ಕರ್ನಾಟಕದ ಮುಂದಿನ ಮುಖ್ಯಮಂತ್ರಿ ನಿಖಿಲ್ ಕುಮಾರಸ್ವಾಮಿ; ಮೋದಿಗೆ ಹೋಲಿಕೆ ಮಾಡಿ ನಿಖಿಲ್ ಮುಖ್ಯಮಂತ್ರಿ ಆಗುತ್ತಾರಂತೆ, ಇದು ಸಾಧ್ಯವಾಗುತ್ತಾ??

0
189

ಪ್ರತಿಯೊಂದು ಚುನಾವಣೆಯಲ್ಲಿಯೂ ಜೆಡಿಎಸ್ ಪಕ್ಷದ ಪಾಲು ಇದ್ದೆ ಇರುತ್ತದೆ. ಅದರಂತೆ ಮುಖ್ಯಮಂತ್ರಿ ಸ್ಥಾನಕ್ಕೇರಿ ಅಧಿಕಾರಿ ಚಲಾಯಿಸಿದ ಇತಿಹಾಸವು ಕೂಡ ಜೆಡಿಎಸ್ ನಾಯಕರಲ್ಲಿದೆ. ಅದರಂತೆ ಈಗ ನಿಖಿಲ್ ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಶಾಸಕ ಗೌರಿಶಂಕರ್ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಮೋದಿಯವರಿಗೆ ಹೋಲಿಸಿ ಚಾ ಮಾಡುವರು ದೇಶದ ಪ್ರಧಾನಿಯಾದರೆ ರೈತರ ಸಾಲ ಮನ್ನಾ ಮಾಡಿದ ಕುಮಾರಸ್ವಾಮಿಯವರ ಮಗ ಮುಖ್ಯಮಂತ್ರಿ ಆಗೋದ್ರಲ್ಲಿ ಅನುಮಾನವಿಲ್ಲ ಎಂದು ಹೇಳಿರುವ ಹೇಳಿಕೆ ಭಾರಿ ವೈರಲ್ ಆಗಿದೆ.

Also read: ನಿಮ್ಮ ಆಧಾರ್ ಕಾರ್ಡ್-ನಲ್ಲಿ ಈ 6 ತಿದ್ದುಪಡಿಗೆ ಯಾವುದೇ ದಾಖಲೆ ಬೇಕಿಲ್ಲ; ಹಾಗಾದ್ರೆ ಯಾವವು 6 ಬದಲಾವಣೆ ಇಲ್ಲಿದೆ ಮಾಹಿತಿ.!

ಹೌದು ರಾಜ್ಯದಲ್ಲಿ ಉಪಚುನಾವಣೆ ಜೋರಾಗಿದ್ದು, ಎಲ್ಲಡೆ ಚುನಾವಣೆಯ ತಯಾರಿ ನಡೆಯುತ್ತಿದೆ. ಅದರಂತೆ ಜೆಡಿಎಸ್ ನಲ್ಲಿ ನಿಖಿಲ್ ಅವರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ಹೇಳಿಕೆ ನೀಡಿ. ಹೆಚ್ ಡಿ ಕುಮಾರಸ್ವಾಮಿ ಎವರ್ ಗ್ರೀನ್ ಮುಖ್ಯಮಂತ್ರಿ ಆದರೆ ನಿಖಿಲ್ ಕುಮಾರಸ್ವಾಮಿ ಮುಂದಿನ ಮುಖ್ಯಮಂತ್ರಿ ಎಂದು ತುಮಕೂರು ತಾಲೂಕಿನ ಹೊನ್ನುಡಿಕೆ ಗ್ರಾಮದಲ್ಲಿ ಕನ್ನಡ ಸಂಘಟನೆಯವರು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೌರಿಶಂಕರ್ ಈ ಹೇಳಿಕೆ ನೀಡಿದ್ದಾರೆ.

Also read: ಪ್ರಯಾಣಿಕರಿಗೆ ಶಾಕ್ ನೀಡಿದ ರೈಲ್ವೆ ಮಂಡಳಿ; ರೈಲುಗಳಲ್ಲಿ ಊಟ-ತಿಂಡಿ ಬೆಲೆ ಏರಿಕೆ, ಯಾವುದಕ್ಕೆ ಎಷ್ಟು ಏರಿಕೆ??

ಕುಮಾರಸ್ವಾಮಿ ಯಾವತ್ತೂ ಮುಖ್ಯಮಂತ್ರಿ ಆಗಿರುತ್ತಾರೆ. ಆದರೆ ನಿಖಿಲ್ ಮುಂದಿನ ಮುಖ್ಯಮಂತ್ರಿ ಏಕೆಂದರೆ ಇಂದಿನ ರಾಜಕೀಯ ಪರಿಸ್ಥಿತಿಗಳನ್ನು ಗಮನಿಸಿದಾಗ ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ ಮುಂದಿನ ಮುಖ್ಯಮಂತ್ರಿ ನಿಖಿಲ್ ಕುಮಾರಸ್ವಾಮಿ ಎಂದು ಭವಿಷ್ಯ ನುಡಿದು ಟೀ ಮಾರಿದವರು ಈ ದೇಶದ ಪ್ರಧಾನಿಯಾಗಬೇಕಾದರೆ ಸಾವಿರಾರು ರೈತರ ಸಾಲ ಮನ್ನಾ ಮಾಡಿದ ಕುಮಾರಣ್ಣನ ಏಕಚಕ್ರಾಧಿಪತಿ ಮಾಡಲು ಸಾಧ್ಯ ಇಲ್ವಾ ಎಂದು ಅವರು ಪ್ರಶ್ನಿಸಿದ್ದಾರೆ. ಕುಮಾರಣ್ಣನ ಒಳ್ಳೆತನ ಕರ್ನಾಟಕ ರಾಜ್ಯದಲ್ಲಿ ಒಂದು ದಿನ ಗೆದ್ದೆ ಗೆಲ್ಲುತ್ತದೆ ಎಂದು ಗೌರಿಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಡ್ಯದಲ್ಲಿ ಸೋತ ಕಥೆಯನ್ನು ವಿವರಿಸಿದ ನಿಖಿಲ್;

