ಅಂಬಿ ಅಣ್ಣನ ಅಂತಿಮ ದರ್ಶನಕ್ಕೆ ರಮ್ಯ ಬರದಕ್ಕೆ ಬಲವಾದ ಕಾರಣ ಇದೆ, ರಮ್ಯರ ಬಗ್ಗೆ ಕಿಡಿ ಕಾರುತ್ತಿರುವವರಿಗೆ ಇದನ್ನು ತೋರಿಸಿ!!

0
991

ನಟ ಅಂಬರೀಷ್​ ಅಂತ್ಯಕ್ರಿಯೆಗೆ ಬಾರದ ನಟಿ, ಮಾಜಿ ಸಂಸದೆ ರಮ್ಯಾ ಅಂಬರೀಶ್‌ ನಿಧನ ಸುದ್ದಿ ತಿಳಿದು ಟ್ವೀಟ್‌ ಮೂಲಕ ಶ್ರದ್ಧಾಂಜಲಿ ಸಲ್ಲಿಸಿರುವ ರಮ್ಯಾ, ಅಂತಿಮ ನಮನ ಸಲ್ಲಿಸಲು ಆಗಮಿಸದಿರುವುದು ಮಂಡ್ಯ ಮತ್ತು ರಾಜ್ಯದ ಜನರಿಗೆ ಕೋಪ ತರಿಸಿದೆ. ರಮ್ಯಾ ವಿರುದ್ದ ಕಳೆದ ಮೂರು ದಿನಗಳಿಂದ ಅಂಬಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ರಮ್ಯಾ ವಿರುದ್ಧ ಪೋಸ್ಟ್​ಗಳನ್ನು ಹಾಕಿ ಮಂಡ್ಯ ಪಾಲಿಗೆ ಇಂದು ಸತ್ತ ರಮ್ಯಾ ಎಂದು ರಮ್ಯಾಗೆ ‘ಭಾವಪೂರ್ಣ ಶ್ರದ್ಧಾಂಜಲಿ’ ಎಂದೆಲ್ಲ ಬರೆದು ತೀವ್ರವಾಗಿ ಟೀಕಿಸುತ್ತಿದ್ದಾರೆ. ಆದರೆ ರಮ್ಯಾ ಅಂಬಿಯವರ ಅಂತಿಮ ದರ್ಶನಕ್ಕೆ ಬರದಿರಲು ಕಾರಣವೇನು ಎಂಬ ಸಂಶಯಕ್ಕೆ ಈಗ ಬಲವಾದ ಅಸಲಿ ಕಾರಣವೊಂದು ತಿಳಿದು ಬಂದಿದೆ.

Also read: ಗಾನ ಸರಸ್ವತಿ ಒಲಿಸಿಕೊಂಡ ಎಸ್.ಜಾನಕಿರವರ ಕೊನೆಯ ಸಾರ್ವಜನಿಕ ಕಾರ್ಯಕ್ರಮ ಕೇಳಿ ಪುಳಕಿತಗೊಂಡ ಅಭಿಮಾನಿ ಜನಸಾಗರ..

ರಮ್ಯಾ ಅಂಬಿ ದರ್ಶನಕ್ಕೆ ಬರಲಿಲ್ಲ ಕಾರಣ?

ರಮ್ಯಾ ಅಂಬರೀಶ್ ನಿಧನ ದ ಸಂದರ್ಭದಲ್ಲಿ ಗೈ ರಾಗುವಂಥ ತುರ್ತು ಏನಿತ್ತು ರಮ್ಯಾಗೆ ಮಂಡ್ಯ ಮರೆತ್ತಿದ ರಮ್ಯಾ ಈಗ ಅಂಬರೀಶ್ ರನ್ನು ಮರೆತ್ರಾ ರಮ್ಯಾ? ಅಂಬರೀಶ ಅಂತಿಮ ದರ್ಶನಕ್ಕೆ ಕೊನೆಗೂ ಬರಲಿಲ್ಲ ರಮ್ಯಾ ಎಂಬ ಟೀಕೆಗಳು ಕೇಳಿಬರುತ್ತಿದವು. ಮತ್ತು ಇದಕ್ಕೆ ಪ್ರಶ್ನೆ ಕೂಡ ಮೂಡಿತ್ತು ಇದಕ್ಕೆ ಉತ್ತರ ಸಿಕ್ಕಿದು ರಮ್ಯಾ ಅನಾರೋಗ್ಯದಿಂದ ಬಳಲುತ್ತಿದ್ದಾರಂತೆ ಇದನ್ನು ಅವರೇ ತಮ್ಮ Instagram ನಲ್ಲಿ ಬರೆದುಕೊಂಡಿದ್ದಾರೆ.

ರಮ್ಯಾಗೆ ಬಂದಿರುವ ಖಾಯಿಲೆ ಎಂತಹದು?

