ನಿಖಿಲ್ ಗೆ ವೋಟ್ ಹಾಕದ ಮಂಡ್ಯದ ಜನರ ಮೇಲೆ ದರ್ಪ ತೋರಿಸಿದ ಸಚಿವ ಡಿ.ಸಿ ತಮ್ಮಣ್ಣ..

0
599

ಅವರಿಗೆ ವೋಟ್ ಹಾಕಿ ಕೆಲಸಕ್ಕಾಗಿ ನಮ್ಮನು ಕೇಳಲು ನಾಚಿಕೆ ಆಗಲ್ವಾ ಎಂದ ತಮ್ಮಣ.

ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ನಡೆದ ಮತದಾನದಲ್ಲಿ ಜೆಡಿಎಸ್ ಗೆ ಬಾರಿ ಸೋಲು ಕಂಡು ಬಂದು ಮುಖ್ಯಮಂತ್ರಿ ಮಗ ನಿಖಿಲ್ ಅವರಿಗೆ ಅವಮಾನವಾಗಿತ್ತು. ಜೆಡಿಎಸ್ ಕೋಟೆಯಂದೇ ಕರೆಯುತ್ತಿರುವ ಮಂಡ್ಯದಲ್ಲಿ ಇಷ್ಟೊಂದು ಹೀನಾಯ ಸೋಲು ಮೈತ್ರಿ ಸರ್ಕಾರದಲ್ಲಿ ಬಾರಿ ನೋವು ಬೀರಿತ್ತು, ಅದಕ್ಕಾಗಿ ಮತದಾರ ಮೇಲೆ ಸೇಡು ತಿರಿಸಿಕೊಳ್ಳಬೇಕು ಎನ್ನುವ ಚರ್ಚೆಗಳು ನಡೆಯಿತ್ತಿವೆ ಎನ್ನುವ ಮಾತುಗಳು ಕೇಳಿಬರುತ್ತಿದ್ದವು. ಅದಕ್ಕೆ ಸಾಕ್ಷಿಯಾಗಿ ಇಂದು ಮಂಡ್ಯದಲ್ಲಿ ಜೆಡಿಎಸ್ ಸಚಿವ ತಮ್ಮಣ್ಣ ಸಹಾಯ ಕೇಳಲು ಬಂದ ಜನರಿಗೆ ದರ್ಪ ತೋರಿಸಿದ್ದಾರೆ.


Also read: ಮತ್ತೆ ಕೇರಳದಲ್ಲಿ ನಿಫಾ ವೈರಸ್ ಪತ್ತೆ; ಕರ್ನಾಟಕದಲ್ಲೂ ಹೆಚ್ಚಿದ ನಿಫಾ ಭೀತಿ- 8 ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲು ಆರೋಗ್ಯ ಇಲಾಖೆ ಸೂಚನೆ..

