ಮುಂಗಾರು ನಿರೀಕ್ಷೆಯಲ್ಲಿರುವ ರೈತರಿಗೆ ಆಘಾತಕರ ಸುದ್ದಿ; ಈ ವರ್ಷದ ಮಳೆಯು ಕೈ ಕೊಡುವ ಮುನ್ಸೂಚನೆ ಮೋಡ ಬಿತ್ತನೆಗೆ ನಿರ್ಧರಿಸಿದ ರಾಜ್ಯ ಸರ್ಕಾರ..

0
437

ಕಳೆದ ನಾಲ್ಕೈದು ವರ್ಷಗಳಿಂದ ಮಳೆಯಿಲ್ಲದೆ ಕಂಗಾಲಾದ ರೈತರು ಈ ವರ್ಷವಾದರೂ ಸಾಕಷ್ಟು ಮಳೆಯಾಗುತ್ತದೆ ಎನ್ನುವ ನಿರಿಕ್ಷೆಯಲ್ಲಿದರು. ಆದರೆ ಈ ಬಾರಿವೂ ಮಂಗಾರು ಮಳೆ ಕೈ ಕೊಡಲಿದೇ ಎನ್ನುವ ಆಘಾತದ ಸುದ್ದಿಯೊಂದು ಹೊರಬಿದಿದ್ದು, ಮುನ್ಸೂಚನೆಯಂತೆ ರಾಜ್ಯ ಸರ್ಕಾರ ಮೋಡ ಬಿತ್ತನೆ ಮಾಡಲು ನಿರ್ಧಾರ ಮಾಡಿದೆ. ಜೂನ್ ಕೊನೆ ವಾರದಲ್ಲಿ ಈ ಬಾರಿ ಮೋಡ ಬಿತ್ತನೆ ನಡೆಯಲಿದ್ದು, ಸುಮಾರು 88 ಕೋಟಿ ವೆಚ್ಚದಲ್ಲಿ ಮೋಡ ಬಿತ್ತನೆಗೆ ತಯಾರಿ ನಡೆದಿದೆ.

Also read: ಮೋಡಬಿತ್ತನೆ ಎಂದರೇನು? ಅಗತ್ಯವೇನು?

ಮತ್ತೆ ಮೋಡ ಬಿತ್ತನೆ?

ಹೌದು ವಾಡಿಕೆಯಂತೆ ಈ ಬಾರಿ ಮುಂಗಾರು ಕೈ ಕೊಡುವುದು ಖಾತರಿಯಾಗಿದೆ. ಇದರಿಂದ ಬಹು ನೀರಿಕ್ಷೆಯಲ್ಲಿರುವ ರೈತರಿಗೆ ನಿರಾಸೆ ಮೂಡಿದಂತಾಗಿದೆ. ಎಂದು ಇದೆ ವಿಚಾರವನ್ನು ಕುರಿತು ಮಾಹಿತಿ ನೀಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಈ ಬಾರಿ ಮುಂಗಾರು ಕೈ ಕೊಡುವ ಮುನ್ಸೂಚನೆ ಸಿಕ್ಕಿದೆ. ಹೀಗಾಗಿ ಮೋಡ ಬಿತ್ತನೆ ಮಾಡುವುದಕ್ಕೆ ನಿರ್ಧಾರ ಮಾಡಿದ್ದೇವೆ. ಈ ಬಾರಿ ಎರಡು ವರ್ಷದ ಅವಧಿಗೆ ಟೆಂಡರ್ ಕರೆಯಲು ತೀರ್ಮಾನ ಮಾಡಿದ್ದು, ಜೂನ್ ಕೊನೆ ವಾರದಲ್ಲಿ ಈ ಬಾರಿ ಮೋಡ ಬಿತ್ತನೆ ನಡೆಯಲಿದ್ದು, ಸುಮಾರು 88 ಕೋಟಿ ವೆಚ್ಚದಲ್ಲಿ ಮೋಡ ಬಿತ್ತನೆಗೆ ನಿರ್ಧಾರ ಮಾಡಿದ್ದೇವೆ. ಆದಷ್ಟು ಬೇಗ ಟೆಂಡರ್ ಪ್ರಕ್ರಿಯೆ ಪ್ರಾರಂಭ ಮಾಡುವುದಾಗಿ ತಿಳಿಸಿದ್ದಾರೆ.

