ಬಡತನದಿಂದ ಶಾಲೆಬಿಟ್ಟ ಕರ್ನಾಟಕದ ವ್ಯಕ್ತಿ; ಫೋಟೋಗ್ರಫಿಯಲ್ಲಿ ಮಾಡಿರುವ ಸಾಧನೆ ಪ್ರತಿಯೊಬ್ಬರಿಗೂ ಮಾದರಿಯಾಗುತ್ತೆ..

0
322

ಜೀವನದಲ್ಲಿ ಸಾಧನೆ ಮಾಡುವ ಹಂಬಲ ಒಂದಿದ್ದರೆ ಏನ್ ಬೇಕಾದರೂ ಸಾಧಿಸಬಹುದು ಎನುವುದಕ್ಕೆ ಮತ್ತೊಂದು ಸಾಕ್ಷಿ ವಿವೇಕ್ ಸೀಕ್ವೇರಾ, ಇವರು ಯಾರು ಅಂದರೆ ಮಂಗಳೂರು ಮೂಲದ ವಿವೇಕ್ ಒಂದು ಕಾಲದಲ್ಲಿ ಹಣವಿಲ್ಲದೆ ತನ್ನ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಬಿಟ್ಟವರು ಇಂದು ಭಾರತದ ನಂ.1 ಶ್ರೀಮಂತ, ರಿಲಯನ್ಸ್‌ ಸಮೂಹದ ಅಧ್ಯಕ್ಷ ಮುಕೇಶ್‌ ಅಂಬಾನಿ ಅವರ ಪುತ್ರಿಯ ಮದುವೆಯಲ್ಲಿ ಫೋಟೋ ಸೆರೆಹಿಡಿದ ವ್ಯಕ್ತಿ. ಇದು ಕೇಳಲು ಆಶ್ಚರ್ಯಕರವಾದರೂ ಅಸಲಿಗೆ ಸತ್ಯವಾಗಿ ದೇಶದ ತುಂಬೆಲ್ಲ ಸುದ್ದಿಯಾಗಿದೆ.


Also read: ಓದಿದ್ದು MTECH.. ಸಿಕ್ಕಿದ್ದು‌ ಸರ್ಕಾರಿ ರೈಲ್ವೆ ಆಫೀಸರ್ ಕೆಲಸ ಆದರೆ ಇವರು ಮಾಡುತ್ತಿರುವ ಕೆಲಸ ಸಮಾಜ ಸೇವೆ.. ಯಾರಿವರು??. ಎಲೆ ಮರೆ ಕಾಯಿಯಂತೆ ಸಮಾಜ ಸೇವೆ ಮಡುತ್ತಿರುವ ಸುನಿತಾ ಮಂಜುನಾಥ್ ರವರ ಬಗ್ಗೆ ನಿಮಗೆಷ್ಟು ಗೊತ್ತು?

