ಕಷ್ಟಪಟ್ಟರೆ ಜೀವನದಲ್ಲಿ ಯಶಸ್ಸು ಸಿಕ್ಕೇ ಸಿಗುತ್ತೆ ಅನ್ನೋದಕ್ಕೆ ಈ ಆಟೋ ಚಾಲಕ ದೊಡ್ಡ ಲಾರಿ ಕಂಪನಿಯ ಮಾಲೀಕನಾಗಿರುವುದೇ ಸಾಕ್ಷಿ!!

0
690

ಸಾಧನೆ ಮಾಡಿದ ಬಹುತೇಕರು ದಿನನಿತ್ಯವೂ ಒಂದು ಹೊತ್ತು ಊಟಕ್ಕೂ ಕಷ್ಟಪಟ್ಟು ದುಡಿದು ಊಟ ಮಾಡುವ ಕುಟುಂಬದಿಂದ ಬಂದವರೇ ಇದ್ದಾರೆ. ಅವರೆಲ್ಲರ ನಡೆದು ಬಂದ ಜೀವನದ ಅನುಭವಗಳು ಇಂದು ಪ್ರತಿಯೊಬ್ಬರಿಗೆ ಮಾದರಿಯಾಗಿವೆ. ಅಂತಹ ಸಾಲಿನಲ್ಲಿ ಬರುವ ಇಲ್ಲೊಬ್ಬ ಸಾಧಕರ ಜೀವನದ ಅನುಭವ ಇಲ್ಲಿದೆ. ಇದು ಕೇವಲ ಸಾಧನೆ ಮಾಡಬೇಕು ಎನ್ನುವರಿಗೆ ಮಾತ್ರ ಮಾದರಿಯಾಗದು ಜೀವನದಲ್ಲಿ ಏನಿಲ್ಲವೆಂದು ಸುಮ್ಮನಿರುವರಿಗೆ ಅಚ್ಚರಿ ಕತೆಯಾಗಿದೆ. ಏಕೆಂದರೆ ಆಟೋ ಚಾಲಕರಾಗಿದ್ದ ಸಾಮಾನ್ಯ ಬಡ ಯುವಕ, ದೊಡ್ಡ ಸಾರಿಗೆ ಸಂಸ್ಥೆಯನ್ನು ಮುನ್ನಡೆಸುವ ಹಂತಕ್ಕೆ ಬೆಳೆದದ್ದು ಸಾಮಾನ್ಯವಾದ ಸಂಗತಿಯಲ್ಲ.

Also read: ದೊಡ್ಡ ಕಂಪನಿ ತೊರೆದು ಕೈತುಂಬ ಸಂಬಳವನ್ನು ಲೆಕ್ಕಿಸದೆ, ಸ್ವಂತ ಊರಲ್ಲೇ ಕೃಷಿ ಮಾಡುತ್ತಿರುವ ಟೆಕ್ಕಿ ಸಹೋದರಿಯರ ನಿರ್ಧಾರ ವಲಸೆ ಹೋಗುವ ಯುವಕರಿಗೆ ಮಾದರಿ ಅಲ್ವ??

ಹೌದು ನಾಗಪುರದ ಯಶಸ್ವಿ ಉದ್ಯಮಿ ಪ್ಯಾರೆ ಖಾನ್ ತಮ್ಮ ಸಾಧನೆಯ ಬಗ್ಗೆ ಹೇಳಿದಂತೆ. ಅವರು ಸದ್ಯ 500 ಜನರಿಗೆ ಕೆಲಸವನ್ನು ಕೊಟ್ಟಿದ್ದಾರೆ, 125 ಟ್ರಕ್ ಸೇರಿದಂತೆ ಹಲವು ವಾಹನ ಹೊಂದಿದ್ದಾರೆ, ಮತ್ತು ನೂರಾರು ಕೋಟಿ ವ್ಯವಹಾರ ಮಾಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಟ್ರಕ್ ಖರಿಧಿಸಲು 11 ಲಕ್ಷ ಸಾಲ ಕೊಡಲು ಹಿಂದುಮುಂದು ನೋಡಿದ್ದ ಬ್ಯಾಂಕ್ ಮ್ಯಾನೇಜರ್ ಈಗ ಪ್ಯಾರೆ ಖಾನ್ ಮಾಲೀಕರಾಗಿರುವ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಇವರೇ ಮೊನ್ನೆ ಪ್ಯಾರೇ ಖಾನ್ ಪರವಾಗಿ 780 ಕೋಟಿ ಸಾಲ ಸ್ವೀಕರಿಸಿದ್ದಾರೆ.

