ರಾಜ್ಯದ ಜನರಿಗೆ ತಿಂಗಳಿಗೊಂದು ಸಿಹಿಸುದ್ದಿ; ಮುಖ್ಯಮಂತ್ರಿ ಎಚ್. ಡಿ ಕುಮಾರಸ್ವಾಮಿಯವರ ಬರವಸೆ..

0
189

ಮುಖ್ಯಮಂತ್ರಿಯಾದ ಬಳಿಕ ಕುಮಾರಸ್ವಾಮಿಯವರ ಜನಪರ ಕಾಳಜಿ ಹೆಚ್ಚಾಗಿದೆ. ಇವರ ಅಧಿಕಾರದಲ್ಲಿ ಮಾಡಿದ ದೊಡ್ಡ ಕೆಲಸವೆಂದರೆ ರೈತರಿಗೆ ನೀಡಿದ ಭರವಸೆ ಸಾಲಮನ್ನಾ. ಇವರ ಹೇಳಿಕೆಗಳಿಗೆ ವಿರೋಧ ಪಕ್ಷದವರು ಎಷ್ಟೇ ಸೊಪ್ಪು ಹಾಕಿದರು ಕೂಡ ಮಣಿಯದ ಕುಮಾರಸ್ವಾಮಿಯವರು ರಾಮನಗರ ಚುನಾವಣೆ ನಡೆಸುತ್ತಿದ್ದಾರೆ. ಈ ಚುನಾವಣೆ ಮುಗಿದ ಬಳಿಕ ಮುಂದಿನ ತಿಂಗಳು ಬೆಂಗಳೂರಿನಲ್ಲಿ 10 ಲಕ್ಷ ರೈತರನ್ನೊಳಗೊಂಡ ಬೃಹತ್ ಸಮಾವೇಶ ಏರ್ಪಡಿಸಿ ರೈತರಿಗೆ ಋಣಮುಕ್ತ ಪತ್ರ ವಿತರಿಸಲಾಗುತ್ತದೆ. ಹಾಗೂ ನಾಡಿನ ಜನತೆಗೂ ದೀಪಾವಳಿ ಮಾತ್ರವಲ್ಲ, ಪ್ರತಿ ತಿಂಗಳೂ ಒಂದೊಂದು ಸಿಹಿ ಸುದ್ದಿ ಕೊಡುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.


Also read: ಬಿ.ಜೆ.ಪಿ.ಗೇ ರಿವರ್ಸ್ ಅಪರೇಷನ್ ಕಮಲದ ರುಚಿ ತೋರಿಸಿದ ಡಿ.ಕೆ.ಬ್ರದರ್ಸ್!!

ಯಾರೆ ಅಡ್ಡಗಾಲು ಹಾಕಿದರು ರಾಜ್ಯದ ರೈತರ ಸಾಲ ಮನ್ನಾಮಾಡುವ ವಿಚಾರದಿಂದ ಹಿಂದೆ ಸರಿಯುವ ಮಾತೇ ಇಲ್ಲ. ಇದರ ಸಂಬಂಧವಾಗಿ ರೈತರ ಸಾಲದ ಮಾಹಿತಿ ಕಲೆ ಹಾಕುತ್ತಿದ್ದೇನೆ. ಸಂಪೂರ್ಣ ಮಾಹಿತಿ ಇಲ್ಲದೆ ಫಜೀತಿಯಾಗಬಾರದು. ಎಂಬ ಕಾರಣಕ್ಕೆ ಸರಿಯಾದ ಮಾಹಿತಿಯನ್ನು ಸಂಗ್ರಹಿಸುತ್ತಿದು ಬಜೆಟ್​ನಲ್ಲಿ ಇದಕ್ಕೆ ಅಂತಾನೇ ಹಣವನ್ನು ಮೀಸಲಿಟ್ಟಿದ್ದೇನೆ. ಸಾಲಮನ್ನಾ ಮಾಡಲು ಬೇಕಾದ 45 ಸಾವಿರ ಕೋಟಿ ಸಣ್ಣ ಅಮೌಂಟ್ ಅಲ್ಲ. ಆದಕಾರಣ ನಮಗೆ ಸರಿಯಾದ ಮಾಹಿತಿ ಕೊಟ್ಟಿರುವ ರೈತರ ವಿವರವನ್ನು ಉಸ್ತುವಾರಿ ಸಮಿತಿಗೆ ಕಳುಹಿಸಲಾಗಿದ್ದು, ಅಷ್ಟೇ ಅಲ್ಲದೆ ರಾಜ್ಯದ ಜನತೆಗೆ ಮತ್ತು ರೈತರಿಗೆ ಸಿಹಿ ಸುದ್ದಿ ಕೊಡಲು ಅದಕ್ಕೆ ಪೂರಕವಾದ ಸಾಕಷ್ಟು ಯೋಜನೆಗಳನ್ನು ತಯಾರಿಯಲ್ಲಿವೆ ಎಂದಿದ್ದಾರೆ.

Also read: ದೀಪಾವಳಿ ಪ್ರಯಕ್ತ ಊರಿಗೆ ಪ್ರಯಾಣ ಮಾಡುವವರಿಗೆ KSRTC ಯಿಂದ ರಿಯಾಯಿತಿ; ಮಿಸ್ ಮಾಡದೆ ನೋಡಿ..!