ಹೌದು ಒಂದು ಕಾಲದಲ್ಲಿ ಹಣವಿಲ್ಲದೇ ವಿದ್ಯಾಭ್ಯಾಸವನ್ನೇ ಬಿಟ್ಟು, ನಂತರ ಫೋಟೋಗ್ರಫಿ ಆರಂಭಿಸಿ, 2010, 2011, 2012 ಮತ್ತು 2014ರಲ್ಲಿ ‘ಬೆಟರ್‌ ಫೋಟೋಗ್ರಫಿ’ ಸಂಸ್ಥೆ ನೀಡುವ ಅತ್ಯುತ್ತಮ ಮದುವೆ ಫೋಟೋಗ್ರಾಫರ್‌ ಪ್ರಶಸ್ತಿ ಪಡೆದ ವಿವೇಕ್‌, ಮುಂಬೈನಲ್ಲಿ ನಡೆದ ಭಾರತದಲ್ಲೆ ಅತ್ಯಂತ ಅದ್ಧೂರಿ ಮದುವೆ ಎಂಬ ಹಿರಿಮೆಗೆ ಪಾತ್ರವಾದ ಭಾರತದ ನಂ.1 ಶ್ರೀಮಂತ, ರಿಲಯನ್ಸ್‌ ಸಮೂಹದ ಅಧ್ಯಕ್ಷ ಮುಕೇಶ್‌ ಅಂಬಾನಿ ಅವರ ಪುತ್ರಿ ಇಶಾ ಅಂಬಾನಿ ಮತ್ತು ಆನಂದ್‌ ಪಿರಾಮಲ್‌ ಮದುವೆ ಮತ್ತು ಇತರೆ ಶುಭ ಸಮಾರಂಭಗಳ ಫೋಟೋ ತೆಗೆದಿದ್ದು ಮಂಗಳೂರಿನ ವಿವೇಕ್‌ ಸೀಕ್ವೇರಾ ಮತ್ತು ಅವರ ತಂಡ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ.
ಫೋಟೋಗ್ರಫಿ ವಿವೇಕ್ ಡಿಸೆಂಬರ್.1ರಿಂದ 15ರವರೆಗೆ ಅಂಬಾನಿ ಮಗಳ ಮದುವೆಯ ವಿವಿಧ ಕಾರ್ಯಕ್ರಮಗಳ ಕುರಿತು 1.2 ಲಕ್ಷ ಫೋಟೋಗಳನ್ನು ತೆಗೆದಿರುವ ವಿವೇಕ್‌ ಮತ್ತು ಅವರ ತಂಡ ಇದೀಗ ಫೋಟೋಗಳನ್ನು ಸುಂದರಗೊಳಿಸಿ ಹಸ್ತಾಂತರಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದು. ಇಡೀ ದೇಶದ ಗಮನ ಸೆಳೆದಿದ್ದಾರೆ.


Also read: ಗೂಗಲ್-ನ ಮುಖ್ಯಸ್ಥ ಸುಂದರ್ ಪಿಚೈ ರವರ ಬಗ್ಗೆ ಅವರ ಐ.ಐ.ಟಿ. ಪ್ರೊಫೆಸರ್ ಏನು ಹೇಳಿದ್ದಾರೆ ಅಂತ ಕೇಳಿ, ನಿಮಗೂ ಜೀವನಕ್ಕೆ ಪ್ರೇರಣೆಯಾಗಬಹುದು!

ಮೊದಲು ಅಂಬಾನಿ ಅವರ ಪುತ್ರಿಯ ಮದುವೆ ಅಂತ ಗೊತ್ತಿರಲಿಲ್ಲವಂತೆ:

ವಿವೇಕ್ ಅವರಿಗೆ ಮೊದಲು ತಮಗೆ ಇಂಥ ಆಫರ್‌ ಸಿಕ್ಕ ಬಗ್ಗೆ ಮಾತನಾಡಿರುವ ವಿವೇಕ್‌, ಕಳೆದ ಜೂನ್‌ ತಿಂಗಳಲ್ಲಿ ಅಂಬಾನಿ ಮತ್ತು ಪಿರಾಮಲ್‌ ಕುಟುಂಬಗಳೆರಡಕ್ಕೂ ಮಿತ್ರನಾಗಿರುವ ವ್ಯಕ್ತಿಯೊಬ್ಬರು ನನ್ನನ್ನು ಸಂಪರ್ಕಿಸಿದ್ದರು. ಈ ವೇಳೆ ಅವರು ಡಿ.1-15ರವರೆಗಿನ ನಿಮ್ಮ ಎಲ್ಲಾ ದಿನಗಳನ್ನು ನಮಗಾಗಿ ಕಾಯ್ದಿರಿಸಿ ಎಂದು ಸೂಚಿಸಿದ್ದರು. ಜೊತೆಗೆ ನನ್ನ ಕೆಲವೊಂದು ಫೋಟೋ ಸ್ಯಾಂಪಲ್‌ಗಳನ್ನು ಕಳುಹಿಸುವಂತೆ ಸೂಚಿಸಿದ್ದರು. ಆದರೆ ಯಾರ ಮದುವೆ ಫೋಟೋ ಎಂಬ ಮಾಹಿತಿ ನೀಡಿರಲಿಲ್ಲ ಎಂದು ವಿವೇಕ್ ಹೇಳಿದ್ದಾರೆ.