Also read: ಹೆಚ್ಐವಿ ಪೀಡಿತ ಮಕ್ಕಳ ತಂದೆ ಎಂದು ಹೆಸರುವಾಸಿಯಾದ ಈ ವ್ಯಕ್ತಿ, 47 ಏಡ್ಸ್ ಪೀಡಿತ ಮಕ್ಕಳನ್ನು ದತ್ತು ಪಡೆದು ಸಾಕುತ್ತಿರುವ ರಿಯಲ್ ಹೀರೋ ಯಾರು ಗೊತ್ತಾ??

ಇವರ ತಾಯಿ ರಾಯಿಸಾ ಖತುನ್ ನಾಲ್ಕು ಮಕ್ಕಳನ್ನು ಸಾಕಲು ಸಾಕಷ್ಟು ಕಷ್ಟಪಟ್ಟಿದ್ದಾಳೆ. ಅವರು ನಾಗಪುರ ರೈಲು ನಿಲ್ದಾಣದಲ್ಲಿ ಕಿತ್ತಲೆ ಹಣ್ಣುಗಳನ್ನು ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದರು. ಪ್ಯಾರೆ ಖಾನ್ ಅವರಿಗೆ 18 ವರ್ಷವಿದ್ದಾಗ ಚಾಲನ ಪರವಾನಗಿ ದೊರೆಯಿತು . ಆಗ ಕೊರಿಯರ್ ಸಂಸ್ಥೆಯಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿದರಂತೆ. ಅಪಘಾತದ ನಂತರ ಆ ಕೆಲಸವನ್ನು ಬಿಟ್ಟು , ಅಮ್ಮ ಕೊಡಿಸಿದ ಆಟೊ ಖರೀದಿಸಿ. ಕೆಲ ದಿನಗಳವರೆಗೆ ಆಟೊ ಚಲಾಯಿಸಿದರು. ಆಗ ಅವರು ಕೀಬೋರ್ಡ್ ಸಹ ನುಡಿಸುತ್ತಿದ್ದರು. ಆದರಿಂದ ನಾಗುರದ ಮೆಲೊಡಿ ಮೇಕರ್ಸ್ ತಂಡದಲ್ಲಿವೂ ಕೆಲಸ ಮಾಡುತ್ತಿದ್ದರು. ಆಗ ಅವರ ತಂಡಕ್ಕೆ ಹೋಗಲು ಒಂದು ಬಸ್ ಖರಿಧಿಸಿದರು ಆದರೆ ಅದು ಸ್ವಲ್ಪ ದಿನಗಳಲ್ಲಿ ಹೋಯಿತು, ನಂತರ 2004ರಲ್ಲಿ ಟ್ರಕ್ ಖರೀದಿಸಿದರು ಅದೇ ಅವರಿಗೆ ಕೈ ಹಿಡಿದು 2007 ರಲ್ಲಿ 8 ಟ್ರಕ್ ಆದವು, 2013ರಲ್ಲಿ ಕಂಪನಿ ನೋಂದಣಿ ಮಾಡಿಸಿದ ಅವರು ಕೆಇಸಿ ಇಂಟರ್‌ನ್ಯಾಷನಲ್ , ಕೆಎಸ್‌ಡಬ್ಲೂ ಸ್ಟೀಲ್ , ಟಾಟಾ ಮತ್ತು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಕಂಪನಿಗಳ ಉತ್ಪನ್ನ ಸಾಗಣೆಗೆ ಟ್ರಕ್‌ಗಳು ಬಳಕೆಯಾಗುತ್ತಿವೆ.

Also read: ಐದು ಸಾವಿರ ರೂಪಾಯಿಯಲ್ಲಿ ಗ್ಯಾಸ್ ಏಜನ್ಸಿ ಶುರು ಮಾಡಿದ್ದ ಬಿಸಿನೆಸ್ ಈಗ ನೂರಾರು ಕೋಟಿ ವ್ಯವಹಾರ ಮಾಡುವ ಬಿಸಿನೆಸ್ ಆಗಿ ಬೆಳೆದಿದೆ!!

