ಹೊಸ ಸಂಶೋಧನೆಯಿಂದ ದೃಡಪಟ್ಟಿದ್ದೇನೆಂದರೆ, ಭವ್ಯ ಹಂಪಿಯ ಸಾಮ್ರಾಜ್ಯದ ಮೂಲ ಹೆಸರು “ಕರ್ನಾಟಕ ಸಾಮ್ರಾಜ್ಯ” ನಂತರ ಅದನ್ನು “ವಿಜಯನಗರ” ಸಾಮ್ರಾಜ್ಯವೆಂದು ತಿರುಚಲಾಗಿದೆ!!

0
551

ವಿಜಯನಗರ ಸಾಮ್ರಾಜ್ಯ ಎಂಬುದಕ್ಕೆ ಯಾವ ಶಾಸನ, ಸಮಕಾಲೀನ ಸಾಹಿತ್ಯದಲ್ಲಿ ಉಲ್ಲೇಖವಿಲ್ಲ. ಆದರೆ, ಕರ್ನಾಟಕ ಸಾಮ್ರಾಜ್ಯ ಎಂಬುದನ್ನು ದೃಢಪಡಿಸುವಂತಹ ಶಾಸನ, ಸಾಹಿತ್ಯದ ಆಧಾರವಿದೆ’ ಎಂದು ಹಿರಿಯ ಸಂಶೋಧಕಿ ವಸುಂಧರಾ ಫಿಲಿಯೋಜಾ ‘ಹಂಪಿ ವಿಜಯನಗರ’ ಪುಸ್ತಕದೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕರ್ನಾಟಕ ಸಂಗೀತ ಜನ್ಮ ತಾಳಿದ್ದು ಹಂಪಿಯಲ್ಲಿ ಹೊರತು ಬೇರೆ ರಾಜ್ಯದಲ್ಲಿ ಅಲ್ಲ. ಅದರ ಬಗ್ಗೆಯೂ ಅನೇಕ ಕಟ್ಟುಕಥೆಗಳನ್ನು ಕಟ್ಟಲಾಗಿದೆ’ ಎಂದು ತಿಳಿಸಿ ಮಾತನಾಡಿದ ವಸುಂಧರಾ.

Also read: ವಿಜಯನಗರ ಸಾಮ್ರಾಜ್ಯ ರೋಮ್ ನಗರಕ್ಕಿಂತಲೂ ಶ್ರೀಮಂತ ,ವಜ್ರವೈಢೂರ್ಯಗಳನ್ನು ರಸ್ತೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು

ನಾನು ಸಂಶೋಧನೆ ನಡೆಸಿದ ಪ್ರಕಾರ ವಿದ್ಯಾರಣ್ಯರು ಕರ್ನಾಟಕ ಸಾಮ್ರಾಜ್ಯ ಸ್ಥಾಪನೆಗೆ ಕಾರಣಕರ್ತರಲ್ಲ. ಅವರ ವಿದ್ಯಾಗುರು ವಿದ್ಯಾತೀರ್ಥರು ಕಾರಣಕರ್ತರು. ಹುಕ್ಕಾ- ಬುಕ್ಕಾ (ಇಂಗ್ಲಿಷಿಗೆ ತರ್ಜುಮೆಯಾಗುವಾಗ ಹಕ್ಕಾ- ಬುಕ್ಕಾ ಎಂದಾಗಿದೆ) 1336ರಲ್ಲಿ ಸ್ಥಾಪಿಸಿದರು. ಹೊಯ್ಸಳರ 3ನೇ ಬಲ್ಲಾಳನ ಕಾಲದಲ್ಲಿ ವಿದ್ಯಾತೀರ್ಥರು ದಕ್ಷಿಣ ಪ್ರಾಂತ್ಯಕ್ಕೆ ಒಂದೇ ಹಿಂದವೀ ಸಾಮ್ರಾಜ್ಯ ಇರಬೇಕೆಂಬ ಕಾರಣಕ್ಕೆ ಬನ್ನಿಮರದ ಕೆಳಗೆ ಕುಳಿತು ಚರ್ಚೆ ಮಾಡಿ ಈ ಸಾಮ್ರಾಜ್ಯವನ್ನು ಸ್ಥಾಪಿಸುತ್ತಾರೆ. ಹಲವು ಮಂದಿ ಇತಿಹಾಸಕಾರರಿಗೆ ಇದು ಕರ್ನಾಟಕ ಸಾಮ್ರಾಜ್ಯ ಎಂದು ತಿಳಿದಿದ್ದರೂ ಅವರಾರು ಹೇಳುವ ಧೈರ್ಯ ಮಾಡದೆ, ವಿಜಯನಗರ ಸಾಮ್ರಾಜ್ಯ ಎಂದೇ ಕರೆದುಕೊಂಡು ಬಂದರು.