ರಮ್ಯಾ ಆಸ್ಟಿಯೋಕ್ಲ್ಯಾಸ್ಟೋಮ ಎಂಬ ಖಾಯಿಲೆಯಿಂದ ಬಳಲುತ್ತಿದು ಇದು ಅಪರೂಪದ ಕಾಯಿಲೆಗೆಯಾಗಿದೆ ಅಂತೆ ಇಂತಹ ಖಾಯಿಲೆ ಹತ್ತುಲಕ್ಷ ಮಂದಿಗೆಯಲ್ಲಿ ಒಬ್ಬರಲ್ಲಿ ಕಾಣಿಸಿಕೊಳ್ಳುವ ಈ ಖಾಯಿಲೆ ಆಸ್ಟಿಯೋಕ್ಲ್ಯಾಸ್ಟೋಮ ಈ ಖಾಯಿಲೆ ಮೂಳೆಗಳಿಗೆ ಸಂಬಂಧಿಸಿದ ರೋಗವಾಗಿದೆ. ಇದು ರಮ್ಯಾ ಅವರ ಕಾಲಿನ ಎಲುಬುಗಳ ನಡುವೆ ಉಂಟಾಗಿರುವ ಸಮಸ್ಯೆ ಇದಾಗಿದ್ದು, ಕೊಂಚ ನಿರ್ಲಕ್ಷ್ಯ ವಹಿಸಿದ್ರು ಮಾರಕ ಕಾಯಿಲೆ ಕ್ಯಾನ್ಸರ್ ಗೆ ತುತ್ತಾಗುತ್ತಿದ್ರಂತೆ. ಹೀಗಾಗಿ ಅವರು ಚಿಕಿತ್ಸೆ ಪಡೆದು ಅಕ್ಟೊಬರ್ ನಿಂದ ವಿಶ್ರಾಂತಿ ಪಡೆಯುತ್ತಿದ್ದಾರಂತೆ. ಈ ಕುರಿತು ಸ್ವತಃ ರಮ್ಯಾ ಅವರೇ ತಮ್ಮ ಇನ್ ಸ್ಟಾಗ್ರಾಂನಲ್ಲಿ ಕಾಲಿನ ಚಿತ್ರ ಹಾಕಿ ಬರೆದುಕೊಂಡಿದ್ದಾರೆ.

ಖಾಯಿಲೆ ಕುರಿತು ರಮ್ಯಾ ಹೇಳಿದು?

ರಮ್ಯಾ ತಮಗೆ ಬಂದ ಖಾಯಿಲೆ ಕುರಿತು ಜನರಿಗೆ ಸಂದೇಶವನ್ನು ಬರೆದಿದ್ದು. ದೇಹದಲ್ಲಿ ಸಮಸ್ಯೆಗಳಾದ್ರೆ ವ್ಯತಾಸ ಕಂಡು ಬಂದ್ರೆ ಡಾಕ್ಟರ್ ಸಂಪರ್ಕಿಸಿ. ನಿರ್ಲಕ್ಷ್ಯ ಮಾಡಿದರೆ ಸೂಕ್ತ ಬೆಲೆ ತೆರಬೇಕಾಗುತ್ತೆ. ನಿರ್ಲಕ್ಷ್ಯ ಮಾಡಿ ನಾನು ಈಗ ಪಾಠ ಕಲಿತಿದ್ದೇನೆ ಅಂತ ಕಾಲಿನ ಚಿತ್ರ ಹಾಕಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರಮ್ಯಾ ಗೈರು ಕುರಿತು ಡಿ.ಕೆ.ಶಿವಕುಮಾರ್ ಸ್ಪಷ್ಟನೆ:

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ನಿಧನದ ಸುದ್ದಿಯನ್ನು ರಮ್ಯಾರಿಗೆ ಫೋನ್ ಮಾಡಿ ತಿಳಿಸಿದೆ. ಆಗ ಅವರು, ಅಂಕಲ್ ಕಾಲು ಫ್ರ್ಯಾಕ್ಚರ್ ಆಗಿದೆ. ಅಂತಿಮ ದರ್ಶನ ಪಡೆಯಲು ಬರೋದಕ್ಕೆ ಸಾಧ್ಯವಾಗುತ್ತಿಲ್ಲ ಅಂತ ನಾನು ಫೋನ್ ಮಾಡಿದಾಗ ತಮ್ಮ ಸಮಸ್ಯೆ ಬಗ್ಗೆ ಹೇಳಿಕೊಂಡರು. ಸದ್ಯ ರಮ್ಯಾರಿಗೆ ಒಂದು ಕಡೆಯಿಂದ ಇನ್ನೊಂದು ಕಡೆ ಚಲಿಸಲು ಸಾಧ್ಯವಾಗುತ್ತಿಲ್ಲ ಹಾಗಾಗಿ ಅಂಬರೀಶ್ ಅವರ ಅಂತಿಮ ದರ್ಶನ ಪಡೆಯಲು ಬರಲಿಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.