2016ರಲ್ಲಿ ಕೆಇಸಿ ಇಂಟರ್‌ನ್ಯಾಷನಲ್ ಕಂಪನಿಯ ಟ್ರಾನ್ಸ್-ಪರ್ ಭೂತಾನ್‌ಗೆ ಸಾಗಿರುವ ಗುತ್ತಿಗೆ ಪಡೆದುಕೊಂಡು ಇದಕ್ಕಾಗಿ ಈಶಾನ್ಯ ಭಾಗದಲ್ಲಿನ ದುರ್ಗಮ ಪ್ರದೇಶವೊಂದರಲ್ಲಿ ಮರಗಳನ್ನು ಕಡಿದು 30 ಕಿ . ಮೀ ರಸ್ತೆ ನಿರ್ಮಿಸಬೇಕಾಯಿತು . ದುರ್ಬಲ ಸಂತುಗಳನ್ನು ರಿಪೇರಿ ಮಾಡಲಾಯಿತು. ಕೊನೆಗೂ ಟ್ರಕ್ ಭೂತಾನ್ ತಲುಪಿತು. 2018 ರಲ್ಲಿ ಅಹಮದಾಬಾದ್-ನಲ್ಲಿರುವ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಐಐಎಂ ಮತ್ತು ಮಹಿಂದ್ರ ಟ್ರಕ್ ಅಂಡ್ ಬಸ್ ಕಂಪನಿ ಜಂಟಿಯಾಗಿ ಆಯೋಜಿಸಿದ ಕಾರ್ಯಕ್ರಮ ದಲ್ಲಿ ಯುವ ಸಾರಿಗೆ ಉದ್ಯಮಿ ವಿಭಾಗದ ಸ್ಪರ್ಧೆ ಯಲ್ಲಿ ನನಗೆ ಮೊದಲ ಬಹುಮಾನ ಲಭಿಸಿತು. ಅಮೆರಿಕದ ಇಬ್ಬರು ಸ್ಪರ್ಧಿಗಳನ್ನು ಒಳಗೊಂಡ ಒಟ್ಟು 18 ಮಂದಿ ಈ ಸ್ಪರ್ಧಿಯಲ್ಲಿದ್ದರು. ಕಾರ್ಯಕ್ರಮದ ಸಂಘಟಿಕರು ಈ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಕೇಳಿದಾಗ ನನಗೆ ಐಐಎಂ ಎಂದರೇನು ಎಂಬುದು ತಿಳಿದಿರಲಿಲ್ಲ. ಹಾಗಾಗಿ ಮನಸ್ಸಿಲ್ಲದೆ ಅದರಲ್ಲಿ ಭಾಗವಹಿಸಿದ್ದೆ. ಎಲ್ಲರೂ ಲ್ಯಾಪ್‌ಟಾಪ್ ಹಿಡಿದುಕೊಂಡು ತಮ್ಮ ಉದ್ಯಮದ ಬಗ್ಗೆ ವಿವರಿಸುತ್ತಿದ್ದರು. ಇದರ ಮಧ್ಯೆ ನಾನು, ಹಿಂದಿಯಲ್ಲಿ ನನ್ನ ಹಾದಿಯನ್ನು ವಿವರಿಸಿದರು.

ಈಗ ಅವರ ಬದುಕು ಐಐಎಂ ವಿದ್ಯಾರ್ಥಿಗಳ ಕೇಸ್ ಸ್ಟಡಿ ಆಗಿದೆ. ನನ್ನ ಅಮ್ಮನೇ ನನಗೆ ಸ್ಫೂರ್ತಿ. ಮಗ ಕೋಟ್ಯಾಧೀಶನಾದರೂ ಅಮ್ಮ ಇಂದೂ ಚಿಕ್ಕ ಕಿರಾಣಿ ಅಂಗಡಿಯಲ್ಲಿ ಕೂರುವುದು ಬಿಟ್ಟಿಲ್ಲ. ‘ನಾವು ಎಷ್ಟು ಸಂಪಾದಿಸ್ತೀವಿ ಅನ್ನೋದು ಮುಖ್ಯವಲ್ಲ. ಸದಾ ಏನಾದ್ರೂ ಕೆಲಸ ಮಾಡಬೇಕು ಅನ್ನೋದು ಮುಖ್ಯ ಎಂದು ಹೇಳಿದ್ದಾರೆ.