ಬಿ.ಎ. ಸಾಲತೊರೆ, ಪಿ.ಬಿ. ದೇಸಾಯಿ, ರಾವ ಶರ್ಮಾ ಕೂಡ ವಿಜಯನಗರ ಅಂತಾನೆ ಕರೆದಿದ್ದಾರೆ. ಡಾ. ಶ್ರೀನಿವಾಸ ರಿಟ್ಟಿ ಅವರು 30 ಶಾಸನಗಳನ್ನು ಪ್ರಸ್ತಾಪಿಸಿ ಕರ್ನಾಟಕ ಸಾಮ್ರಾಜ್ಯ ಎಂದೇ ಕರೆದಿದ್ದಾರೆ! ಕೆಲವು ಸಾಹಿತಿಗಳು ಇದನ್ನು ಕರ್ನಾಟಕ ಸಾಮ್ರಾಜ್ಯ ಎಂಬುದನ್ನು ಒಪ್ಪುತ್ತಾರೆ. ಆದರೆ, ವಿಜಯನಗರ ಪದ ಹೆಚ್ಚು ಪ್ರಚಲಿತದಲ್ಲಿರುವ ಕಾರಣ ಅವರೆಲ್ಲರೂ ಆ ಶಬ್ದವನ್ನೇ ಪ್ರಯೋಗ ಮಾಡಿದ್ದಾರೆ. 1295ರಲ್ಲಿ ಮುಸ್ಲಿಂ ಅರಸರ ದಾಳಿಯನ್ನು ಹೊಯ್ಸಳ ರಾಜ ಮುಮ್ಮಡಿ ಬಲ್ಲಾಳ ಸಮರ್ಥವಾಗಿ ಎದುರಿಸಿದ್ದ. ಹೀಗಾಗಿ ಆತನನ್ನು ‘ಕರ್ನಾಟಕದ ಬಲ್ಲಾಳ’ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು’ ಎಂದು ಹೇಳಿದ್ದಾರೆ.