ಹೌದು ಮಂಡ್ಯದಲ್ಲಿ ಜೆಡಿಎಸ್ ಗೆ ಕಡಿಮೆ ಬೆಂಬಲ ಬಂದ ಹಿನ್ನೆಲೆಯಲ್ಲಿ ಜನರ ಮೇಲೆ ಕತ್ತಿಮಸೆಯಲು ತಯಾರಾದ ಜೆಡಿಎಸ್ ಬಜಟ್ ನಲ್ಲಿ ನೀಡಿದ ಅನುದಾನಕ್ಕೆ ಕತ್ತರಿಹಾಕಿತ್ತೆ ಎನುವುದು ಕಾತರಿಯಾಗಿದೆ. ಏಕೆಂದರೆ ಸಮಸ್ಯೆ ಹೇಳಿಕೊಳ್ಳಲು ಬಂದಿರುವ ಜನರನ್ನು ತರಾಟೆಗೆ ತೆಗೆದುಕೊಂಡ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಆಕ್ರೋಶ ವ್ಯಕ್ತಪಡಿಸಿ ಅಭಿವೃದ್ಧಿಗೆ ನಾವು ಬೇಕು, ಮತ ಹಾಕಲು ವೋಟು ನೀಡಲು ಅವರು ಬೇಕಾ ಎಂದು ತರಾಟೆ ತೆಗೆದುಕೊಂಡಿದ್ದಾರೆ. ಅಲ್ಲದೆ ಮಣೆಗಾರಿಕೆ ಮಾಡಲು ಬರುತ್ತಾರೆ, ಅಭಿವೃದ್ದಿ ಕೆಲಸಕ್ಕಾಗಿ ನಮ್ಮನ್ನು ಕೇಳುವುದಕ್ಕೆ ನಾಚಿಕೆ ಆಗಲ್ವಾ ಎಂದು ಕಿಡಿಕಾರಿದ್ದು ಇವರ ನಡೆಯು ಮಂಡ್ಯದಲ್ಲಿ ಸಾಕಷ್ಟು ಅನುಮಾನಗಳನ್ನು ಮೂಡಿಸಿದೆ.


Also read: ಸರ್ಕಾರಿ ನೌಕರರಿಗೆ ಇನ್ಮುಂದೆ ರಜವೋ ರಜಾ; ಜಯಂತಿಗಳ ರಜೆ ಸೇರಿ 4ನೇ ಶನಿವಾರವೂ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಿಗೆ ರಜೆ ನೀಡಿದ ಮೈತ್ರಿ ಸರ್ಕಾರ..

ಆಗಿದ್ದು ಏನು?

ಮದ್ದೂರು ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಡಿ.ಸಿ.ತಮ್ಮಣ್ಣ ಅವರು ನಿನ್ನೆ ಮದ್ದೂರಮ್ಮ ಕೆರೆ ಆವರಣದಲ್ಲಿ ಕುಡಿಯುವ ನೀರಿನ ಯೋಜನೆ ವಿವಿಧ ಅಭಿವೃದ್ಧಿ ಕಾಮಗಾರಿ ಶಂಕುಸ್ಥಾಪನೆ ಬಂದಿದ ಸಚಿವರಿಗೆ ಕೆಲವು ದಲಿತ ಕಾಲೋನಿ ಗ್ರಾಮಸ್ಥರು ಮತ್ತು ಮಹಿಳೆಯರು ಗ್ರಾಮದ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಬಗ್ಗೆ ಸಚಿವರ ಗಮನ ಸೆಳೆಯಲು ಮುಂದಾದರು. ಈ ವೇಳೆ ಏಕಾಏಕಿ ಸಿಟ್ಟಾದ ಸಚಿವರು, ಅಭಿವೃದ್ಧಿಗೆ ನಾವು ಬೇಕು. ಮತ ಹಾಕುವುದು ಅವರಿಗಾ… ಎಂದು ಆಕ್ರೋಶ ವ್ಯಕ್ತಪಡಿಸಿ, ಈಗ ಸಹಾಯ ಕೇಳಲು ಬಂದಿರಲ್ಲ ನಾಚಿಕೆಯಾಗುವುದಿಲ್ವಾ… ಬೆಣ್ಣೆಗಾರಿಕೆ ಮಾಡಲು ಬರ್ತಾರಿಲ್ಲಿ…ಯಜಮಾನಿಕೆ ಮಾಡಲು ಬರ್ತಾರೆ… ಎಂದು ಕಿಡಿಕಾರಿದ್ದಾರೆ. ರಸ್ತೆ, ಕುಡಿಯುವ ನೀರು ಸೇರಿದಂತೆ ಹಲವಾರು ಕಾಮಗಾರಿಗಳನ್ನು ಮಾಡಿಸಿಕೊಟ್ಟೆ. ಆದರೆ ಯಾವುದನ್ನೂ ನೆನಪಿಸಿಕೊಳ್ಳುತ್ತಿಲ್ಲ. ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ನೀವು ತೋರಿಸಿದ ಅನುಕಂಪ ಸಾಕಾಗಿದೆ.