ಎಲ್ಲಲ್ಲಿ ಮೋಡ ಬಿತ್ತನೆ?

ಈ ಬಾರಿ ಎರಡು ವರ್ಷದ ಅವಧಿಗೆ ಮೋಡ ಬಿತ್ತನೆ ನಡೆಯಲಿದ್ದು, ಸುಮಾರು 88 ಕೋಟಿ ರೂ. ವೆಚ್ಚದಲ್ಲಿ ರಾಜ್ಯಾದ್ಯಂತ ಮೋಡ ಬಿತ್ತನೆಗೆ ನಿರ್ಧಾರ ಮಾಡಿದ್ದು, ಹುಬ್ಬಳಿ ಮತ್ತು ಬೆಂಗಳೂರಿನಲ್ಲಿ ಎರಡು ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ. ಎರಡು ವಿಮಾನದಲ್ಲಿ ಈ ಬಾರಿ ಮೋಡ ಬಿತ್ತನೆ ಮಾಡಲಾಗುತ್ತದೆ. ತಜ್ಞರ ಸಮಿತಿ ಕೂಡಾ ಮೋಡ ಬಿತ್ತನೆ ಅವಶ್ಯಕತೆ ಇದೆ ಎಂದು ತಿಳಿಸಿದೆ. ಹೀಗಾಗಿ ಮೋಡ ಬಿತ್ತನೆಗೆ ಸರ್ಕಾರ ನಿರ್ಧಾರ ಮಾಡಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Also read: ಮೋದಿಯಿಂದ ಪ್ರೇರಿಪಿತನಾದ ಈ ವಿದ್ಯಾರ್ಥಿ ಮಳೆ ತರಿಸಲು, ಡ್ರೋನ್ ಆವಿಷ್ಕಾರ ಮಾಡಿದ್ದಾನೆ!!

ಅದರಂತೆ ಬರ ಪರಿಹಾರ ಕ್ರಮವಾಗಿ ಮಾತನಾಡಿದ ಸಚಿವರು, ಈಗಾಗಲೇ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿದ್ದೇವೆ. ಎಲ್ಲಾ ತಾಲೂಕು, ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಲ್ಲಾ ಜಿಲ್ಲಾಧಿಕಾರಿಗಳ ಖಾತೆಗೆ ಹಣ ಸಂದಾಯ ಮಾಡಿದ್ದು, ಅಗತ್ಯ ಕಡೆಗಳಲ್ಲಿ ಟ್ಯಾಂಕರ್ ನಲ್ಲಿ ನೀರು ಕೊಡಿ ಎಂದು ಹೇಳಿದ್ದೇವೆ. ಈಗಾಗಲೇ ಬಾಡಿಗೆಗೆ ಬೋರ್ ವೇಲ್‍ಗಳ ನೀಡು ಪಡೆದು ಪೂರೈಕೆ ಮಾಡುತ್ತಿದ್ದೇವೆ. ಜಾನುವಾರುಗಳ ಮೇವಿನ ಬಗ್ಗೆ ಸೂಕ್ತ ಕ್ರಮಕ್ಕೂ ಸೂಚನೆ ನೀಡಿದ್ದೇವೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 200 ಕೋಟಿ ರೂ.ಗಳನ್ನು ಟಾಸ್ಕ್ ಫೋರ್ಸ್ ಗೆ ಬಿಡುಗಡೆ ಮಾಡಿದ್ದೇವೆ. ಹಣ ಖರ್ಚಾದರೆ ಎಷ್ಟು ಹಣ ಬೇಕಾದರೂ ಕೊಡಲು ಸರ್ಕಾರ ಸಿದ್ಧವಾಗಿದೆ. 24 ಗಂಟೆಯೊಳಗೆ ಸಮಸ್ಯೆ ಪರಿಹಾರಕ್ಕೆ ಸೂಚನೆ ಎಂದು ಹೇಳಿದ್ದಾರೆ.

ಮೋಡ ಬಿತ್ತನೆಯಿಂದ ಮಳೆ ಸುರಿಯಿತ್ತ?

