ದಿನವೊಂದಕ್ಕೆ ೫-೧೦ ರೂಪಾಯಿ ಗಳಿಸುತ್ತಿದ್ದ ಕುಟುಂಬದಿಂದ ಬಂದ ಇವರು, ಟ್ಯಾಕ್ಸಿ ಓಡಿಸಿ ಕೋಟ್ಯಾಂತರ ರೂಪಾಯಿ ವ್ಯವಹಾರ ಮಾಡುವ ಕಂಪನಿಯನ್ನು ಕಟ್ಟಿದ ಕಥೆ..

0
1579

ಜೀವನ ನಿರ್ವಹಣೆಗೆ ಕಲಿಕೆ ಒಂದೇ ಮುಖ್ಯವಲ್ಲ.. ಅದು ಒಂದು ಭಾಗ.. ಶಕ್ತಿ ಹಾಗೂ ಯುಕ್ತಿ ಇದ್ದರೆ ಏನೆಲ್ಲಾ ಸಾಧಿಸಬಹುದು ಎಂದು ಸಾಧಕರು ಮಾಡಿ ತೋರಿಸಿದ್ದಾರೆ. ಅಲ್ಲದೆ ಸಮಾಜಕ್ಕೆಮಾದಾರಿ ಆಗಿದ್ದಾರೆ. ಅಂತಹ ಸಾಧಕರ ಸಾಲಿಗೆ ಸೇರುವ ವ್ಯಕ್ತಿಯೆ ರೇಣುಕ್ ಆರಾಧ್ಯ.

ಚಿಕ್ಕ ವಯಸ್ಸಿನಲ್ಲಿ ಕಂಡ ಕಷ್ಟಗಳನ್ನು ನೆನಿಸಿಕೊಳ್ಳದೆ, ಐಶಾರಾಮಿ ಜೀವನಕ್ಕೆ ಶಾರ್ಟ್​ ಕಟ್​ ಹುಡುಕದೆ, ತಾವು ಶ್ರದ್ಧೆ ಇಟ್ಟು ಮಾಡಿದ ಕೆಲಸದಲ್ಲಿ ನಂಬಿಕೆ ಇಟ್ಟು ದೊಡ್ಡ ಸ್ಥಾನಕ್ಕೆಬಂದವರು. ಆರಾಧ್ಯ. ಇವರು ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯ ವರೆಗೆ ಮಾತ್ರ ಓದಿದ್ದು, ಮುಂದೆ ಓದಲು ಆಗಲಿಲ್ಲ. ಇನ್ನು ತಂದೆ ಸಹ ತೀರಿ ಕೊಂಡರು. ಜೀವನ ನಿರ್ವಹಣೆಗೆ ಬೇರೆದಾರಿ ಇರಲಿಲ್ಲ. ತಂದೆ ಮಾಡಿಕೊಂಡಿದ್ದ ಪೂಜಾರಿ ವೃತ್ತಿಯನ್ನು ಮುಂದುವರೆಸುವ ಮನಸ್ಸು ಇವರಿಗೆ ಇರಲಿಲ್ಲ. ಏಕೆಂದ್ರೆ ದೊಡ್ಡ ಕನಸು ಕಾಣುತ್ತಿದ್ದ ಆರಾಧ್ಯ, ಆಗಲೇ ಅದರ ಬೆನ್ನುಹತ್ತಿದ್ದರು.

ತಾವು ಕಂಡ ಕನಸಿನ ಬೆನ್ನು ಹತ್ತಿ ಈಗ Pravasi Cabs Private Limited ಮಾಲೀಕರಾಗಿದ್ದಾರೆ. ಇವರ ಕಂಪನಿಯಲ್ಲಿ ಸುಮಾರು 1000 ಕ್ಯಾಬ್​ಗಳಿವೆ. ಇದ್ರಲ್ಲಿ ಸುಮಾರು 240 ಕಾರ್​ಗಳು ಸ್ವತಃದ್ದು.ಇನ್ನು 40 ಸ್ಕೂಲ್​ ಬಸ್​ಳನ್ನು ಇವರು ನೀಡಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ 100 ಕೋಟಿ ರೂಪಾಯಿ ವಹಿವಾಟು ನಡೆಸುವ ಪ್ಲಾನ್​ ಮಾಡಿಕೊಂಡಿದ್ದಾರೆ.