Also read: ಸಮಾಜ ಸೇವೆಯಲ್ಲಿ ಮೆಚ್ಚುಗೆಗೆ ಪಾತ್ರರಾದ ಭಾರತದ ಎರಡನೇ ಅತೀ ದೊಡ್ಡ ಶ್ರೀಮಂತ ವಿಪ್ರೋ ಸಂಸ್ಥಾಪಕ ಅಝೀಂ ಪ್ರೇಮ್ ಜಿ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ..

ಜೋಡೆತ್ತುಗಳನ್ನು ಹತ್ತಿಸಿಕೊಳ್ಳಿ;

ಮತದಾರರಿಗೆ ಬಾಯಿಗೆ ಬಂದಹಾಗೆ ಮಾತನಾಡುತ್ತ, ಚುನಾವಣೆಯಲ್ಲಿ ಜೋಡೆತ್ತುಗಳನ್ನು ಹೆಗಲ ಮೇಲೆ ಹೊತ್ತುಕೊಂಡು ತಿರುಗಿದ್ದಿರಾ ಈಗ ಅವರು ಇದ್ದಾರೆ ನಿಮ್ಮ ಸಮಸ್ಯೆಯನ್ನು ಆಲಿಸುತ್ತಾರೆ. ಇನ್ನೇನು ಜೋಡೆತ್ತುಗಳು ಬರುತ್ತವೆ, ಕರೆದು ಹತ್ತಿಸಿಕೊಳ್ಳಿ ಎಂದು ಪರೋಕ್ಷವಾಗಿ ದರ್ಶನ್ -ಯಶ್ ವಿರುದ್ಧ ಮಾತಾಡಿದ್ದಾರೆ. ಓಟ್ ಹಾಕಲ್ಲ, ಈಗ ಮಣೆಗಾರಿಕೆ ಮಾಡಲು ಬರುತ್ತಾರೆ, ಅಭಿವೃದ್ಧಿ ಕೆಲಸಕ್ಕಾಗಿ ನಮ್ಮನ್ನು ಕೇಳಲು ನಾಚಿಕೆ ಆಗಲ್ವಾ ಎಂದು ಕಿಡಿಕಾರಿದ್ದಾರೆ.
ಮೊನ್ನೆತಾನೆ ಕಾವೇರಿ ನೀರು ನಿರ್ವಹಣಾ ಮಂಡಳಿ ತೀರ್ಪಿಗೆ ಪ್ರತಿಕ್ರಿಯಿಸುವಾಗ ಸಚಿವ ಸಾ.ರಾ.ಮಹೇಶ್ ನೂತನ ಸಂಸದರಿದ್ದಾರೆ, ಅವರೇ ಎಲ್ಲಾ ಬಗೆಹರಿಸುತ್ತಾರೆ ಎಂದು ಹೇಳಿಕೆ ನೀಡಿದ್ದರು. ಈಗ ಎಲ್ಲಾ ಕಡೆ ಸಚಿವರು ಬಹಿರಂಗವಾಗಿಯೇ ತಮ್ಮ ಸಿಟ್ಟನ್ನು ಹೊರಹಾಕುತ್ತಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಡಿಸಿ ತಮ್ಮಣ ಅವರ ಮಾತುಗಳು ಮಂಡ್ಯದ ಜನರಲ್ಲಿ ನೇರವಾಗಿ ನಾಟ್ಟಿದ್ದು ಮುಂದೆ ಮಂಡ್ಯಕ್ಕೆ ಮೈತ್ರಿಯಿಂದ ಯಾವ ರೀತಿಯ ತೊಂದರೆಗಳು ಬರುತ್ತೇವೆ ಎನ್ನುವುದು ಆಲಿಸಬೇಕಿದೆ.