ಮೋಡ ಬಿತ್ತನೆ ಕುರಿತು ಹಲವು ಅನುಮಾನ ಮೊದಲಿನಿಂದ ಮೂಡಿವೆ ಇಷ್ಟೊಂದು ಹಣ ಖರ್ಚುಮಾಡಿ ಬಿತ್ತನೆ ಮಾಡಿದರೆ. ಮಳೆ ಬಂದೆ ಬರುತ್ತದೆ ಎನ್ನುವುದಕ್ಕೆ ಯಾವುದೇ ಸಾಕ್ಷಿಗಳು ಇಲ್ಲ. ಈ ಸಂಬಂಧ ವಿಧಾನಸಭೆಯ ಒಳಗೆ ಮತ್ತು ಹೊರಗೆ ಹೆಚ್ಚಿನ ಚರ್ಚೆಗಳಾಗುವುದಿಲ್ಲ. ಮತ್ತು ತಜ್ಞ ವಿಜ್ಞಾನಿಗಳ ಯಾವುದೇ ಸಲಹೆಗಳನ್ನು ಕೂಡ ಸರಕಾರ ಸ್ವೀಕರಿಸುವುದಿಲ್ಲ. ಈ ಹಿಂದೆ ಬಿ.ಜೆ.ಪಿ. ಆಡಳಿತ ನಡೆಸುತ್ತಿದ್ದ ಸಮಯದಲ್ಲಿ ‘ಮೋಡ ಬಿತ್ತನೆ’ ಅವೈಜ್ಞಾನಿಕವಾದದ್ದು, ಈ ಕಾರ್ಯವನ್ನು ಕೈಗೊಳ್ಳಬೇಕಿಲ್ಲವೆಂದು ‘ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ’ ಅಧ್ಯಕ್ಷ ರು ಹಾಗೂ ಜಗತ್ತಿನ ಶ್ರೇಷ್ಠ ಬಾಹ್ಯಾಕಾಶ ವಿಜ್ಞಾನಿಗಳಲ್ಲೊಬ್ಬರಾದ ಪ್ರೊ. ಯು.ಆರ್‌.ರಾವ್‌ ಅವರು ಅಂದಿನ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದರು.

ಆದರೆ ‘ಮೋಡ ಬಿತ್ತನೆ’ಯ ಕಾಂಟ್ರಾಕ್ಟ್ ಹಿಡಿದ ವಿಮಾನ ಕಂಪನಿಯ ಸಲಹೆಯನ್ನು ಪರಿಗಣಿಸಿದ ಸರಕಾರವು ರಾಜ್ಯದಲ್ಲಿ ‘ಮೋಡ ಬಿತ್ತನೆ’ಯ ಕಾರ್ಯಕ್ಕೆ ಚಾಲನೆ ನೀಡಿತು. ಅದಕ್ಕೂ ಮುಂಚಿನ ಕಾಂಗ್ರೆಸ್‌ ಪಕ್ಷ ದ ಆಡಳಿತಾವಧಿಯಲ್ಲೂ ‘ಮೋಡ ಬಿತ್ತನೆ’ ಸರಳವಾಗಿ ನಡೆಯಿತು. ಆದರೆ ಈ ‘ಮೋಡ ಬಿತ್ತನೆ’ಗಳಿಂದ ಮಳೆ ಬಂದಿದ್ದು ಎಷ್ಟು ಎನ್ನುವ ಬಗ್ಗೆ ? ಅವುಗಳ ಹೊರತಾಗಿಯೂ ಎಷ್ಟು ಪ್ರಮಾಣದ ಮಳೆ ಬರುತ್ತಿತ್ತು? ಇಂಥ ಪ್ರಶ್ನೆಗಳಿಗೆ ಉತ್ತರ ಕಂಡು ಹಿಡಿಯಲಾಗದ ಕಾರಣ, ಪ್ರತಿ ವರ್ಷದಂತೆ ಈ ವರ್ಷವೂ ‘ಮೋಡ ಬಿತ್ತನೆ’ ಕಾರ್ಯಕ್ಕೆ ಚಾಲನೆ ಸಿಗುತ್ತದೆಂದು ನಾವು ನಿರೀಕ್ಷಿಸಬಹುದು. ಆದರೆ ಮಳೆ ಬಂದೆ ತಿರುತ್ತದೆ ಎನುವುದು ಯಾರಿಗೂ ಖಾತರಿಯಿಲ್ಲ.