸ್ಥೆ ಮೇಲೆ ಅಧಿಕಾರ ಚಲಾಯಿಸಲು ಮುಂದಾದರೇ ದೇಶಭ್ರಷ್ಟರನ್ನು ಹೇಗೆ ಜೈಲಿಗಟ್ಟಲು ಸಾಧ್ಯ ಎಂದು ಅರುಣ್​​ ಜೇಟ್ಲಿ ಅವರು ಆಂಧ್ರ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳಿಗೆ ಪ್ರಶ್ನಿಸಿ, ಸಿಬಿಐ ಸಂಸ್ಥೆಯನ್ನು ದೇಶದ ಹಿತಕ್ಕಾಗಿ ಸ್ಥಾಪಿಸಲಾಗಿದೆ. ನಮ್ಮದು ಬಹುತ್ವದ ದೇಶ, ಹೀಗಾಗಿ ಯಾವುದೇ ರಾಜ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ತನಿಖೆ ನಡೆಸುವಂತೆ ಕೇಂದ್ರ ಸೂಚಿಸಿದರೆ, ತನಿಖೆ ನಡೆಸಬೇಕಾಗಿರುವುದು ಸಿಬಿಐ ಸಂಸ್ಥೆ ಕರ್ತವ್ಯ ಎಂದು ತಿಳಿಸಿದ್ದಾರೆ.

ಈ ನಿರ್ಬಂಧದ ಹಿನ್ನೆಲೆ ಏನು?

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ NDA ಸರ್ಕಾರ ಕೇಂದ್ರ ತನಿಖಾ ದಳ (CBI) ವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮ ರಾಜ್ಯಗಳಿಂದ ಸಿಬಿಐಗೆ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಿತ್ತು. ಈ ನಿರ್ಧಾರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿರುವ ಮಮತಾ ಬ್ಯಾನರ್ಜಿ, ಅವರು ಸರಿಯಾಗಿಯೇ ಚಿಂತಿಸಿದ್ದಾರೆ. ನಾವು ಕೂಡ ಆ ನಿಟ್ಟಿನಲ್ಲಿ ಚಿಂತನೆ ನಡೆಸಬೇಕಾಗಿದೆ. ಬಿಜೆಪಿ ಕಚೇರಿಯಿಂದ ಸೂಚನೆ ಕೊಡಿಸಬೇಕಿದೆ ಎಂದು ತೃಣಮೂಲ ಕಾಂಗ್ರೆಸ್​ ಕೋರ್​ ಕಮಿಟಿ ಸಭೆಯಲ್ಲಿ ಮಮತಾ ಬ್ಯಾನರ್ಜಿ ಮಾತನಾಡಿ. ಸಿಬಿಐ ಅಧಿಕಾರಿಗಳ ರಾಜ್ಯ ಪ್ರವೇಶವನ್ನು ನಿರ್ಬಂಧಿಸುವ ತೀರ್ಮಾನ ತೆಗೆದುಕೊಂಡಿದ್ದಾರೆ.

ಅರುಣ್ ಜೇಟ್ಲಿ ಅವರ ಸಂಪೂರ್ಣ ಪ್ರತಿಕಿಯೇ:

ರಾಜ್ಯಗಳಲ್ಲಿ ನಡೆಯುವ ಹಲವು ಗಂಭೀರ ಪ್ರಕರಣಗಳು ಹಾಗೂ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಲೇಬೇಕಾಗುತ್ತದೆ. ಅದನ್ನು ತಡೆಯಲು ಯಾವುದೇ ರಾಜ್ಯಕ್ಕೂ ಸಾಧ್ಯವಿಲ್ಲ. ನಮ್ಮದು ಸಂಯುಕ್ತ ಗಣರಾಜ್ಯ ರಾಷ್ಟ್ರವಾಗಿದೆ. ಒಂದು ವೇಳೆ ಇದರ ಮೇಲೆ ನಿಯಂತ್ರಣ ಸಾಧಿಸಲು ಮುಂದಾದರೆ, ಗಣರಾಜ್ಯದ ಮೇಲೆಯೇ ಪರಿಣಾಮ ಬೀರುತ್ತದೆ. ಹೀಗಾಗಿ ಸಿಬಿಐ ಸಂಸ್ಥೆಗೆ ನಿಷೇಧ ಹೇರಲು ಸಾಧ್ಯವಿಲ್ಲ. ಶಾರದಾ ಚಿಟ್ ಫಂಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿಚಾರಣೆಯಲ್ಲಿ ತೃಣಮೂಲ ಕಾಂಗ್ರೆಸ್ಸಿನವರ ಹೆಸರು ಕೇಳಿಬಂದರೆ, ಪಶ್ಚಿಮ ಬಂಗಾಳ ಸರ್ಕಾರ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಆಂಧ್ರ ಪ್ರದೇಶವು ಯಾವುದೋ ನಿರ್ದಿಷ್ಟ ವಿಚಾರಕ್ಕೆ ಸಿಬಿಐಗೆ ನಿರ್ಬಂಧಿಸಿದೆ ಎಂದು ಹೇಳಲು ಸಾಧ್ಯವಿಲ್ಲ. ತಾವು ಮಾಡಿರುವ ಬ್ರಷ್ಟಾಚಾರದ ಭಯದಿಂದ ಹೀಗೆ ಮಾಡಿರಬಹುದೆಂದು ಸ್ಪಷ್ಟವಾಗಿ ತಿಳಿಸಿದ್ದಾರೆ.