ಎರಡು ಮೂರು ಕಂಪನಿಗಳಲ್ಲಿ ಕೆಲಸ ಮಾಡಿ ಸಾಕಾಗಿ, ನಂತರ ಕಡಿಮೆ ಬೆಲೆಗೆ ಸೂಟ್​ಕೇಸ್​ ತಂದು ಮಾರಲು ಮುಂದಾದ್ರು. ಇದ್ರಲ್ಲಿ ಇವರು ಸುಮಾರು 30 ಸಾವಿರ ಹಣವನ್ನುಕಳೆದುಕೊಂಡ್ರು. ನಂತರ ಸೆಕ್ಯೂರಿಟಿ ಕೆಲಸ ಸೇರಿದ್ರು. ಈ ಜಂಜಾಟದಲ್ಲೇ ಮದುವೇ ಆಯಿತು, ಮಕ್ಕಳು ಆದವು. ನಂತರ ಗಣೇಶ್​ ಟ್ರಾವೆಲ್ಸ್​ಗೆ ಸೇರಿದ್ರು. ಸಂಸ್ಥೆಯ ಮಾಲೀಕರು ಇವರಿಗೆಪ್ರೋತ್ಸಾಹ ತುಂಬಿದ್ರು. ಇಲ್ಲಿಂದ ಕೈಯಲ್ಲಿ ಹಣ ಬಂದಿತು. ನಂತರ ಇವರು ಬೇರೆ ಟ್ರಾನ್ಸ್​ ಪೋರ್ಟ್​ ಕಂಪನಿ ಸೇರಿದ್ರು. ನಂತರ ಸ್ನೇಹಿತರು ಹಾಗೂ ಕುಟುಂಬಸ್ಥರು, ಸೇರಿ ಕಾರುತೆಗೆದುಕೊಳ್ಳುವ ಪ್ಲಾನ್ ಮಾಡಿದ್ರು. ಅಲ್ಲದೆ ಇಂಗ್ಲಿಂಷ್​ ಕ್ಲಾಸ್​ಗೆ ಸೇರಿ ಮಾತನಾಡುವದನ್ನು ಕಲಿತರು. ಅಲ್ಲದೆ ಈಗಿನ ಕಾಲ ಘಟ್ಟಕ್ಕೆ ಅನುಸಾರವಾಗಿ ದೊಡ್ಡ ದೊಡ್ಡ ಕಂಪನಿಗಳ ಜೊತೆಮಾತನಾಡುವ ಕಲೆ ಕರಗತ ಮಾಡಿಕೊಂಡ್ರು.

 

ಇಲ್ಲಿಂದ ಹಂತ ಹಂತವಾಗಿ ಇವರ ಜೀವನವೇ ಬದಲಾಯಿತು. ಭಾರತದ ಪ್ರಸಿದ್ಧ ಕಂಪನಿಗಳಿಗೆ ಕ್ಯಾಬ್​ ನೀಡುತ್ತಿದ್ದ ಆರಾಧ್ಯ, ಕಾರ್​ಗಲ ಸಂಖ್ಯೆಗಳು ಸಹ ಏರುತ್ತಾ ಹೋಯಿತು. ಸದ್ಯಆರಾಧ್ಯ ತಮ್ಮದೇ ಸ್ವಂತಃ ಕಂಪನಿ ಹೊಂದಿದ್ದು, ಕೆಲಸಗಾರರನ್ನು ಇಟ್ಟುಕೊಂಡಿದ್ದಾರೆ. ಇದಕ್ಕೆ ಹೇಳೊದು ಕಲಿಕೆ ಒಂದೇ ಜೀವನ ನಿರ್ವಹಣೆಗೆ ಅಡಿಪಾಯ ಅಲ್ಲ ಎಂದು.

ಕೃಪೆ: The Weekend Leader