ಇತ್ತ ಜಗತ್ತಿನ ಅತ್ಯಂತ ದೊಡ್ದದ್ದಾದ ಸರ್ದಾರ್ ಪಟೇಲ್-ರವರ ಪ್ರತಿಮೆ ಅನಾವರಣಗೊಂಡರೆ, ಅತ್ತ ಗುಜರಾತ್-ನ RSS ಕಚೇರಿಯಲ್ಲಿ ಪಟೇಲ್-ರ ವಿರೋಧಿಸುವ ಪುಸ್ತಕ ಮಾರಾಟವಾಗುತ್ತಿದೆ!!

0
591

ಸರ್ದಾರ್ ಪಟೇಲ್ ಅವರ ವಿರೋಧಿ ಪುಸ್ತಕವುಆರ್‌ಎಸ್‌ಎಸ್‌ನಿಂದ ಮಾರಾಟ..!ಇತ್ತ ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ನರ್ಮದಾ ನದಿ ತಟದಲ್ಲಿ ಸ್ಥಾಪಿಸಿರುವ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ವಿಶ್ವದ ಅತಿ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿ, ಭಾರತದ ಅಸ್ಮಿತೆಗಾಗಿ ಶ್ರಮಿಸಿದ ಮೇರು ವ್ಯಕ್ತಿತ್ವಕ್ಕೆ ಗೌರವ ಸಲ್ಲಿಸಿದರು. ಆದರೆ ಅದೇ ಗುಜರಾತ್’ನಲ್ಲಿ ಸರ್ದಾರ್ ಪಟೇಲ್ ಅವರ ವಿರೋಧಿಸಿ ಬರೆದಿರುವ ಪುಸ್ತಕವು ಮಾರಾಟವಾಗುತ್ತಿದೆ ಎನ್ನಲಾಗುತ್ತಿದೆ.  

ಗುಜರಾತ್’ನಲ್ಲಿ ಜಸ್ವಂತ್ ಸಿಂಗ್ ಅವರು ರಚಿಸಿದ ಜಿನ್ನಾ ರಕುರಿತ ಪುಸ್ತಕವನ್ನು ನಿಷೇಧಿಸುವಲ್ಲಿ ನರೇಂದ್ರ ಮೋದಿಮಹಾನ್ ಅಲೌಕಿಕತೆಯನ್ನು ಪ್ರದರ್ಶಿಸಿದರು. ಆದರೆ ಸರ್ದಾರ್ವಲ್ಲಭಾಯ್ ಪಟೇಲ್ ಅವರು ದೇಶವನ್ನು ವಿಭಜಿಸಿದರುಎಂದು ಬೈದು ಬರೆದಿರುವ ಪುಸ್ತಕವೊಂದು 3 ದಶಕದಿಂದಚಾಲ್ತಿಯಲ್ಲಿತ್ತು. ಅದನ್ನು ಆರ್‌ಎಸ್‌ಎಸ್‌ ಸಿದ್ಧಾಂತದಎಚ್.ವಿ.ಶೇಷಾದ್ರಿಯವರು ರಚಿಸಿದ್ದು, ಪುಸ್ತಕವನ್ನುಗುಜರಾತ್’ನಲ್ಲಿರುವ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯಿಂದಮಾರಾಟವಾಗಿದೆ..!

 

ಆದರೆ ಗುಜರಾತ್ ರಾಜ್ಯದೊಂದಿಗೆ ಪ್ರಧಾನಿ ಮೋದಿಯವರುನಿರಂತರ ಸಂಪರ್ಕದಲ್ಲಿದ್ದರೂ ಇದರ ಬಗ್ಗೆ ಅವರಿಗೆತಿಳಿದಿಲ್ಲವೆಂಬುದು ವಿಪರ್ಯಾಸ..! ಅಲ್ಲದೇ ಮೋದಿ13(1967-1980) ವರ್ಷಗಳ ಕಾಲ ಗುಜರಾತ್’ನಲ್ಲೇ ಇದೇಆರ್‌ಎಸ್‌ಎಸ್‌ನಲ್ಲಿ ಪ್ರಚಾರಕರಾಗಿ ಅಲ್ಲಿನ ಹಲವು ಪತ್ರಿಕೆಹಾಗೂ ಪುಸ್ತಕಗಳ ಪ್ರಚಾರ ಮಾಡಿದ್ದರು. `The Tragic Story of Partition’ ಎಂಬ ಹೆಸರಿನ ಪುಸ್ತಕವನ್ನು1982ರಲ್ಲಿ ಪ್ರಕಟಿಸಲಾಗಿತ್ತು. ಪುಸ್ತಕದಲ್ಲಿ ನೆಹರು ಮತ್ತುಪಟೇಲರ ಬಗ್ಗೆ ಉಲ್ಲೇಖಿಸಲಾಗಿದೆ.

ಈಗಲೂ ಆರ್‌ಎಸ್‌ಎಸ್‌ ಕೇಂದ್ರದ ಭಾಗವಾಗಿರುವ ಸಾಹಿತ್ಯಸಾಧನಾ ಟ್ರಸ್ಟ್’ನಿಂದ ಮಾರಾಟವಾಗುತ್ತಿದೆ. ಈಗಾಗಲೇಸಾವಿರಕ್ಕೂ ಹೆಚ್ಚು ಪುಸ್ತಕಗಳು ಮಾರಾಟವಾಗಿದೆ ಎನ್ನಲಾಗಿದೆ.ಪುಸ್ತಕದಲ್ಲಿ ಅಖಂಡ ಭಾರತದ ಪ್ರಾಮುಖ್ಯತೆ ಬಗ್ಗೆಹೇಳಲಾಗಿದೆ. ಇದು ಸಂಘದ ಸಿದ್ಧಾಂತಕ್ಕೆ ಅತೀ ಮುಖ್ಯವಾದಪ್ರಬಂಧವಾಗಿದೆ ಎಂದು ಗುಜರಾತ್ ವಿಶ್ವವಿದ್ಯಾಲಯದಲ್ಲಿರಾಜಕೀಯ ವಿಜ್ಞಾನವನ್ನು ಹೇಳಿಕೊಡುವ ಪ್ರೊಫೆಸರ್ಹೇಮಂತ್ ಷಾ ಹೇಳುತ್ತಾರೆ. ಈ ನಡುವೆ ಪ್ರಧಾನಿ ಮೋದಿಯವರು ಇತ್ತೀಚೆಗಷ್ಟೇಎಚ್.ವಿ.ಶೇಷಾದ್ರಿಯವರು ಬರೆದ ಪುಸ್ತಕಗಳನ್ನುಪರಿಶೀಲಿಸುವಂತೆ ತಿಳಿಸಿದ್ದಾರೆ ಎನ್ನಲಾಗುತ್ತಿದೆ.