ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ನಲ್ಲಿ 984 ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ

0
520

ಭಾರತ ಸರ್ಕಾರದ ಪ್ರಮುಖ ವಿಮಾ ಕಂಪನಿಗಳಲ್ಲಿ ಒಂದಾದ ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್                                                                                                                      984 ಅಸಿಸ್ಟೆಂಟ್ ಹುದ್ದೆಗೆ  ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.

ದೇಶಾದ್ಯಂತ ಖಾಲಿ ಇರುವ ಹುದ್ದೆಗಳನ್ನು ರಾಜ್ಯವಾರು ವಿಂಗಡಿಸಿದ್ದು ಕರ್ನಾಟಕದಲ್ಲಿ 66 ಹುದ್ದೆಗಳು ಖಾಲಿ ಇವೆ.
ಕರ್ನಾಟಕ ರಾಜ್ಯಕ್ಕೆ ಮೀಸಲಿರಿಸಿರುವ ಹುದ್ದೆಗಳ ವಿವರ
ಎಸ್.ಸಿ-09
ಎಸ್.ಟಿ-04
ಒಬಿಸಿ-18
ಸಾಮಾನ್ಯ-35
ಒಟ್ಟು-66
ವಿದ್ಯಾರ್ಹತೆ
ಯಾವುದೇ ವಿಷಯದಲ್ಲಿ ಪದವಿಯನ್ನು ಪಡೆದವರು ಅರ್ಜಿ ಸಲ್ಲಿಸಬಹುದು. ಆದರೆ ಎಸ್ ಎಸ್ ಎಲ್ ಸಿ/ ಇಂಟರ್ ಮೀಡಿಯೇಟ್ ಪದವಿಯಲ್ಲಿ ಇಂಗ್ಲಿಷ್ ಅನ್ನು ಒಂದು ವಿಷಯವನ್ನಾಗಿ ಆಯ್ದುಕೊಂಡಿರಬೇಕು. ಪದವಿಯನ್ನು ಜೂನ್ 30,2016 ರ ಮೊದಲು ಪೂರ್ಣಗೊಳಿಸಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ರಾಜ್ಯದ ಭಾಷೆಯನ್ನು ಓದಲು ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು. ಹೀಗಾಗಿ ಕರ್ನಾಟಕದಲ್ಲಿನ ಹುದ್ದೆಗಳಿಗೆ ಕನ್ನಡ ಬಲ್ಲವರು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.
ವೇತನ ಶ್ರೇಣಿ
ರೂ.14,435 -40,080 /-
ವಯೋಮಿತಿ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ವರ್ಷವನ್ನು ಪೂರ್ಣಗೊಳಿಸಿರಬೇಕು ಹಾಗೂ ಗರಿಷ್ಠ 30 ವರ್ಷವನ್ನು ಮೀರಿರಬಾರದು.
ವಯೋಮಿತಿಯಲ್ಲಿ ಸಡಿಲಿಕೆ
ಎಸ್.ಟಿ/ ಎಸ್.ಸಿ ಅಭ್ಯರ್ಥಿಗಳಿಗೆ ಐದು ವರ್ಷ, ಒ.ಬಿ.ಸಿ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆಯನ್ನು ನೀಡಲಾಗಿದೆ.
ಸ್ಪರ್ಧಾತ್ಮಕ ಪರೀಕ್ಷಾ ವಿವರ
ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.
ಪ್ರಾಥಮಿಕ ಪರೀಕ್ಷೆ
ಒಟ್ಟು ನೂರು ಅಂಕಗಳ ಈ ಪರೀಕ್ಷೆಯು ನೂರು ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.ಉತ್ತರಿಸಲು 60 ನಿಮಿಷಗಳನ್ನು ನಿಗದಿಪಡಿಸಲಾಗಿರುತ್ತದೆ. ಈ ಪತ್ರಿಕೆಯು ಇಂಗ್ಲಿಷ್, ರೀಸನಿಂಗ್, ಮತ್ತು ನ್ಯುಮೆರಿಕ್ ಎಬಿಲಿಟಿ ವಿಷಯಗಳನ್ನು ಒಳಗೊಂಡಿರುತ್ತದೆ.
ಮುಖ್ಯ ಪರೀಕ್ಷೆ
ಒಟ್ಟು 200 ಅಂಕಗಳ ಈ ಪರೀಕ್ಷೆಯು 200 ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಉತ್ತರಿಸಲು 120 ನಿಮಿಷಗಳನ್ನು ನಿಗದಿಪಡಿಸಲಾಗಿರುತ್ತದೆ. ಈ ಪತ್ರಿಕೆಯು ಇಂಗ್ಲಿಷ್, ರೀಸನಿಂಗ್, ಜನರಲ್ ಅವೇರ್ನೆಸ್, ಕಂಪ್ಯೂಟರ್ ಲ್ಯಾಂಗ್ವೇಜ್ ಮತ್ತು ನ್ಯುಮೆರಿಕ್ ಎಬಿಲಿಟಿ ವಿಷಯಗಳನ್ನು ಒಳಗೊಂಡಿರುತ್ತದೆ.
ತಾತ್ಕಲಿಕ ಪರೀಕ್ಷಾ ದಿನಾಂಕ
ಪ್ರಾಥಮಿಕ ಪರೀಕ್ಷೆ: 22,23 ಏಪ್ರಿಲ್ 2017
ಮುಖ್ಯ ಪರೀಕ್ಷೆ: 23 ಮೇ 2017
ಅರ್ಜಿ ಶುಲ್ಕ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.500 /-
(ಎಸ್.ಸಿ/ಎಸ್.ಟಿ/ಮಹಿಳಾ ಅಭ್ಯರ್ಥಿಗಳಿಗೆ/ ಎಕ್ಸ್ ಸರ್ವೀಸ್ ಅಭ್ಯರ್ಥಿಗಳಿಗೆ ರೂ.50 /-)
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿಗಳನ್ನು ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್ ವೆಬ್ಸೈಟ್ ನಲ್ಲಿ ಆನ್-ಲೈನ್ ಮೂಲಕ ಸಲ್ಲಿಸುಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29 -03 -2017
ಸೂಚನೆ: ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಪರೀಕ್ಷಾ ದಿನಾಂಕಕ್ಕೂ ಹತ್ತು ದಿನ ಮುಂಚಿತವಾಗಿ ಪ್ರವೇಶ ಪತ್ರಗಳನ್ನು ಪಡೆದುಕೊಳ್ಳತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ: www.newindia.co.in