Also read: ಆದಿಕವಿ ಪಂಪನ ‘ಆದಿಪುರಾಣ’ ವಿಕ್ರಮಾರ್ಜುನ ವಿಜಯವನ್ನು ಕನ್ನಡದ ಅಮೋಘಮೇರು ಕೃತಿ

ಹಂಪಿಯಲ್ಲಿ ದೊರಕಿದ ಶಾಸನಗಳನ್ನು ಓದುತ್ತಾ ಹೋದೆಂತಲ್ಲ ಕರ್ನಾಟಕ ಸಾಮ್ರಾಜ್ಯದ ವಿಸ್ತಾರ ತಿಳಿಯುತ್ತದೆ. ಈಗ ಪೂಜಿಸುವ ಭುವನೇಶ್ವರಿ ತಾಯಿಯ ಬಗ್ಗೆ ಕರ್ನಾಟಕ ಸಾಮ್ರಾಜ್ಯದಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ. ಸರಸ್ವತಿಯ ಕೈಯಲ್ಲೂ ಪಾಶಂಕುಶವಿದೆ. ಭುವನೇಶ್ವರಿಯ ಕೈಯಲ್ಲೂ ಪಾಶಂಕುಶವಿದೆ. ನಮ್ಮ ಜನ ಸರಸ್ವತಿಯನ್ನೇ ಭುವನೇಶ್ವರಿ ಎಂಬುದಾಗಿ ಪರಿವರ್ತಿಸಿದ್ದಾರೆ. ರಾಬರ್ ಸಿವೆ ಸಂಶೋಧನೆ ನಡೆಸಿ ‘ಎ ಫೆದಗಾಟನ್ ಎಂಪೈರ್ ವಿಜಯನಗರ’ ಕೃತಿ ಬರೆದರೂ, ಕನ್ನಡ ಮತ್ತು ತೆಲುಗು ಶಾಸನಗಳಲ್ಲಿ ವಿಜಯನಗರ ಸಾಮ್ರಾಜ್ಯ ಅಂತ ಎಲ್ಲೂ ಇಲ್ಲ. ಅಲ್ಲೆಲ್ಲ ಇರುವುದು ಕರ್ನಾಟಕ ಸಾಮ್ರಾಜ್ಯ ಅಂತಾನೆ. ನಾನು ಪ್ರಾಗೈತಿಸಿದ ದಾಖಲೆಗಳ ಆಧಾರದ ಮೇಲೆ ಈ ಮಾತುಗಳನ್ನು ಆಡುತ್ತಿದ್ದೇನೆ. ಹಂಪಿ ಒಂದು ಕೊಂಪೆ ಎನ್ನುವ ಕಾಲ ಹೋಗಿ ಈಗ ಪ್ರವಾಸಿಗರು ಹೆಚ್ಚೆಚ್ಚು ಜನರು ಬರುತ್ತಿದ್ದಾರೆ. ನಾನು ಸಂಶೋಧನೆ ನಡೆಸುವಾಗ ಅಲ್ಲಿ ಜನರೆ ತಿರುಗಾಡುತ್ತಿರಲಿಲ್ಲ. ಎನ್ನುವುದನ್ನು ತಿಳಿಸಿದ್ದಾರೆ.

‘1963ರಿಂದ ಸತತವಾಗಿ ಹಂಪಿಗೆ ಭೇಟಿ ನೀಡಿ, ಸಂಶೋಧನೆ ಮಾಡುತ್ತಿದ್ದೇನೆ. ಎಲ್ಲ ಸಂಗತಿಗಳನ್ನು ‘ಹಂಪಿ ವಿಜಯನಗರ’ ಪುಸ್ತಕದಲ್ಲಿ ದಾಖಲಿಸಿದ್ದೇನೆ. ನನ್ನ ಪತಿ ಪಿಯರ್‌ ಸಿಲ್ವನ್‌ ಸಂಸ್ಕೃತ ವಿದ್ವಾಂಸರಾಗಿದ್ದಾರೆ. ಅವರು ಹಂಪಿಯ ಅರಸರ ಬಗ್ಗೆ ಸಂಶೋಧನೆ ಮಾಡಿದ್ದಾರೆ. ಹಂಪಿಯ ಆನೆಗುಂದಿ ಬಳಿ ಈ ಹಿಂದೆ ಸೇತುವೆ ನಿರ್ಮಿಸುತ್ತಿದ್ದಾಗ ಅದನ್ನು ನಾನು ವಿರೋಧಿಸಿದ್ದೆ. ಹಂಪಿ ಒಂದು ಜೀವಂತ ಪುರಾತತ್ವ ಸ್ಥಳ. ಅದನ್ನು ಸಂರಕ್ಷಿಸಬೇಕಾದುದು ಎಲ್ಲರ ಜವಾಬ್ದಾರಿ. ಆದರೆ, ಇತ್ತೀಚೆಗೆ ಹಂಪಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ನೋವಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.