ಬ್ಯಾಂಕ್ ಮಾಹಿತಿಗಾಗಿ IAS​ ಅಧಿಕಾರಿಯ ನೇಮಕ:

ಸಾಲಮನ್ನಾ ಜವಾಬ್ದಾರಿ ನೋಡಿಕೊಳ್ಳಲು ಐಎಎಸ್​ ಅಧಿಕಾರಿಯ ನೇಮಕ:
ರೈತರ ಸಾಲಮನ್ನಾದ ಬ್ಯಾಂಕ್​​ನಿಂದ ಬಂದ ಮಾಹಿತಿಗೆ ಸರಿಯಾಗಿ ಹಣ ಬಿಡುಗಡೆ ಮಾಡುವ ಜವಾಬ್ದಾರಿ ಹಾಗೂ ಬ್ಯಾಂಕ್​​ನಿಂದ ಮಾಹಿತಿಯನ್ನೂ ನೋಡಿಕೊಳ್ಳಲು ಸಿಎಂ ಕುಮಾರಸ್ವಾಮಿ IAS ಅಧಿಕಾರಿಯನ್ನು ನೇಮಕ ಮಾಡಿದ್ದಾರೆ. IAS ಅಧಿಕಾರಿ ಮನೀಶ್ ಮೌದ್ಗಿಲ್​ಗೆ ಜವಾಬ್ದಾರಿ ನೀಡಲಾಗಿದ್ದು ಮೌದ್ಗಿಲ್ ಜೊತೆ ಇಬ್ಬರು ಕೆಎಎಸ್ ಅಧಿಕಾರಿಗಳನ್ನು ನೀಡಿರುವ ಸಿಎಂ, ಸರ್ವೇ ಡಿಪಾರ್ಟ್ಮೆಂಟ್​ನಲ್ಲಿ ಕೆಲಸ ಮಾಡುವ ಇಬ್ಬರು ಕೆಎಎಸ್ ಅಧಿಕಾರಿಗಳಾದ ಗಂಗಾಧರ್ ಹಾಗೂ ಭವಾನಿ ಎಂಬ ಇಬ್ಬರು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಅಷ್ಟೇ ಅಲ್ಲದೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಪಟ್ಟಣದ ಇಂದಿರಾಗಾಂಧಿ ಸ್ಟೇಡಿಯಂನಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿ ಪರ ನಡೆದ ಶಿವಮೊಗ್ಗ ಲೋಕಸಭೆ ಉಪ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರು ನೀರಾವರಿಗೆ ಸಂಬಂಧಿಸಿದಂತೆ ಏತ ನೀರಾವರಿ ಯೋಜನೆ ಮತ್ತು ಈ ಭಾಗದ ಆನವಟ್ಟಿ, ಉಡುಗಣಿ, ತಾಳಗುಂದ, ಹೊಸೂರು ಹೋಬಳಿಗಳಲ್ಲಿ ನೀರಾವರಿ ಸೌಲಭ್ಯ ಕಲ್ಪಿಸುವ ಬಗ್ಗೆ ಹಾಗು ಬೀದಿ ಬದಿ ವ್ಯಾಪಾರಿಗಳಿಗೆ ಮೊಬೈಲ್‌ ಬ್ಯಾಂಕಿಂಗ್‌ ಮುಖಾಂತರ ಬಡ್ಡಿರಹಿತ ಸಾಲ ಸೌಲಭ್ಯ ನೀಡುವ ವಿಷಯ ಕುರಿತು ಹೇಳಿದ್ದರು.


Also read: ಮೋದಿ ಸರ್ಕಾರ ಕೇಂದ್ರದ ಸಂಸ್ಥೆಗಳ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತಿದೆ, CBI ಆಯ್ತು ಈಗ RBI-ನಲ್ಲಿ ಉಂಟಾಗಿದ್ದ ಭಿನ್ನಪ್ರಾಯಕ್ಕೆ  ಗವರ್ನರ್‌ ಊರ್ಜಿತ್‌ ಪಟೇಲ್‌ ರಾಜೀನಾಮೆ ಸಾಧ್ಯತೆ..!

ಮುಖ್ಯಮಂತ್ರಿಯವರ ಮಾತಿಗೆ ಆಯನೂರು ಮಂಜುನಾಥ್​ ಟೀಕೆ;

ಹೆಚ್ ಡಿ ಕುಮಾರಸ್ವಾಮಿ ಬಂದ ನಂತರ ಶಿವಮೊಗ್ಗ ಜಿಲ್ಲೆಯಲ್ಲಿ ಮದ್ಯ ಮಾರಾಟ ಹೆಚ್ಚಳವಾದ ಬಗ್ಗೆ ಆಯನೂರು ಮಂಜುನಾಥ್ ಹೇಳಿಕೆ ನೀಡಿದ್ದಾರೆ. ಈ ವಿಷಯಕ್ಕೆ ಸಿಎಂ ತಿರುಗೇಟು ನೀಡಿ. ನಾನು ಹೋಗಿ ಬಂದ ನಂತರ ಬಿಜೆಪಿಯವರು ಭಯ ಬಿದ್ದಿದ್ದಾರೆ. ಅದಕ್ಕೆ ಮದ್ಯ ಮಾರಾಟ ಹೆಚ್ಚಾಗಿದೆ ಎಂದು ಹೇಳಿದ್ದಾರೆ.