Also read: ಆಟೋ ಡ್ರೈವರ್ ಪುತ್ರ ಯುಪಿಎಸ್’ಸಿ ಟಾಪರ್ ಆದ ಕಥೆ ಕೇಳಿ, ಶ್ರಮಪಟ್ಟರೆ ಯಾರು ಬೇಕಾದರೂ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಅನ್ನೋದು ನಿಜ ಅಂತ ನಿಮಗೇ ಅನ್ಸುತ್ತೆ!

ಇಂತಹ ದೊಡ್ಡ ಆಫರ್ ಕುರಿತು ವಿವೇಕ್ ಹೇಳಿದು:

ಅಂಬಾನಿ ಅವರ ಮಗಳ ಮದುವೆ ವಿಚಾರ ತಿಳಿದ ಮೇಲೆ ವಿಷಯ ಅರಿಗಿಸಿಕೊಳ್ಳಲು ನನಗೆ 2 ದಿನ ಬೇಕಾಯ್ತು. ಬಳಿಕ ಮುಂಬೈಗೆ ತೆರಳಿ ಫೋಟೋ, ಫೋಟೋ ರಹಸ್ಯ, ಸಂಭಾವನೆ ಕುರಿತು ಒಪ್ಪಂದ ಮಾಡಿಕೊಂಡು ಅಲ್ಲಿಂದ ಮುಂದೆ 2 ತಿಂಗಳು ವಿವಿಧ ರೀತಿಯ ಸಿದ್ಧತೆ ಮಾಡಿಕೊಂಡೆವು. ನನ್ನ ಜೊತೆಗೆ ನನ್ನ ಲಕ್ಸೆ ಕ್ಯಾಪ್ಚ​ರ್‍ಸ್ನ 15 ಸದಸ್ಯರೂ ಸೇರಿಕೊಂಡರು. ಭಾರೀ ಭದ್ರತೆಯಲ್ಲಿ ನಡೆದ ವಿವಾಹವಾದ ಕಾರಣ ನಾನು ಮತ್ತು ನನ್ನ ಇನ್ನೊಬ್ಬ ಜೊತೆಗಾರಗೆ ವಿಶೇಷ ಗುರುತಿನ ಚೀಟಿ ನೀಡಲಾಗಿತ್ತು. ಅದನ್ನು ಬಳಸಿ ನಾವು ವಿವಾಹ ಮತ್ತು ಅದಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳಿಗೆ ಅಡೆತಡೆ ಇಲ್ಲದೆಯೋ ಫೋಟೋ ತೆಗೆಯುವ ಕೆಲಸದಲ್ಲಿ ತೊಡಗಿಕೊಂಡೆವು, ಇದು ಜೀವನದಲ್ಲಿ ಒಮ್ಮೆ ಸಿಗಬಹುದಾದ ಅವಕಾಶ. ಅದು ನನಗೇ ಒಲಿದುಬಂದಿದ್ದು ತೃಪ್ತಿತಂದಿದೆ ಎಂದಿದ್ದಾರೆ. ವಿವೇಕ್ ಇಲ್ಲಿಯವರೆಗೆ 15 ದೇಶಗಳಿಗೆ ಭೇಟಿ ಕೊಟ್ಟು 1300ಕ್ಕೂ ಹೆಚ್ಚು ಮದುವೆಗಳ ಫೋಟೋ ತೆಗೆದಿದ್ದಾರೆ ವಿವೇಕ್‌.