ಇದೇ ಕಾರ್ಯಕ್ರಮದಲ್ಲಿ ಮಂಡ್ಯ ಲೋಕಸಭಾ ಚುನಾವಣೆ ಸೋತ ಕಥೆಯನ್ನು ಬಿಚ್ಚಿಟ್ಟ ನಿಖಿಲ್ ಕುಮಾರಸ್ವಾಮಿ ಮಂಡ್ಯ ಚುನಾವಣೆ ಇಡೀ ದೇಶ ಗಮನಿಸುವ ಮೂಲಕ ಇತಿಹಾಸ ಸೃಷ್ಟಿಸಿತ್ತು. ಆದರೆ ನಾನು ಆ ಚುನಾವಣೆಯಲ್ಲಿ ಸೋತರೂ ಹಲವು ಷಡ್ಯಂತ್ರಗಳ ಅನುಭವ ಪಡೆದಿದ್ದೇನೆ ನನಗೆ ಚುನಾವಣೆಗೆ ಸ್ಪರ್ಧಿಸಲು ಇಷ್ಟ ಇರಲಿಲ್ಲ. ಮುಖಂಡರ ಒತ್ತಾಯದ ಮೇರೆಗೆ ಸ್ಪರ್ಧಿಸಿದ್ದೆ. ಆದರೆ ನನ್ನ ಸೋಲಿಸಲು ಸುಮಾರು 45 ದಿನ ಊಟ ತಿಂಡಿ ಬಿಟ್ಟು, ನಿದ್ದೆ ಮಾಡದೇ ದುಡಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರೂ ಮೈತ್ರಿ ಧರ್ಮ ಪಾಲನೆಯಾಗಿಲ್ಲ. ನಾನು ಸೋತಿದ್ದರೂ ಅಲ್ಲಿಯ ಅನುಭವ ಅಪಾರ. ಕುರುಕ್ಷೇತ್ರದ ಅಭಿಮನ್ಯು ನಿಜ ಜೀವನದಲ್ಲೂ ಅಭಿಮನ್ಯುವಾದ ಅನುಭವ ಪಡೆದಿದ್ದೇನೆ.

Also read: ದುಬಾರಿ ರೋಲ್ಸ್ ರಾಯ್ ಕಾರು ಖರೀದಿಸುವ ಮೂಲಕ ಗಮನ ಸೆಳೆದಿದ್ದ ಎಂಟಿಬಿ ನಾಗರಾಜ್ ಅವರ ಆಸ್ತಿ 18 ತಿಂಗಳಲ್ಲಿ 185 ಕೋಟಿ ರೂ ಹೆಚ್ಚಳ.!

ಕುರುಕ್ಷೇತ್ರದಲ್ಲಿ ಘಂಟೆ ಭಾರಿಸಿದ ಬಳಿಕ ಮತ್ತೆ ಯುದ್ಧ ಮಾಡುವಂತಿಲ್ಲ. ಆದರೆ ನನಗೆ ಯುದ್ಧ ಮುಗಿದರೂ ಹಿಂದಿನಿಂದ ಬಂದು ಹಿತ ಶತ್ರುಗಳು ತಿವಿದಿದ್ದಾರೆ. ಎಂದು ನಿಖಿಲ್ ಕುಮಾರಸ್ವಾಮಿ ಲೋಕಸಭಾ ಚುನಾವಣೆಯ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಎಲ್ಲಿದ್ದೀಯಪ್ಪಾ ನಿಖಿಲ್ ಎಂದು ಟ್ರೋಲ್ ಮಾಡುವ ಮೂಲಕ ನನ್ನನ್ನು ಮಾನಸಿಕವಾಗಿ ಕೊಲ್ಲಲು ಪ್ರಯತ್ನ ಪಟ್ಟರು. ಆದರೂ ಪರವಾಗಿಲ್ಲ ನನ್ನ ಇಂಟರ್ ನ್ಯಾಷನಲ್ ಸ್ಟಾರ್ ಮಾಡಿದಕ್ಕೆ ಧನ್ಯವಾದ ಎಂದು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಆದರೆ ಶಾಸಕ ಗೌರಿ ಶಂಕರ್ ಹೇಳಿದಂತೆ ಮುಂದೊಂದು ದಿನ ನಿಖಿಲ್ ಮುಖ್ಯಮಂತ್ರಿ ಆಗಬಹುದಾ??